ಮಂಜು ಪಾವಗಡ ಹಾಗೂ ದಿವ್ಯ ಸುರೇಶ್ ಪ್ರೀತಿ ನಿಜಾನಾ?

0

ಕನ್ನಡ ಕಿರುತೆರೆಯ ಇಂಟರೆಸ್ಟಿಂಗ್ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 8. ಅನಿವಾರ್ಯ ಕಾರಣಗಳಿಂದ ಬಿಗ್ ಬಾಸ್ ಸೀಸನ್ 8 ಅರ್ಧದಲ್ಲಿ ಮುಕ್ತಾಯವಾಯಿತು. ಈ ಸೀಸನ್ ಗೆ ಹಲವಾರು ಸ್ಪರ್ಧಿಗಳು ಭಾಗವಹಿಸಿದ್ದು ಟಾಸ್ಕ್ ಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಅವರಲ್ಲಿ ಮಂಜು ಹಾಗೂ ದಿವ್ಯ ಸುರೇಶ್ ಅವರು ಬಿಗ್ ಬಾಸ್ ಮನೆಯಲ್ಲಿ ಕ್ಲೋಸ್ ಆಗಿ ಇರುವುದರಿಂದ ಅವರು ಲವರ್ಸ್ ಆಗಿರಬಹುದು ಎಂದು ಜನರು ಅಂದುಕೊಂಡಿದ್ದರು. ಜನರ ಗೊಂದಲಕ್ಕೆ ಮಂಜು ಅವರು ಸ್ಪಷ್ಟನೆ ನೀಡಿದ್ದಾರೆ. ದಿವ್ಯ ಸುರೇಶ್ ಅವರ ಬಗ್ಗೆ ಮಂಜು ಅವರು ಏನು ಹೇಳಿದ್ದಾರೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುವ ಕುತೂಹಲಕಾರಿ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 8 ಗೆ ಹಲವು ಕ್ಷೇತ್ರದಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿರುವ ಸ್ಪರ್ಧಿಗಳು ಭಾಗವಹಿಸಿದ್ದರು. ಪ್ರತಿಯೊಬ್ಬ ಸ್ಪರ್ಧಿ ತನ್ನದೇ ಆದ ಟ್ಯಾಲೆಂಟ್ ಹೊಂದಿದ್ದು ಟಾಸ್ಕ್ ಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಬಿಗ್ ಬಾಸ್ ಸೀಸನ್ ಗೆ ಸ್ಪರ್ಧಿಸಿದ ಮಂಜು ಅವರು ಮಜಾಭಾರತದಿಂದ ಕಾಮಿಡಿಯನ್ ಆಗಿ ಕನ್ನಡಿಗರ ಮನೆ ಮಾತಾಗಿದ್ದಾರೆ. ಅವರು ತುಮಕೂರಿನ ಪಾವಗಡದವರು ಬೆಂಗಳೂರಿಗೆ ಬಂದು ಸಿನಿಮಾ ನೋಡಿ ನಾನು ನಟಿಸಬೇಕು ಎಂದು ನಾಟಕಗಳಲ್ಲಿ ಅಭಿನಯಿಸಿ ಜೀವನದಲ್ಲಿ ಹಲವು ಏಳು ಬೀಳುಗಳನ್ನು ಅನುಭವಿಸಿ ಬಿಗ್ ಬಾಸ್ ಸೀಸನ್ 8 ರ ಸ್ಪರ್ಧಿಯಾಗಿ ಬಿಗ್ ಬಾಸ್ ಶೋ ಮುಗಿಯುವ ಕೊನೆಯ ವಾರದವರೆಗೂ ಬಿಗ್ ಬಾಸ್ ಮನೆಯಲ್ಲಿದ್ದರು.

ಬಿಗ್ ಬಾಸ್ ಸೀಸನ್ 8 ರ ಇನ್ನೊಬ್ಬ ಸ್ಪರ್ಧಿ ದಿವ್ಯ ಸುರೇಶ್ ಅವರು ಬಿಗ್ ಬಾಸ್ ಗೆ ಬಂದ ನಂತರ ಹಲವು ಸುದ್ದಿಯಲ್ಲಿದ್ದರು. ಅವರು ಸ್ಟೇಟ್ ಲೆವೆಲ್ ಕಬಡ್ಡಿ ಪ್ಲೇಯರ್. ಇವರು ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ ತೆಲುಗಿನ ಡಿಗ್ರಿ ಕಾಲೇಜ್ ಎಂಬ ಸಿನಿಮಾದಲ್ಲಿ ನಟಿಸಿದ್ದಾರೆ. ನನ್ನ ಹೆಂಡತಿ ಎಂಬಿಬಿಎಸ್ ಎಂಬ ಸೀರಿಯಲ್ ನಲ್ಲಿ ನಟಿಸಿದ್ದಾರೆ. ದಿವ್ಯ ಸುರೇಶ್ ಅವರ ತಂದೆ ಇವರೊಂದಿಗೆ ಜೀವನ ಮಾಡುತ್ತಿಲ್ಲ ಹೀಗಾಗಿ ಇವರಿಗೆ ತಮ್ಮ ತಂದೆಯ ಮೇಲೆ ಸಿಟ್ಟಿದೆ. ದಿವ್ಯ ಅವರು ನನಗೆ ನನ್ನ ತಂದೆ ತಾಯಿ ಇಬ್ಬರೂ ನನ್ನ ತಾಯಿ ಎಂದು ಹೇಳಿಕೊಂಡಿದ್ದಾರೆ. ದಿವ್ಯ ಅವರಿಗೆ ನಿರೀಕ್ಷಿತ ಮಟ್ಟದಲ್ಲಿ ಹೆಸರು ಸಿಗದ ಕಾರಣ ಅವರು ಬಿಗ್ ಬಾಸ್ ಸೀಸನ್ 8 ಗೆ ಸ್ಪರ್ಧಿಯಾಗಿ ಭಾಗವಹಿಸಿದರು. ಅವರು ಕೂಡ ಬಿಗ್ ಬಾಸ್ ಸೀಸನ್ 8 ಮುಗಿಯುವ ಕೊನೆಯ ವಾರದವರೆಗೂ ಇದ್ದರು.

ಬಿಗ್ ಬಾಸ್ ಮನೆಯಲ್ಲಿ ಹಲವು ದಿನಗಳ ಕಾಲ ಮನೆಯವರು, ಸ್ನೇಹಿತರು ಹೊರಗಿನ ಸಂಪರ್ಕ ಇಲ್ಲದಂತಾಗುತ್ತದೆ. ಬಿಗ್ ಬಾಸ್ ಮನೆಯಲ್ಲಿ ಬೇರೆ ಬೇರೆ ಕ್ಷೇತ್ರದಿಂದ, ಬೇರೆ ಬೇರೆ ಸ್ವಭಾವದವರು ಬಂದಿರುತ್ತಾರೆ. ಯಾರಿಗೆ ಯಾರೊಂದಿಗೆ ಮಾತನಾಡಿದರೆ ಖುಷಿಯಾಗುತ್ತದೆಯೋ ಅವರೊಂದಿಗೆ ಇರುತ್ತಾರೆ. ಹೀಗೆ ಈ ಸೀಸನ್ ನಲ್ಲಿ ಮಂಜು ಅವರು ದಿವ್ಯ ಸುರೇಶ್ ಅವರೊಂದಿಗೆ ಕ್ಲೋಸ್ ಆಗಿ ಇರುತ್ತಿದ್ದರು, ತಮಾಷೆ ಮಾಡಿಕೊಳ್ಳುತ್ತಿದ್ದರು. ಬಹಳಷ್ಟು ಜನರು ಅವರಿಬ್ಬರೂ ಲವರ್ಸ್ ಎಂದು ಅಂದುಕೊಂಡಿದ್ದರು. ಅದಕ್ಕಾಗಿ ಮಂಜು ಅವರು ಲೈವ್ ವಿಡಿಯೋದಲ್ಲಿ ದಿವ್ಯ ಮತ್ತು ನಾನು ಒಳ್ಳೆಯ ಫ್ರೆಂಡ್ಸ್ ನಾವು ಲವರ್ಸ್ ಅಲ್ಲ ಎಂದು ಮಂಜು ಅವರು ಹೇಳಿದ್ದಾರೆ. ನಾನು ಮದುವೆಯಾಗಲು ಹುಡುಗಿ ಹುಡುಕುತ್ತಿದ್ದೇನೆ ಎಂದು ಕೂಡ ಅವರು ಹೇಳಿದ್ದಾರೆ. ಒಟ್ಟಿನಲ್ಲಿ ಬಿಗ್ ಬಾಸ್ ಮನೆಯಿಂದ ಸುದ್ದಿಯಲ್ಲಿರುವ ದಿವ್ಯ ಸುರೇಶ್ ಹಾಗೂ ಮಂಜು ಅವರ ಬಗ್ಗೆ ಜನರಿಗೆ ಸ್ಪಷ್ಟತೆ ಸಿಕ್ಕಿತು.

Leave A Reply

Your email address will not be published.

error: Content is protected !!