ಗಂಡನ ನಿರಂತರ ಪ್ರೀತಿಗಾಗಿ ಗರ್ವಪುರಾಣದ ಈ ಸಲಹೆ

0

ಪ್ರತಿ ಹೆಣ್ಣಿಗೂ ತನ್ನ ಗಂಡ ಎಲ್ಲರಿಗಿಂತ ಹೆಚ್ಚು ತನ್ನನ್ನು ಪ್ರೀತಿಸಬೇಕು, ಗೌರವಿಸಬೇಕು, ಆದರಿಸಬೇಕು ಎಂದು ಇರುತ್ತದೆ ಆದರೆ ಬಹಳ ಹೆಣ್ಣುಮಕ್ಕಳಿಗೆ ಈ ಭಾಗ್ಯ ಇರುವುದಿಲ್ಲ ಅವರು ಈ ವಿಷಯವಾಗಿ ಕೊರಗುತ್ತಾರೆ. ಈ ಸಮಸ್ಯೆಗೆ ಗರ್ವ ಪುರಾಣದಲ್ಲಿ ಪರಿಹಾರವಿದೆ. ಹಾಗಾದರೆ ಈ ಸಮಸ್ಯೆಗೆ ಇರುವ ಪರಿಹಾರವನ್ನು ಈ ಲೇಖನದಲ್ಲಿ ನೋಡೋಣ.

ಹಲವು ಕಾರಣಗಳಿಗಾಗಿ ಕೆಲವು ಹೆಂಗಸರು ಒಂದೆ ಮನೆಯಲ್ಲಿದ್ದರೂ ಗಂಡನೊಂದಿಗೆ ಮಾನಸಿಕವಾಗಿ, ದೈಹಿಕವಾಗಿ ಅಂತರ ಕಾಯ್ದುಕೊಂಡಿರುತ್ತಾರೆ. ಇದರಿಂದ ಗಂಡನು ಅನ್ಯಮನಸ್ಕನಾಗುತ್ತಾನೆ. ಈ ಸುದೀರ್ಘ ಸಮಯದ ವಿರಹ ಮತ್ತೆಲ್ಲೊ ಮತ್ತೇನನ್ನೊ ಹುಡುಕಲು ಪ್ರೇರೇಪಿಸುತ್ತದೆ. ಇಂತಹ ಸಮಯದಲ್ಲಿ ಸೂಕ್ತ ಅವಕಾಶ ಸಿಕ್ಕರೆ ಗಂಡ ದಾರಿ ತಪ್ಪುತ್ತಾನೆ. ಅಲ್ಲದೆ ಹೆಣ್ಣು ಹೆತ್ತವರು ತಮ್ಮ ಮಗಳನ್ನು ಮದುವೆ ಮಾಡಿಕೊಡುವುದು ಗಂಡನೊಂದಿಗೆ ಚೆನ್ನಾಗಿ ಇರಲಿ ಎಂದು ಆದರೆ ಕೆಲವರು ತಮ್ಮ ಮಗಳು ತವರು ಮನೆಯಲ್ಲೆ ಹೆಚ್ಚು ಇರಲಿ ಎಂದು ಬಯಸುತ್ತಾರೆ. ಪೋಷಕರ ಅತಿಯಾದ ಪ್ರೀತಿ, ಕಾಳಜಿಯು ಮಗಳ ಸಂಸಾರದಲ್ಲಿ ಸಮಸ್ಯೆಗೆ ಕಾರಣವಾಗುತ್ತದೆ. ಸುಖ, ಸಂತೋಷ ಕಾಣದ ಗಂಡನು ಸದಾ ತವರು ಮನೆಯಲ್ಲಿ ಇರುವ ಹೆಂಡತಿಯ ಬಗ್ಗೆ ಉದಾಸೀನನಾಗುತ್ತಾನೆ. ಈ ಬಗ್ಗೆ ಹೆಣ್ಣುಮಕ್ಕಳು ಜಾಗರೂಕತೆಯಿಂದ ಇರಬೇಕು. ಸದಾ ತವರು ಮನೆಯಲ್ಲಿ ಇರುವುದು, ನಾಲ್ಕು ಗೋಡೆಯ ಮಧ್ಯೆ ಇರಬೇಕಾದ ಸಂಸಾರದ ಗುಟ್ಟನ್ನು ಮನೆ, ಮನೆಗೆ ಹೇಳುವುದನ್ನು ಹೆಂಗಸರು ಮಾಡಬಾರದು ಆಗ ಗಂಡ ಹೆಂಡತಿಯನ್ನು ಪ್ರೀತಿಸುತ್ತಾನೆ ಎಂದು ಗರ್ವ ಪುರಾಣದಲ್ಲಿ ಉಲ್ಲೇಖಿಸಲಾಗಿದೆ.

ನಮಗೆ ಎಂತಹ ಸ್ನೇಹಿತರು ಇರುತ್ತಾರೆ ಎನ್ನುವುದರ ಮೇಲೆ ನಮ್ಮ ವ್ಯಕ್ತಿತ್ವ ನಿರ್ಧಾರವಾಗುತ್ತದೆ. ಸ್ನೇಹಿತರ ಆಯ್ಕೆಯಲ್ಲಿ ಹುಷಾರಾಗಿರಬೇಕು. ಮನೆ ಹಾಳು ಮಾಡುವ ಹೆಂಗಸರನ್ನು ಗೃಹಿಣಿ ಸ್ನೇಹಿತರನ್ನಾಗಿ ಮಾಡಿಕೊಳ್ಳಬಾರದು. ಕೆಲವು ಹೆಂಗಸರು ನಿಮ್ಮ ಮನೆಯ ಖಾಸಗಿ ವಿಚಾರಗಳನ್ನು ನಿಧಾನವಾಗಿ ತಿಳಿದುಕೊಂಡು, ನಿಮಗೆ ಏನೇನೊ ಹೇಳಿ ನಿಮ್ಮ ಸಂಸಾರವನ್ನು ಹಾಳು ಮಾಡುತ್ತಾರೆ. ಇಂಥವರ ಸ್ನೇಹ ಮಾಡಿದರೆ ಗಂಡನಿಂದ ದೂರ ಆಗಬೇಕಾಗುತ್ತದೆ ಆದ್ದರಿಂದ ಇಂಥವರ ಸ್ನೇಹ ಮಾಡಬಾರದು ಎಂದು ಗರ್ವ ಪುರಾಣ ಹೇಳುತ್ತದೆ. ನಮ್ಮ ನಾಲಿಗೆಯಲ್ಲಿ ಸರಸ್ವತಿ ದೇವಿ ನೆಲೆಸುತ್ತಾಳೆ ಎಂದು ಹೇಳುತ್ತಾರೆ. ನಮ್ಮ ಮಾತು ಸರಸ್ವತಿ ದೇವಿಗೆ ಅವಮಾನ ಮಾಡುವಂತೆ ಇರಬಾರದು. ಗಂಡನ ಮನೆಯಲ್ಲಿ ಒಳ್ಳೆಯ ಮಾತುಗಳನ್ನು ಆಡಬೇಕು. ಗಂಡನಿಗೆ ಸಂಬಂಧಪಟ್ಟವರಿಗೆ ಅವಮಾನ ಆಗುವಂತೆ ಮಾತನಾಡುವ ಹೆಂಡತಿಯ ಬಗ್ಗೆ ಗಂಡನಿಗೆ ಗೌರವ, ಪ್ರೀತಿ ಇರುವುದಿಲ್ಲ ಆದ್ದರಿಂದ ಹೆಂಗಸರು ನಯವಾಗಿ ಮಾತನಾಡಿ, ಕುಟುಂಬದ ವಾತಾವರಣ ತಿಳಿಯಾಗಿರುವಂತೆ ನೋಡಿಕೊಳ್ಳಬೇಕು. ಸಮಸ್ಯೆ ಬಂದಾಗ ಗಂಡನಿಗೆ ನಯವಾದ ಮಾತುಗಳಿಂದಲೆ ಅರ್ಥ ಮಾಡಿಸಬೇಕು. ಮಾತಿನಿಂದಲೆ ಕೌಟುಂಬಿಕ ಕಲಹ ಉಂಟಾಗುತ್ತದೆ ಆದ್ದರಿಂದ ಮಾತಿನ ಬಗ್ಗೆ ಹೆಂಗಸರು ಎಚ್ಚರಿಕೆಯಿಂದ ಇರಬೇಕು.

ನಮ್ಮ ಸಮಾಜದಲ್ಲಿ ಏನೆ ದುರ್ಘಟನೆ ನಡೆದರೂ ಹೆಣ್ಣನ್ನು ದೂರುತ್ತಾರೆ ಇದರಿಂದ ಆಕೆಯ ಮರ್ಯಾದೆ ಹೋಗುತ್ತದೆ, ಇಂತಹ ಹೆಂಡತಿಯ ಬಗ್ಗೆ ಗಂಡನಿಗೆ ಪ್ರೀತಿ ಇರುವುದಿಲ್ಲ ಆದ್ದರಿಂದ ಇಂತಹ ವಿಷಯಗಳ ಬಗ್ಗೆ ಹೆಂಗಸರು ಎಚ್ಚರದಿಂದಿರಬೇಕು. ಹೆಂಗಸರು ತಮ್ಮ ನೆರೆಹೊರೆಯವರು ಎಷ್ಟೆ ಆಪ್ತರಾಗಿದ್ದರು ಬೇರೆಯವರ ಮನೆಗೆ ಹೆಚ್ಚು ಹೋಗುವುದನ್ನು ಮಾಡಬಾರದು ಎಂಬುದನ್ನು ಗರ್ವ ಪುರಾಣದಲ್ಲಿ ತಿಳಿಸಲಾಗಿದೆ. ಈ ಎಲ್ಲ ಮಾಹಿತಿಯನ್ನು ಮದುವೆಯಾದ ಎಲ್ಲಾ ಹೆಣ್ಣುಮಕ್ಕಳಿಗೆ ತಪ್ಪದೆ ತಿಳಿಸಿ. ಸಂಸಾರದಲ್ಲಿ ಕೆಲವು ಅಂಶಗಳನ್ನು ಪಾಲಿಸುವುದರಿಂದ ಗಂಡನ ಪ್ರೀತಿಯನ್ನು ಪಡೆದುಕೊಂಡು ಗೌರವದಿಂದ ಬದುಕಬಹುದು.

Leave A Reply

Your email address will not be published.

error: Content is protected !!