ರಸ ಗೊಬ್ಬರ ಹೇಗೆ ತಯಾರಿಸುತ್ತಾರೆ? DAP ಗೊಬ್ಬರದಲ್ಲಿ ಏನೆಲ್ಲಾ ಇರುತ್ತೆ ಸಂಪೂರ್ಣ ಮಾಹಿತಿ

0

ರಸಗೊಬ್ಬರಗಳ ಸರಿಯಾದ ಉಪಯೋಗದಿಂದ ಒಳ್ಳೆಯ ಬೆಳೆಯನ್ನು ಪಡೆಯಬಹುದು. ರಸಗೊಬ್ಬರಗಳ ಬಳಕೆ ಮತ್ತು ಅದರ ಪ್ರಯೋಜನದ ಬಗ್ಗೆ ರೈತರಲ್ಲಿ ತಿಳುವಳಿಕೆ ಇರುವುದು ಅಗತ್ಯವಾಗಿದೆ. ರಸಗೊಬ್ಬರಗಳ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ.

ಎನ್ ಪಿಕೆ ರಸಗೊಬ್ಬರ ಚೀಲಗಳ ಮೇಲೆ ಬರೆದಿರುವ ಎನ್ ಪಿಕೆ ಯಲ್ಲಿ ಎನ್ ಎಂದರೆ ಸಾರಜನಕ (ನೈಟ್ರೋಜನ್), ಪಿ ಎಂದರೆ ರಂಜಕ (ಪೋಸ್ಪರಸ್) , ಕೆ ಎಂದರೆ ಪೊಟ್ಯಾಷಿಯಂ ಎಂದು ಕರೆಯುತ್ತಾರೆ. ಗೊಬ್ಬರ ಚೀಲಗಳ ಮೇಲೆ ಶೇಕಡಾ ದಲ್ಲಿ ಸಂಖ್ಯೆ ಬರೆದಿರುತ್ತಾರೆ. ಉದಾಹರಣೆಗೆ ಎನ್ ಪಿಕೆ 10 26 26 ಎಂದು ಬರೆದಿರುತ್ತಾರೆ. ಅಂದರೆ ಸಾರಜನಕ ಶೇಕಡಾ10 ರಷ್ಟು, ಪೋಸ್ಪರಸ್ ಶೇಕಡಾ 26 ರಷ್ಟು ಹಾಗೂ ಪೊಟ್ಯಾಷಿಯಂ 26 ಶೇಕಡಾದಷ್ಟು ಇರುತ್ತದೆ ಎಂದರ್ಥ. ಡಿಎಪಿಯಲ್ಲಿ ಹದಿನೆಂಟು ನಲವತ್ತಾರು ಸೊನ್ನೆ ಎಂದು ಬರೆದಿರುತ್ತಾರೆ ಅಂದರೆ ಹದಿನೆಂಟು ಶೇಕಡಾದಷ್ಟು ನೈಟ್ರೋಜನ್, ನಲವತ್ತಾರು ಶೇಕಡಾದಷ್ಟು ಪೋಸ್ಪರಸ್ ಸಿಗುತ್ತದೆ. ಸೊನ್ನೆ ಎಂದರೆ ಪೊಟ್ಯಾಷಿಯಂ ಇಲ್ಲಿ ಬಳಸಲಾಗುವುದಿಲ್ಲ ಎಂದು ತೋರಿಸುತ್ತದೆ. ರಸಗೊಬ್ಬರಗಳನ್ನು ಹೇಗೆ ಉಪಯೋಗಿಸಬಹುದು, ಯಾವ ಬೆಳೆಗೆ ಎಷ್ಟು ಪ್ರಮಾಣದಲ್ಲಿ ಉಪಯೋಗಿಸಬೇಕು, ಎಂಬುದರ ಬಗ್ಗೆ ಸರಿಯಾದ ಮಾಹಿತಿ ಇದ್ದರೆ ಮಾತ್ರ ಉತ್ತಮ ಬೆಳೆಯನ್ನು ಪಡೆಯಬಹುದು. ಯೂರಿಯಾ ಗೊಬ್ಬರದಲ್ಲಿ ಸಂಪೂರ್ಣವಾಗಿ ನಲವತ್ತಾರು ಶೇಕಡಾದಷ್ಟು ಸಾರಜನಕ ( ನೈಟ್ರೋಜನ್) ಇರುತ್ತದೆ. ಸಾರಜನಕವು ಮುಖ್ಯವಾಗಿ ಎಲೆಗಳ ಅಭಿವೃದ್ಧಿಗೆ ಸಹಾಯವಾಗುತ್ತದೆ. ಪೈರಿನ ಕಾಂಡ ಹಾಗೂ ಕೊಂಬೆಗಳ ಬೆಳೆವಣಿಗೆಗೆ ಹಾಗೂ ಎಲೆಗಳು ಸಮೃದ್ಧವಾಗಿ ಬೆಳೆಯಲು ಉಪಯುಕ್ತವಾಗಿದೆ. ಯಾವುದೇ ಒಂದು ಬೆಳೆಯಲ್ಲಿ ಎಲೆಗಳು ಯಥೇಚ್ಛವಾಗಿ ಬೆಳೆಯಲು ಸಾರಜನಕ ಹೊಂದಿರುವ ರಸಗೊಬ್ಬರವನ್ನು ಹಾಕಬೇಕು. ಸಾರಜನಕದ ಮುಖ್ಯ ಕೆಲಸವೆಂದರೆ ಪೈರಿನ ಬೆಳೆವಣಿಗೆಗೆ ಸಹಾಯ ಮಾಡುತ್ತದೆ. ಪೈರಿನಲ್ಲಿ ಸಾರಜನಕದ ಕೊರತೆ ಇದ್ದರೆ ಪೈರಿನ ಎಲೆ ಹಳದಿ ಬಣ್ಣಕ್ಕೆ ತಿರುಗುತ್ತದೆ ಅದರ ರೆಂಬೆ ಕೊಂಬೆಗಳು ಬಲಿಷ್ಠವಾಗಿ ಬೆಳೆಯುವುದಿಲ್ಲ ಆಗ ಸಾರಜನಕವನ್ನು ಉಪಯೋಗಿಸಿ ಕೊರತೆಯನ್ನು ನೀಗಿಸಬೇಕಾಗುತ್ತದೆ. ಹೆಚ್ಚು ಸಾರಜನಕ ಉಪಯೋಗಿಸುವುದರಿಂದ ಮಣ್ಣಿನಲ್ಲಿ ಕ್ಷಾರತೆ ಹೆಚ್ಚಾಗಿ ಮಣ್ಣಿನ ಗುಣಮಟ್ಟ ಹಾಗೂ ಫಲವತ್ತತೆ ಕಡಿಮೆಯಾಗುತ್ತದೆ. ರಂಜಕದ ಬಗ್ಗೆ ಹೇಳುವುದಾದರೆ ರಂಜಕವು ಬೀಜದ ಮೊಳಕೆ ಒಡೆಯಲು ಹಾಗೂ ಬೇರಿನ ಬೆಳವಣಿಗೆಯಲ್ಲಿ ತುಂಬಾ ಮುಖ್ಯ ಪಾತ್ರವಹಿಸುತ್ತದೆ. ಪೈರು ಚೆನ್ನಾಗಿ ಸಮೃದ್ಧವಾಗಿ ಬೆಳೆಯಲು ಬೇರು ಚೆನ್ನಾಗಿ ಇರಬೇಕು. ಬೇರು ಆರೋಗ್ಯವಾಗಿ ಬೆಳೆಯಲು ರಂಜಕ ತುಂಬಾ ಮುಖ್ಯವಾದ ಪಾತ್ರವಹಿಸುತ್ತದೆ.

ಪೊಟ್ಯಾಷಿಯಂ ಉಪಯೋಗದಿಂದ ಕಾಳು ಕಟ್ಟುವ ಹಂತದಲ್ಲಿ , ಹೂವು, ಕಾಯಿ, ಹಣ್ಣು ಬಿಡುವ ಹಂತದಲ್ಲಿ ಇದು ಒಳ್ಳೆ ಕೆಲಸ ಮಾಡುತ್ತದೆ. ಇಂತಹ ಸಂದರ್ಭದಲ್ಲಿ ಹಾಕುವುದರಿಂದ ಹೂವು ಹಣ್ಣು, ಕಾಳುಗಳು ಚೆನ್ನಾಗಿ ಬೆಳೆಯುತ್ತವೆ. ರಸಗೊಬ್ಬರಗಳನ್ನು ಹಾಕುವ ಮೊದಲು ಭೂಮಿಯ ಮಣ್ಣಿನ ಪರೀಕ್ಷೆ ಮಾಡಬೇಕು. ಮಣ್ಣಿನ ಪರೀಕ್ಷೆ ಮಾಡಿದ ನಂತರ ರಂಜಕದ ಅಂಶ, ಸಾರಜನಕದ ಅಂಶ, ಪೊಟ್ಯಾಷಿಯಂ ಅಂಶ ಎಷ್ಟೆಷ್ಟು ಭೂಮಿಯಲ್ಲಿ ಇದೆ ಎಂಬುದನ್ನು ತಿಳಿದುಕೊಂಡು ನಂತರ ರಸಗೊಬ್ಬರಗಳ ಉಪಯೋಗ ಮಾಡಬೇಕು. ಉದಾಹರಣೆಗೆ ಒಂದು ವೇಳೆ ಭೂಮಿಯಲ್ಲಿ ರಂಜಕದ ಅಂಶ ಹೆಚ್ಚಾಗಿದ್ದಲ್ಲಿ ರಂಜಕದ ಪ್ರಮಾಣ ಕಡಿಮೆ ಮಾಡುವುದು. ಸಾರಜನಕದ ಕೊರತೆ ಇದ್ದಲ್ಲಿ ಸಾರಜನಕದ ಪ್ರಮಾಣ ಹೆಚ್ಚಾಗಿ ಬಳಸಬಹುದು. ಇದರಿಂದ ರಸಗೊಬ್ಬರದ ಕೊರತೆ ನೀಗಿಸುತ್ತದೆ ಹಾಗೂ ಖರ್ಚು ಕೂಡಾ ಕಡಿಮೆಯಾಗುತ್ತದೆ. ಲಾಭ ತಂದು ಕೊಡುತ್ತದೆ. ಯಾವುದೇ ಬೆಳೆಯಾಗಲಿ ಹೆಚ್ಚು ರಸಗೊಬ್ಬರ ಬಳಸುವುದರಿಂದ ಹೆಚ್ಚು ಬೆಳೆ ಬರುತ್ತದೆ ಎಂಬುದು ತಪ್ಪು ಕಲ್ಪನೆ. ಯಾವಾಗಲೂ ಬೆಳೆಗಳು ತಮಗೆ ಎಷ್ಟು ಬೇಕೋ ಅಷ್ಟು ಮಾತ್ರ ಪೋಷಕಾಂಶಗಳನ್ನು ಹೀರಿಕೊಳ್ಳುತ್ತವೆ ಉಳಿದ ಅಂಶಗಳು ಮಣ್ಣಿನಲ್ಲಿ ಹಾಳಾಗಿ ಹೋಗುತ್ತದೆ ಮತ್ತು ಇದರಿಂದ ಮಣ್ಣಿನ ಫಲವತ್ತತೆ ಕಡಿಮೆಯಾಗುತ್ತದೆ ಆದ್ದರಿಂದ ಹೆಚ್ಚು ರಾಸಾಯನಿಕ ಗೊಬ್ಬರಗಳನ್ನು ಉಪಯೋಗಿಸಬಾರದು ಆದಷ್ಟು ಸಾವಯವ ಗೊಬ್ಬರಗಳನ್ನು ಹೆಚ್ಚು ಉಪಯೋಗಿಸಬೇಕು. ಸಾವಯವ ಗೊಬ್ಬರ ಉಪಯೋಗಿಸುವುದರಿಂದ ಖರ್ಚು ಕಡಿಮೆಯಾಗುತ್ತದೆ ಹಾಗೂ ಭೂಮಿಯ ಫಲವತ್ತತೆ ಉಳಿಯುತ್ತದೆ.

Leave A Reply

Your email address will not be published.

error: Content is protected !!