ಪುರುಷರಲ್ಲಿ ಹೆಚ್ಚಿನ ಫಲವತ್ತತೆ ಹೆಚ್ಚಿಸಲು ಈ ಮನೆಮದ್ದು

0

ನಾವಿಂದು ಮನೆಯಲ್ಲಿಯೇ ಇರುವ ಪದಾರ್ಥಗಳನ್ನು ಬಳಸಿಕೊಂಡು ಯಾವ ರೀತಿಯಾಗಿ ಪುರುಷರಲ್ಲಿ ವೀರ್ಯಾಣುಗಳನ್ನು ಹೆಚ್ಚಿಸಿಕೊಳ್ಳಬಹುದು ಎಂಬುದರ ಕುರಿತಾದ ಮಾಹಿತಿಯನ್ನು ತಿಳಿಸಿಕೊಡುತ್ತೇವೆ. ಪುರುಷರಲ್ಲಿ ವೀರ್ಯಾಣುಗಳು ಕಡಿಮೆಯಾಗುವುದಕ್ಕೆ ಕಾರಣ ತಿಳಿಯದೇ ಇರುವ ವಯಸ್ಸಿನಲ್ಲಿ ತಪ್ಪನ್ನು ಮಾಡುವುದು ಎರಡನೆಯದಾಗಿ ಇತ್ತೀಚಿನ ದಿನಗಳಲ್ಲಿ ಯುವಕರು ಹೆಚ್ಚಾಗಿ ಮದ್ಯಪಾನ ಮತ್ತು ಧೂಮಪಾನಕ್ಕೆ ದಾಸರಾಗಿರುವುದು. ಹಾಗಾಗಿ ನೀವೇನಾದರು ಧೂಮಪಾನ ಅಥವಾ ಮದ್ಯಪಾನವನ್ನು ಮಾಡುತ್ತಿದ್ದರೆ ಅದನ್ನು ತ್ಯಜಿಸುವುದು ಒಳ್ಳೆಯದು. ಇದರ ಜೊತೆಗೆ ಜಂಕ್ ಫುಡ್ ಗಳ ಸೇವನೆಯಿಂದಲೂ ಕೂಡ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಆರೋಗ್ಯದ ಮೇಲೂ ಕೂಡ ಕೆಟ್ಟ ಪರಿಣಾಮವನ್ನು ಉಂಟು ಮಾಡುತ್ತದೆ.

ಹಾಗಾಗಿ ನಮ್ಮ ಹಿರಿಯರು ಪಾಲಿಸಿಕೊಂಡು ಬಂದಂತಹ ಆಚಾರ-ವಿಚಾರಗಳನ್ನು ನಾವು ಪಾಲಿಸುವುದು ಒಳ್ಳೆಯದು. ಹಿಂದಿನವರ ಜೀವನಶೈಲಿ ಆಹಾರ ಪದ್ಧತಿಗಳಿಂದಾಗಿ ಅವರಿಗೆ ಯಾವುದೇ ರೀತಿಯ ಕಾಯಿಲೆಗಳು ಕಾಣಿಸಿಕೊಳ್ಳುತ್ತಿರಲಿಲ್ಲ. ಜನರೇಶನ್ ಬದಲಾಗುತ್ತಿದ್ದಂತೆಯೇ ಜೀವನಶೈಲಿಯು ಕೂಡ ಬದಲಾಗುತ್ತಿದೆ ಹಾಗಾಗಿ ಆರೋಗ್ಯವಂತ ವ್ಯಕ್ತಿಯನ್ನು ಕೂಡ ಕಾಯಿಲೆಗಳು ಹುಡುಕಿಕೊಂಡು ಬರುತ್ತಿವೆ.

ಹಾಗಾಗಿ ನಾವು ಸಾವಯವ ಪದ್ಧತಿಯನ್ನು ಬಳಸಿ ಬೆಳೆದಂತಹ ಆಹಾರ ಪದಾರ್ಥಗಳನ್ನು ಸೇವನೆ ಮಾಡುವುದು ಬೆಳಿಗ್ಗೆ ಎದ್ದು ವ್ಯಾಯಾಮ ಯೋಗಗಳನ್ನು ಅಭ್ಯಾಸ ಮಾಡುವುದು ಧೂಮಪಾನ ಮದ್ಯಪಾನದಿಂದ ದೂರ ಇರುವುದು ಇಂತಹ ಅಭ್ಯಾಸಗಳನ್ನು ರೂಢಿ ಮಾಡಿಕೊಳ್ಳಬೇಕು. ಕೆಟ್ಟ ಜೀವನಶೈಲಿ ಆರೋಗ್ಯಕ್ಕೆ ಒಳ್ಳೆಯದಲ್ಲದ ಆಹಾರ ಪದಾರ್ಥವನ್ನು ರೂಢಿಸಿಕೊಳ್ಳುವುದರಿಂದ ವೀರ್ಯಾಣುಗಳ ಸಮಸ್ಯೆ ಕಂಡುಬರುತ್ತದೆ.

ಮನೆಯಲ್ಲಿಯೇ ಇದನ್ನ ಹೇಗೆ ಸರಿಪಡಿಸಬಹುದು ಎಂಬುದರ ಬಗ್ಗೆ ನಾವೀಗ ತಿಳಿದುಕೊಳ್ಳೋಣ. ಬೆಳಿಗ್ಗೆ ಬ್ರಾಹ್ಮೀಮುಹೂರ್ತದಲ್ಲಿ ಎದ್ದು ವ್ಯಾಯಾಮವನ್ನು ಮಾಡಬೇಕು ನಂತರ ನಿತ್ಯಕರ್ಮಗಳನ್ನು ಮುಗಿಸಿ ಸ್ವಲ್ಪ ಪ್ರಮಾಣದಲ್ಲಿ ತಿಂಡಿಯನ್ನು ಸೇವಿಸಬೇಕು. ತಾಜಾ ಆಹಾರವನ್ನು ಸೇವಿಸಬೇಕು ಸಾಧ್ಯವಾದರೆ ಸ್ವಲ್ಪ ಉಗುರು ಬೆಚ್ಚಗಿರುವ ನೀರನ್ನು ಕುಡಿಯಬೇಕು. ಇದರಿಂದ ಆಸಿಡಿಟಿ ಕಡಿಮೆಯಾಗುತ್ತದೆ ಜೀರ್ಣಕ್ರಿಯೆ ಸರಾಗವಾಗಿ ಆಗುತ್ತದೆ ಮತ್ತು ದೇಹದಲ್ಲಿರುವ ಆಂಟಿಆಕ್ಸಿಡೆಂಟ್ ಗಳನ್ನು ಹೊರಹಾಕುವುದಕ್ಕೆ ಬಿಸಿನೀರು ಸಹಾಯವಾಗುತ್ತದೆ.

ಇನ್ನು ಊಟದಲ್ಲಿ ಸಾಧ್ಯವಾದಷ್ಟು ಸಜ್ಜೆ ನವಣೆ ರಾಗಿ ಬಾರ್ಲಿ ಈ ರೀತಿಯ ಸಿರಿಧಾನ್ಯಗಳನ್ನು ಹೆಚ್ಚಾಗಿ ಬಳಸಬೇಕು. ಗೋಧಿ ಉತ್ಪನ್ನಗಳು ಹಾಗೂ ಮೈದಾ ಹಿಟ್ಟಿನಿಂದ ತಯಾರಿಸುವ ಉತ್ಪನ್ನಗಳನ್ನು ಆದಷ್ಟು ಕಡಿಮೆ ಮಾಡಬೇಕು. ನಂತರ ರಸ್ತೆ ಬದಿಯಲ್ಲಿ ಸಿಗುವ ಕುರುಕುಲು ತಿಂಡಿಗಳನ್ನು ತಿನ್ನುವುದನ್ನು ಕಡಿಮೆ ಮಾಡಬೇಕು. ಮನೆಯಲ್ಲಿ ಶುದ್ಧವಾದ ಎಣ್ಣೆಯಿಂದ ಹದಿನೈದು ದಿನಕ್ಕೊಮ್ಮೆ ತಿಂಗಳಿಗೊಮ್ಮೆ ಕರಿದ ತಿಂಡಿಯನ್ನು ತಯಾರಿಸಿ ತಿನ್ನುವುದರಿಂದ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ.

ಹೊರಗಡೆ ಆಹಾರ ಪದಾರ್ಥವನ್ನು ತಿನ್ನುವುದನ್ನು ಕಡಿಮೆ ಮಾಡಿದಾಗ ನಮ್ಮಲ್ಲಿ ಬದಲಾವಣೆಗಳು ಕಂಡು ಬರುತ್ತವೆ ಎಂದು ಹೇಳಬಹುದು. ಇನ್ನು ಸಾಯಂಕಾಲದ ಹೊತ್ತಿಗೆ ಕಾಫಿ-ಟೀ ಯನ್ನು ಕುಡಿಯುವ ರೂಢಿ ಇರುತ್ತದೆ ಇದರಿಂದಲೂ ಕೂಡ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ ಅವುಗಳ ಬದಲಿಗೆ ಎನರ್ಜಿ ಡ್ರಿಂಕ್ ಗಳನ್ನು ಕುಡಿಯಬಹುದು. ಬೂದುಗುಂಬಳಕಾಯಿಯ ಜ್ಯೂಸ್ ಅನ್ನ ಮಾಡಿ ಕುಡಿಯಬಹುದು ಬೆಲ್ಲದ ಪಾನಕವನ್ನು ತಯಾರಿಸಿ ಕುಡಿಯಬಹುದು ಇನ್ನು ರಾತ್ರಿ ಊಟವನ್ನು ಅಲ್ಪ ಪ್ರಮಾಣದಲ್ಲಿ ಸೇವಿಸಬೇಕು.

ನಂತರ ಬೇಕಾದರೆ ಹಾಲನ್ನ ಕುಡಿಯಬಹುದು ಹಾಲಿನಲ್ಲಿ ಕೇಸರಿ ಅಥವಾ ಅಶ್ವಗಂಧವನ್ನು ಹಾಕಿ ಕುಡಿಯಬಹುದು ಅಥವಾ ಅರಿಶಿನದ ಪುಡಿಯನ್ನು ಹಾಕಿ ಕುಡಿಯಬಹುದು.ವೀರ್ಯಾಣುಗಳನ್ನು ಹೆಚ್ಚಿಸಿಕೊಳ್ಳುವುದಕ್ಕೆ ಪಾಲಕ್ ಸೊಪ್ಪನ್ನು ನುಗ್ಗೆಕಾಯಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಬೇಕು. ಆಹಾರದಲ್ಲಿ ಹೆಚ್ಚಾಗಿ ಬೆಳ್ಳುಳ್ಳಿಯನ್ನು ಬಳಸಬೇಕು ಒಣದ್ರಾಕ್ಷಿಯನ್ನು ರಾತ್ರಿ ನೀರಿನಲ್ಲಿ ನೆನೆಸಿ ಬೆಳಿಗ್ಗೆ ಅದೇ ನೀರಿನಲ್ಲಿ ಅದನ್ನು ಕಿವುಚಿ ಸೇವಿಸಬೇಕು ಈ ರೀತಿ ಕ್ರಮಗಳನ್ನು ಅನುಸರಿಸುವುದರಿಂದ ಪುರುಷರಲ್ಲಿ ವೀರ್ಯಾಣುಗಳ ಸಮಸ್ಯೆಯನ್ನು ನಿವಾರಣೆ ಮಾಡಿಕೊಳ್ಳಬಹುದು.

Leave A Reply

Your email address will not be published.

error: Content is protected !!