WhatsApp Group Join Now
Telegram Group Join Now

ಕರ್ನಾಟಕ ರಾಜ್ಯದ ಇತಿಹಾಸದಲ್ಲಿ ಬಿ.ಎಸ್ ಯಡಿಯೂರಪ್ಪನವರು ಮೊದಲ ಬಾರಿಗೆ ನಾಲ್ಕು ಬಾರಿ ಮುಖ್ಯಮಂತ್ರಿಯಾಗಿದ್ದಾರೆ. ಅಷ್ಟೆ ಅಲ್ಲದೆ ಮೂರು ಬಾರಿ ಕರ್ನಾಟಕ ರಾಜ್ಯ ವಿಧಾನಸಭೆಯಲ್ಲಿ ಪ್ರತಿಪಕ್ಷದ ನಾಯಕರಾಗಿ ಆಯ್ಕೆಯಾಗಿದ್ದಾರೆ. ನಮ್ಮೆಲ್ಲರ ಅಚ್ಚುಮೆಚ್ಚಿನ ನಮ್ಮ ರಾಜ್ಯದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರ ಬಗ್ಗೆ ಒಂದಷ್ಟು ಮಾಹಿತಿಯನ್ನು ತಿಳಿದಿರಬೇಕು. ಬಿ.ಎಸ್ ಯಡಿಯೂರಪ್ಪ ಅವರ ಜೀವನ ಹಾಗೂ ಕುಟುಂಬದವರ ಬಗ್ಗೆ ಕೆಲವು ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ನಮ್ಮ ರಾಜ್ಯದ ಮುಖ್ಯಮಂತ್ರಿಯಾದ ಬಿ.ಎಸ್ ಯಡಿಯೂರಪ್ಪ ಅವರು ಫೆಬ್ರುವರಿ 27, 1943 ರಲ್ಲಿ ಮಂಡ್ಯ ಜಿಲ್ಲೆಯ ಕೆಆರ್ ಪೇಟೆ ತಾಲೂಕಿನ ಬೂಕನಕೆರೆ ಎಂಬ ಗ್ರಾಮದಲ್ಲಿ ಜನಿಸಿದರು. ಯಡಿಯೂರಪ್ಪನವರ ತಂದೆಯ ಹೆಸರು ಸಿದ್ದಲಿಂಗಪ್ಪ ಹಾಗೂ ತಾಯಿಯ ಹೆಸರು ಪುಟ್ಟತಾಯಮ್ಮ. ಇವರು ಬಿಎ ಓದಿದ್ದಾರೆ ಇವರು ತಮ್ಮ ಕಾಲೇಜು ದಿನಗಳಿಂದಲೆ ಆರೆಸ್ಸೆಸ್ ಸಂಘವನ್ನು ಸೇರಿಕೊಂಡರು. 1965ರಲ್ಲಿ ಫಸ್ಟ್ ಡಿವಿಜನಲ್ ಕ್ಲರ್ಕ್ ಆಗಿ ಕೆಲಸ ಸಿಕ್ಕಿತ್ತು ಆದರೆ ಆ ಕೆಲಸವನ್ನು ಬಿಟ್ಟು ಯಡಿಯೂರಪ್ಪನವರು ಶಿಕಾರಿಪುರದ ವೀರಭದ್ರ ಅವರ ಶಂಕರ್ ರೈಸ್ ಮಿಲ್ ನಲ್ಲಿ ಕ್ಲರ್ಕ್ ಆಗಿ ಕೆಲಸಕ್ಕೆ ಸೇರಿಕೊಂಡರು. 1967 ರಲ್ಲಿ ರೈಸ್ ಮಿಲ್ ಓನರ್ ಮಗಳು ಮಿತ್ರಾದೇವಿ ಅವರನ್ನು ಮದುವೆಯಾಗಿ ಶಿವಮೊಗ್ಗದಲ್ಲಿ ಹಾರ್ಡ್ ವೇರ್ ಶಾಪ್ ಆರಂಭಿಸಿದರು.

ಯಡಿಯೂರಪ್ಪ ಅವರು 2008ರ ಮೊದಲು ಶಿಕಾರಿಪುರ ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿ ಶಾಸಕರಾದಾಗ ಕರ್ನಾಟಕದ ರಾಜಕೀಯದಲ್ಲಿ ಬಿಜೆಪಿ ಪಕ್ಷಕ್ಕೆ ನೆಲೆಯೆ ಇರಲಿಲ್ಲ. ನಂತರ 2008ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ನೇತೃತ್ವ ವಹಿಸಿದ್ದ ಯಡಿಯೂರಪ್ಪನವರು ಕರ್ನಾಟಕದಲ್ಲಿ ಬಿಜೆಪಿ ಪಕ್ಷಕ್ಕೆ ದೊಡ್ಡ ಮಟ್ಟದ ವಿಜಯ ತಂದುಕೊಟ್ಟು, 2008ರ ಮೇ 30 ರಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು, ಅಲ್ಲಿಂದ ಇಲ್ಲಿಯವರೆಗೂ ಅವರು 4 ಬಾರಿ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಕರ್ನಾಟಕ ರಾಜಕೀಯ ರಂಗದಲ್ಲಿ ಬಿಜೆಪಿ ಪಕ್ಷ ಈ ಮಟ್ಟಕ್ಕೆ ಬರಲು ಬಿಎಸ್ ಯಡಿಯೂರಪ್ಪನವರ ಪಾತ್ರ ಅತಿ ಮಹತ್ವದ್ದಾಗಿದೆ ಅದನ್ನು ಯಾರೂ ಮರೆಯುವಂತಿಲ್ಲ.

ಯಡಿಯೂರಪ್ಪ ಹಾಗೂ ಮಿತ್ರಾದೇವಿ ದಂಪತಿಗೆ ಐವರು ಮಕ್ಕಳು, ಇಬ್ಬರು ಗಂಡುಮಕ್ಕಳು ಮೂವರು ಹೆಣ್ಣುಮಕ್ಕಳು. ಯಡಿಯೂರಪ್ಪ ಅವರ ಮಕ್ಕಳಾದ ವಿಜಯೇಂದ್ರ ಹಾಗೂ ರಾಘವೇಂದ್ರ ಅವರು ಕೂಡ ರಾಜಕೀಯದಲ್ಲಿ ಬೆಳೆಯುತ್ತಿದ್ದಾರೆ. ಯಡಿಯೂರಪ್ಪನವರ ಮಗ ಬಿ.ಎಸ್ ರಾಘವೇಂದ್ರ ಅವರ ಮಗ ಶುಭಾಷ್ ಮಾಸ್ಟರ್ಸ್ ಓದುತ್ತಿದ್ದಾರೆ ಎರಡು ವರ್ಷದ ನಂತರ ರಾಜಕೀಯಕ್ಕೆ ಬಂದಿದ್ದಾರೆ. ರಾಘವೇಂದ್ರ ಅವರ ಮಗಳ ಹೆಸರು ಮೈತ್ರಿ ಅವರು ವಿಧ್ಯಾಭ್ಯಾಸ ಮಾಡುತ್ತಿದ್ದಾರೆ. ಯಡಿಯೂರಪ್ಪ ಅವರ ನಂತರ ಅವರ ಮಗ ವಿಜಯೇಂದ್ರ ಅವರು ರಾಜ್ಯದ ಮುಖ್ಯಮಂತ್ರಿಯಾಗುತ್ತಾರೆ ಎಂಬ ಸುದ್ದಿ ಕೇಳಿಬರುತ್ತಿತ್ತು. ಯಡಿಯೂರಪ್ಪ ಅವರ ಹೆಣ್ಣು ಮಕ್ಕಳಾದ ಅರುಣಾ ದೇವಿ, ಉಮಾದೇವಿ ಮತ್ತು ಪದ್ಮಾವತಿ ಅವರು ರಾಜಕೀಯದಿಂದ ದೂರ ಉಳಿದಿದ್ದಾರೆ. ಯಡಿಯೂರಪ್ಪ ಅವರು ಬಿಡುವಿನ ಸಮಯವನ್ನು ತಮ್ಮ ಮೊಮ್ಮಕ್ಕಳೊಂದಿಗೆ ಕಳೆಯುತ್ತಾರೆ. ಒಟ್ಟಿನಲ್ಲಿ ಯಡಿಯೂರಪ್ಪ ಅವರದ್ದು ಸುಖಿ ಕುಟುಂಬ, ಯಡಿಯೂರಪ್ಪನವರಿಗೆ ಹೆಚ್ಚಿನ ಯಶಸ್ಸು ಸಿಗಲಿ ಎಂದು ಆಶಿಸೋಣ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: