ಶರೀರಕ್ಕೆ ಟಾನಿಕ್ ನಂತೆ ಕೆಲಸ ಮಾಡುವ ಈ ಬೆಲ್ಲದ ಪಾನಕ ಮಾಡೋದು ಹೇಗೆ? ಇಲ್ಲಿದೆ ಮಾಹಿತಿ

0

ಶರೀರಕ್ಕೆ ಟಾನಿಕ್ ನಂತೆ ಕೆಲಸ ಮಾಡುವ ಈ ಬೆಲ್ಲದ ಪಾನಕ ಮಾಡೋದು ಹೇಗೆ? ಇಲ್ಲಿದೆ ಮಾಹಿತಿ

ಸಾಮಾನ್ಯವಾಗಿ ಮನೆಯಲ್ಲಿ ಹಲವಾರು ಬಗೆಯ ಅಡುಗೆಗಳನ್ನು ಮಾಡುತ್ತೇವೆ ಆದ್ರೆ ಅವುಗಳಿಂದ ನಮ್ಮ ಶರೀರಕ್ಕೆ ಸಿಗುವಂತ ಲಾಭಗಳು ಏನು ಅನ್ನೋದನ್ನ ಕಡಿಮೆ ಪ್ರಮಾಣದಲ್ಲಿ ತಿಳಿದಿರುತ್ತೇವೆ. ನಿಜಕ್ಕೂ ಇವುಗಳ ಉಪಯೋಗಗಳನ್ನು ತಿಳಿಯುವುದು ತುಂಬಾನೇ ಅಗತ್ಯವಿದೆ. ನಮ್ಮ ಆಹಾರ ಪದ್ಧತಿ ನಮ್ಮ ಶರೀರದ ಆರೋಗ್ಯವನ್ನು ವೃದ್ಧಿಸುತ್ತದೆ ಅನ್ನೋದನ್ನ ಗಮನದಲ್ಲಿ ಇಟ್ಟುಕೊಳ್ಳಬೇಕು.

ಮುಖ್ಯವಾಗಿ ವಿಷ್ಯಕ್ಕೆ ಬರೋಣ ಮನೆಯಲ್ಲಿ ಬೆಲ್ಲದ ಪಾನಕ ಮಾಡಿ ಸೇವನೆ ಮಾಡುವುದರಿಂದ ಶರೀರಕ್ಕೆ ಎಷ್ಟೊಂದು ಲಾಭಗಳಿವೆ ಅನ್ನೋದನ್ನ ಈ ಲೇಖನದ ಮೂಲಕ ತಿಳಿಯೋಣ. ಇನ್ನೇನ್ನು ಬೇಸಿಗೆ ಕಾಲ ಶುರು ಆಯಿತು ಅಂದ್ರೆ ತಂಪು ಪಾನೀಯ ಮೊರೆಹೋಗುತ್ತೇವೆ ಅಂಗಡಿ ಹಾಗೂ ಬೇಕರಿಗಳಲ್ಲಿ ಸಿಗುವ ಸಾಫ್ಟ್ ಡ್ರಿಂಕ್ಸ್ ಕುಡಿಯುವುದಕ್ಕಿಂತ ಮನೆಯಲ್ಲಿ ಮಜ್ಜಿಗೆ ಮೊಸರು ಅಥವಾ ಈ ಬೆಲ್ಲದ ಪಾನಕ ಅಷ್ಟೇ ಅಲ್ಲದೆ ಎಳನೀರು ಮುಂತಾದವುಗಳನ್ನು ಸೇವಿಸುವುದು ಉತ್ತಮ ಇವುಗಳಿಂದ ಒಳ್ಳೆಯ ಅರೋಗ್ಯ ಕೂಡ ವೃದ್ಧಿಯಾಗುತ್ತೆ.

ಬೆಲ್ಲದ ಪಾನಕ ತಯಾರಿಸಲು ಬೇಕಾಗುವ ಪದಾರ್ಥಗಳು: ಬೆಲ್ಲ ಒಂದು ಹೆಚ್ಚು ಅಥವಾ ನಿಮಗೆ ಸಿಹಿ ಎಷ್ಟು ಬೇಕು ಅಷ್ಟು ಬಳಸಿ ಕೊಳ್ಳಬಹುದು, ನಂತರ ಒಂದು ನಿಂಬೆಹಣ್ಣು ಹಾಗು ಒಂದು ಟೀ ಚಮಚ ಕಾಳು ಮೆಣಸು,ಕೇಸರಿ ದಳ ಮತ್ತು ಏಲಕ್ಕಿ ಪುಡಿ ಸ್ವಲ್ಪ

ಇನ್ನು ಈ ಬೆಲ್ಲದ ಪಾನಕವನ್ನು ತಯಾರಿಸೋದು ಹೇಗೆ ಅನ್ನೋದನ್ನ ಈ ಮೂಲಕ ತಿಳಿಯುವುದಾದರೆ
ಮೊದಲು ಒಂದು ಲೀಟರ್‌ ನೀರಿಗೆ ಬೆಲ್ಲ ಪುಡಿ ಮಾಡಿ ಹಾಕಿ, ಜೋನಿ ಬೆಲ್ಲವಾದರೆ ಚೆನ್ನಾಗಿ ಕರಗಿಸಿ. ಇದಕ್ಕೆ ಕಾಳು ಮೆಣಸಿನ ಪುಡಿಯನ್ನೂ ಸೇರಿಸಿ. ನಂತರ ಕೇಸರಿ ದಳ ಹಾಗೂ ನಿಂಬೆ ರಸ ಸೇರಿಸಿ ಚನ್ನಾಗಿ ಮಿಶ್ರಣ ಮಾಡಿ ನೀವು ಸೇವಿಸಲು ಬಯಸುವ ಆರೋಗ್ಯಕಾರಿ ಪಾನಕ ಕುಡಿಯಲು ರೆಡಿ ಇರುತ್ತದೆ. ಇದೆ ರೀತಿ ಒಳ್ಳೆಯ ಅರೋಗ್ಯ ಸಲಹೆ ಹಾಗೂ ಹಲವು ಬಗೆಯ ಉಪಯುಕ್ತ ವಿಚಾರಗಳನ್ನು ತಿಳಿಯಲು ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹಾಗೂ ನಿಮ್ಮ ಸ್ನೇಹಿತರಿಗೂ ಹಂಚಿಕೊಳ್ಳಿ, ಶುಭವಾಗಲಿ

Leave A Reply

Your email address will not be published.

error: Content is protected !!
Footer code: