ನುಗ್ಗೆಕಾಯಿ ತಿನ್ನೋದ್ರಿಂದ ಶರೀರದ ಯಾವೆಲ್ಲ ಸಮಸ್ಯೆಗೆ ಪರಿಹಾರವಿದೆ ನೋಡಿ

0

ನುಗ್ಗೆಕಾಯಿ ತಿಂದರೆ ಅದರಿಂದ ಹಲವಾರು ರೀತಿಯ ಲಾಭಗಳು ಇವೆ ಎಂದು ನಮ್ಮ ಹಿರಿಯರು ಹೇಳುತ್ತಲಿದ್ದರು. ಕೇವಲ ನುಗ್ಗೆಕಾಯಿ ಮಾತ್ರವಲ್ಲದೆ ಅದರ ಸೊಪ್ಪು ಹಾಗೂ ತೊಗಟೆಯು ನಮಗೆ ಹಲವಾರು ರೀತಿಯಿಂದ ಆರೋಗ್ಯದಲ್ಲಿ ನೆರವಾಗುವುದು ಎಂದು ಹೇಳಲಾಗುತ್ತದೆ. ನುಗ್ಗೆಕಾಯಿ ಬಳಸಿಕೊಂಡು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಹೇಗೆ ಎಂಬುದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ನುಗ್ಗೆಕಾಯಿಯಲ್ಲಿ ಕೆಲವೊಂದು ಪ್ರಮುಖ ಪೋಷಕಾಂಶಗಳಿದ್ದು ನಿಯಮಿತವಾಗಿ ಸೇವನೆ ಮಾಡಿದರೆ ರಕ್ತದಲ್ಲಿ ಇರುವ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ ಅಷ್ಟೇ ಅಲ್ಲದೇ ಇದರಲ್ಲಿ ವಿಟಮಿನ್ ಸಿ ಉತ್ತಮ ಪ್ರಮಾಣದಲ್ಲಿರುವ ಕಾರಣದಿಂದ ಜ್ವರ, ಗಂಟಲ ಬೇನೆ, ಕೆರೆತ, ಶೀತ ಮೊದಲಾದ ಕಾಯಿಲೆಗಳನ್ನು ನಿಯಂತ್ರಣ ಮಾಡಿಕೊಳ್ಳಬಹುದು. ಆಹಾರ ಕ್ರಮದಲ್ಲಿ ನುಗ್ಗೆಕಾಯಿ ಮತ್ತು ನುಗ್ಗೆಕಾಯಿ ಮರದ ಸೊಪ್ಪು ಬಳಸಿದರೆ ಅದು ನಮ್ಮನ್ನು ಆರೋಗ್ಯವಾಗಿ ಇಡಲು ಸಹಾಯಕಾರಿ. ನುಗ್ಗೆಕಾಯಿಯಲ್ಲಿ ಕೆಲವೊಂದು ಪ್ರಮುಖ ಪೋಷಕಾಂಶಗಳು ಇದ್ದು ಇದನ್ನು ನಿಯಮಿತವಾಗಿ ಸೇವನೆ ಮಾಡಿದರೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುವುದು. ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇಟ್ಟುಕೊಂಡು ಹೃದಯದ ಆರೋಗ್ಯವನ್ನು ಸುಧಾರಿಸುವುದು. ರಕ್ತದ ಮತ್ತು ಹೃದಯದ ಕಾರ್ಯವು ಸೂಕ್ತವಾಗಿ ಇರುವಂತೆ ನೋಡಿಕೊಳ್ಳುವುದು. ನುಗ್ಗೆಕಾಯಿಯಲ್ಲಿ ಇರುವಂತಹ ಎರಡು ರೀತಿಯ ಪ್ರಮುಖ ಪೋಷಕಾಂಶಗಳಿಂದಾಗಿ ಮೂಳೆಗಳ ಆರೋಗ್ಯಕ್ಕೆ ಕ್ಯಾಲ್ಸಿಯಂ ಮತ್ತು ಕಬ್ಬಿಣ ಅಂಶವನ್ನು ಒದಗಿಸಿ ನುಗ್ಗೆಕಾಯಿಯನ್ನು ನಿಯಮಿತವಾಗಿ ಸೇವನೆ ಮಾಡಿದರೆ ಮೂಳೆಗಳ ಆರೋಗ್ಯವು ಉತ್ತಮವಾಗುವುದು.

ವಿಟಮಿನ್ ಸಿ ಅಧಿಕವಾಗಿರುವಂತಹ ನುಗ್ಗೆಕಾಯಿಯಲ್ಲಿ ಕೆಲವೊಂದು ಸಾಮಾನ್ಯ ಸಮಸ್ಯೆಯನ್ನು ನಿವಾರಣೆ ಮಾಡುವ ಪರಿಣಾಮಕಾರಿ ಅಂಶ ಇರುವುದು. ಇದರಲ್ಲಿ ನಮಗೆ ಮುಖ್ಯವಾಗಿ ಕಾಡುವಂತಹ ಶೀತ ಜ್ವರ ಹಾಗೂ ಗಂಟಲು ನೋವಿನ ಸಮಸ್ಯೆ ನಿವಾರಣೆ ಆಗುವುದು. ನುಗ್ಗೆಕಾಯಿ ಸೂಪ್ ಮಾಡಿಕೊಂಡು ಕುಡಿದರೆ ಈ ಎಲ್ಲಾ ಸಮಸ್ಯೆಗಳಿಂದ ಪರಿಹಾರ ಪಡೆದುಕೊಳ್ಳಬಹುದು. ನುಗ್ಗೆಕಾಯಿಯಲ್ಲಿ ಚಿಕಿತ್ಸಕ ಗುಣವಿದೆ ಮತ್ತು ಇದು ಅಸ್ತಮಾ, ಉಬ್ಬರ ಮತ್ತು ಶ್ವಾಸಕೋಶದ ಇತರ ಕೆಲವೊಂದು ಸಮಸ್ಯೆಗಳನ್ನು ನಿವಾರಣೆ ಮಾಡಲು ಬಹಳ ಉಪಯುಕ್ತವಾಗಿದೆ. ಅಸ್ತಮಾ ಮತ್ತು ಇತರ ಕೆಲವೊಂದು ರೀತಿಯ ಶ್ವಾಸಕೋಶದ ಸಮಸ್ಯೆಗಳನ್ನು ನಿವಾರಣೆ ಮಾಡುವಲ್ಲಿ ನುಗ್ಗೆಕಾಯಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ನುಗ್ಗೆಕಾಯಿಯನ್ನು ಬೇಯಿಸಿದ ನೀರಿನ ಹಬೆಯನ್ನು ತೆಗೆದುಕೊಂಡರೆ ಶ್ವಾಸಕೋಶದ ಸಮಸ್ಯೆ ನಿವಾರಣೆ ಆಗುವುದು ಮತ್ತು ಮುಂದಿನ ಕೆಲವು ದಿನಗಳಲ್ಲಿ ಸಮಸ್ಯೆಯು ಕೂಡಾ ಕಡಿಮೆ ಆಗುವುದು.

ಇನ್ನು ದಾಂಪತ್ಯ ಜೀವನದಲ್ಲಿ ಏರುಪೇರು ಆಗಿದ್ದರೆ ಆಗ ಕೂಡಾ ನುಗ್ಗೆ ಕಾಯಿ ಬಹಳ ಪ್ರಯೋಜನಕಾರಿ. ಆದರೆ ಈ ಸಮಯದಲ್ಲಿ ನುಗ್ಗೆಕಾಯಿ ಇದನ್ನು ಹಸಿಯಾಗಿ ಬಳಸಬಾರದು. ಬದಲಿಗೆ ಬೆಗಿಸಿ ಅದರ ಬೀಜವನ್ನು ತೆಗೆದುಕೊಂಡರೆ ಇದು ಇದು ಕಾಮಾಸಕ್ತಿಯನ್ನು ಹೆಚ್ಚಿಸುತ್ತದೆ. ಈ ಮೂಲಕ ದಾಂಪತ್ಯ ಜೀವನವನ್ನು ಹೊಸದಾಗಿಸುತ್ತದೆ. ಹಾಗೆಯೇ ಈ ತರಕಾರಿಯನ್ನು ಹುಡಿಯ ರೂಪದಲ್ಲಿ ಬಳಸಿಕೊಂಡರೆ ಆಗ ಖಂಡಿತವಾಗಿಯೂ ಬಂಜೆತನ, ವೀರ್ಯ ತೆಳುವಾಗುವುದು ಮತ್ತು ಶೀಘ್ರ ಸ್ಖಲನ ಸಮಸ್ಯೆ ನಿವಾರಿಸಬಹುದು. ಲೈಂ,ಗಿಕ ಅಸಾಮರ್ಥ್ಯ ಮತ್ತು ಸರಿಯಾದ ಶಕ್ತಿ ಪ್ರದರ್ಶನಕ್ಕೆ ಸಾಧ್ಯವಗದೆ ಇದ್ದಾಗ ನುಗ್ಗೆಕಾಯಿ ನೆರವಾಗುವುದು. ನುಗ್ಗೆಕಾಯಿಯ ಎಲೆಗಳ ತಾಜಾ ರಸವನ್ನು ಒಂದು ಲೋಟ ಸೌತೆಕಾಯಿ ಅಥವಾ ಕ್ಯಾರೆಟ್ ಜ್ಯೂಸ್ ನ ಜೊತೆಗೆ ಬೆರೆಸಿಕೊಂಡು ಕುಡಿದರೆ ಆಗ ಅದರಿಂದ ಮೂತ್ರ ವಿಸರ್ಜನೆಯ ಸಮಯದಲ್ಲಿ ಕಾಣಿಸಿಕೊಳ್ಳುವ ಉರಿಯೂತ ಕಡಿಮೆ ಆಗುವುದು. ಒಂದು ಚಮಚ ನುಗ್ಗೆಕಾಯಿ ಎಲೆಯ ರಸ ಮತ್ತು ಹತ್ತು ಗ್ರಾಂನಷ್ಟು ಕಲ್ಲುಪ್ಪನ್ನು ಬೆರೆಸಿಕೊಂಡು ಕುಡಿದರೆ ಅದರಿಂದ ಪದೇ ಪದೇ ಮೂತ್ರ ವಿಸರ್ಜನೆ ಸಮಸ್ಯೆಯನ್ನು ನಿವಾರಣೆ ಮಾಡಬಹುದು. ಇಷ್ಟೇ ಅಲ್ಲದೆ ಕ್ಯಾನ್ಸರ್ ಮಟ್ಟ ತಗ್ಗಿಸಲು ಕೂಡಾ ನುಗ್ಗೆಕಾಯಿ ಸಹಾಯಕಾರಿ ಆಗುವುದು. ನಿಯಮಿತವಾಗಿ ನುಗ್ಗೆಕಾಯಿ ಮತ್ತು ಅದರ ಸೊಪ್ಪನ್ನು ತಿಂದರೆ ಆಗ ಕ್ಯಾನ್ಸರ್ ಬರುವಂತಹ ಅಪಾಯವನ್ನು ಶೇಕಡ 80ರಷ್ಟು ಕಡಿಮೆ ಮಾಡಬಹುದು.

Leave A Reply

Your email address will not be published.

error: Content is protected !!