ಹಳೆಯ ಬ್ಲೌಸ್ ಬಿಸಾಕುವ ಮುನ್ನ ಇದನೊಮ್ಮೆ ನೋಡಿ

ಮನೆಯಲ್ಲಿ ಇರುವ ವಸ್ತುಗಳನ್ನು ಬೇಡವೆಂದು ಅದರ ಅವಶ್ಯಕತೆ ಮುಗಿದ ಮೇಲೆ ಬಿಸಾಕಲಾಗುತ್ತದೆ. ಆದರೆ ಬೇಡವಾದ ವಸ್ತುಗಳಿಂದ ಬೇರೆ ರೀತಿಯಲ್ಲಿ ಬಳಕೆ ಮಾಡಬಹುದು. ಹಾಗೆಯೇ ನಾವು ಬಳಸಿದ ಬಟ್ಟೆಗಳನ್ನು ಬೇಡವೆಂದು ಬಿಸಾಡಲಾಗುತ್ತದೆ. ಸೀರೆಯು ಹಳೆದಾದ ಮೇಲೆ ಸೀರೆಯ ಬ್ಲೌಸನ್ನು ಬಿಸಾಡುತ್ತಾರೆ. ಆದರೆ ಅದನ್ನು ಪುನಃ ಬಳಸಿ ಪರ್ಸನ್ನಾಗಿ ಮಾಡಬಹುದು. ಆದ್ದರಿಂದ ನಾವು ಇಲ್ಲಿ ಹಳೆಯ ಬ್ಲೌಸನ್ನು ಬಳಸಿ ಪರ್ಸನ್ನು ಮಾಡುವ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಮೊದಲು ಬ್ಲೌಸಿನ ಹಿಂದಿನ ಅಂದರೆ ಬೆನ್ನಿನ ಭಾಗವನ್ನು ಕಟ್ ಮಾಡಿಕೊಂಡು ಅದನ್ನು ಎರಡು ಭಾಗವನ್ನಾಗಿ ಮಾಡಿಕೊಳ್ಳಬೇಕು. ನಂತರ ಎರಡೂ ಭಾಗಕ್ಕೆ ಥರ್ಮಕೋಲನ್ನು ಹಾಕಬೇಕು. ಥರ್ಮಕೋಲನ್ನು ಸೇರಿಸಿ ಎರಡೂ ಭಾಗವನ್ನು ಮೂರು ತುದಿಗೆ ಹೊಲಿಯಬೇಕು. ನಂತರದಲ್ಲಿ ಒಂದು ಕೈ ಚೀಲವನ್ನು ತೆಗೆದುಕೊಳ್ಳಬೇಕು. ಅದನ್ನು ಮೂರು ಮಡಕೆಯನ್ನು ಮಾಡಿ ಮಧ್ಯ ಹೊಲಿಯಬೇಕು. ನಂತರದಲ್ಲಿ ಒಂದು ಭಾಗಕ್ಕೆ ಸೇರಿಸಬೇಕು. ಹಾಗೆಯೇ ಚೀಲದ ಇನ್ನೊಂದು ಭಾಗವನ್ನು ತೆಗೆದುಕೊಂಡು ಕಟ್ ಮಾಡಿ ತುದಿಯನ್ನು ಮಡಚಿ ಹೊಲಿಯಬೇಕು.

ಆ ಭಾಗವನ್ನು ಬ್ಲೌಸ್ ಕಟ್ ಮಾಡಿದ ಭಾಗದ ಇನ್ನೊಂದು ಭಾಗಕ್ಕೆ ಸೇರಿಸಬೇಕು. ನಂತರದಲ್ಲಿ ಜಿಪ್ ನ್ನು ಒಂದು ಭಾಗಕ್ಕೆ ಸೇರಿಸಬೇಕು. ಸರಿಯಾಗಿ ಹೊಲಿಗೆ ಹಾಕಬೇಕು. ಹಾಗೆಯೇ ಇನ್ನೊಂದು ಭಾಗವನ್ನು ಅದಕ್ಕೆ ಸೇರಿಸಬೇಕು. ಜಿಪ್ ನ್ನು ಸರಿಯಾಗಿ ಹುಲಿದು ಉಳಿದ ಭಾಗವನ್ನು ಕತ್ತರಿಸಬೇಕು. ಪರ್ಸನ್ನು ಉಲ್ಟಾ ಮಾಡಬೇಕು. ಇಷ್ಟು ಸುಲಭವಾಗಿ ಬೇಡವೆಂದು ಬಿಸಾಡುವ ಬ್ಲೌಸನ್ನು ಬಳಸಿ ಪರ್ಸನ್ನು ಮಾಡಬಹುದು. ಇದರಲ್ಲಿ ಹಣವನ್ನು ಇಟ್ಟುಕೊಳ್ಳಬಹುದು. ಹಾಗೆಯೇ ಮೊಬೈಲ್ ನ್ನು ಇಟ್ಟುಕೊಳ್ಳಬಹುದು.

ಹಾಗೆಯೇ ಎಲ್ಲಾ ರೀತಿಯ ಕಾರ್ಡ್ ಗಳನ್ನು ಇಟ್ಟುಕೊಳ್ಳಬಹುದು. ಅಂದರೆ ಬ್ಯಾಂಕಿನ ಕಾರ್ಡ್ ಗಳನ್ನು ಇಟ್ಟುಕೊಳ್ಳಬಹುದು. ಹಾಗೆಯೇ ಇನ್ನೂ ಬೇರೆ ಬೇರೆ ರೀತಿಯಲ್ಲಿ ಮನೆಯಲ್ಲಿ ಬೇಡವಾದ ಬಟ್ಟೆಗಳನ್ನು ಒಗೆಯುವ ಬದಲು ಈ ರೀತಿಯಾಗಿ ಬಳಕೆ ಮಾಡಬಹುದು. ದಿನನಿತ್ಯ ಸೀರೆಯನ್ನು ಬಳಕೆ ಮಾಡಿ ಹಳೆದಾಗಿರುತ್ತದೆ. ಅದನ್ನು ಚೀಲಗಳನ್ನಾಗಿ ಮಾಡಬಹುದು. ಹಾಗೆಯೇ ಸಣ್ಣ ಸಣ್ಣ ಚೂರುಗಳನ್ನು ಮಾಡಿ ಹೂವಿನ ಗಿಡಗಳಿಗೆ ಹೆಣೆಗಳನ್ನು ಕಟ್ಟಲು ಬಳಸಬಹುದು. ಇದರಿಂದ ಕಾಲು ಒರೆಸಲು ಮ್ಯಾಟ್ ಗಳನ್ನು ಕೂಡ ಮಾಡಬಹುದು.

Comments are closed.

error: Content is protected !!