WhatsApp Group Join Now
Telegram Group Join Now

ರೈತ ದೇವೋ ಭವ ರೈತನೇ ದೇಶದ ಬೆನ್ನೆಲುಬು ಎನ್ನುವ ಎಷ್ಟೋ ಮಂದಿಗೆ ರೈತನ ಕಷ್ಟ ಗೊತ್ತಿರಲಾರದು ಹಾಗೆ ರೈತರು ಅಷ್ಟೇ ತಾವು ಆಧುನಿಕ ಬೇಸಯ ಪದ್ದತಿಯನ್ನು ಅರಿತು ವೈಜ್ಞಾನಿಕ ರೀತಿಯ ವ್ಯವಸಾಯ ವನ್ನು ಮಾಡಿ ಇಂದಿನ ಟ್ರೆಂಡ್ ಗಳಿಗೆ ಹೊಂದಿಕೊಳ್ಳದೇ ಪ್ರಾಚೀನ ಬೇಸಾಯ ಪದ್ದತಿಯನ್ನೇ ಅನುಸರಿಸುತ್ತಾ ಹೆಚ್ಚು ಮಳೆಯಾದರೂ ಅಥವಾ ಮಳೆ ಬಾರದೆ ಹೋದರೂ ಮಳೆಯನ್ನು ಶಪಿಸುತ್ತಾ ಕೊನೆಗೆ ನಷ್ಟದಲ್ಲೇ ಸಾಯುವುದು ಉಂಟು

ಆದರೆ ಒಮ್ಮೆ ತಾವು ಯೋಚಿಸುವ ರೀತಿಯನ್ನು ಬದಲಾಯಿಸಿದರೆ ಅವರಿಗೆ ಬೇರೆಯೇ ತೆರನಾದ ಜೀವನವೊಂದನ್ನು ಕೃಷಿಯಲ್ಲೇ ಕಟ್ಟಿಕೊಳ್ಳುವ ಸಾಧ್ಯತೆಗಳು ಬಹಳಷ್ಟಿವೆ ಅಂತೆಯೇ ಆ ಅಣಬೆ ಅಂದರೆ ಮಶ್ರೂಮ್ ಕೂಡ ಒಂದು ಒಳ್ಕೆಯ ಆದಾಯ ಬರುವಂತಹ ಬೇಸಾಯಗಳಲ್ಲಿ ಒಂದಾಗಿದೆ
ಮಾಂಸದಷ್ಟೇ ಪೋಷಕಶಗಳನ್ನು ಒದಗಿಸುವ ಆಹಾರವೆಂದರೆ ಅದು ಅಣಬೆ

ಅಣಬೆಗೆ ನಮ್ಮ ರಾಜ್ಯ ರಾಷ್ಟ್ರ ಮಟ್ಟದಲ್ಲಿ ಮಾತ್ರವಲ್ಲ ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಕೂಡ ಬೇಡಿಕೆ ಹೆಚ್ಚಾಗಿಯೇ ಇದೆ ಹಾಗಾಗಿ ತಾವು ಆಧುನಿಕ ಬೇಸಾಯವನ್ನು ಅರಿತು ಅಣಬೆ ಯನ್ನು ಬೆಳೆದದ್ದೇ ಆದಲ್ಲಿ ಅದೊಂದು ಆದಾಯದ ದೊಡ್ಡ ಮೂಲವೇ ಆಗುವುದರಲ್ಲೇ ಎರಡು ಮಾತಿಲ್ಲ

ಮೊದಲಿಗೆ ಉತ್ತಮ ಅಣಬೆ ಬೀಜಗಳನ್ನು ಆಯ್ಕೆ ಮಾಡಿಕೊಂಡು ಮತ್ತು ಒಳ್ಳೆಯ ಕೃಷಿ ತ್ಯಾಜ್ಯವನ್ನು ಬಳಸಿಕೊಂಡು ಅತೀ ಕಡಿಮೆ ಜಾಗದಲ್ಲಿ ಆ ಬೆಳೆಗೆ ಬೇಕಾದಂತಹ ಉತ್ತಮ ವಾತಾವರಣವನ್ನು ಸೃಷ್ಟಿಸಿ ಸುಲಭವಾಗಿ ಅಣಬೆಯನ್ನು ಬೆಳೆಯಬಹುದು ಮತ್ತು ಹತ್ತಿರದ ಮಾರುಕಟ್ಟೆಗಳಲ್ಲಿ ಉತ್ತಮ ಬೆಲೆಗೆ ಮಾರಾಟವನ್ನೂ ಕೂಡ ಮಾಡಬಹುದು ಒಳ್ಳೆಯ ಸಂಪಾದನೆಯನ್ನು ಕೂಡ ಮಾಡಬಹುದು

ಹಾಗಾದರೆ ತಡ ಯಾಕೆ ಅಣಬೆ ಬೆಳೆಯ ಬಗ್ಗೆ ತಿಳಿದು ವೈಜ್ಞಾನಿಕವಾಗಿ ಕೃಷಿ ಮಾಡಿ ನೀವು ಕೂಡ ದೇಶದ ಆರ್ಥಿಕತೆಯಲ್ಲಿ ಹೆಚ್ಚಿನ ಪಾಲುದಾರರಾಗಿ ಮತ್ತು ಉತ್ತಮ ಹಣವನ್ನು ಸಂಪಾದಿಸಿ

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: