ಶೀತಾ ನೆಗಡಿ ಕೆಮ್ಮು ಕಫ ನಿವಾರಣೆಗೆ ಬೆಸ್ಟ್ ಮನೆಮದ್ದು ಇಲ್ಲಿದೆ

0

ಸಾಮಾನ್ಯವಾಗಿ ವಾತಾವರಣದಲ್ಲಿ ಆಗುವ ಏರುಪೇರಿನಿಂದಾಗಿ, ಕೆಮ್ಮು, ನೆಗಡಿ ಬರುವುದು ಸಹಜ. ಇಂತಹ ಸಮಯದಲ್ಲಿ ಮಾತ್ರೆಯ ಬದಲು ಮನೆಯಲ್ಲೆ ಸುಲಭವಾಗಿ ಮಾಡಬಹುದಾದ ಮನೆ ಮದ್ದುಗಳನ್ನು ಸೇವಿಸಿದರೆ ಸಮಸ್ಯೆ ನಿವಾರಿಸಬಹುದು.

ಮಳೆಗಾಲ ಮುಗಿಯುತ್ತಿದ್ದಂತೆಯೇ ಚಳಿ ಆರಂಭವಾಗಿದೆ. ಮಳೆ ಚಳಿ ಎಂದರೆ ಅದರ ಹಿಂದೆಯೆ ನೆಗಡಿ ಕೆಮ್ಮು ಸಹ ಬೆಂಬಿಡದ ಭೂತವಾಗಿ ಕಾಡುತ್ತವೆ. ನೀವು ಈಗಾಗಲೇ ಅನುಭವಿಸಿರುವ ಹಾಗೆ ಅಲೋಪಥಿ ವೈದ್ಯರು ಅದೆಷ್ಟೆ ಸ್ಟ್ರಾಂಗ್ ಮೆಡಿಸಿನ್ ಕೊಟ್ಟರೂ ಒಂದೆರಡು ದಿನ ಕಡಿಮೆಯಾಗಿ, ನಂತರ ಮತ್ತೆ ತಮ್ಮ ಕೆಲಸವನ್ನು ಆರಂಭಿಸುತ್ತದೆ. ಇದಕ್ಕೆ ಇಂಗ್ಲಿಷ್ ಮೆಡಿಸಿನ್ ಗಿಂತ ಮನೆ ಮದ್ದು ಅತ್ತ್ಯುತ್ತಮ ಎಂಬುದು ಹಿರಿಯರು ಹಾಗೂ ತಜ್ಞ ವೈದ್ಯರ ಅಭಿಪ್ರಾಯ. ಅಂದಹಾಗೆ ನಾವಿಲ್ಲಿ  ಹೇಳಿರುವ ಮನೆ ಮದ್ದುಗಳು ನೆಗಡಿ ಮತ್ತು ಕೆಮ್ಮಿನಿಂದ ನಮ್ಮನ್ನು ಕಾಪಾಡುವುದರ ಜೊತೆಗೆ ಯಾವುದೇ ಅಡ್ಡ ಪರಿಣಾಮ ಬೀರದಂತೆ ನೋಡಿಕೊಳ್ಳುತ್ತದೆ.

ಕಷಾಯ ಮಾಡಲು ಬೇಕಾದ ಪದಾರ್ಥಗಳು, ನೆಲನೆಲ್ಲಿ ಬೇರು ಸಮೇತ ತೆಗೆದದ್ದು, ತುಳಸಿ ಎಲೆ, ಪುದೀನಾ ಎಲೆ, ಅಮೃತ ಬಳ್ಳಿ ಎಲೆ, ಶುಂಠಿ. ಹಾಗೂ 3 ಎಸಳು ಬೆಳ್ಳುಳ್ಳಿ, ಮೆಣಸು, ಅರಿಶಿನ, ಲವಂಗ, ಓಂ ಕಾಳು, ಓಲೆ ಬೆಲ್ಲ..

ಇದನ್ನು ಮಾಡುವ ವಿಧಾನ ಕುಟ್ಟಾಣಿಯಲ್ಲಿ ಒಂದು ಚಮಚ ಕರಿ ಮೆಣಸು, ಒಂದು ಚಮಚ ಓಂ ಕಾಳು, ನಾಲ್ಕು ಲವಂಗ, ಹಾಕಿ ಜೆಜ್ಜಿ ಪುಡಿ ಮಾಡಿ ಕೊಳ್ಳಿ. ನಂತರ ಒಂದು ಮಣ್ಣಿನ ಪಾತ್ರೆಯಲ್ಲಿ ಕಷಾಯವನ್ನು ಬಿಸಿ ಮಾಡಲು ನಾಲ್ಕು ಗ್ಲಾಸ್ ನೀರು ಹಾಕಿ ಪುಡಿ ಮಾಡಿರೋ ಮಿಶ್ರಣವನ್ನು ಹಾಕಿ, ಅದಕ್ಕೆ ಮೂರು ಬೆಳ್ಳುಳ್ಳಿ, ಅಮೃತ ಬಳ್ಳಿಯ 4 ಎಲೆಯನ್ನು ಕತ್ತರಿಸಿ ಹಾಕಬೇಕು ನಂತರ 4 – 5 ಚಿಗುರು ಪುಧೀನಾ ಎಲೆ ಹಾಗೂ ತುಳಸಿ ಎಲೆಯನ್ನು ಕತ್ತರಿಸಿ ಹಾಕಿ ನೆಲನೆಲ್ಲಿಯನ್ನು ಕತ್ತರಿಸಿ ಬೇರು ಸಮೇತ ಹಾಕೀ ನಂತರ ಒಂದು ಇಂಚು ಶುಂಠಿ ಹಾಗೂ ಅರಿಶಿಣವನ್ನು ಹಾಕಿ ಚನ್ನಾಗಿ ಕಡಿಮೆ ಉರಿಯಲ್ಲಿ ಇಟ್ಟು ಕುದಿಸಬೇಕು.

ನಾಲ್ಕು ಲೋಟ ಹಾಕಿರೊ ನೀರು ಕುದಿಸಿದ ನ೦ತರ ಎರಡು ಲೋಟ ಆಗುವ ತನಕ ಕುದಿಸಬೇಕು ನಂತರ ಇದನ್ನು ಒಂದು ಗ್ಲಾಸ್ ಅಲ್ಲಿ ಹಾಕಿ ಅದಕ್ಕೆ ಓಲೆ ಬೆಲ್ಲ ಅಥಾವ ಕಲ್ಲು ಸಕ್ಕರೆಯನ್ನು ಹಾಕಿ ಬೆಳಿಗ್ಗೆ ಅರ್ಧ ಸಂಜೆ ಅರ್ಧ ಲೋಟ ಕುಡಿಯಬೇಕು. ನೆಗಡಿ ಕೆಮ್ಮು ಬಹು ಬೇಗ ಕಡಿಮೆಯಾಗುತ್ತದೆ.

Leave A Reply

Your email address will not be published.

error: Content is protected !!
Footer code: