ಸರ್ವ ರೋಗಕ್ಕೆ ಔಷಧಿ ಈ ಒಂದು ಅದ್ಭುತ ಸೊಪ್ಪು, ಇದರ ಉಪಯೋಗ ಪಡೆದುಕೊಳ್ಳಿ

0

ಪ್ರತಿಯೊಂದು ಆಹಾರ ಪದಾರ್ಥಗಳು ತನ್ನದೇ ಆದ ವಿಶೇಷ ರುಚಿ ಹಾಗೂ ಅದ್ಭುತ ಅನುಭವವನ್ನು ನೀಡುತ್ತವೆ. ಅವುಗಳಲ್ಲಿ ಕೆಲವು ಆಹಾರ ಉತ್ಪನ್ನಗಳು ನಮ್ಮ ನಾಲಿಗೆಗೆ ರುಚಿಯ ಜೊತೆಗೆ ವಿಶೇಷವಾಗಿ ಆರೋಗ್ಯ ಪಾಲನೆ ಮಾಡುತ್ತವೆ. ಅಂತಹ ಆಹಾರ ಪದಾರ್ಥಗಳನ್ನು ನಾವು ನಿತ್ಯದ ಆಹಾರದಲ್ಲಿ ಸೇರಿಸಿಕೊಂಡರೆ ಬಹುತೇಕ ಅನಾರೋಗ್ಯ ಸಮಸ್ಯೆಗಳನ್ನು ದೂರ ಇಡಬಹುದು. ಅಂತಹ ವಿಶೇಷ ಆರೋಗ್ಯ ರಕ್ಷಣೆಯನ್ನು ಮಾಡುವ ನೈಸರ್ಗಿಕ ಆಹಾರ ಉತ್ಪನ್ನ ಎಂದರೆ ಕರಿಬೇವಿನ ಎಲೆ. ಇದನ್ನು ಸಮಾನ್ಯವಾಗಿ ಅಡುಗೆಯ ಒಗ್ಗರಣೆಗೆ ಬಳಸುತ್ತೇವೆ.

ಇದರಲ್ಲಿರುವ ಸುವಾಸನೆ ಮತ್ತು ಆರೋಗ್ಯಕರ ಅಂಶಗಳು ಆಹಾರದ ರುಚಿ ಹಾಗೂ ಪರಿಮಳವನ್ನು ಬದಲಿಸುವುದು. ನಿತ್ಯವೂ ಕರಿಬೇವಿನ ಎಲೆಯನ್ನು ನಾವು ಆಹಾರ ಕ್ರಮದಲ್ಲಿ ಬಳಸುವುದರಿಂದ ಕೆಲವು ಗಮನಾರ್ಹ ಆರೋಗ್ಯ ಸಮಸ್ಯೆಗಳಲ್ಲಿ ಗಮನಾರ್ಹ ಸುಧಾರಣೆ ಕಾಣಬಹುದು. ಹಾಗಾದರೆ ಬನ್ನಿ ಆ ಆರೋಗ್ಯಕಾರಿ ಪ್ರಯೋಜನಗಳು ಯಾವವು ಎನ್ನುವುದನ್ನ ಈ ಲೇಖನದಲ್ಲಿ ತಿಳಿಯೋಣ.

ನೈಸರ್ಗಿಕ ಗಿಡಮೂಲಿಕೆಯಾದ ಕರಿಬೇವಿನ ಎಲೆಯು ಸಮೃದ್ಧವಾದ ಪೋಷಕಾಂಶಗಳನ್ನು ಒಳಗೊಂಡಿರುತ್ತದೆ. ಹಾಗಾಗಿ ಇದನ್ನು ಪೋಷಕಾಂಶಗಳ ಆಗರ, ಶಕ್ತಿ ಮನೆ ಎಂದೆಲ್ಲಾ ಕರೆಯಲಾಗುವುದು. ಈ ಪುಟ್ಟ ಎಲೆಗಳಲ್ಲಿ ವಿಟಮಿನ್ ಎ, ಬಿ, ಸಿ ಮತ್ತು ಬಿ12 ಗಳು ಅಧಿಕವಾಗಿರುತ್ತವೆ. ಅಲ್ಲದೆ ಕಬ್ಬಿಣ ಮತ್ತು ಕ್ಯಾಲ್ಸಿಯಂ ಪ್ರಮಾಣ ಅಧಿಕವಾಗಿರುವುದರಿಂದ ನಿತ್ಯವೂ ಇದನ್ನು ಆಹಾರದಲ್ಲಿ ಕಡ್ಡಾಯವಾಗಿ ಸೇರಿಸಬೇಕು. ಆಗಲೇ ನಮ್ಮ ಆರೋಗ್ಯದಲ್ಲಿ ಸಾಕಷ್ಟು ಅನಾರೋಗ್ಯ ಸಮಸ್ಯೆಗಳು ದೂರವಾಗುತ್ತವೆ. ಜೊತೆಗೆ ನೈಸರ್ಗಿಕವಾಗಿಯೇ ರೋಗ ನಿರೋಧಕ ಶಕ್ತಿ ಹೆಚ್ಚುವುದು.

ನಿತ್ಯ ಕಾಲಿ ಹೊಟ್ಟೆಯಲ್ಲಿ ಅಥವಾ ಉಪಹಾರ ಸೇವಿಸುವ ಮೊದಲು ಬೆರಳೆಣಿಕೆಯ ಕರಿಬೇವಿನ ಎಲೆಯನ್ನು ಜಗಿಯಬೇಕು. ಅದರ ರುಚಿ ಸ್ವಲ್ಪ ಕಹಿ ಎನಿಸುತ್ತದೆ ಎನ್ನುವವರು ಅದರೊಂದಿಗೆ ಸ್ವಲ್ಪ ಜೀರಿಗೆ ಸೇರಿಸಿಕೊಳ್ಳಬಹುದು. ಹೀಗೆ ಗಣನೀಯವಾಗಿ ಸೇವಿಸುವುದು ಹಾಗೂ ನಿತ್ಯದ ಆಹಾರ ಪದಾರ್ಥಗಳಲ್ಲಿ ಸೇರಿಸಿಕೊಳ್ಳುವುದರಿಂದ ದೇಹದಲ್ಲಿ ಇರುವ ವಿಷಕಾರಿ ಅಂಶಗಳನ್ನು ಶುದ್ಧೀಕರಿಸುವುದು. ನೈಸರ್ಗಿಕವಾಗಿ ದೇಹವನ್ನು ನಿರ್ವಿಷಗೊಳಿಸಬಹುದು. ಕರಿಬೇವಿನ ಸಾರವು ನರಮಂಡಲ, ಹೃದಯ, ಮೆದುಳು ಮತ್ತು ಮೂತ್ರಕೋಶಗಳ ಆರೋಗ್ಯವನ್ನು ಸಹ ಕಾಪಾಡುತ್ತದೆ.

ಅಧಿಕ ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್ ಮಟ್ಟಗಳಂತಹ ಅಪಾಯಕಾರಿ ಅಂಶಗಳು ನಿಮ್ಮ ಹೃದಯದ ಸಮಸ್ಯೆಗಳನ್ನು ಹೆಚ್ಚಿಸಬಹುದು. ನಿಮ್ಮ ಆಹಾರದಲ್ಲಿ ಕರಿಬೇವಿನ ಎಲೆಗಳನ್ನು ಸೇರಿಸುವುದರಿಂದ ಈ ಕೆಲವು ಅಪಾಯಕಾರಿ ಅಂಶಗಳನ್ನು ಅದು ಕಡಿಮೆ ಮಾಡುತ್ತದೆ. ಕರಿಬೇವಿನ ಎಲೆಗಳನ್ನು ಸೇವಿಸುವುದರಿಂದ ಹೃದಯದ ಆರೋಗ್ಯಕ್ಕೆ ಹಲವಾರು ರೀತಿಯಲ್ಲಿ ಪ್ರಯೋಜನವಾಗುತ್ತದೆ. ಅಧಿಕ ಕೊಬ್ಬು-ಆಹಾರ-ಪ್ರೇರಿತ ಬೊಜ್ಜು ಹೊಂದಿರುವವರಿಗೆ ಇದು ಹೇಳಿ ಮಾಡಿಸಿದ ಸಸ್ಯ. ಇದರಲ್ಲಿ ಪೋಷಕಾಂಶಗಳು ಕೊಬ್ಬನ ಅಂಶವನ್ನು ಕಡಿಮೆ ಮಾಡುತ್ತವೆ. ಬಿಳಿ ಕೂದಲ ಸಮಸ್ಯೆಯನ್ನು ಕರಿಬೇವು ದೂರಮಾಡುತ್ತದೆ.

ದೇಹದಲ್ಲಿ ಪೋಷಕಾಂಶದ ಕೊರತೆಯಾದಾಗ ಮಕ್ಕಳಿಗೆ ಕೂದಲು ಬೇಗ ಬಿಳಿಯಾಗುತ್ತದೆ. ಇಂತಹ ಸಮಸ್ಯೆಗೆ ಕರಿಬೇವು ತುಂಬಾ ಸಹಕಾರಿಯಾಗಿದೆ. ಹಾಗು ಕೂದಲ ಬೆಳವಣಿಗೆಗೂ ಉಪಯುಕ್ತವಾಗಿದೆ. ಕರಿಬೇವಿನ ಎಲೆಗಳನ್ನು ಒಣಗಿಸಿ, ಅದನ್ನು ಕೊಬ್ಬರಿ ಎಣ್ಣೆಯಲ್ಲಿ, ಎಣ್ಣೆ ಹಸಿರು ಬಣ್ಣಕ್ಕೆ ಬರುವ ವರೆಗೂ ಕುದಿಸಬೇಕು. ನಂತರ ತಣಿಸಿ ಕೂದಲಿಗೆ ಪ್ರತಿ ವಾರಕೊಮ್ಮೆ ಹಚ್ಚುವುದರಿಂದ ಕೂದಲು ಬಿಳಿಯಾಗುವುದನ್ನು ತಡೆಯಬಹುದು. ಕರಿಬೇವಿನ ಎಲೆಗಳು ನಿಮ್ಮ ಮೆದುಳು ಸೇರಿದಂತೆ ನಿಮ್ಮ ನರಮಂಡಲದ ಆರೋಗ್ಯವನ್ನು ರಕ್ಷಿಸಲು ಸಹಾಯ ಮಾಡುತ್ತದೆ ಎಂದು ಸಾಬೀತು ಮಾಡಿದೆ. ಕರಿಬೇವಿನ ಎಲೆಗಳು ಆಲ್ಝೈಮರ್ ಕಾಯಿಲೆಗಳಿಗೆ ಪರಿಹಾರ ನೀಡುತ್ತದೆ.

ಆಲ್ಝೈಮರ್ ರೋಗವು ಮೆದುಳಿನ ನರಗಳ ಕಾರಣದಿಂದ ಬರುತ್ತದೆ. ಕರಿಬೇವು ಸೇವನೆ , ನರಗಳನ್ನು ಶಕ್ತಿಯುತಗೊಳಿಸುತ್ತದೆ. ಕರಿ ಬೇವಿನ ಎಲೆಗಳಲ್ಲಿ ಕ್ಯಾನ್ಸ್ರ್ ನಿವಾರಕ ಶಕ್ತಿಗಳಿದೆ ಎಂದು ಹೇಳಲಾಗುತ್ತದೆ. ಮಲೇಷಿಯಾದ ವಿವಿಧ ಸ್ಥಳಗಳಲ್ಲಿ ಬೆಳೆದ ಕರಿಬೇವಿನ ಎಲೆಗಳಿಂದ ಮೂರು ಮಾದರಿಗಳನ್ನು ಪರೀಕ್ಷೆ ಮಾಡಲಾಗಿತ್ತು ಆ ಅಧ್ಯಯನದಲ್ಲಿ ಕರಿ ಬೇವಿನ ಎಲೆ ಸ್ತನ ಕ್ಯಾನ್ಸ್​ರ್​ಗೆ ಔಷಧವಾಗುತ್ತದೆ ಎಂಬ ವಿಚಾರ ಬಹಿರಂಗವಾಗಿದೆ. ಕರಿಬೇವಿನ ಎಲೆ ಬ್ಯಾಕ್ಟೀರಿಯಾದಿಂದ ದೇಹವನ್ನು ಸಂರಕ್ಷಿಸುತ್ತದೆ. ಕರಿಬೇವಿನ ಎಲೆಯನ್ನು ದಿನನಿತ್ಯ ಸೇವಿಸುವುದರಿಂದ ಹಲವು ರೀತಿಯ ಸೋಂಕುಗಳಿಂದ ದೂರವಿರಬಹುದು. ಇವೆಲ್ಲಕ್ಕಿಂತ ಹೆಚ್ಚಾಗಿ ದೇಹದ ತೂಕವನ್ನು ಕಡಿಮೆಗೊಳಿಸುವಲ್ಲಿ ಕರಿ ಬೇವಿನ ಎಲೆ ಬಹಳ ಉಪಯುಕ್ತವಾಗುತ್ತದೆ.

Leave A Reply

Your email address will not be published.

error: Content is protected !!