ಹಲವಾರು ಜನರು ಜಂಗ್ ಪುಡ್ ಗಳನ್ನು ತಿಂದು ಆರೋಗ್ಯವನ್ನು ಕೆಡಿಸಿಕೊಳ್ಳುತ್ತಾರೆ ಕೆಲವೊಂದು ಸೊಪ್ಪು ಮತ್ತು ಕಾಳು ಆರೋಗ್ಯಕ್ಕೆ ಒಳ್ಳೆಯದು .ತುಂಬಾ ಕಹಿಯಾಗಿ ಇರುವಂತಹ ಮೆಂತ್ಯೆ ಕಾಳನ್ನು ತಿನ್ನಲು ಯಾರೂ ಇಷ್ಟಪಡುವುದಿಲ್ಲ ನಾಲಗೆಗೆ ರುಚಿಸದೆ ಇರುವುದು ಆರೋಗ್ಯಕ್ಕೆ ಒಳ್ಳೆಯದು ಎನ್ನುವ ವಿಚಾರ ಹೆಚ್ಚಿನವರಿಗೆ ತಿಳಿದಿಲ್ಲ ಯಾವಾಗಲೂ ನಾವು ರುಚಿಕರವಾದ ಆಹಾರವನ್ನೇ ಸೇವಿಸುತ್ತೇವೆ ಆದರೆ ಇದು ನಮ್ಮ ಹೊಟ್ಟೆಗೂ ಒಳ್ಳೆಯದಲ್ಲ. ಹೊಟ್ಟೆಗೆ ಒಳ್ಳೆಯದಲ್ಲದಿರುವುದು ನಮ್ಮ ಆರೋಗ್ಯಕ್ಕೂ ಕೆಟ್ಟದು ನಾವು ಹಲವಾರು ರೀತಿಯ ಸಾಂಬಾರ ಪದಾರ್ಥಗಳನ್ನು ಬಳಸಿಕೊಳ್ಳುತ್ತೇವೆ. ಇದರಲ್ಲಿ ಮೆಂತ್ಯೆ ಕಾಳು ಕೂಡ ಒಂದಾಗಿದೆ ನಮ್ಮ ಭಾರತೀಯ ಸಂಪ್ರದಾಯದ ಅಡುಗೆಯಲ್ಲಿ ಮೆಂತೆಯನ್ನು ಬಳಸಲಾಗುತ್ತದೆ .ನಾವು ಈ ಲೇಖನದ ಮೂಲಕ ಮೇಂತೆಯ ಉಪಯೋಗವನ್ನು ತಿಳಿದುಕೊಳ್ಳೋಣ.

ಮೆಂತೆ ಒಂದು ಸಾಂಬಾರು ಪದಾರ್ಥ ಅಷ್ಟೇ ಅಲ್ಲ ಬದಲಾಗಿ ಒಂದು ಔಷಧೀಯ ವಸ್ತುವು ಆಗಿದೆ ಪ್ರತಿಯೊಬ್ಬರ ಮನೆಯ ಒಗ್ಗರಣೆ ಕಾಳಿನ ಡಬ್ಬಿಯಲ್ಲಿರುವ ಮೆಂತೆಯಲ್ಲಿ ವಿಶಿಷ್ಟ ವಾದ ವೈವಿಧ್ಯಮಯವಾದ ರುಚಿಯನ್ನು ಹೊಂದಿದೆ ನಮ್ಮ ಭಾರತೀಯ ಸಂಪ್ರದಾಯದ ಅಡುಗೆಯಲ್ಲಿ ಮೆಂತೆಯನ್ನು ಬಳಸಲಾಗುತ್ತದೆ .ಮೆಂತೆ ಸೊಪ್ಪು ಮತ್ತು ಬೀಜ ವಿಶ್ವದಾದ್ಯಂತ ಬಳಕೆಯಲ್ಲಿ ಇದೆ ಮೆಂತೆ ಬೀಜವನ್ನು ಪ್ರತಿಯೊಬ್ಬರು ತಮ್ಮ ತಮ್ಮ ಆರೋಗ್ಯ ಕಾಪಾಡಿಕೊಳ್ಳಲು ಬಳಸುತ್ತಾರೆ ಅಜೀರ್ಣ ಸುಸ್ತು ಹೀಗೆ ನಾನಾ ತರಹದ ತೊಂದರೆಗಳಿಗೆ ಪರಿಹಾರ ನೀಡುತ್ತದೆ ನಾಲ್ಕು ಮೆಂತೆ ಕಾಳನ್ನು ಮೊಸರಿನಲ್ಲಿ ಸೇರಿಸಿ ಬೆಳ್ಳಿಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದರಿಂದ ಅನೇಕ ಸಮಸ್ಯೆಗಳು ಪರಿಹಾರ ಆಗುತ್ತದೆ ಮೆಂತೆ ಕಾಳು ಸೇವನೆ ಮಾಡುವುದರಿಂದ ನಮ್ಮ ಬಹುತೇಕ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದು ಮೆಂತೆ ಸೊಪ್ಪು ಮತ್ತು ಬೀಜ ಔಷಧಕ್ಕೆ ಬಳಕೆ ಆಗುತ್ತದೆ ಆಯುರ್ವೇದ ಪದ್ಧತಿ ಮೆಂತೆಯ ಬಳಕೆ ಹೆಚ್ಚು ಇರುತ್ತದೆ.

ಮೆಂತೆ ಸೊಪ್ಪು ಮತ್ತು ಬೀಜದಲ್ಲಿ ವಿಟಮಿನ್ ಎ ಬಿ ಖನಿಜಾಂಶ ಹಾಗೂ ಕಬ್ಬಿಣಾಂಶ ಹೆಚ್ಚಾಗಿ ಇರುತ್ತದೆ ದೈಹಿಕವಾಗಿ ಇರುವ ತೊಂದರೆಗಳಿಗೆ ಮೆಂತೆ ಸೊಪ್ಪು ಮತ್ತು ಪರಿಹಾರ ನೀಡುತ್ತದೆ ಮಂತೆ ಕಾಳಿನಲ್ಲಿ ಹೊಟ್ಟೆ ಉರಿ ಕಡಿಮೆ ಮಾಡುವ ಲಕ್ಷಣಗಳು ಹೆಚ್ಚಾಗಿ ಇರುತ್ತದೆ ಮೆಂತೆ ಕಾಳುನ್ನು ನಮ್ಮ ನಿತ್ಯ ಜೀವನದಲ್ಲಿ ಬಳಸುದರಿಂದ ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು .ಬಿಪಿ ಶುಗರ್ ಇಂತಹ ಸಮಸ್ಯೆಗೆ ಮೆಂತೆ ಕಾಳು ಸೇವನೆ ಮಾಡುವುದರಿಂದ ಬಹಳ ಸುಲಭವಾಗಿ ನಿವಾರಿಸಿಕೊಳ್ಳಬಹುದು ಮೆಂತೆ ಕಾಳನ್ನು ರಾತ್ರಿ ನೆನೆ ಇಟ್ಟು ಬೆಳಿಗ್ಗೆ ಮೆಂತೆ ಕಾಳಿನ ನೀರನ್ನು ಕುಡಿಯುುದರಿಂದ ಕೆಟ್ಟ ಕೊಲಸ್ಟ್ರಾಲ್ ಅನ್ನು ಕಡಿಮೆ ಮಾಡಿಕೊಳ್ಳಬಹುದು ಹಾಗೆಯೇ ಅಧಿಕ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು ಕೆಲವರಿಗೆ ಹಸಿವು ಕಡಿಮೆ ಆಗುವ ತೊಂದರೆ ಇರುತ್ತದೆ ಇದನ್ನು ಸಹ ಕಡಿಮೆ ಮಾಡಿಕೊಳ್ಳಬಹುದು ಜೀರ್ಣ ಶಕ್ತಿ ಸಕ್ರಿಯವಾಗಿ ಮಾಡುತ್ತದೆ .

ಕೀಲು ನೋವಿನ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ ನೆನೆ ಇಟ್ಟ ಮೆಂತೆಯನ್ನು ಸೇವನೆ ಮಾಡುವುದರಿಂದ ಶರೀರದ ತೂಕವನ್ನು ಕಡಿಮೆ ಮಾಡಿಕೊಳ್ಳುವ ಕೋಲನ್ ಅನ್ನು ಶುಭ್ರ ಮಾಡಿ ಕ್ಯಾನ್ಸರ್ ಬರುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ ಮೆಂತೆಯಲ್ಲಿರುವ ಪೈಬರ್ ಅಂಶ ಶರೀರಕ್ಕೆ ಸಾಕಷ್ಟು ಉಪಯುಕ್ತವಾಗಿದೆ ಮೆಂತೆ ಕಾಳನ್ನು ಪ್ರತಿ ನಿತ್ಯ ಸೇವಿಸಿದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಕನಿಷ್ಟ ಪಕ್ಷ ವಾರಕ್ಕೆ ಎರಡು ಬಾರಿಯಾದರೂ ಸೇವಿಸಬೇಕು .

ಮೇಂತೆಯಲ್ಲಿರುವ ಗ್ಲುಟಮಿನ್ ಎನ್ನುವ ಪೈಬರ್ ಕಂಟೆಂಟಗಳು ಮಧುಮೇಹಿ ಗಳಿಗೆ ರಕ್ತದಲ್ಲಿರುವ ಶುಗರ್ ಅನ್ನು ಕಡಿಮೆ ಮಾಡುತ್ತದೆ ಪ್ರತಿ ದಿನ ಖಾಲಿ ಹೊಟ್ಟೆಯಲ್ಲಿ ಮೆಂತೆ ಕಾಳಿನ ನೀರನ್ನು ಸೇವಿಸಿದರೆ ಕಿಡ್ನಿಯ ಸ್ಟೋನಗಳನ್ನು ನಿವಾರಿಸಿಕೊಳ್ಳಬಹುದು ಸೌಂದರ್ಯ ವರ್ಧಕವಾಗಿದೆ ಮೆಂತೆ ಕಾಳನ್ನು ಹಾಗೆ ತಿಂದರೆ ಕಹಿ ಕಹಿ ಆಗಿರುತ್ತದೆ ಆದರೂ ಸಹ ಆರೋಗ್ಯಕ್ಕೆ ಬಹಳ ಉಪಯುಕ್ತವಾಗಿದೆ ಕೂದಲು ಉದುರುವುದನ್ನು ನಿಲ್ಲಿಸುತ್ತದೆ ಹಾಗೆ ಮೊಡವೆ ಆಗುವುದನ್ನು ನಿಲ್ಲಿಸುತ್ತದೆ ಮೊಳಕೆ ಕಟ್ಟಿದ ಮೆಂತ್ಯ ಒಣಗಿಸಿ ಕೊಬ್ಬರಿ ಎಣ್ಣೆಯಲ್ಲಿ ಹಾಕಿ ಕಾಯಿಸಿದರೆ ನಿಯಮಿತವಾಗಿ ಎಣ್ಣೆ ಹಚ್ಚಿದರೆ ಕೂದಲು ಕ್ರಮವಾಗಿ ಕಪ್ಪಾಗಿ ಸೊಂಪಾಗಿ ಬೆಳೆಯುತ್ತದೆ ಹೀಗೆ ಮೆಂತೆ ಕಾಳುಗಳಿಂದ ಸಾಕಷ್ಟು ಪ್ರಯೋಜನಗಳು ಇದೆ.

By admin

Leave a Reply

Your email address will not be published. Required fields are marked *

error: Content is protected !!
Footer code: