ಈ ತಳಿಯ ಕೋಳಿಸಾಕಣೆ ಮಾಡಿ ವರ್ಷಕ್ಕೆ 50 ಲಕ್ಷ ಗಳಿಸಿ

0

ಅನೇಕರು ಕೃಷಿಯೊಂದಿಗೆ ತಮ್ಮ ಜಾಗದಲ್ಲಿ ಕೋಳಿ, ಕುರಿ, ಪಶು ಸಾಕಾಣಿಕೆ ಮಾಡುತ್ತಿದ್ದಾರೆ. ಕೇವಲ ಕೃಷಿಯನ್ನು ನಂಬಿ ಜೀವನ ನಡೆಸುವುದು ಕಷ್ಟವಾಗುತ್ತದೆ ಆದ್ದರಿಂದ ಕೃಷಿಯೊಂದಿಗೆ ಉಪಕಸಬುಗಳನ್ನು ಮಾಡಬೇಕು. ಕೋಳಿ ಸಾಕಾಣಿಕೆ ಮಾಡುವುದಾದರೆ ಸ್ವರ್ಣಧಾರ ಎಂಬ ತಳಿಯ ಕೋಳಿಗಳನ್ನು ಸಾಕುವುದರಿಂದ ಅಧಿಕ ಲಾಭ ಗಳಿಸಬಹುದು. ಹಾಗಾದರೆ ಸ್ವರ್ಣಧಾರ ಕೋಳಿಗಳ ಬಗ್ಗೆ ಈ ಲೇಖನದಲ್ಲಿ ನೋಡೋಣ.

ಅನೇಕರು ನಾಟಿಕೊಳಿಯನ್ನು ಸಾಕುತ್ತಾರೆ. ನಾಟಿ ಕೋಳಿಯಲ್ಲಿ ಅನೇಕ ತಳಿ ಇರುತ್ತದೆ. ನಾಟಿ ಕೊಳಿಯಂತೆ ಇರುವ ಸ್ವರ್ಣಧಾರ ಕೋಳಿಗಳು ನಾಟಿ ಕೋಳಿಗಳಿಗಿಂತ ವೇಗವಾಗಿ ಬೆಳೆಯುತ್ತದೆ. ಮೊಟ್ಟೆಗಳು ಬೇಗ ಅಭಿವೃದ್ಧಿ ಆಗುತ್ತದೆ. ನಾಟಿಕೋಳಿ ಹೆಚ್ಚು ಎಂದರೆ 2 ಕೆಜಿ ಬೋಡಿ ವೇಟ್ ಆಗುತ್ತದೆ, ಸ್ವರ್ಣಧಾರ ಕೋಳಿ 3-4 ಕೆಜಿ ಬೋಡಿ ವೇಟ್ ಆಗುತ್ತದೆ. ಎಲ್ಲಾ ವಾತಾವರಣಕ್ಕೆ ಸ್ವರ್ಣಧಾರ ಕೋಳಿ ಹೊಂದಿಕೊಂಡು ಬೆಳೆಯುತ್ತದೆ, ಕರ್ನಾಟಕದ ಎಲ್ಲ ಭಾಗಗಳಲ್ಲಿ ಸ್ವರ್ಣಧಾರ ಕೋಳಿ ಬೆಳೆಯುತ್ತದೆ. ಒಂದು ತಿಂಗಳಿನ ಸ್ವರ್ಣಧಾರ ಕೋಳಿಗೆ 75 ರೂಪಾಯಿ.

ಒಂದು ಕೋಳಿಗೆ 4 ಕೆಜಿ ಫುಡ್ ತೆಗೆದುಕೊಳ್ಳುತ್ತಾರೆ. ಕನಿಷ್ಟ 500 ಕೋಳಿಗಳನ್ನು ಸಾಕಲು ಅರ್ಧ ಎಕರೆಯ ಜಾಗದಲ್ಲಿ ಶೆಡ್ ನಿರ್ಮಾಣ ಮಾಡಲಾಗುತ್ತದೆ. ಹೆಚ್ಚು ಸಂಖ್ಯೆಯ ಕೋಳಿಗಳನ್ನು ಸಾಕಲು ಲೈಸೆನ್ಸ್ ಬೇಕಾಗುತ್ತದೆ. ಕೋಳಿ ಮರಿಗಳನ್ನು ಕೊಂಡು ಕೊಳ್ಳುವಾಗ ಒಂದು ದಿನದ, ಹದಿನೈದು ದಿನಗಳ, ಒಂದು ತಿಂಗಳ ಮರಿಗಳೆಂದು ಮೂರು ವಿಭಾಗ ಮಾಡಿರಲಾಗುತ್ತದೆ. 15 ದಿನಗಳ ಅಥವಾ ಒಂದು ತಿಂಗಳ ಕೋಳಿ ಮರಿಗಳನ್ನು ತಂದು ಫಾರ್ಮ್ ನಲ್ಲಿ ಸಾಕಬೇಕು. ಕೋಳಿ ಫಾರ್ಮ್ ಬಹಳ ಕ್ಲೀನ್ ಆಗಿರಬೇಕು ಇದರಿಂದ ಕೋಳಿ ಮರಿಗಳು ಬೆಳವಣಿಗೆ ಆಗುತ್ತದೆ ಮತ್ತು ಯಾವುದೆ ಖಾಯಿಲೆ ಬರುವುದಿಲ್ಲ. ಒಂದು ಕೋಳಿಗೆ ಒಂದು ಬಾರಿ 50 ಗ್ರಾಂ ಫುಡ್ ಹಾಕಬೇಕು.

ಫಾರ್ಮ್ ನಲ್ಲಿ 10 ಹೆಣ್ಣು ಕೋಳಿಗೆ ಒಂದು ಗಂಡು ಕೋಳಿ ಎನ್ನುವ ರೀತಿಯಲ್ಲಿ ಸಾಕಲಾಗುತ್ತದೆ, ಒಂದು ಸಾವಿರ ಹೆಣ್ಣು ಕೋಳಿಗಳಿಗೆ 800 ಮೊಟ್ಟೆಗಳು ಸಿಗುತ್ತದೆ. ಸ್ವರ್ಣಧಾರ ಹೆಣ್ಣು ಕೋಳಿ 3 ಕೆಜಿ ತೂಕ, ಗಂಡು ಕೋಳಿ ಮೂರು ವರೆ, ಮೂರು ಮುಕ್ಕಾಲು ಕೆಜಿ ತೂಕ ಬರುತ್ತದೆ. ಹೊರಗಡೆ ಸಾಕಿ ನ್ಯಾಚುರಲ್ ಫುಡ್ ಕೊಟ್ಟರೆ ಒಂದು ಕೋಳಿಗೆ ಒಂದು ವರೆ ಸಾವಿರ ರೂಪಾಯಿ ಲಾಭ ಸಿಗುತ್ತದೆ. ಒಂದು ನೂರು ಕೋಳಿಗೆ 20,000 ರೂಪಾಯಿ. ಒಂದು ವರ್ಷಕ್ಕೆ 50 ಲಕ್ಷ ರೂಪಾಯಿ ಲಾಭ ಗಳಿಸಬಹುದು.

ಕೋಳಿಗಳನ್ನು ನೋಡಿದ ತಕ್ಷಣ ಜನರಿಗೆ ಅಟ್ರಾಕ್ಟ್ ಆಗಬೇಕು ಆ ರೀತಿ ಕೋಳಿಗಳನ್ನು ಬೆಳೆಸಬೇಕು ಇದು ಮಾರ್ಕೆಟ್ ಸ್ಟ್ಯಾಟರ್ಜಿ ಆಗಿದೆ. ಇತ್ತೀಚಿನ ದಿನಗಳಲ್ಲಿ ಹಳೆಯ ಕೃಷಿ ಪದ್ಧತಿಯನ್ನು ಬಿಟ್ಟು ನೂತನ ಕೃಷಿಯೊಂದಿಗೆ ಕೋಳಿ, ಕುರಿ, ಪಶು ಸಾಕಾಣಿಕೆ ಮಾಡುವುದರಿಂದ ಹೆಚ್ಚಿನ ಲಾಭ ಗಳಿಸಬಹುದು. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.

Leave A Reply

Your email address will not be published.

error: Content is protected !!