ಶಿವನಿಗೂ ಪ್ರಿಯವೆನ್ನಲಾದ ಬಿಳಿ ತುಂಬೆಯಲ್ಲಿ ತುಳಸಿಯಂತೆ ಆರೋಗ್ಯಕಾರಿ ಗುಣಗಳಿವೆ. ಹಲವು ಆರೋಗ್ಯ ಸಮಸ್ಯೆಗಳಿಗೆ ಮನೆ ಮದ್ದಾಗುವ ತುಂಬೆ ಗಿಡ ಮನೆಯಲ್ಲಿ ಏಕಿರಬೇಕು? ಪಿರಿಯಡ್ಸ್ ಸಮಸ್ಯೆಗೂ ರಾಮಬಾಣವಾಗುವ ತುಂಬೆ, ಗಾಯಕ್ಕೂ ಮದ್ದಾಗಬಲ್ಲದು. ಗದ್ದೆ ಬದಿಯಲ್ಲಿ ರಾಶಿ ರಾಶಿ ಬಿಡೋ ತುಂಬೆ ಕುಯ್ಯುವುದೇ ಒಂದು ಸಂಭ್ರಮ. ಬಟ್ಟಲು ತುಂಬಾ, ಶಿವ ಲಿಂಗಕ್ಕೆ ಅರ್ಚನೆ ಮಾಡಿದರೆ ಸಿಗೋ ಖುಷಿ ಅಷ್ಟಿಷ್ಟಲ್ಲ. ಹಳ್ಳಿಗಳಲ್ಲಿ ಕಂಡ ಕಂಡಲ್ಲಿ ಇರುವ, ನಗರಗಳಲ್ಲಿ ಕಷ್ಟ ಪಟ್ಟು ಬೆಳೆಸಬೇಕಾದ ಈ ತುಂಬೆಯಲ್ಲಿ ಸಾಕಷ್ಟು ಔಷಧೀಯ ಗುಣಗಳೂ ಇವೆ. ಯಾವ ಔಷಧೀಯ ಗುಣಗಳಿವೆ ಇದರಲ್ಲಿ ಮತ್ತು ತುಂಬೆ ಗಿಡದ ಪ್ರಯೋಜನಗಳು ಏನು? ಎನ್ನುವುದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ತುಂಬೆ ಒಂದು ಪುಟ್ಟ ಗಿಡವಾಗಿದ್ದು ಇದು ಬಿಳಿ ಬಣ್ಣದ ಹೂವುಗಳನ್ನು ಬಿಡುತ್ತದೆ. ವಿರಳ ಎನ್ನುವ ಹಾಗೆ ಅಲ್ಲಲ್ಲಿ ಬೇರೆ ಬಣ್ಣಗಳಲ್ಲಿ ಒಂದೆರಡು ಗಿಡಗಳನ್ನು ಕಾಣಬಹುದು. ಇದರ ರೆಂಬೆ ಮತ್ತು ಕಾಂಡಗಳು ತುಂಬಾ ಮೃದುವಾಗಿದ್ದು ಸಲೀಸಾಗಿ ಬಾಗುವಂತಹ ರಚನೆಯಲ್ಲಿ ಇರುತ್ತವೆ. ಇದರ ಎಲೆಯ ರಚನೆ ತೆಳುವಾಗಿ ಉದ್ದವಾಗಿ ಇರುತ್ತದೆ. ಇದರ ಬೇರು ಭೂಮಿಯಲ್ಲಿ ಹೆಚ್ಚು ಆಳಕ್ಕೆ ಇಳಿಯದೆ ಮೇಲ್ಮಟ್ಟದಲ್ಲಿ ಇರುತ್ತವೆ. ಈ ಗಿಡವು ವೈಜ್ಞಾನಿಕವಾಗಿ ಹಾಗೂ ಎಲ್ಲಾ ರೀತಿಯಿಂದಲೂ ಒಂದು ಔಷಧೀಯ ಸಸ್ಯವಾಗಿ ಪರಿಗಣಿಸಲ್ಪಟ್ಟಿದೆ.

ಹಾಗಿದ್ದರೆ ಈ ಗಿಡದಿಂದ ನಮಗೆ ಬರೀ ದೇವರ ಪೂಜೆಗೆ ಉಪಯುಕ್ತ ಆಗುವುದು ಮಾತ್ರವಲ್ಲದೇ ನಮ್ಮ ದೇಹದ ಆರೋಗ್ಯಕ್ಕೂ ಕೂಡಾ ಇದರಿಂದ ಹಲವಾರು ಔಷಧೀಯ ಪ್ರಯೋಜನಗಳು ಇವೆ. ಅವು ಯಾವವು ಎಂದು ಒಂದೊಂದಾಗಿ ನೋಡೋಣ. ಮೊದಲಿಗೆ ಹೊಟ್ಟೆಯಲ್ಲಿ ಹುಳಗಳು ಆಗಿದ್ದರೆ ತುಂಬೆ ಹೂವಿನ ಹಾಗೂ ಎಲೆಯ ರಸಕ್ಕೆ ಜೇನುತುಪ್ಪವನ್ನು ಬೆರೆಸಿ ಕುಡಿದರೆ ನಿವಾರಣೆ ಆಗುತ್ತದೆ. ಇನ್ನೂ ಪದೇ ಪದೆ ಜ್ವರ ಬರುತ್ತಾ ಇದ್ದರೆ ತುಂಬೆ ಎಲೆ ರಸಕ್ಕೆ ಕಾಳುಮೆಣಸಿನ ಪುಡಿಯನ್ನು ಸೇರಿಸಿ ಸೇವಿಸಿದರೆ ಆಗಾಗ ಕಾಡುವ ಜ್ವರಕ್ಕೇ ಇದು ಅತ್ಯುತ್ತಮ ಔಷಧಿಯಾಗಬಲ್ಲದು.

ಇನ್ನೂ ಮನೆಯಲ್ಲಿ ಹಾಗೂ ಮನೆಯ ಸುತ್ತಮುತ್ತಲೂ ಸೊಳ್ಳೆಗಳು ಮತ್ತು ಕ್ರಿಮಿ ಕೀಟಗಳ ಕಾಟ ಹೆಚ್ಚಾಗಿದ್ದರೆ ತುಂಬೆ ಗಿಡದ ಎಲೆಗಳನ್ನು ಒಣಗಿಸಿ ಅದರಿಂದ ಹೊಗೆ ಹಾಕಿದಾಗ ಸೊಳ್ಳೆಗಳು ಕ್ರಿಮಿ ಕೀಟಗಳು ಬರುವುದಿಲ್ಲ. ಮನೆಯ ಗಾರ್ಡನ್ ಗಳಲ್ಲಿ ತುಂಬೆ ಗಿಡಗಳನ್ನು ನೆಡುವುದರಿಂದ ಕೀಟಗಳ ಹತೋಟಿಗೆ ಇದು ಸಹಾಯಕಾರಿ. ಇನ್ನೂ ಮುಖದ ತುಂಬಾ ತುರಿಕೆಯಾಗಿ ಗುಳ್ಳೆಗಳು ಕಾಣಿಸಿಕೊಂಡರೆ, ಅಲರ್ಜಿಯಾದೆಡೆ ಹಚ್ಚಿದರೆ ತುಂಬೆ ಎಲೆ ಪೇಸ್ಟ್ ಮಾಡಿ ಹಚ್ಚಿದರೆ ಇದು ಉತ್ತಮ ಔಷಧಿ ಎಂದೇ ಹೇಳಬಹುದು.

ಇನ್ನು ಚೆನ್ನಾಗಿ ಒಣಗಿಸಿದ ತುಂಬೆ ಗಿಡವನ್ನು ಪುಡಿ ಮಾಡಿ, ಕಷಾಯ ಮಾಡಿಕೊಂಡು ದೇಹದ ಮೇಲಿನ ಗಾಯವನ್ನು ತೊಳೆದರೆ, ಆ್ಯಂಟಿ ಸೆಪ್ಟಿಕ್ ಕ್ರೀಮ್‌ನಂತೆ ಕಾರ್ಯ ನಿರ್ವಹಿಸುತ್ತದೆ. ಪಿರಿಯಡ್ಸ್‌ನಲ್ಲಿ ಅತೀವ ರಕ್ತ ಸ್ರಾವವಾಗುತ್ತಿದ್ದರೆ, ತುಂಬೆ ಎಲೆ ಪೇಸ್ಟ್‌ನೊಂದಿಗೆ ನಿಂಬೆರಸ, ಎಳ್ಳೆಣ್ಣೆ ಸೇರಿಸಿ, ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು. ಜೇನು ತುಪ್ಪದೊಂದಿಗೆ ತುಂಬೆ ಹೂ ರಸ ಕುಡಿಸಿದರೆ, ಮಕ್ಕಳ ಹೊಟ್ಟೆ ಹುಳ ತೊಲಗುತ್ತದೆ.

ಇನ್ನು ಈ ಗಿಡವನ್ನು ಸಂಧಿವಾತ, ಚರ್ಮ ರೋಗ, ಗಂಟಲು ಬೇನೆ , ನೆಗಡಿ ಮುಂತಾದ ರೋಗಗಳಿಗೆ ಮನೆಮದ್ದಿನಂತೆ ಬಳಸುವ ವಾಡಿಕೆ ಈಗಲೂ ಸಹ ಇದೆ. ಬೇಯಿಸಿದ ಬಿಳಿ ತುಂಬೆಯನ್ನು ಅನ್ನದೊಂದಿಗೆ ಸೇವಿಸಿದರೆ, ವೈಟ್ ಡಿಸ್ಚಾರ್ಜ್ ಸಮಸ್ಯೆಗೆ ಇದು ಉತ್ತಮ ಮದ್ದು. ಎಷ್ಟು ನೀರು, ಜ್ಯೂಸ್ ಕುಡಿದರೂ ದಾಹ ಕಡಿಮೆಯಾಗದೇ ಇದ್ದಲ್ಲಿ, ತುಂಬೇ ಹೂವಿನ ಕಷಾಯ ಮಾಡಿಕೊಂಡು, ಆಗಾಗ ಕುಡಿಯುತ್ತಿದ್ದರೆ ಸಮಸ್ಯೆ ನಿವಾರಣೆಯಾಗುತ್ತದೆ. ತುಂಬೆಯ ಬೇರಿನೊಂದಿಗೆ ನೀರಲ್ಲಿ ಕುದಿಸಿದ ಕಷಾಯವನ್ನು ಸೈಂಧವ ಲವಣದೊಂದಿಗೆ ಕುಡಿದರೆ, ಜೀರ್ಣ ಶಕ್ತಿ ಹೆಚ್ಚುತ್ತದೆ. ತುಂಬೆ ಗಿಡವನ್ನು ಒಣಿಗಿಸಿ, ಅದರ ಪುಡಿ ಕಷಾಯವನ್ನು ಆಗಾಗ ಸೇವಿಸುತ್ತಿದ್ದರೆ, ರಕ್ತ ಶುದ್ಧಿಯಾಗುತ್ತದೆ. ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

By admin

Leave a Reply

Your email address will not be published. Required fields are marked *

error: Content is protected !!
Footer code: