WhatsApp Group Join Now
Telegram Group Join Now

1/2 ಸ್ಪೂನ್ ಸಾಕು ಯಾವಾಗಲೂ ಎನರ್ಜಿಯಿಂದ ಇರಲು, ಮೂಳೆಗಳು ಗಟ್ಟಿಯಾಗಲೂ,ಶುಗರ್, ಕೊಲೆಸ್ಟ್ರಾಲ್ ಮತ್ತು ಮಾನಸಿಕ ಒತ್ತಡ ಕಡಿಮೆಮಾಡಲು. ಅಶ್ವಗಂಧ ಒಂದು ಅದ್ಭುತ ಮೂಲಿಕೆಯಾಗಿದ್ದು ಭಾರತದ ಜಿನ್ಸೆಂಗ್ ಎಂಬ ಅನ್ವರ್ಥನಾಮವನ್ನು ಪಡೆದಿದೆ. ಈ ಅದ್ಭುತ ಮೂಲಿಕೆಗೆ ಕೊಂಚ ಭಿನ್ನವಾದ ಹೆಸರು ಬರಲು ಇದರ ವಾಸನೆಯೆ ಕಾರಣ, ಇದರ ವಾಸನೆ ಕುದುರೆಯ ಮೂತ್ರದ ವಾಸನೆಯನ್ನೆ ಹೋಲುವ ಕಾರಣ ಆಯುರ್ವೇದ ಇದಕ್ಕೆ ಅಶ್ವದ ಗಂಧ ಅಥಾವ ಅಶ್ವಗಂಧ ಎಂಬ ಹೆಸರನ್ನು ನೀಡಿದೆ. ಅಶ್ವಗಂಧ ಹಲವು ತೊಂದರೆಗಳಿಗೆ ಉತ್ತರವಾಗಿದೆ. ದೈಹಿಕ, ಮಾನಸಿಕ, ಮತ್ತು ಭಾವನಾತ್ಮಕ ತೊಂದರೆಗಳಿಗೆಲ್ಲಾ ಇದು ಅದ್ವಿತೀಯ ಉತ್ತರವಾಗಿದೆ. ಇದರ ಗುಣವನ್ನು ಆಯುರ್ವೇದ ಮಾತ್ರವಲ್ಲ, ಹೋಮಿಯೋಪತಿ ಯುನಾನಿ ಮತ್ತು ಸಿದ್ಧ ಔಷಧಿಯ ಪದ್ಧತಿಗಳಿಗೂ ಬಳಸಿಕೊಂಡಿವೆ. ಖಿನ್ನತೆ ಇರುವ ವ್ಯಕ್ತಿಗಳು ಅಶ್ವಗಂಧವನ್ನು ನಿಯಮಿತವಾಗಿ ಸೇವಿಸುವ ಮೂಲಕ ಶೀಘ್ರವಾಗಿ ಈ ಸ್ಥಿತಿಯಿಂದ ಹೊರಬರುತ್ತಾರೆ.

ಇದೊಂದು ಅದ್ಭುತ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಔಷಧಿಯಾಗಿದ್ದು ನೂರಾರು ವರ್ಷಗಳಿಂದ ಅಶ್ವಗಂಧವನ್ನು ಇದೆ ಉದ್ದೇಶಕ್ಕಾಗಿ ಬಳಸಲಾಗುತ್ತಿದೆ. ರೋಗ ನಿರೋಧಕ ಶಕ್ತಿ ಬಲಿಷ್ಠವಾದಷ್ಟು ಹಲವಾರು ರೋಗಗಳಿಂದ ರಕ್ಷಣೆ ಪಡೆಯುವುದು ಸಾಧ್ಯವಾಗುತ್ತದೆ. ಈ ಗುಣದಿಂದಾಗಿಯೇ ಇಂದು ಮಾರುಕಟ್ಟೆಯಲ್ಲಿ ಲಭ್ಯವಿರುವ ರೋಗ ನಿರೋಧಕ ಶಕ್ತಿ ವೃದ್ಧಿಸುವ ಔಷಧಿಗಳಲ್ಲಿ ಅಶ್ವಗಂಧವನ್ನು ಪ್ರಮುಖವಾಗಿ ಬಳಸಲಾಗುತ್ತದೆ.

ಅಷ್ಟೇ ಅಲ್ಲಾ, ಒಂದು ವೇಳೆ ಈಗಾಗಲೇ ಕ್ಯಾನ್ಸರ್ ಪೀಡಿತ ಜೀವಕೋಶಗಳ ಬೆಳವಣಿಗೆ ಪ್ರಾರಂಭವಾಗಿದ್ದರೆ ಸಕಾಲದಲ್ಲಿ ಅಶ್ವಗಂಧ ಸೇವಿಸಿದರೆ ಈ ಜೀವಕೋಶಗಳು ಕೊಲ್ಲಲ್ಪಡುತ್ತವೆ. ಇದರಲ್ಲಿ ಬ್ಯಾಕ್ಟೀರಿಯಾ ನಿರೋಧಕ ಮತ್ತು ಅತಿಸೂಕ್ಷ್ಮಜೀವಿ ನಿರೋಧಕ ಗುಣಗಳಿವೆ  ಹಾಗೂ ಇವು ಗಾಯಗಳಾದರೆ ಶೀಘ್ರವೇ ಮಾಗಿಸಲು ಮತ್ತು ಸೋಂಕು ಉಂಟಾಗದಂತೆ ನೋಡಿಕೊಳ್ಳಲು ನೆರವಾಗುತ್ತದೆ.

ಶತಮಾನಗಳ ಹಿಂದೆಲ್ಲಾ ಗಾಯಗಳಾದರೆ, ಹುಣ್ಣು, ಬೊಬ್ಬೆ, ಚರ್ಮದ ಉರಿತ  ಮೊದಲಾದವು ಎದುರಾದರೆ ಅಶ್ವಗಂಧ ಎಳೆಗಳನ್ನು ಅರೆದು ಹಚ್ಚಲಾಗುತ್ತಿತ್ತು. ಕಫ, ಕೆಮ್ಮು ನಿತ್ರಾಣ ಹಾಗೂ ಸ್ತ್ರೀಯರ ದೈಹಿಕ ಸಮಸ್ಯೆಗಳಿಗೆ ಅಶ್ವಗಂಧ ತತ್ ಕ್ಷಣಕ್ಕೆ ಸಿಗುವ ಮನೆ ಮದ್ದು. ಅಶ್ವಗಂಧದ ಸೇವನೆಯಿಂದ ಚರ್ಮದ ಅಡಿ ಭಾಗದಲ್ಲಿ ಉತ್ತಮ ಪ್ರಮಾಣದ ರಕ್ತ ಪರಿಚಲನೆ ದೊರಕುತ್ತದೆ. ಹಾಗೂ ಕೂಡಲೇ ಬುಡಗಳಿಗೆ ಉತ್ತಮ ಪ್ರಮಾಣದ ಪೋಷಕಾಂಶಗಳೂ dorakut9. ರಕ್ತ ಪರಿಚಲನೆ ಕೂದಲನ್ನು ಬೆಳೆಸಲು ಪ್ರಚೋದಿಸುತ್ತದೆ. ಅಶ್ವಗಂಧದ ನಿಯಮಿತ ಸೇವನೆಯಿಂದ ಚರ್ಮದಲ್ಲಿ ಸುಕ್ಕುಗಳು, ನೆರಿಗೆಗಳು, ಸಡಿಲವಾಗುವುದು ಮೊದಲಾದ ಚಿನ್ಹೆಗಳು ಎದುರಾಗುವುದನ್ನು ಆದಷ್ಟು ತಡವಾಗಿಸಬಹುದು.

ಒಂದು ವೇಳೆ ರಾತ್ರಿ ಮಲಗಿದ ಬಳಿಕ ಬೇಗನೆ ನಿದ್ದೆ ಬಾರದೇ ಇರುವ ತೊಂದರೆ ಇದ್ದರೆ ರಾತ್ರಿ ಮಲಗುವ ಮುನ್ನ ಒಂದು ಲೋಟ ಬಿಸಿ ಹಾಲಿಗೆ ಒಂದು ಚಿಕ್ಕ ಚಮಚ ಅಶ್ವಗಂಧ ಪುಡಿಯನ್ನು ಬೆರೆಸಿ ಕೊಂಚ ಓಡಾಡಿ ಮಲಗುವ ಮೂಲಕ ನಿದ್ದೆ ಬೇಗ ಆವರಿಸುತ್ತದೆ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: