WhatsApp Group Join Now
Telegram Group Join Now

ಅಂಡ ಮೊಟ್ಟೆ ಅಥವಾ ತತ್ತಿ. ನಿಶೇಚನಗೊಂಡ ಅಂಡಾಣುವಿಗೆ ಈ ಹೆಸರು ಸೂಕ್ತ. ಈ ಪದವನ್ನು ಪ್ರಜನನಜೀವಕಣದ ಬೆಳೆವಣಿಗೆಯಲ್ಲಿನ ವಿವಿಧ ಹಂತಗಳಿಗೂ ಬಳಸುತ್ತಾರೆ. ಅದರ ರಚನೆ ಸಾಮಾನ್ಯವಾದ ಜೀವಕಣದಂತೆಯೇ ಇರುತ್ತದೆ. ಆಹಾರ ಸಂಗ್ರಹಣೆಯಿಂದ ಗಾತ್ರ ಸ್ವಲ್ಪ ದೊಡ್ಡದಾಗಿರಬಹುದು. ಕೆಲವು ಸಾರಿ ಅದರ ಸುತ್ತಲೂ ರಕ್ಷಣೆಗಾಗಿ ಸ್ರವಿಸಿದ ಇತರ ರಚನೆಗಳೂ ಇರಬಹುದು. ಮೊಟ್ಟೆಯಿಂದ ಮನುಷ್ಯನಿಗೆ ಆರೋಗ್ಯದ ವಿಚಾರದಲ್ಲಿ ತುಂಬಾನೇ ಸಹಾಯಕ ಮತ್ತು ರುಚಿಕರ ತಿನಿಸಾಗಿದೆ. ಆದ್ದರಿಂದ ನಾವು ಇಲ್ಲಿ ಮೊಟ್ಟೆಯಿಂದ ದೊರಕುವ ಪ್ರಯೋಜನದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ.

ಇತ್ತೀಚೆಗೆ ಕೋಳಿ ಮೊಟ್ಟೆಯ ಬಳಕೆ ಹೆಚ್ಚಾಗಿದ್ದು ಅದನ್ನು ಪಡೆಯುವ ಸಲುವಾಗಿಯೇ ಪ್ರಪಂಚದ ನಾನಾ ಭಾಗಗಳಲ್ಲಿ ಕೋಳಿ ಸಾಕಣೆ ಕೇಂದ್ರಗಳು ಅಧಿಕ ಸಂಖ್ಯೆಯಲ್ಲಿ ತೆರೆಯಲ್ಪಟ್ಟಿವೆ. ಇದರಿಂದ ಉತ್ಪತ್ತಿಯಾಗುವ ವರಮಾನವು ಅಧಿಕವಾಗಿದೆ. ಕೋಳಿ ಸಾಕಣೆ, ಅವುಗಳಿಡುವ ಮೊಟ್ಟೆಯ ವರ್ಗೀಕರಣ, ಸಂರಕ್ಷಣೆ ಹಾಗೂ ಸಂಸ್ಕರಣ ಈ ಮೊದಲಾದ ವಿಧಾನಗಳನ್ನು ಜನರಿಗೆ ತಿಳಿಸಿಕೊಡುವುದಕ್ಕಾಗಿಯೇ ಅನೇಕ ತರಬೇತಿ ಕೇಂದ್ರಗಳು ಸ್ಥಾಪಿತವಾಗಿವೆ. ಇದೇ ರೀತಿ ಬಾತು ಮೊಟ್ಟೆಗಳನ್ನೂ ಹಲವರು ಸೇವಿಸುತ್ತಾರೆ.

ಇಂಥ ಮೊಟ್ಟೆಗಳನ್ನು ಸೇವಿಸುವುದರಿಂದ ದೇಹದಪೋಷಣೆಗೆ ಬೇಕಾದ ಪ್ರೋಟೀನು ಮೊದಲಾದ ಪೌಷ್ಠಿಕಾಂಶಗಳು ದೊರಕುತ್ತವೆ ಎಂಬುದು ವೈದ್ಯ ಶಾಸ್ತ್ರಜ್ಞರ ಅಭಿಪ್ರಾಯವಾಗಿದೆ. ಮೊಟ್ಟೆಗಳಿಂದ ಕೆಲವೊಂದು ಔಷಧಗಳನ್ನು ತಯಾರಿಸಿಕೊಳ್ಳಲು ಅವಕಾಶವಿದೆ. ಮೊಟ್ಟೆಯ ಶಲ್ ಅಂದರೆ ಮೊಟ್ಟೆಯ ಹೊರಗಿನ ಪದರದಿಂದಲೂ ಔಷಧ ತಯಾರಿಸುತ್ತಾರೆ. ಇದರಿಂದ ಕುಕ್ಕುಟ ಅಂಡ್ ತ್ವಕ್ ಭಸ್ಮ ಎಂದು ತಯಾರಿಸುತ್ತಾರೆ. ಅಂದರೆ ಇದನ್ನು ತಯಾರಿಸುವ ಪರಿಯಂದರೆ ಮೊಟ್ಟೆಯ ಮೇಲ್ಗಡೆಯ ಪದರವನ್ನು ತೆಗೆದು ಸುಟ್ಟು ಭಸ್ಮವನ್ನು ಮಾಡುತ್ತಾರೆ.

ಇದನ್ನು ಮನೆಯಲ್ಲಿ ತಯಾರಿಸಲು ಸಾಧ್ಯವಿಲ್ಲ. ಇದು ಆಯುರ್ವೇಧಿಕ್ ಅಂಗಡಿಗಳಲ್ಲಿ ದೊರಕುತ್ತದೆ. ಮೊಟ್ಟೆಯ ಮೇಲ್ಗಡೆಯ ಪದರವು ಹೆಚ್ಚು ಕ್ಯಾಲ್ಸಿಯಮ್ ಅಂಶವನ್ನು ಹೊಂದಿರುತ್ತದೆ. ಇದು ಮೂಳೆಗಳಿಗೆ ಹೆಚ್ಚಿನ ಬಲವನ್ನು ನೀಡುತ್ತದೆ. ಪ್ರತಿನಿತ್ಯ ಈ ಭಸ್ಮವನ್ನು ಒಂದು ಚೀಟಿಕೆಯಷ್ಟು ತೆಗೆದುಕೊಂಡು ಅದನ್ನು ಜೇನುತುಪ್ಪದಲ್ಲಿ ಸೇರಿಸಿ ದಿನಕ್ಕೆ 2 ಬಾರಿ ಅಂದರೆ ಬೆಳಿಗ್ಗೆ ಮತ್ತು ರಾತ್ರಿ ಊಟಕ್ಕಿಂತ ಮುಂಚಿತವಾಗಿ ಸೇವಿಸಬೇಕು. ಹೀಗೆ ಪ್ರತಿನಿತ್ಯ ಮಾಡುತ್ತ ಬಂದರೆ ಮೂಳೆಗಳಿಗೆ ಶಕ್ತಿ ವೃದ್ಧಿಸುತ್ತದೆ. ಇದರಿಂದ ಮೂಳೆಗಳಿಗೆ ಸಂಬಂಧ ಪಟ್ಟ ತೊಂದರೆ ಮತ್ತು ಹಲ್ಲುಗಳಿಗೆ ಸಂಬಂಧ ಪಟ್ಟ ಸಮಸ್ಯೆಗಳ ಪರಿಹಾರಕ್ಕೆ ಇದು ಸೂಕ್ತ ಔಷಧವಾಗಿದೆ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: