ಮಹಿಳೆಯರ ಗರ್ಭಕೋಶದಲ್ಲಿಯ ತೊಂದರೆಗಳಿಗೆ ಮಗುವಾಗುವುದಿಲ್ಲ ಎಂದು ಹೇಳುತ್ತಾರೆ. ಮಕ್ಕಳಾಗದ ಸಮಸ್ಯೆಗೆ ಪುರುಷರು ಕಾರಣರಾಗಿರಬಹುದು ಎನ್ನುವುದನ್ನು ನಾವು ಯೋಚಿಸಿರುವುದೇ ಇಲ್ಲ. ಇತ್ತೀಚಿನ ದಿನಗಳಲ್ಲಿ ಪುರುಷರಲ್ಲಿಯೇ ಹೆಚ್ಚು ಫಲಹೀನತೆ ಇರುವುದು ಬೆಳಕಿಗೆ ಬಂದಿದೆ. ಹಾಗಾಗಿ ಮಹಿಳೆ ಗರ್ಭಿಣಿಯಾಗದಿರಲು ಕೇವಲ ಅವಳ ಆಂತರಿಕ ಸಮಸ್ಯೆ ಒಂದೇ ಕಾರಣವಾಗಿರುವುದಿಲ್ಲ. ಬದಲಿಗೆ ಪುರುಷನ ದೌರ್ಬಲ್ಯವೂ ಕಾರಣವಾಗುತ್ತದೆ.ಮತ್ತು ಅವರ ದೇಹದಲ್ಲಿ ವೀರ್ಯಾಣು ಉತ್ಪತ್ತಿ ಕಡಿಮೆಯಾಗುವುದು ಸಹ ಒಂದು ಕಾರಣವಾಗಿದೆ. ಹಾಗಿದ್ದಲ್ಲಿ ವೀರ್ಯಾಣು ವೃದ್ಧಿಗೆ ಮಾಡಬೇಕಾದ ವಿಷಯವನ್ನು ನಾವು ಇಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ.

ಮಾನಸಿಕವಾಗಿ ಹಾಗೂ ದೈಹಿಕವಾಗಿ ನಾವು ಆರೋಗ್ಯ ಪೂರ್ಣರಾಗಿರಲು ನಾವು ಸೇವಿಸುವ ಆಹಾರವು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಆಹಾರದಿಂದಲೂ ಪುರುಷರು ತಮ್ಮ ಫಲವತ್ತತೆಯನ್ನು ಹೆಚ್ಚಿಸಿಕೊಳ್ಳಬಹುದು. ಈ ಕುರಿತು ಅನೇಕ ಅಧ್ಯಯನಗಳು ಸಾಬೀತು ಪಡಿಸಿದೆ. ಜೊತೆಗೆ ಆರೋಗ್ಯ ಕರ ಆಹಾರವು ವೀರ್ಯವನ್ನು ಹೆಚ್ಚಿಸುತ್ತದೆ ಎನ್ನುವುದನ್ನು ತೆರೆದಿಟ್ಟಿದೆ. ಪುರುಷರು ತಮ್ಮ ಫಲವತ್ತತೆಯನ್ನು ಹೆಚ್ಚಿಸಿಕೊಳ್ಳಲು ಕೇವಲ ಆರೋಗ್ಯ ಪೂರ್ಣ ಆಹಾರ ಸೇವಿಸಿದರೆ ಸಾಲದು. ಬದಲಿಗೆ ಧೂಮಪಾನ, ಮದ್ಯಪಾನ ಮತ್ತು ಮಾದಕ ವಸ್ತುಗಳ ಸೇವನೆಯಿಂದ ದೂರ ಸರಿಯಬೇಕು.

ಮನುಷ್ಯನ ಮಾನಸಿಕ ತೊಂದರೆಯು ಕೂಡ ಅಥವಾ ಹೆಚ್ಚಿನ ಮಾನಸಿಕ ಒತ್ತಡವು ಕೂಡ ವೀರ್ಯಣು ಸಂಖ್ಯೆಯನ್ನು ಕುಗ್ಗಿಸುತ್ತದೆ. ಇದರ ಜೊತೆಗೆ ನಮ್ಮ ದಿನನಿತ್ಯದ ಉಡುಗೆ ತೊಡುಗೆಗಳು ಕೂಡ ಇದರ ಮೇಲೆ ತುಂಬಾ ಪರಿಣಾಮವನ್ನು ಬೀರುತ್ತದೆ. ತುಂಬಾ ಬಿಗಿಯಾದ ಅಂದರೆ ಜೀನ್ಸ್ ಪ್ಯಾಂಟ್ ಗಳನ್ನು ಹಾಕುವುದರಿಂದ ವೀರ್ಯಾಣುವಿನ ಗುಣಮಟ್ಟ ಹಾಗೂ ವೀರ್ಯಾಣುವಿನ ಪ್ರಮಾಣ ಕಡಿಮೆಯಾಗುತ್ತದೆ. ಹವಾಮಾನದ ಉಷ್ಣತೆಗೆ ಸರಿಯಾಗಿ ಮತ್ತು ಗಾಳಿ ಆಡುವ ರೀತಿಯಲ್ಲಿ ಉಡುಗೆ ಇದ್ದಾಗ ಮಾತ್ರ ವೃಷಣಗಳು ಸ್ವಾಸ್ಥ್ಯವಾಗಿರಲು ಸಾಧ್ಯವಾಗುತ್ತದೆ. ವೃಷಣವನ್ನು ಬಿಗಿಯಾದ ಉಸಿರುಗಟ್ಟಿಸುವ ರೀತಿಯಲ್ಲಿ ವಸ್ತ್ರವನ್ನು ತೊಟ್ಟಾಗ ಅದರ ಸ್ವಾಸ್ಥ್ಯ ಹಾಳಾಗುತ್ತದೆ.

ಹಳೆಯ ಕಾಲದ ಪದ್ಧತಿಯಂತೆ ಲುಂಗಿ, ಪೈಜಾಮವನ್ನು ಹಾಕುವುದು ತುಂಬಾ ಉತ್ತಮವಾದ ಒಳ್ಳೆಯ ಆರೋಗ್ಯಕರ ಉಡುಗೆಯಾಗಿದೆ. ಈ ಉಡುಗೆಯಿಂದ ವೃಷಣವು ಅರೋಗ್ಯವಾಗಿ ಇರುವುದರ ಜೊತೆಗೆ ವೀರ್ಯಾಣುಗಳು ಕೂಡ ಸ್ವಾಸ್ಥ್ಯ ವಾಗಿರುತ್ತವೆ. ಇನ್ನು ಕೇಸರಿ, ಬಾದಾಮಿ, ಗಸಗಸೆ ಮೂರನ್ನು ಹಾಲಿನ ಜೊತೆಗೆ ಹಾಕಿ ಕುದಿಸಿ ರಾತ್ರಿ ಊಟವಾದ ಒಂದು ತಾಸಿನ ನಂತರ ಸೇವಿಸಬೇಕು. ಇದನ್ನು ಮಾಡುತ್ತಾ ಬಂದರೆ ವೀರ್ಯದ ಗುಣಮಟ್ಟವೂ ಮತ್ತು ಸ್ವಾಸ್ಥ್ಯ ಹೆಚ್ಚುತ್ತದೆ. ಅಶ್ವಗಂಧದ ಬೇರುಗಳನ್ನು ಹಾಲಿನಲ್ಲಿ ಶುದ್ಧ ಮಾಡಿ ಒಣಗಿಸಿ ಚೂರ್ಣ ಮಾಡಿ, ಶೋಧಿಸಿಟ್ಟುಕೊಳ್ಳುವುದು, ಹೊತ್ತಿಗೆ ಎರಡೂವರೆ ಗ್ರಾಂನಷ್ಟು ಚೂರ್ಣವನ್ನು ತಿಂದ ಮೇಲೆ ಸಕ್ಕರೆ ಸೇರಿಸಿದ ಹಾಲನ್ನು ಕುಡಿಯುವುದು ಸಹ ಈ ಸಮಸ್ಯೆಗೆ ಉತ್ತಮ ಪರಿಹಾರವಾಗಿದೆ.

By admin

Leave a Reply

Your email address will not be published. Required fields are marked *

error: Content is protected !!
Footer code: