ಫುಲ್ ಡಿಮ್ಯಾಂಡ್ ಇರೋ ಬಿಸಿನೆಸ್ ನಿಮ್ಮ ಏರಿಯಾದಲ್ಲಿ ನೀವೇ ಮೊದಲು ಸ್ಟಾರ್ಟ್ ಮಾಡಿ

0

ಸಾಮಾನ್ಯವಾಗಿ ಯುವಕರಿಗೆ ತಮ್ಮದೆ ಆದ ಸ್ವಂತ ಬಿಸಿನೆಸ್ ಮಾಡುವ ಕನಸಿರುತ್ತದೆ. ಬಿಸಿನೆಸ್ ಮಾಡುವಾಗ ಬಿಸಿನೆಸ್ ಬಗ್ಗೆ ಸರಿಯಾಗಿ ತಿಳಿದುಕೊಂಡು ಮಾಡಬೇಕಾಗುತ್ತದೆ. ನಗರಗಳಲ್ಲಿ ವರ್ಷವಿಡಿ ಕನ್ಸಟ್ರಕ್ಷನ್ ನಡೆಯುತ್ತದೆ, ಕನ್ಸಟ್ರಕ್ಷನ್ ಮಾಡುವಾಗ ಪಾರ್ಕಿಂಗ್ ಸ್ಥಳವನ್ನು ಮಾಡುತ್ತಾರೆ ಅದಕ್ಕೆ ಬೇಕಾಗಿರುವ ಟೈಲ್ಸ್ ಗಳನ್ನು ತಯಾರಿಸಿ ಮಾರಾಟ ಮಾಡುವುದರಿಂದ ಹೆಚ್ಚಿನ ಲಾಭ ಗಳಿಸಬಹುದು. ಹಾಗಾದರೆ ಈ ಬಿಸಿನೆಸ್ ಪ್ರಾರಂಭಿಸಲು ಬೇಕಾಗುವ ರಾ ಮಟೀರಿಯಲ್ಸ್ ಯಾವುದು ಹಾಗೂ ಈ ಬಿಸಿನೆಸ್ ನ ಪ್ರಾಫಿಟ್ ಬಗ್ಗೆ ಈ ಲೇಖನದಲ್ಲಿ ನೋಡೋಣ.

ಒಂದು ಬಾರಿ ಇನ್ವೆಸ್ಟ್ ಮಾಡಿ ಪ್ರತಿ ತಿಂಗಳು ಆದಾಯ ಗಳಿಸಬಹುದು. ಇತ್ತೀಚಿನ ದಿನಗಳಲ್ಲಿ ಕನ್ಸಟ್ರಕ್ಷನ್ ಫೀಲ್ಡ್ ಅಭಿವೃದ್ಧಿ ಹೊಂದುತ್ತಲೆ ಇದೆ. ಪ್ರತಿಯೊಂದು ಕನ್ಸಟ್ರಕ್ಷನ್ ಮಾಡುವಾಗಲೂ ಪಾರ್ಕಿಂಗ್ ಸ್ಲಾಟ್ ಅನ್ನು ಮಾಡುತ್ತಾರೆ. ಪಾರ್ಕಿಂಗ್ ಸ್ಲಾಟ್ ಮಾಡುವಾಗ ಟೈಲ್ಸ್ ಹಾಕುತ್ತಾರೆ. ಈ ಪಾರ್ಕಿಂಗ್ ಟೈಲ್ಸ್ ಬಿಸಿನೆಸ್ ಮಾಡುವುದರಿಂದ ಉತ್ತಮ ಆದಾಯ ಗಳಿಸಬಹುದು. ಈ ಬಿಸಿನೆಸ್ ಮಾಡಲು ಕೆಲವು ರಾ ಮಟೀರಿಯಲ್ಸ್ ಬೇಕಾಗುತ್ತದೆ. ಕಾಂಕರ್ ಡಸ್ಟ್, ಕಾಂಕರ್ ಬೇಬಿ ಚಿಪ್ಸ್ 8mm, ಸಿಮೆಂಟ್, ಕಲರ್ ಪೌಡರ್ ಬೇಕಾಗುತ್ತದೆ. ಇವುಗಳ ಜೊತೆಗೆ ಟೈಲ್ಸ್ ಮೋಲ್ಡ್ಸ್ ಗಳು ಬೇಕಾಗುತ್ತದೆ, ಈ ಮೋಲ್ಡ್ಸ್ ಗಳು ಬೇರೆ ಬೇರೆ ಡಿಸೈನ್ ನಲ್ಲಿ ಸಿಗುತ್ತದೆ. ಯಾವ ರೀತಿಯ ಡಿಸೈನ್ ಬೇಕಾದರೂ ತೆಗೆದುಕೊಳ್ಳಬಹುದು. ಈ ಬಿಸಿನೆಸ್ ಮಾಡಲು ಕೆಲವು ಮಷಿನರಿ ಮಟೀರಿಯಲ್ಸ್ ಬೇಕಾಗುತ್ತದೆ. ಮಿಕ್ಸರ್ ಮಷೀನ್ ಬೇಕಾಗುತ್ತದೆ. ಸೆಕೆಂಡ್ ಹ್ಯಾಂಡ್ ಮಷೀನ್ ಅನ್ನು ಬಳಸಬಹುದು. ಈ ಮಷೀನ್ 22,000 ರೂಪಾಯಿಯಿಂದ ಒಂದು ಲಕ್ಷದಲ್ಲಿ ಸಿಗುತ್ತದೆ. ನಂತರ ವೈಬ್ರೇಟರ್ ಮಷೀನ್ ಬೇಕಾಗುತ್ತದೆ, ಈ ಮಷೀನ್ 30,000 ರೂಪಾಯಿಗೆ ಸಿಗುತ್ತದೆ. ಮೊದಲು ಕಾಂಕ್ರೀಟ್ ಮಿಕ್ಸರ್ ನಲ್ಲಿ 100 ಕೆಜಿ ಕಾಂಕರ್ ಡಸ್ಟ್ ಹಾಕಬೇಕು, ನಂತರ 84 ಕೆಜಿ 8mm ಬೇಬಿ ಚಿಪ್ಸ್ ಹಾಕಬೇಕು, 50 ಕೆಜಿ ಸಿಮೆಂಟ್ ಹಾಕಬೇಕು ನಂತರ ಚೆನ್ನಾಗಿ ನೀರನ್ನು ಹಾಕಬೇಕು. ಇನ್ನೊಂದುಕಡೆ ಪ್ಯಾನ್ ಮಿಕ್ಸರ್ ನಲ್ಲಿ 50 ಕೆಜಿ ಸಿಮೆಂಟ್, 9 ಕೆಜಿ ಬೇಕಾದ ಕಲರ್ ಹಾಕಬೇಕು.

ನಂತರ ಮೋಲ್ಡ್ಸ ಗಳನ್ನು ತೆಗೆದುಕೊಂಡು ಪ್ಯಾನ್ ಮಿಕ್ಸರ್ ನಲ್ಲಿರುವ ಮಿಕ್ಸರ್ ಅನ್ನು ನೀಟಾಗಿ ಹಾಕಬೇಕು ನಂತರ ಇದನ್ನು ವೈಬ್ರೇಟಿಂಗ್ ಮಷೀನ್ ಮೇಲೆ ಇಡಬೇಕು. ನಂತರ ಕಾಂಕ್ರೀಟ್ ಮಿಕ್ಸರ್ ಅನ್ನು ತೆಗೆದುಕೊಂಡು ಮೋಲ್ಡ್ಸ ಗಳಲ್ಲಿ ನೀಟಾಗಿ ಹಾಕಬೇಕು, ನಂತರ ಇದನ್ನು ವೈಬ್ರೇಟಿಂಗ್ ಮಷೀನ್ ಮೇಲೆ 3 ರಿಂದ 5 ನಿಮಿಷ ಇಡಬೇಕು. ನಂತರ ಇವುಗಳನ್ನು ಎರಡರಿಂದ ಮೂರು ದಿನ ಪ್ಲೈವುಡ್ ಶೀಟ್ ಮೇಲೆ ಇಟ್ಟು ಹಾಗೆಯೆ ಬಿಡಬೇಕು. ನಂತರ ಈ ಟೈಲ್ಸ್ ಗಳನ್ನು ಹೊರಗೆ ತೆಗೆದಿಡಬೇಕು, ಬ್ರೈಟ್ ಆಗಿ ಕಾಣಲು ಕಲರ್ ಕೋಟಿಂಗ್ ಕೊಡಬೇಕು. ನಂತರ ಸ್ವಲ್ಪ ಸಮಯ ಹಾಗೆಯೆ ಬಿಟ್ಟು ಬಾಕ್ಸ್ ಗಳಲ್ಲಿ ಹಾಕಿ ಮಾರಾಟ ಮಾಡಬಹುದು. ಈ ಕೆಲಸ ಮಾಡಲು ಕನ್ಸಟ್ರಕ್ಷನ್ ವರ್ಕರ್ಸ್ ನೇಮಿಸಿಕೊಳ್ಳುವುದು ಉತ್ತಮ. ಈ ಟೈಲ್ಸ್ ಗಳನ್ನು ಟೈಲ್ಸ್ ಶಾಪ್ ಗಳಲ್ಲಿ, ಕನ್ಸಟ್ರಕ್ಷನ್ ನಡೆಯುವ ಸ್ಥಳಗಳಲ್ಲಿ ಮಾರ್ಕೆಟಿಂಗ್ ಮಾಡಬಹುದು. 1 ಸ್ಕ್ವೇರ್ ಫೀಟ್ ಪ್ರೊಡಕ್ಷನ್ ಕಾಸ್ಟ್ 15 ರೂ ಆಗುತ್ತದೆ. ಹೋಲ್ ಸೇಲಾಗಿ 25 ರೂಪಾಯಿಗೆ ಮಾರಾಟ ಮಾಡಬೇಕು, ರಿಟೇಲ್ ನಲ್ಲಿ 35 ರೂಪಾಯಿಗೆ ಮಾರಾಟ ಮಾಡಿದರೆ 1 ಸ್ಕ್ವೇರ್ ಫೀಟ್ ಗೆ 10ರೂ ಲಾಭವಾಗುತ್ತದೆ. ಪ್ರತಿದಿನ ಸಾವಿರ ಸ್ಕ್ವೇರ್ ಫೀಟ್ ಪ್ರೊಡಕ್ಷನ್ ಮಾಡಿ ಮಾರಾಟ ಮಾಡಿದರೆ ದಿನಕ್ಕೆ ಹತ್ತು ಸಾವಿರ ರೂಪಾಯಿ ಲಾಭವಾಗುತ್ತದೆ. ಈ ಬಿಸಿನೆಸ್ ಎಲ್ಲಾ ಸಮಯದಲ್ಲೂ ಪ್ರಾಮುಖ್ಯತೆ ಹೊಂದಿದೆ. ವರ್ಷವಿಡಿ ಕನ್ಸಟ್ರಕ್ಷನ್ ನಡೆಯುವುದರಿಂದ ಈ ಬಿಸಿನೆಸ್ ಮಾಡುವುದರಿಂದ ಲಾಭಗಳಿಸಬಹುದು. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ. ನಿರುದ್ಯೋಗ ಯುವಕರು ಈ ಬಿಸಿನೆಸ್ ಮಾಡುವುದರಿಂದ ಹೆಚ್ಚಿನ ಲಾಭ ಗಳಿಸಿಕೊಳ್ಳಬಹುದು.

Leave A Reply

Your email address will not be published.

error: Content is protected !!