ನ್ಯಾಚುರಲ್ ಆಗಿ ಬೆಳ್ಳಗೆ ಕಾಣಲು ಇಲ್ಲಿದೆ ಮನೆಮದ್ದು

0

ಪ್ರತಿಯೊಬ್ಬರಿಗೂ ಕೂಡ ತಾವು ಸುಂದರವಾಗಿ ಕಾಣಬೇಕು ಮುಖ ಕಾಂತಿಯುತವಾಗಿ ಕಾಣಬೇಕು ಮುಖದ ಮೇಲೆ ಯಾವುದೇ ರೀತಿಯ ಕಲೆಗಳು ಇರಬಾರದು ಎಂಬ ಆಸೆ ಇರುತ್ತದೆ ಕೆಲವರು ತುಂಬಾ ಬೆಳ್ಳಗಿರುತ್ತಾರೆ ಆದರೆ ಮುಖದಲ್ಲಿ ಕಾಂತಿ ಇರುವುದಿಲ್ಲ. ಮುಖದಲ್ಲಿ ಕಾಂತಿ ಇದ್ದರೆ ಮುಖ ಲಕ್ಷಣವಾಗಿ ಕಾಣಿಸುತ್ತದೆ. ಹಾಗಾಗಿ ಮುಖದಲ್ಲಿ ಕಾಂತಿ ಉಂಟಾಗಬೇಕು ಎಂದು ಇಚ್ಛೆಪಡುವವರು ನಾವು ಇವತ್ತು ತಿಳಿಸುವ ಜ್ಯೂಸ್ ಬಳಸಬಹುದು ಇದರಿಂದ ನಿಮ್ಮ ಮುಖ ಲಕ್ಷಣವಾಗಿ ಕಾಣಿಸುತ್ತದೆ ಜೊತೆಗೆ ಈ ಜ್ಯೂಸ್ ಆರೋಗ್ಯಕ್ಕೂ ಕೂಡ ಒಳ್ಳೆಯದು ಅದನ್ನು ತಯಾರಿಸುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.

ಒಂದು ಕ್ಯಾರೆಟ್ ಮತ್ತು ಒಂದು ಬೀಟ್ರೂಟನ್ನ ತೆಗೆದುಕೊಳ್ಳಬೇಕು ನೀವು ಒಬ್ಬರೇ ಜ್ಯೂಸನ್ನು ಕುಡಿಯುವವರಿದ್ದರೆ ಅದರಲ್ಲಿ ಅರ್ಧ ಕ್ಯಾರೆಟ್ ಅರ್ಧ ಬೀಟ್ರೂಟನ್ನ ಬಳಸಿದರೆ ಸಾಕಾಗುತ್ತದೆ. ಅದನ್ನ ತೊಳೆದುಕೊಂಡು ಸಿಪ್ಪೆಯನ್ನು ತೆಗೆಯಬೇಕು. ಕೆಲವರು ಬೆಳ್ಳಗಾಗುವುದಕ್ಕೆ ಮುಖಕ್ಕೆ ಕ್ರೀಂಗಳನ್ನು ಹಚ್ಚುತ್ತಾರೆ ಆದರೆ ಅದು ಶಾಶ್ವತವಲ್ಲ ಅದರಿಂದ ಅಡ್ಡ ಪರಿಣಾಮಗಳು ಉಂಟಾಗಬಹುದು.

ನೀವು ಆ ಕ್ರೀಂಅನ್ನು ಬಳಸುವುದನ್ನು ನಿಲ್ಲಿಸಿದಾಗ ಮತ್ತೆ ಮೊದಲಿನಂತೆ ಕಾಣಬಹುದು. ನಾವು ದೇಹದ ಒಳಗೆ ಏನನ್ನು ಸೇರಿಸುತ್ತೇವೆ ಅದರ ಫಲಿತಾಂಶ ಚರ್ಮದ ಮೇಲೆ ಕಾಣಿಸುತ್ತದೆ. ಬೀಟ್ರೂಟ್ ಮತ್ತು ಕ್ಯಾರೆಟ್ ತಿನ್ನುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಆದರೆ ಕೆಲವರು ಇದನ್ನು ತಿನ್ನುವುದಕ್ಕೆ ಇಷ್ಟಪಡುವುದಿಲ್ಲ. ವಾರದಲ್ಲಿ ಒಂದು ಅಥವಾ ಎರಡು ಬಾರಿ ಇದನ್ನು ಸೇವಿಸುವುದರಿಂದ ಉತ್ತಮ ಫಲಿತಾಂಶವನ್ನು ಕಂಡುಕೊಳ್ಳಬಹುದು.

ಸಿಪ್ಪೆ ತೆಗೆದಂತಹ ಬೀಟ್ರೂಟ್ ಮತ್ತು ಕ್ಯಾರೆಟ್ ಗಳನ್ನು ಸಣ್ಣದಾಗಿ ಕತ್ತರಿಸಿಕೊಳ್ಳಬೇಕು. ಎರಡನ್ನೂ ಸಮ ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು. ಒಲೆಯ ಮೇಲೆ ಒಂದು ಪಾತ್ರೆಯನ್ನು ಇಟ್ಟು ಮುಕ್ಕಾಲು ಲೋಟ ಆಗುವಷ್ಟು ನೀರನ್ನು ಹಾಕಬೇಕು ಅದಕ್ಕೆ ಬೀಟ್ರೂಟ್ ಮತ್ತು ಕ್ಯಾರೆಟ್ ಗಳನ್ನು ಹಾಕಬೇಕು ಜೊತೆಗೆ ಅದಕ್ಕೆ ನಾಲ್ಕರಿಂದ ಐದು ಗೋಡಂಬಿ ಬೀಜಗಳನ್ನ ಹಾಕಬೇಕು ಅದನ್ನು ಕಡಿಮೆ ಉರಿಯಲ್ಲಿ ಒಂದು ಹತ್ತು ನಿಮಿಷ ಬೇಯಿಸಬೇಕು. ನಂತರ ಅದನ್ನು ಬಿಸಿ ಆರುವುದಕ್ಕೆ ಬಿಡಬೇಕು ಗೋಡಂಬಿ ಬೀಜವನ್ನು ಹಾಕುವುದರಿಂದ ರುಚಿ ಹೆಚ್ಚುತ್ತದೆ. ಬಿಸಿ ಆರಿದ ನಂತರ ಅದಕ್ಕೆ ಬೇಕೆನಿಸಿದರೆ ಅರ್ಧ ಚಿಟಿಕೆ ಉಪ್ಪನ್ನು ಸೇರಿಸಬಹುದು.

ಬೇಯಿಸಿ ಆರಿಸಿಕೊಂಡ ಕ್ಯಾರೆಟ್ ಮತ್ತು ಬೀಟ್ರೂಟ್ ಗಳನ್ನ ಮಿಕ್ಸಿ ಜಾರಿಗೆ ಹಾಕಿ ಅದಕ್ಕೆ ಒಂದು ಗ್ಲಾಸ್ ಹಾಲನ್ನ ಸೇರಿಸಬೇಕು ಸಿಹಿಗಾಗಿ ಎರಡು ಚಮಚ ಜೇನು ತುಪ್ಪವನ್ನು ಹಾಕಬೇಕು ನೀವು ಸಕ್ಕರೆಯನ್ನು ಅಥವಾ ಬೆಲ್ಲವನ್ನು ಬಳಸಬಹುದು. ಅದನ್ನು ನುಣ್ಣಗೆ ರುಬ್ಬಿಕೊಳ್ಳಬೇಕು ಅದನ್ನು ಗ್ಲಾಸಿಗೆ ಹಾಕಿಕೊಂಡರೆ ಜ್ಯೂಸ್ ರೆಡಿಯಾಗುತ್ತದೆ.

ನೀವು ಈ ಜ್ಯೂಸನ್ನು ಒಂದು ಸಾರಿ ಮಾಡಿ ಕುಡಿಯುವುದರಿಂದ ಕಾಂತಿ ಬರುವುದಿಲ್ಲ. ವಾರದಲ್ಲಿ ಒಂದರಿಂದ ಎರಡು ಬಾರಿ ಮಾಡಿ ಕುಡಿಯಬೇಕು ಕ್ರಮೇಣ ಮುಖದ ಕಾಂತಿ ಹೆಚ್ಚುತ್ತದೆ ಆರೋಗ್ಯದಲ್ಲಿಯೂ ಕೂಡ ಒಳ್ಳೆಯ ಫಲಿತಾಂಶ ಕಂಡುಬರುತ್ತದೆ. ಈ ರೀತಿಯಾಗಿ ಸುಲಭವಾಗಿ ಜ್ಯೂಸನ್ನು ತಯಾರಿಸಿಕೊಂಡು ಅದನ್ನು ಕ್ರಮೇಣ ಸೇವಿಸಿ ನೀವು ಕೂಡ ನಿಮ್ಮ ಮುಖದ ಕಾಂತಿಯನ್ನು ಹೆಚ್ಚಿಸಿಕೊಳ್ಳಬಹುದು.

Leave A Reply

Your email address will not be published.

error: Content is protected !!
Footer code: