WhatsApp Group Join Now
Telegram Group Join Now

ನಮ್ಮ ಪ್ರಕೃತಿಯಲ್ಲಿ ಸಿಗುವ ಒಂದೊಂದು ಸಸ್ಯವು ಕೂಡ ಮನುಷ್ಯನಿಗೆ ಬೇಕಾಗುವಂತಹ ಔಷಧೀಯ ಗುಣಗಳನ್ನು ಹೊಂದಿದೆ ಅಂತಹ ಅನೇಕ ಸಸ್ಯಗಳಲ್ಲಿ ವಿಶೇಷವಾಗಿ ಉತ್ತರಾಣಿ ಗಿಡವು ಕೂಡ ಒಂದು. ಉತ್ತರಾಣಿ ಗಿಡವನ್ನು ಸಾಮಾನ್ಯವಾಗಿ ನೀವೆಲ್ಲರೂ ನೋಡಿರುತ್ತಿರಿ. ಇದು ಸಾಮಾನ್ಯವಾಗಿ ಹೊಲಗದ್ದೆಗಳಲ್ಲಿ ಕಳೆ ಗಿಡದಂತೆ ಕಂಡುಬರುತ್ತದೆ ಈ ಗಿಡವು ಬಂಜರುಭೂಮಿ ಬೆಟ್ಟ ಕಣಿವೆ ಎನ್ನುವ ಭೇದವಿಲ್ಲದೆ ಎಲ್ಲೆಂದರಲ್ಲಿ ಬೆಳೆಯುವ ಸಸ್ಯವಾಗಿದೆ ಈ ಸಸ್ಯದಲ್ಲಿ ಎರಡು ವಿಧಗಳಿವೆ ಒಂದು ಕೆಂಪು ಬಣ್ಣದ ಕಾಂಡವನ್ನು ಹೊಂದಿದ್ದರೆ ಮತ್ತೊಂದು ಬಿಳಿಯ ಕಾಂಡವನ್ನು ಹೊಂದಿರುತ್ತದೆ ಉತ್ತರಾಣಿ ಕಡ್ಡಿ ಮತ್ತು ಗಿಡವು ಹಲವು ರೋಗಗಳನ್ನು ಹೋಗಲಾಡಿಸುವ ಶಕ್ತಿಯನ್ನು ಹೊಂದಿದೆ.

ಸಾಮಾನ್ಯವಾಗಿ ಎಲ್ಲಾ ಪ್ರದೇಶಗಳಲ್ಲಿ ಸಿಗುವ ಉತ್ತರಾಣಿ ಹಲವು ರೋಗಗಳಿಗೆ ಉತ್ತಮವಾದ ಮದ್ದಾಗಿದೆ. ನಾವಿಂದು ನಿಮಗೆ ಉತ್ತರಾಣಿ ಗಿಡದಿಂದ ನಮ್ಮ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನಗಳಿವೆ ಎಂಬುದರ ಕುರಿತಾದ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ. ಉತ್ತರಾಣಿ ಗಿಡದ ಬೇರು ಬಹಳಷ್ಟು ಉಪಯುಕ್ತವಾಗಿದೆ ಈ ಗಿಡದ ಬೇರನ್ನು ಜಜ್ಜಿ ಅದರಲ್ಲಿರುವ ರಸವನ್ನು ತೆಗೆದು ನೀರಿನಲ್ಲಿ ಹಾಕಿ ಕುದಿಸಿ ಆ ನೀರು ಆರಿದ ನಂತರ ಅದನ್ನು ಕುಡಿದರೆ ನಿದ್ರಾಹೀನತೆ ಮಾಯವಾಗುತ್ತದೆ. ಇದರ ಎಲೆಗಳು ಕೂಡ ತುಂಬಾ ಉಪಯುಕ್ತವಾಗಿದೆ ಇದರ ಎಲೆಯ ರಸವನ್ನು ಸರಿ ಪ್ರಮಾಣದಲ್ಲಿ ಸೇವಿಸಿದರೆ ಅಥವಾ ಎಲೆಯನ್ನು ಬಳಸಿ ಕಷಾಯಮಾಡಿ ಕುಡಿದರೆ ಮೂತ್ರ ವಿಸರ್ಜನೆಗೆ ಸಂಬಂಧಿಸಿದ ಸಮಸ್ಯೆಗಳು ಇದ್ದರೆ ಅದು ಗುಣವಾಗುತ್ತದೆ.

ಜೇನುಹುಳು ಅಥವಾ ಮತ್ತಿತರ ಕೀಟಗಳು ಕಡಿದಾಗ ಉತ್ತರಾಣಿ ಎಲೆಯನ್ನು ಚೆನ್ನಾಗಿ ಅರೆದು ಅದರ ಲೇಪನವನ್ನು ಗಾಯದ ಮೇಲೆ ಹಚ್ಚಿದರೆ ಬಹಳ ಬೇಗ ಗಾಯ ಉಪಶಮನವಾಗುತ್ತದೆ. ಪೆಟ್ಟಾಗಿ ರಕ್ತ ಸೋರುತ್ತಿದ್ದರೆ ಕೆಂಪು ಉತ್ತರಾಣಿ ಗಿಡದ ಎಲೆಯ ರಸವನ್ನು ಗಾಯದ ಮೇಲೆ ಹಿಂಡುವುದರಿಂದ ತಕ್ಷಣ ರಕ್ತಸ್ರಾವ ನಿಲ್ಲುತ್ತದೆ ಮತ್ತು ಗಾಯವು ಕೂಡ ಕ್ರಮೇಣ ವಾಸಿಯಾಗುತ್ತದೆ ಮತ್ತು ಕೆಂಪು ಉತ್ತರಾಣಿಯನ್ನು ಎರಡು ಮೂರು ಚಮಚ ಉಗುರುಬೆಚ್ಚಗಿನ ನೀರಿನಲ್ಲಿ ಹಾಕಿ ಕುಡಿದರೆ ದೇಹದ ಭಾಗದಿಂದ ರಕ್ತ ಸೋರುವುದು ಕೂಡ ನಿಲ್ಲುತ್ತದೆ ಮತ್ತು ಕೆಮ್ಮನ್ನು ನಿವಾರಣೆ ಮಾಡುವ ಶಕ್ತಿ ಉತ್ತರಾಣಿ ಗಿಡಕ್ಕೆ ಇದೆ. ಕೆಮ್ಮನ್ನು ಕಡಿಮೆ ಮಾಡುವುದಕ್ಕೆ ಒಣಗಿದ ಉತ್ತರಾಣಿ ಗಿಡದ ಕಾಂಡವನ್ನು ಸುಟ್ಟು ಬಸ್ಮ ಮಾಡಿ ಕಾಳುಮೆಣಸಿನಪುಡಿ ಜೇನುತುಪ್ಪಕ್ಕೆ ಮೂರು ನಾಲ್ಕು ಚಿಟಿಕೆ ಅದನ್ನು ಹಾಕಿ ಸೇವಿಸಿದರೆ ನೆಗಡಿ ಕೆಮ್ಮು ಅಸ್ತಮಾ ರಕ್ತಹೀನತೆ ನಿವಾರಣೆಯಾಗುತ್ತದೆ.

ಸ್ನಾನ ಮಾಡುವ ನೀರಿಗೆ ಇದರ ರಸವನ್ನು ಮಿಶ್ರಣ ಮಾಡಿ ನಿಯಮಿತವಾಗಿ ಸ್ನಾನ ಮಾಡುತ್ತಾ ಬಂದರೆ ಚರ್ಮ ರೋಗಗಳು ಸಹ ಕಡಿಮೆಯಾಗುತ್ತದೆ ಮತ್ತು ಈ ಉತ್ತರಾಣಿ ಗಿಡದ ಎಲೆಯ ರಸವನ್ನು ಮೊಸರಿನೊಂದಿಗೆ ಸೇರಿಸಿ ಸೇವನೆ ಮಾಡುವುದರಿಂದ ಬೇದಿ ನಿಲ್ಲುತ್ತದೆ ಇದರ ಜೊತೆಗೆ ಹೊಟ್ಟೆ ನೋವು ಇದ್ದರೆ ಅದು ಕೂಡ ನಿವಾರಣೆಯಾಗುತ್ತದೆ. ನೀವೇನಾದರೂ ರಕ್ತಹೀನತೆಯಿಂದ ಬಳಲುತ್ತಿದ್ದಾರೆ ಈ ಗಿಡದ ರಸವನ್ನು ಬೆಲ್ಲದೊಂದಿಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ರಕ್ತಹೀನತೆ ಸಮಸ್ಯೆ ಕೂಡ ಕಡಿಮೆಯಾಗುತ್ತದೆ.

ಈ ರೀತಿಯಾಗಿ ಉತ್ತರಾಣಿ ಗಿಡವು ಅನೇಕ ಪ್ರಯೋಜನಗಳನ್ನು ಹೊಂದಿದ್ದು ನಿಮ್ಮ ಮನೆಯ ಅಂಗಳದಲ್ಲಿ ಅಥವಾ ಹೊಲಗದ್ದೆಗಳಲ್ಲಿ ಈ ಗಿಡ ಇದ್ದರೆ ಅದನ್ನು ಕಿತ್ತೆಸೆಯುವ ಮೊದಲು ನಿಮ್ಮ ಸಮೀಪದ ಆಯುರ್ವೇದ ವೈದ್ಯರನ್ನು ಭೇಟಿ ಮಾಡಿ ಇದರ ಉಪಯೋಗವನ್ನು ತಿಳಿದುಕೊಳ್ಳಿ ನಿಮ್ಮ ಆರೋಗ್ಯವನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಿ. ಜೊತೆಗೆ ಈ ಮಾಹಿತಿಯನ್ನು ನಿಮ್ಮ ಪರಿಚಿತರು ಹಾಗೂ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: