ಈ ಲಕ್ಷಣ ಇದ್ರೆ ನಿಮ್ಮ ಕಿಡ್ನಿ ಅಪಾಯದಲ್ಲಿದೆ ಎಂದರ್ಥ ಎಚ್ಚರವಹಿಸಿ

0

ಕಾಯಿಲೆಗಳು ಯಾವಾಗಲೂ ಹೇಳಿಕೇಳಿ ಬರುವುದಿಲ್ಲ, ಅದು ನಮ್ಮ ದೇಹವನ್ನು ಸೇರಿಕೊಂಡು ಏನಾದರೂ ಕರಾಮತ್ತು ಆರಂಭಿಸಲು ಶುರು ಮಾಡಿದ ಬಳಿಕವಷ್ಟೇ ನಮಗೆ ತಿಳಿಯುವುದು. ಆದರೆ ನಾವು ಕೆಲವು ಸಲ ಅನಾರೋಗ್ಯದ ಲಕ್ಷಣಗಳನ್ನು ಕಡೆಗಣಿಸುತ್ತೇವೆ. ಇದರಿಂದಾಗಿ ಮುಂದೆ ದೊಡ್ಡ ರೀತಿಯ ಅಪಾಯವು ಎದುರಾಗಬಹುದು. ದೇಹದಲ್ಲಿ ಯಾವುದೇ ಅನಾರೋಗ್ಯ ಉಂಟಾದರೂ ಆಗ ಕೆಲವೊಂದು ಲಕ್ಷಣಗಳು ಕಾಣಿಸುವುದು. ಇದನ್ನು ಕಡೆಗಣಿಸದೆ, ಗಂಭೀರವಾಗಿ ಪರಿಗಣಿಸಿ ಸರಿಯಾಗಿ ಚಿಕಿತ್ಸೆ ಪಡೆದುಕೊಂಡರೆ ಒಳ್ಳೆಯದು.

ರಕ್ತದಲ್ಲಿನ ಕಲ್ಮಶವನ್ನು ಶುದ್ಧೀಕರಿಸುವ ಕೆಲಸ ಮಾಡುವಂತಹ ಕಿಡ್ನಿಯು ರಕ್ತದೊತ್ತಡ, ಎಲೆಕ್ಟ್ರೋಲೈಟ್ ಸಮತೋಲನ ಮತ್ತು ಕೆಂಪು ರಕ್ತದ ಕಣಗಳ ಉತ್ಪತ್ತಿಯಲ್ಲೂ ನೆರವಾಗುವುದು.ಕೆಲವು ಅಂಶಗಳು ಕಿಡ್ನಿ ಕಾರ್ಯದ ಮೇಲೆ ಪರಿಣಾಮ ಬೀರಬಹುದು ಮತ್ತು ಇದರಿಂದ ಕಿಡ್ನಿಯು ಮುಂದೆ ದೀರ್ಘಕಾಲಿಕವಾಗಿ ಸಮಸ್ಯೆಯನ್ನು ಎದುರಿಸಬಹುದು. ಕಿಡ್ನಿ ಸಮಸ್ಯೆಗೆ ಮಧುಮೇಹ, ಅಧಿಕ ರಕ್ತದೊತ್ತಡ, ಅಪಧಮನಿ ಕಾಯಿಲೆ, ಧೂಮಪಾನ, ಬೊಜ್ಜು ಇತ್ಯಾದಿಗಳು ಕಾರಣವಾಗಿರುವುದು.

ಕಿಡ್ನಿಗೆ ತುಂಬಾ ಕೆಟ್ಟ ರೀತಿಯಲ್ಲಿ ಹಾನಿಯಾಗುವ ತನಕ ಯಾವುದೇ ರೀತಿಯ ಪರಿಣಾಮವು ದೇಹದಲ್ಲಿ ಕಂಡುಬರುವುದಿಲ್ಲ. ಆರಂಭದಲ್ಲಿ ಕೆಲವು ಲಕ್ಷಣಗಳು ಕಂಡುಬಂದರೂ ಜನರು ಇದನ್ನು ಕಡೆಗಣಿಸುವರು. ಮೂತ್ರವಿಸರ್ಜನೆಯ ನಿರಂತರತೆ ಮೇಲೆ ಪರಿಣಾಮವಾದರೆ ಆಗ ಕಿಡ್ನಿಗೆ ಏನಾದರೂ ಸಮಸ್ಯೆ ಆಗಿದೆ ಎಂದು ಹೇಳಬಹುದಾಗಿದೆ. ಕಿಡ್ನಿ ಸಮಸ್ಯೆ ಸೂಚಿಸುವ ಕೆಲವು ಮೂತ್ರಕೋಶದ ಲಕ್ಷಣಗಳೆಂದರೆ ಸಾಮಾನ್ಯಕ್ಕಿಂತಲೂ ಮೂತ್ರವು ಕಡು ಬಣ್ಣಕ್ಕೆ ತಿರುಗುವುದು ಮೂತ್ರ ವಿಸರ್ಜನೆಗೆ ಅವಸರ. ಆದರೆ ಮೂತ್ರ ಬರದೇ ಇರುವುದು. ರಾತ್ರಿ ಮೂತ್ರ ವಿಸರ್ಜನೆಗೆ ಎದ್ದೇಳುವುದು.

ಮೂತ್ರದಲ್ಲಿ ಬಿಳಿ ಪದಾರ್ಥವು ಹೊರಗೆ ಬರುವುದು. ಮೂತ್ರದ ವಾಸನೆಯಲ್ಲಿ ಬದಲಾವಣೆ ಮೂತ್ರಕೋಶದ ಸೋಂಕಿನಿಂದಾಗಿ ಮೂತ್ರ ವಿಸರ್ಜನೆ ವೇಳೆ ನೋವು ಅಥವಾ ಮೂತ್ರ ವಿಸರ್ಜನೆಗೆ ಕಷ್ಟವಾಗಬಹುದು. ಜ್ವರ ಮತ್ತು ಬೆನ್ನು ನೋವು ಇದ್ದರೆ ಆಗ ಈ ಸೋಂಕು ಕಿಡ್ನಿಗೆ ಹಬ್ಬಿದೆ ಎಂದು ಹೇಳಬಹುದು. ಮೂತ್ರದಲ್ಲಿ ರಕ್ತ ಕಂಡುಬಂದರೆ ಆಗ ನೀವು ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಿರಿ.

ಇದು ಕಿಡ್ನಿ ಕಾಯಿಲೆಯ ಆರಂಭಿಕ ಲಕ್ಷಣಗಳು ಮತ್ತು ಇದನ್ನು ಕಡೆಗಣಿಸಬಾರದು. ಮೂತ್ರದಲ್ಲಿ ರಕ್ತವು ಮೂತ್ರನಾಳದ ಸೋಂಕು ಅಥವಾ ಕಲ್ಲಿನಿಂದಾಗಿ ಇರಬಹುದು. ಇವೆರಡರಿಂದ ಕಿಡ್ನಿಗೆ ಹಾನಿ ಆಗುವುದು. ಕಿಡ್ನಿಗೆ ಆಗಿರುವ ಗಾಯದಿಂದ ಮೂತ್ರದಲ್ಲಿ ರಕ್ತವು ಬರುವ ಸಾಧ್ಯತೆ ಇದೆ. ಕಿಡ್ನಿಯು ಸರಿಯಾಗಿ ಕಾರ್ಯನಿರ್ವಹಿಸದೆ ಇದ್ದ ಪಕ್ಷದಲ್ಲಿ ದೇಹದಲ್ಲಿ ಕಲ್ಮಶವು ಜಮೆ ಆಗುವುದು. ಕಾಲು, ಪಾದ, ಮುಖದಲ್ಲಿ ಊತವು ಕಂಡುಬರುವುದು.

ಅತಿಯಾದ ನೀರು ಮತ್ತು ಉಪ್ಪನ್ನು ದೇಹದಿಂದ ಹೊರಗೆ ಹಾಕಲು ವಿಫಲವಾದ ವೇಳೆ ಈ ಕೈಗಳನ್ನು ಬಿಗಿಯಾಗುವುದು. ಇಂತಹ ಲಕ್ಷಣಗಳು ಇದ್ದರೆ ತಕ್ಷಣವೇ ನೀವು ವೈದ್ಯರನ್ನು ಸಂಪರ್ಕಿಸಿ. ಕಿಡ್ನಿಯು ಎರಿಥ್ರೋಪೊಯೆಟಿನ್ ಎನ್ನುವ ಹಾರ್ಮೋನ್ ಬಿಡುಗಡೆ ಮಾಡುವುದು ಮತ್ತು ಇದು ಕೆಂಪು ರಕ್ತದ ಕಣಗಳು ಆಮ್ಲಜನಕ ಸಾಗಿಸಲು ನೆರವಾಗುವುದು. ಕಿಡ್ನಿ ಕಾರ್ಯಕ್ಕೆ ತೊಂದರೆ ಆದರೆ ಆಗ ಹಾರ್ಮೋನ್ ಮಟ್ಟದಲ್ಲಿ ತೀವ್ರ ಕುಸಿತ ಉಂಟಾಗುವುದು. ಇದರಿಂದ ರಕ್ತಹೀನತೆ, ನಿಶ್ಯಕ್ತಿ ಮತ್ತು ಬಳಲಿಕೆ ಕಂಡುಬರುವುದು. ಹೊಟ್ಟೆಯ ಹಿಂಬದಿಯ ಭಾಗದಲ್ಲಿ ಪಕ್ಕೆಲುಬುಗಳ ಕೆಳಗಡೆ ಕಿಡ್ನಿಯು ಇರುವುದು.

ಹೀಗಾಗಿ ಸೊಂಟದ ಭಾಗದಲ್ಲಿ ನೋವು ಕಂಡುಬಂದರೆ ಅದು ಕಿಡ್ನಿ ಕಾಯಿಲೆ ಅಥವಾ ಕಿಡ್ನಿ ಕಲ್ಲಿನ ಸಮಸ್ಯೆ ಆಗಿರಬಹುದು. ಈ ಭಾಗದಲ್ಲಿ ತೀವ್ರ ಮತ್ತು ಹಠಾತ್ ಆಗಿ ನೋವು ಕಾಣಿಸಿಕೊಂಡರೆ ಆಗ ವಾಂತಿ ಬರುವುದು ಮತ್ತು ಮೂತ್ರದಲ್ಲಿ ಉರಿಯು ಕಂಡುಬರುವುದು.

Leave A Reply

Your email address will not be published.

error: Content is protected !!