ರಾಗಿ ತಿನ್ನುವುದರಿಂದ ದೇಹದಲ್ಲಿ ಯಾವ ಶಕ್ತಿ ಹೆಚ್ಚುತ್ತದೆ

0

ಯಾವುದೇ ಆಹಾರಧಾನ್ಯದಲ್ಲಿ ಅದರದ್ದೇ ಆದ ಉತ್ತಮ ಅಂಶಗಳಿವೆ. ಪೋಷಕಾಂಶಗಳ ಪಟ್ಟಿಯನ್ನು ತುಲನೆ ಮಾಡಿದರೆ ಇತರ ದೊಡ್ಡ ಧಾನ್ಯಗಳನ್ನೆಲ್ಲಾ ಹಿಂದಿಕ್ಕಬಲ್ಲ ರಾಗಿ ನಮ್ಮ ನೆಚ್ಚಿನ ಆಹಾರವಾಗದಿರುವುದಕ್ಕೆ ಈ ನಮ್ಮ ಪೂರ್ವಾಗ್ರಹ ನಂಬಿಕೆಯೇ ಕಾರಣವಾಗಿದೆ. ಈ ನಂಬಿಕೆಯನ್ನು ದಾಟಿ ರಾಗಿಯನ್ನು ಸೇವಿಸಲು ಸಿದ್ಧರಿದ್ದೀರೆಂದಾದರೆ ರಾಗಿಯಲ್ಲಿ ಹೇರಳವಾಗಿರುವ ಕ್ಯಾಲ್ಸಿಯಂ, ಕರಗುವ ನಾರು, ಪ್ರೋಟೀನ್, ಕಬ್ಬಿಣ ಮತ್ತು ಇತರ ಖನಿಜಗಳನ್ನು ಸುಲಭವಾಗಿ ಪಡೆದುಕೊಳ್ಳುವವರಾಗುತ್ತೀರಿ.

ಜೊತೆಗೆ ಇದರಲ್ಲಿ ಕೊಬ್ಬಿನ ಅಂಶ ಅತ್ಯಂತ ಕಡಿಮೆ ಇದೆ. ಜೊತೆಗೇ ಆರೋಗ್ಯಕ್ಕೆ ಅಗತ್ಯವಾದ ಇತರ ಕೊಬ್ಬು ಮತ್ತು ಪೋಷಕಾಂಶಗಳಿವೆ. ಆದರೆ ರಾಗಿಯನ್ನು ಹೀಗೇ ಸೇವಿಸಲು ಸಾಧ್ಯವಿಲ್ಲ. ಇದನ್ನು ಹಿಟ್ಟು ಮಾಡಿಕೊಂಡು ರೊಟ್ಟಿ ಅಥವಾ ಮುದ್ದೆ ಮಾಡಿಕೊಂಡು ಸೇವಿಸಿದರೆ ಆರೋಗ್ಯಕ್ಕೆ ಅತ್ಯುತ್ತಮವಾಗಿದೆ.

ಮೂಳೆಗಳ ದೃಢತೆಗೆ ಕ್ಯಾಲ್ಸಿಯಂ ಅತಿ ಅಗತ್ಯವಾದ ಧಾತುವಾಗಿದೆ. ಇದರ ಅಗತ್ಯ ಮಕ್ಕಳು ಮತ್ತು ವೃದ್ದರಿಗೆ ಅತಿ ಹೆಚ್ಚು. ಮೂಳೆಗಳು ತಮ್ಮ ದೃಢತೆಯನ್ನು ಕಾಯ್ದುಕೊಳ್ಳಲು ನಿರಂತರ ಕ್ಯಾಲ್ಸಿಯಂ ಪೂರೈಕೆಯಾಗುತ್ತಲೇ ಇರಬೇಕು. ಹಾಲಿನಲ್ಲಿ ಉತ್ತಮ ಪ್ರಮಾಣದ ಕ್ಯಾಲ್ಸಿಯಂ ಇದೆ. ಆದರೆ ನಿರಂತರವಾಗಿ ಹಾಲಿನ ಮೂಲಕ ಲಭ್ಯವಾಗುವ ಕ್ಯಾಲ್ಸಿಯಂ ಅತಿ ಹೆಚ್ಚು ಪ್ರಮಾಣದಲ್ಲಿರುವುದರಿಂದ ಮೂತ್ರಪಿಂಡಗಳಲ್ಲಿ ಕಲ್ಲು ಮೊದಲಾದ ತೊಂದರೆಗಳು ಪ್ರಾರಂಭವಾಗುವ ಸಂಭವವಿದೆ.

ಆದರೆ ರಾಗಿಯಲ್ಲಿ ದಿನಕ್ಕೆ ಅಗತ್ಯವಿರುವಷ್ಟು ಪ್ರಮಾಣದಲ್ಲಿ ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಇರುವುದರಿಂದ ಆರೋಗ್ಯವನ್ನು ಪಣಕ್ಕಿಡದೇ ಮೂಳೆಗಳನ್ನು ದೃಢವಾಗಿರಿಸಿಕೊಳ್ಳಲು ನೆರವಾಗುತ್ತದೆ. ಪರಿಣಾಮವಾಗಿ ಮೂಳೆಗಳು ಟೊಳ್ಳಾಗುವ ಅಥವಾ ಗುಳ್ಳೆಗಳು ತುಂಬಿರುವ ಎಂಬ ತೊಂದರೆಯಿಂದ ಕಾಪಾಡುತ್ತದೆ.

ಸ್ಥೂಲಕಾಯದಿಂದ ಹೊರಬರಲಿಚ್ಛಿಸುವವರಿಗೆ ರಾಗಿ ಉತ್ತಮವಾದ ಪರ್ಯಾಯ ಆಹಾರವಾಗಿದೆ. ಗೋಧಿ ಮತ್ತು ಅಕ್ಕಿಗಳೆರಡರಲ್ಲಿಯೂ ತೂಕವನ್ನು ಹೆಚ್ಚಿಸುವ ಪೋಷಕಾಂಶಗಳಿರುವುದರಿಂದ ಈ ಆಹಾರಗಳನ್ನು ಸೇವಿಸುತ್ತಿರುವಂತೆ ತೂಕ ಕಳೆದುಕೊಳ್ಳುವ ಗತಿ ಅತಿ ನಿಧಾನವಾಗುತ್ತದೆ. ಬದಲಿಗೆ ರಾಗಿಯಲ್ಲಿರುವ ಪೋಷಕಾಂಶಗಳು ನಿಧಾನವಾಗಿ ಶರೀರಕ್ಕೆ ಲಭ್ಯವಾಗುವುದರಿಂದ ಹೆಚ್ಚಿನ ಕೊಬ್ಬು ಖರ್ಚಾಗುತ್ತದೆ. ಜೊತೆಗೇ ಶರೀರದಲ್ಲಿ ಕ್ಯಾಲೋರಿಗಳು ನಿಧಾನವಾಗಿ ಲಭ್ಯವಾಗಿ ದಿನದ ಚಟುವಟಿಕೆ ಸುಲಲಿತವಾಗುವಂತೆ ನೋಡಿಕೊಳ್ಳುತ್ತದೆ. ಇದು ತೂಕ ಕಳೆದುಕೊಳ್ಳಲು ನೆರವಾಗುತ್ತದೆ.

ರಾಗಿಯ ನಿಯಮಿತ ಸೇವನೆಯಿಂದ ಮೆದುಳಿಗೆ ಪೂರೈಕೆಯಾಗುವ ರಕ್ತ ಮತ್ತು ಇತರ ಪೋಷಕಾಂಶಗಳ ಪ್ರಮಾಣ ಹೆಚ್ಚಾಗಿ ಖಿನ್ನತೆ ಮೊದಲಾದ ಮಾನಸಿಕ ತೊಂದರೆಗಳಿಗೆ ಆರಾಮ ನೀಡುತ್ತದೆ. ನಿದ್ರಾಹೀನತೆ, ಮೈಗ್ರೇನ್ ತಲೆನೋವು, ಮಂಕು ಕವಿದಿರುವುದು ಮೊದಲಾದ ತೊಂದರೆಗಳಿರುವವರಿಗೂ ರಾಗಿ ಉತ್ತಮ ಆಹಾರವಾಗಿ ಪ್ರಮಾಣಿತವಾಗಿದೆ. ಅಕ್ಕಿ ಮತ್ತು ಗೋಧಿಗಳಲ್ಲಿರುವ ಸಕ್ಕರೆ ಅಂಶ ಅತಿ ಶೀಘ್ರದಲ್ಲಿ ರಕ್ತಕ್ಕೆ ಲಭ್ಯವಾಗುವುದರಿಂದ ಮತ್ತು ಅಗತ್ಯಕ್ಕಿಂತ ಹೆಚ್ಚು ಪ್ರಮಾಣದಲ್ಲಿರುವುದರಿಂದ ಕ್ಲುಪ್ತಕಾಲದಲ್ಲಿ ಬಳಕೆಯಾಗದೇ ಇದ್ದರೆ ಇತರ ತೊಂದರೆಗಳಿಗೆ ಆಹ್ವಾನ ನೀಡಿದಂತಾಗುತ್ತದೆ.

ಬದಲಿಗೆ ರಾಗಿಯ ಸೇವನೆಯಿಂದ ರಕ್ತಕ್ಕೆ ಅಗತ್ಯವಿರುವಷ್ಟೇ ಪ್ರಮಾಣದಲ್ಲಿ ಸಕ್ಕರೆ ಬಿಡುಗಡೆಯಾಗುವುದರಿಂದ ರಕ್ತದಲ್ಲಿ ಹೆಚ್ಚಿನ ಗ್ಲೂಕೋಸ್ ಮಟ್ಟವನ್ನು ಕಡಿಮೆಗೊಳಿಸಲು ನೆರವಾಗುತ್ತದೆ. ಜೊತೆಗೇ ರಾಗಿಯಲ್ಲಿರುವ ಕರಗದ ನಾರು ಜೀರ್ಣಕ್ರಿಯೆ ಮತ್ತು ವಿಸರ್ಜನಾ ಕ್ರಿಯೆಯನ್ನು ಸುಲಭಗೊಳಿಸುತ್ತದೆ. ರಾಗಿಮುದ್ದೆಯ ನಿರಂತರ ಸೇವನೆಯಿಂದ ದೇಹದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಇದರಲ್ಲಿರುವ ಉತ್ತಮ ಪ್ರಮಾಣದ ಪ್ರೋಟೀನುಗಳು, ವಿಟಿಮಿನ್ ಮತ್ತು ಇತರ ಖನಿಜಗಳು ಇದಕ್ಕೆ ನೆರವಾಗುತ್ತದೆ. ಪರಿಣಾಮವಾಗಿ ಹುರಿಕಟ್ಟಾದ ಶರೀರ ನಿಮ್ಮದಾಗುತ್ತದೆ ಮತ್ತು ಆರೋಗ್ಯ ಉತ್ತವಾಗಿರುತ್ತದೆ.

Leave A Reply

Your email address will not be published.

error: Content is protected !!