ಕೋವಿಡ್-19 ವೈರಸ್ ಸಾಂಕ್ರಾಮಿಕ ರೋಗ. ವ್ಯಕ್ತಿಯಿಂದ ವ್ಯಕ್ತಿಗೆ ಹರಡುತ್ತದೆ. ಸೋಂಕಿತ ವ್ಯಕ್ತಿ ಸೀನಿದಾಗ ಅಥವಾ ಕೆಮ್ಮಿದ ವೇಳೆ ಮತ್ತೊಬ್ಬ ವ್ಯಕ್ತಿಯ ಮೂಗಿನ ರಂಧ್ರಗಳು, ಬಾಯಿಯ ಮೂಲಕ ವೈರಾಣು ಹರಡುತ್ತದೆ. ಅಲ್ಲದೆ ಸೀನಿದಾಗ ಹೊರಬರುವ ವೈರಾಣುಗಳು ವಸ್ತು ಇತ್ಯಾದಿಗಳ ಮೇಲ್ಮೈನಲ್ಲಿ ಜಾಗಮಾಡಿಕೊಳ್ಳುತವೆ ಹೀಗೇ ಆರೋಗ್ಯವಂತ ವ್ಯಕ್ತಿ ಇದೇ ಮೇಲ್ಮೈನ್ನು ಮುಟ್ಟಿದಾಗ ಆತನ ಕೈಗಳಲ್ಲಿ ಕೋವಿಡ್-19 ವೈರಾಣು ಸೇರಿಕೊಳ್ಳುತ್ತದೆ. ಕೈಗಳಿಂದ ಮೂಗು, ಬಾಯಿ, ಕಣ್ಣುಗಳ ಮೂಲಕ ದೇಹ ಸೇರಿ ಅನಾರೋಗ್ಯ ಉಂಟು ಮಾಡುತ್ತದೆ. ಇಷ್ಟೇ ಅಲ್ಲದೆ ಸೊಂಕಿತ ವ್ಯಕ್ತಿಯು ಸೀನಿದಾಗ ಅಥವಾ ಕೆಮ್ಮಿದಾಗ ಹತ್ತಿರವಿರುವ ಆರೋಗ್ಯವಂತ ವ್ಯಕ್ತಿಯ ಉಸಿರಿನ ಮೂಲಕವೂ ವೈರಾಣು ದೇಹ ಸೇರುವ ಸಾಧ್ಯತೆ ಹೆಚ್ಚಿರುತ್ತದೆ. ಇದಕ್ಕಾಗಿಯೆ ಅನಾರೋಗ್ಯದಿಂದ ಇರುವ ಅಥವಾ ಕೋವಿಡ್-19 ಶಂಕಿತ ವ್ಯಕ್ತಿಗಳಿಂದ ಕನಿಷ್ಠ 1ಮೀಟರ್ ಅಂತರ ಕಾಯ್ದುಕೊಳ್ಳುವುದು ಮುಖ್ಯ ಎನ್ನುವುದು ನಮಗೆಲ್ಲರಿಗೂ ಇದು ಕಳೆದ ಒಂದು ವರ್ಷದಿಂದ ತಿಳಿದ ವಿಷಯವೇ. ಇಂತಹ ಸಂದರ್ಭದಲ್ಲಿ ನಾವು ಕೆಲವು ಮನೆಮದ್ದುಗಳನ್ನು ಕೂಡಾ ಅನುಸರಿಸುವುದು ಅತೀ ಅಗತ್ಯ ಆಗಿರುತ್ತದೆ.
ನಾವು ಯಾವುದೇ ಒಂದು ರೋಗದ ವಿರುದ್ಧ ಹೋರಾಡಬೇಕು ಎಂದರೂ ನಮಗೆ ಮುಖ್ಯವಾಗಿ ದೇಹದಲ್ಲಿ ರೋಗ ನಿರೋಧಕ ಶಕ್ತಿ ಇರಬೇಕು. ಹಾಗೆ ಅದೇ ರೀತಿ ಈ ಕೋರೋನ ವೈರಸ್ ವಿರುದ್ಧ ಹೋರಾಡಲು ಸಹ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚು ಬೇಕು. ಇದಕ್ಕೆ ಬರೀ ಮಾತ್ರೆಗಳು ಅಷ್ಟೇ ಅಲ್ಲದೆ ಕೆಲವು ಮನೆ ಮದ್ದುಗಳನ್ನು ಕೂಡಾ ಮಾಡಿಕೊಂಡು ಸೇವಿಸುವುದರಿಂದ ನಾವು ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು. ನಾವು ಈ ಲೇಖನದಲ್ಲಿ ಕೋರೋನ ಸಮಯದಲ್ಲಿ ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಒಂದು ಕಷಾಯದ ಬಗ್ಗೆ ತಿಳಿದುಕೊಳ್ಳೋಣ. ಈ ಕಷಾಯವನ್ನು ಮಾಡುವ ವಿಧಾನ ಹೇಗೆ? ಯಾರೆಲ್ಲ ಎಷ್ಟು ಪ್ರಮಾಣದಲ್ಲಿ ಸೇವಿಸಬಹುದು ಎನ್ನುವುದನ್ನೂ ನೋಡೋಣ.
ಈ ಕಷಾಯವನ್ನು ತಯಾರಿಸಲು ಒಂದು ಪಾತ್ರೆಯನ್ನು ಸ್ಟೋವ್ ಮೇಲೆ ಇಟ್ಟು ಒಂದು ಲೋಟ ನೀರು ಹಾಕಿ ಕುದಿಯಲು ಇಡಬೇಕು. ನಂತರ ನೀರು ಸ್ವಲ್ಪ ಬಿಸಿ ಆದ ಮೇಲೆ ಸ್ವಚ್ಚವಾಗಿ ತೊಳೆದ ಇಪ್ಪತ್ತು ತುಳಸಿ ಎಲೆಗಳನ್ನು ಹಾಕಬೇಕು ( ತುಳಸಿಯಲ್ಲಿ ಸಾಕಷ್ಟು ರೋಗಗಳನ್ನು ದೂರ ಮಾಡುವ ಆಂಟಿ ಆಕ್ಸಿಡೆಂಟ್ ಗಳು ಹೇರಳವಾಗಿ ಇದ್ದು ಇವು ಸಾಕಷ್ಟು ಇನ್ಫೆಕ್ಷನ್ ಗಳಿಂದ ನಮ್ಮ ದೇಹವನ್ನು ಕಾಪಾಡುತ್ತದೆ ಹೃದಯ , ಲಿವರ್ ನ ಆರೋಗ್ಯವನ್ನು ಕಾಪಾಡುತ್ತದೆ.) ಹಾಗೆ ಒಂದು ಇಂಚಿನಷ್ಟು ಹಸಿ ಶುಂಠಿ ಅಥವಾ ಒಣ ಶುಂಠಿಯನ್ನು ಹಾಕಬೇಕು. ನಂತರ ಒಂದು ಇಂಚಿನಷ್ಟು ದಾಲ್ಚಿನಿ ಚಕ್ಕೆ ಹಾಗೂ ಎಂಟರಿಂದ ಹತ್ತು ಕಾಳುಮೆಣಸುಗಳನ್ನು ಕುಟ್ಟಿ ಪುಡಿ ಮಾಡಿ ಹಾಕಬೇಕು. ಈ ನಾಲ್ಕು ಪದಾರ್ಥಗಳೂ ನಮ್ಮ ದೇಹದಲ್ಲಿ ಶೀತ ಕೆಮ್ಮು ಜ್ವರ ಇವೇನೆ ಇದ್ದರೂ ಕಡಿಮೆ ಮಾಡುತ್ತವೆ ಹಾಗೂ ಉಸಿರಾಟದ ಸಮಸ್ಯೆ ಇದ್ದರೂ ಸಹ ನಿವಾರಣೆ ಮಾಡುತ್ತವೆ. ಈ ನಾಲ್ಕು ಪದಾರ್ಥಗಳನ್ನು ಹಾಕಿ ಒಂದು ಲೋಟ ನೀರು ಅರ್ಧ ಲೋಟಕ್ಕೆ ಆಗುವವರೆಗೂ ಚೆನ್ನಾಗಿ ಕುದಿಸಬೇಕು. ನಂತರ ಈ ಕಷಾಯ ಸ್ವಲ್ಪ ತಣ್ಣಗಾದ ಮೇಲೆ ಸೋಸಿಕೊಂಡು ಒಂದು ಚಮಚ ಜೇನುತುಪ್ಪ ಹಾಕಿಕೊಂಡು ಪ್ರತೀ ದಿನ ಬೆಳಗ್ಗೆ ಈ ಕಷಾಯವನ್ನು ಕುಡಿಯಬೇಕು. ಇದರಿಂದ ನಮ್ಮ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಮಾತ್ರವಲ್ಲದೆ ಶೀತ ಕೆಮ್ಮು ಜ್ವರ ಕೂಡಾ ಕಡಿಮೆ ಆಗುತ್ತದೆ.