ಬಿಳಿ ರಕ್ತ ಕಣಗಳು ಹೆಚ್ಚಿಸುವ ಮನೆಮದ್ದು ಇಲ್ಲಿದೆ ನೋಡಿ

0

ನಿಮ್ಮ ದೇಹದ ಸಮಗ್ರ ಆರೋಗ್ಯಕ್ಕೆ ಪ್ರತಿಯೊಂದು ವಿಚಾರವೂ ತುಂಬಾ ಅಗತ್ಯ. ಯಾವುದನ್ನು ಸಹ ಕಡೆಗಣಿಸುವ ಹಾಗಿಲ್ಲ. ಮುಖ್ಯವಾಗಿ ಇಡೀ ದೇಹದ ತುಂಬಾ ನಡೆಯುವ ಸಮಗ್ರ ರಕ್ತ ಸಂಚಾರದಿಂದ ಅಚ್ಚುಕಟ್ಟಾಗಿ ಕೆಲಸ ಮಾಡುವ ನಮ್ಮ ದೇಹದ ಅಂಗಾಂಗಗಳು ನಾವು ಪ್ರತಿ ದಿನ ಚೈತನ್ಯದಿಂದ ಇರಲು ಅನುಕೂಲ ಮಾಡಿಕೊಡುತ್ತವೆ. ಕೆಂಪು ರಕ್ತ ಕಣಗಳು ಮನುಷ್ಯನ ಜೀವನಾಡಿ ಆಗಿ ಕೆಲಸ ಮಾಡಿದರೆ, ಬಿಳಿ ರಕ್ತ ಕಣಗಳು ಗಾಯಗಳನ್ನು ವಾಸಿ ಮಾಡುವಲ್ಲಿ ಮತ್ತು ಪರೋಕ್ಷವಾಗಿ ರೋಗನಿರೋಧಕ ಶಕ್ತಿಯ ರೀತಿ ಕೆಲಸ ಮಾಡಬಲ್ಲವು.

ಯಾವಾಗಲಾದರೂ ಡೆಂಗ್ಯೂ ಜ್ವರ ಬಂದಂತಹ ಸಂದರ್ಭದಲ್ಲಿ ಮುಖ್ಯವಾಗಿ ಆರೋಗ್ಯದ ರಕ್ಷಣೆಯಲ್ಲಿ ಪ್ರಮುಖ ಪಾತ್ರ ಬೀರುವಲ್ಲಿ ಬಿಳಿ ರಕ್ತಕಣಗಳು ಸಹಾಯಕ್ಕೆ ಬರುತ್ತದೆ. ಒಂದು ವೇಳೆ ಇವುಗಳ ಸಂತತಿ ಕಡಿಮೆಯಾದರೆ ಡೆಂಗ್ಯೂ ಜ್ವರದ ಸೋಂಕು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ದೇಹದಲ್ಲಿ ಸೋಂಕುಗಳ ವಿರುದ್ಧ ಹೋರಾಡುವ ಗುಣವನ್ನು ಬಿಳಿರಕ್ತಕಣಗಳು ಪಡೆದಿರುತ್ತವೆ. ಬ್ಯಾಕ್ಟೀರಿಯ ಹಾಗೂ ವೈರಸ್ ಗಳನ್ನು ಹಿಮ್ಮೆಟ್ಟಿಸಿ ವ್ಯಕ್ತಿಯನ್ನು ಮತ್ತೆ ಮೊದಲಿನಂತೆ ಹುಷಾರು ಮಾಡುವಲ್ಲಿ ಬಿಳಿ ರಕ್ತಕಣಗಳು ಪ್ರಮುಖವಾಗಿ ಕೆಲಸ ಮಾಡುತ್ತವೆ. ಆದರೆ ಯಾವುದೇ ಕಾರಣಕ್ಕೂ ಬಿಳಿ ರಕ್ತ ಕಣಗಳ ಸಂತತಿಯನ್ನು ಕಡಿಮೆ ಆಗದಂತೆ ನೋಡಿಕೊಳ್ಳಬೇಕು.

ನಿಮ್ಮ ದೇಹದ ಆರೋಗ್ಯದ ರಕ್ಷಣೆಯನ್ನು ಗಮನದಲ್ಲಿಟ್ಟುಕೊಂಡು ಬಿಳಿ ರಕ್ತ ಕಣಗಳ ಸಂಖ್ಯೆಯನ್ನು ಹೆಚ್ಚು ಮಾಡುವಲ್ಲಿ ಈ ಕೆಳಗಿನ ಆಹಾರ ಪದಾರ್ಥಗಳು ತುಂಬಾ ಸೂಕ್ತವೆನಿಸುತ್ತವೆ. ಪಪ್ಪಾಯಿ ಮರದ ಎಲೆಗಳ ಹೀಗೊಂದು ತಯಾರಿ ಮಾಡಿ. ಪಪ್ಪಾಯಿ ಎಲೆಯ ಜ್ಯೂಸ್ ತಯಾರಿಸಲು ಬೇಕಾಗಿರುವ ಸಾಮಗ್ರಿಗಳು ಕೆಲವು ಹಸಿ ಪಪ್ಪಾಯಿ ಎಲೆಗಳು

ಬೇಕಾದ ಪ್ರಮಾಣದಲ್ಲಿ ನೀರು
ತಯಾರು ಮಾಡುವ ವಿಧಾನ :ಮೊದಲಿಗೆ ಪಪ್ಪಾಯಿ ಎಲೆಗಳನ್ನು ನೀರಿನಲ್ಲಿ ಚೆನ್ನಾಗಿ ತೊಳೆಯಬೇಕು. ನಂತರ ಎಲೆಗಳನ್ನು ಚೆನ್ನಾಗಿ ರುಬ್ಬಿಕೊಳ್ಳಬೇಕು ಅತಿಯಾದ ಪೇಸ್ಟ್ ತಯಾರಾದ ಹಾಗೆ ಅದಕ್ಕೆ ನೀರನ್ನು ಬೆರೆಸಿ ಮತ್ತೊಮ್ಮೆ ರುಬ್ಬಿಕೊಳ್ಳುವ ಪ್ರಯತ್ನಮಾಡಿ

ಇದನ್ನು ನಂತರ ಸೋಸಿಕೊಂಡು ಇದರ ಜೊತೆಗೆ 1 ಟೇಬಲ್ ಚಮಚ ನಿಂಬೆ ಹಣ್ಣಿನ ರಸ ಮಿಶ್ರಣ ಮಾಡಿ. ಒಂದು ವೇಳೆ ಪರಂಗಿ ಎಲೆಗಳ ರಸ ತುಂಬಾ ಕಹಿ ಇದ್ದರೆ, ಇದರ ಜೊತೆಗೆ ಜೇನು ತುಪ್ಪವನ್ನು ಸಹ ಸೇರಿಸಿ ಸೇವನೆ ಮಾಡಬಹುದು. ಪಪ್ಪಾಯಿ ಎಲೆಗಳಲ್ಲಿ ವಿಟಮಿನ್-ಸಿ ಅಂಶದ ಪ್ರಮಾಣ ತುಂಬಾ ಹೆಚ್ಚಾಗಿ ಕಂಡುಬರುತ್ತದೆ. ಇದು ದೇಹದ ರೋಗನಿರೋಧಕ ವ್ಯವಸ್ಥೆಯನ್ನು ಬಲ ಪಡಿಸುವುದರಲ್ಲಿ ಪರಿಣಾಮಕಾರಿ ಪ್ರಭಾವವನ್ನು ಬೀರುತ್ತದೆ. ಬಿಳಿರಕ್ತಕಣಗಳ ಸಂಖ್ಯೆಯನ್ನು ಹೆಚ್ಚು ಮಾಡುವಲ್ಲಿ ಮತ್ತು ಇದರಿಂದ ಡೆಂಗ್ಯೂ ಸಮಸ್ಯೆಯಿಂದ ಪಾರಾಗಲು ಅನುಕೂಲವಾಗುತ್ತದೆ.

Leave A Reply

Your email address will not be published.

error: Content is protected !!