ನೀವೇನಾದ್ರು ಈ ಮೂರು ಹಣ್ಣುಗಳನ್ನು ತಿನ್ನುತ್ತಿದ್ರೆ ನಿಜಕ್ಕೂ ಈ ವಿಷಯವನ್ನು ತಿಳಿದುಕೊಳ್ಳಬೇಕು

0

ನಮ್ಮ ಆಹಾರ ಪದ್ಧತಿಯಲ್ಲಿ ಯಾವಾಗ ವಿಟಮಿನ್ ಸಿ ಅಂಶ ಹೆಚ್ಚಾಗಿರುವ ಪದಾರ್ಥಗಳಿರುತ್ತವೆ ಆಗ ನಾವು ಒಂದಿಷ್ಟು ಧೈರ್ಯದಿಂದ ನೆಮ್ಮದಿಯಿಂದ ಇರಬಹುದು ಏಕೆಂದರೆ ನಮ್ಮ ಆರೋಗ್ಯಕ್ಕೆ ಯಾವುದೇ ರೀತಿಯ ಸೋಂಕುಗಳು ಅಥವಾ ತೊಂದರೆಗಳು ಎದುರಾಗುವುದಿಲ್ಲ. ನಮ್ಮ ದೇಹ ಕೂಡ ಸದೃಢತೆಯಿಂದ ಕೂಡಿರುತ್ತದೆ ಮತ್ತು ಮುಂಬರುವ ಯಾವುದೇ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳನ್ನು ಎದುರಿಸಲು ಶಕ್ತಿಯುತವಾಗಿರುತ್ತದೆ.

ವಿಶೇಷವಾಗಿ ಚಳಿಗಾಲದ ಸಮಯದಲ್ಲಿ ನಾವು ಉಸಿರಾಡುವ ಗಾಳಿಯಲ್ಲಿ ಶೀತದ ಅಂಶ ಇರುವುದರ ಜೊತೆಗೆ ಮಾಲಿನ್ಯಕಾರಕ ಹಾಗೂ ರೋಗ ಕಾರಕ ಸೂಕ್ಷ್ಮಾಣುಗಳು ಕೂಡ ಬೆರೆತಿರುತ್ತವೆ ಇದರಿಂದ ಹೊರಬರಲು ತೊಂದರೆ ಎದುರಾಗುವುದು ಖಂಡಿತ. ಇಂತಹ ಸಮಯದಲ್ಲಿ ನಾವು ನೈಸರ್ಗಿಕವಾಗಿ ಮನೆಯಲ್ಲಿಯೇ ಯಾವುದಾದರೂ ಆಹಾರ ಪದಾರ್ಥಗಳಿಂದ ಕ್ರಮೇಣವಾಗಿ ನಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚು ಮಾಡಿಕೊಳ್ಳಬಹುದು ಅಥವಾ ಇಲ್ಲ ಎಂಬುದರ ಬಗ್ಗೆ ಆಲೋಚನೆಯನ್ನು ಮಾಡಬೇಕು.

ನಾವು ಸೇವನೆ ಮಾಡುವ ಆಹಾರ ಪದಾರ್ಥಗಳಲ್ಲಿ ಆಂಟಿ ಆಕ್ಸಿಡೆಂಟ್ ಮತ್ತು ಆಂಟಿ ಇಂಪ್ಲೇಮೆಂಟರ್ಸ್ ಗುಣಲಕ್ಷಣಗಳು ಹೆಚ್ಚಾಗಿ ಕಂಡುಬಂದರೆ ಸ್ವಾಸಕೋಶದ ಆರೋಗ್ಯ ಉತ್ತಮಗೊಳ್ಳುತ್ತದೆ ಉದಾಹರಣೆಗೆ ನಮ್ಮ ಆಹಾರ ಪದ್ಧತಿಯಲ್ಲಿ ಕೆಲವೊಂದು ಹಣ್ಣುಗಳನ್ನು ಸೇರಿಸಿ ಸೇವನೆ ಮಾಡುವುದರಿಂದ ನಮ್ಮ ದೇಹಕ್ಕೆ ವಿಟಮಿನ್ ಸಿ ಪ್ರಮಾಣ ಹೆಚ್ಚಾಗಿ ದೊರೆಯುತ್ತದೆ. ಹಾಗಾದರೆ ಆ ಹಣ್ಣುಗಳು ಯಾವುದು ಎಂಬುದರ ಬಗ್ಗೆ ಈಗ ತಿಳಿದುಕೊಳ್ಳೋಣ.

ಚಳಿಗಾಲದ ಸಂದರ್ಭದಲ್ಲಿ ಸೀಬೆಹಣ್ಣು ಹೆಚ್ಚಾಗಿ ಕಂಡುಬರುತ್ತದೆ ಮತ್ತು ಎಲ್ಲಾ ಕಡೆಗಳಲ್ಲಿಯೂ ಸಿಗುತ್ತದೆ. ಇದರಲ್ಲಿ ವಿಟಮಿನ್ ಸಿ ಪ್ರಮಾಣ ಹೆಚ್ಚಾಗಿದೆ ಮತ್ತು ಆಂಟಿಆಕ್ಸಿಡೆಂಟ್ ಪ್ರಮಾಣವು ಕೂಡ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತದೆ. ಮುಖ್ಯವಾಗಿ ಪೊಟ್ಯಾಶಿಯಂ ಮತ್ತು ನಾರಿನ ಅಂಶ ಹೆಚ್ಚಾಗಿ ಕಂಡುಬರುತ್ತದೆ ಹೀಗಾಗಿ ನಿಮ್ಮ ಸಂಪೂರ್ಣ ಆರೋಗ್ಯವನ್ನು ವೃದ್ಧಿ ಪಡಿಸುವುದರಲ್ಲಿ ಇದರ ಪಾತ್ರ ಬಹಳ ದೊಡ್ಡದಾಗಿದೆ.

ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಅತ್ಯುತ್ತಮವಾಗಿ ನಿರ್ವಹಿಸಿ ದೇಹದ ರೋಗನಿರೋಧಕ ಶಕ್ತಿಯನ್ನು ಉತ್ತೇಜಿಸುತ್ತದೆ ಅಷ್ಟೇ ಅಲ್ಲದೆ ಇದರಲ್ಲಿರುವ ವಿಟಮಿನ್ ಎ ವಿಟಮಿನ್ ಸಿ ವಿಟಮಿನ್ ಇ ಮ್ಯಾಗ್ನಿಷಿಯಂ ಅಂಶ ನಾರಿನಂಶ ಪೊಟ್ಯಾಶಿಯಂ ಮತ್ತು ಪಾಸ್ಪರಸ್ ಅಂಶದ ಜೊತೆಗೆ ಇನ್ನಿತರ ಅಂಶಗಳು ಸಹ ಸಿಗುತ್ತವೆ ಸೀಬೆ ಹಣ್ಣಿನಲ್ಲಿ ವಿಟಮಿನ್ ಸಿ ಅಂಶ ಹೆಚ್ಚಾಗಿ ಕಂಡುಬರುತ್ತದೆ. ಈ ಹಣ್ಣುಗಳನ್ನು ಸೇವನೆ ಮಾಡುವುದರಿಂದ ಅದರಲ್ಲಿರುವ ಉತ್ತಮ ಅಂಶಗಳನ್ನು ತಮ್ಮದಾಗಿಸಿಕೊಳ್ಳಬಹುದು ಮುಖ್ಯವಾಗಿ ಜೀರ್ಣಾಂಗ ವ್ಯವಸ್ಥೆ ಯಲ್ಲಿ ತೊಂದರೆ ಇರುವವರಿಗೆ ಸೀಬೆಹಣ್ಣು ಹೆಚ್ಚು ಅನುಕೂಲ ಕಾರಿ.

ಇನ್ನು ಕಿತ್ತಳೆ ಹಣ್ಣಿನಲ್ಲಿ ನಮ್ಮ ದೇಹದ ಶಕ್ತಿ ಮತ್ತು ಚೈತನ್ಯವನ್ನು ಕ್ಷಣಮಾತ್ರದಲ್ಲಿ ಹೆಚ್ಚಿಸುವ ಗುಣಲಕ್ಷಣ ಇದೆ ಹೀಗಾಗಿ ಇದರಲ್ಲಿ ಪೌಷ್ಟಿಕ ಸತ್ವಗಳು ಹೆಚ್ಚಾಗಿದ್ದು ಖನಿಜಾಂಶಗಳು ಮತ್ತು ವಿಟಮಿನ್ ಅಂಶಗಳು ಇರುವುದರಿಂದ ನಿಮ್ಮ ಆಹಾರ ಪದ್ಧತಿಯಲ್ಲಿ ಅಪ್ರತಿಮ ವಿಟಮಿನ್ ಅಂಶವನ್ನು ಹೊಂದಿರುವ ಕಿತ್ತಳೆ ಹಣ್ಣಿನ ಸೇವನೆ ಬಹಳ ಮುಖ್ಯವಾಗಿರುತ್ತದೆ. ಒಂದು ಮಧ್ಯಮಗಾತ್ರದ ಹಣ್ಣು ತನ್ನಲ್ಲಿ ನಿಮ್ಮ ದೇಹಕ್ಕೆ ಅಗತ್ಯವಾಗಿ ಬೇಕಾದ ಶೇಕಡ ಎಪ್ಪತ್ತೆರಡರಷ್ಟು ವಿಟಮಿನ್-ಸಿ ಅಂಶವನ್ನು ಒಳಗೊಂಡಿದೆ. ಇದು ನಿಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚು ಮಾಡಿ ಚರ್ಮ ಮತ್ತು ಹೃದಯದ ಆರೋಗ್ಯಕ್ಕೆ ಅನುಕೂಲಕರವಾಗಿರುತ್ತದೆ.

ಇನ್ನು ಸ್ಟ್ರಾಬೆರಿ ಹಣ್ಣುಗಳು ಹೆಚ್ಚು ಪೌಷ್ಟಿಕ ಸತ್ವಗಳನ್ನು ಹೊಂದಿರುತ್ತವೆ ನಮ್ಮ ನಾಲಿಗೆಗೆ ರುಚಿಕರವಾದ ಅನುಭವವನ್ನು ನೀಡುವುದರ ಜೊತೆಗೆ ವಿಟಮಿನ್ ಸಿ ಅಂಶಗಳು ಮತ್ತು ಆಂಟಿಆಕ್ಸಿಡೆಂಟ್ ಅಂಶಗಳು ಹೆಚ್ಚಾಗಿರುವ ಕಾರಣ ಕಡಿಮೆ ಕೊಲೆಸ್ಟ್ರಾಲ್ ಮತ್ತು ಕಡಿಮೆ ಕೊಬ್ಬಿನ ಅಂಶವನ್ನು ಹೊಂದಿರುತ್ತವೆ ಹೀಗಾಗಿ ನಿಮ್ಮ ಆಹಾರ ಪದ್ಧತಿಯಲ್ಲಿ ಇವುಗಳನ್ನು ಸೇರಿಸಿಕೊಳ್ಳಿ. ಇನ್ನು ಹುಳಿ ಮತ್ತು ಸಿಹಿ ಮಿಶ್ರಿತ ದ್ರಾಕ್ಷಿ ಹಣ್ಣುಗಳು ನಮ್ಮ ದೇಹಕ್ಕೆ ಪೌಷ್ಟಿಕ ಸತ್ವಗಳನ್ನು ಒದಗಿಸುವುದರ ಜೊತೆಗೆ ವಿಟಮಿನ್ ಅಂಶಗಳನ್ನು ಪ್ರೊಟೀನ್ ನಾರಿನಂಶ ಇತ್ಯಾದಿ ಅಂಶಗಳನ್ನು ದೇಹಕ್ಕೆ ಒದಗಿಸುತ್ತದೆ. ಇದರಿಂದ ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗಿ ವಿಷಕಾರಿ ಅಂಶಗಳು ದೇಹದಿಂದ ಹೊರ ಹೋಗುವುದಕ್ಕೆ ಸಹಾಯವಾಗುತ್ತದೆ.

ಬೇರೆ ದೇಶಗಳಲ್ಲಿ ಹೇರಳವಾಗಿ ಕಂಡುಬರುವ ಕಿವಿ ಹಣ್ಣು ಈಗ ನಮ್ಮ ಭಾರತ ದೇಶದಲ್ಲಿಯೂ ಸಾಕಷ್ಟು ಪ್ರಮಾಣದಲ್ಲಿ ಮಾರಾಟವಾಗುತ್ತಿದೆ. ಈ ಹಣ್ಣು ತುಂಬಾ ದುಬಾರಿ ಎನ್ನುವುದು ಒಂದು ಕಾರಣದಿಂದ ಬಿಟ್ಟರೆ ಇದರಲ್ಲಿ ಹಲವಾರು ಪ್ರಯೋಜನಕಾರಿ ಅಂಶಗಳಿವೆ. ಕಿವಿ ಹಣ್ಣಿನಲ್ಲಿ ಫೋಲೆಟ್ ಅಂಶ ಮತ್ತು ಪೊಟ್ಯಾಷಿಯಂ ಅಂಶ ನಮ್ಮ ದೇಹದ ದಿನನಿತ್ಯದ ಅಗತ್ಯಕ್ಕೆ ತಕ್ಕಂತೆ ಸಿಗುತ್ತದೆ. ಕಿವಿ ಹಣ್ಣು ನಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚು ಮಾಡಿ ಆಂಟಿಆಕ್ಸಿಡೆಂಟ್ ಮತ್ತು ವಿಟಮಿನ್ ಅಂಶಗಳ ಕಾರಣದಿಂದ ದೈಹಿಕ ಸದೃಢತೆಯನ್ನು ಹೆಚ್ಚಿಸುತ್ತದೆ. ಮಧ್ಯಾಹ್ನ ಊಟದ ನಂತರ ಕಿವಿ ಹಣ್ಣಿನ ಸೇವನೆ ಮಾಡುವುದರಿಂದ ಆರೋಗ್ಯಕ್ಕೆ ಸಾಕಷ್ಟು ಲಾಭ ಗಳು ಇವೆ ಎನ್ನುವುದು ತಿಳಿದುಬಂದಿದೆ.

ದಾಳಿಂಬೆ ಹಣ್ಣು ಸಿಪ್ಪೆಯಿಂದ ಹಿಡಿದು ಒಳಗಿನ ದಾಳಿಂಬೆ ಬೀಜಗಳು ನಮ್ಮ ದೇಹಕ್ಕೆ ಅಪಾರ ಪ್ರಮಾಣದ ಪೌಷ್ಠಿಕಾಂಶವನ್ನು ಒದಗಿಸುತ್ತದೆ ಇದರಲ್ಲಿ ವಿಟಮಿನ್ ಸಿ ಪೊಟಾಶಿಯಂ ನಾರಿನಂಶ ಇತ್ಯಾದಿಗಳನ್ನು ಒದಗಿಸುತ್ತದೆ ಮತ್ತು ನಮ್ಮ ದೇಹವನ್ನು ಆರೋಗ್ಯಕರವಾಗಿ ಕಾಪಾಡುತ್ತದೆ. ದಾಳಿಂಬೆ ಹಣ್ಣನ್ನು ಹಾಗೆಯೇ ತಿಂದರೆ ತುಂಬಾ ಒಳ್ಳೆಯದು ಇದರ ಜ್ಯೂಸ್ ಮಾಡಿ ಕೂಡ ಕುಡಿಯಬಹುದು. ಜ್ಯೂಸ್ ನಲ್ಲಿಯೂ ಸಹ ಹಣ್ಣಿನಿಂದ ಸಿಗುವ ಲಾಭಾಂಶಗಳು ದೇಹಕ್ಕೆ ಸಿಗುತ್ತವೆ. ಇದನ್ನು ಪ್ರತಿನಿತ್ಯ ಕುಡಿದರೆ ಅದ್ಭುತ ಲಾಭವನ್ನು ಪಡೆಯಬಹುದು.

ದಾಳಿಂಬೆಯಲ್ಲಿ ಸಿಹಿಯ ಅಂಶವಿದ್ದರೂ ಅದು ಅಷ್ಟು ವೇಗವಾಗಿ ರಕ್ತದಲ್ಲಿ ಸೇರಿಕೊಳ್ಳುವುದಿಲ್ಲ ಹಾಗಾಗಿ ಸಿಹಿಯನ್ನು ಇಷ್ಟಪಡುವಂತಹ ಮಧುಮೇಹಿಗಳಿಗೆ ದಾಳಿಂಬೆ ಜ್ಯೂಸ್ ತುಂಬಾ ಒಳ್ಳೆಯದಾಗಿದೆ. ಈ ರೀತಿಯಾಗಿ ಹಣ್ಣುಗಳು ನಮ್ಮ ಆರೋಗ್ಯಕ್ಕೆ ಬೇಕಾದಂತಹ ಪೋಷಕಾಂಶಗಳನ್ನು ಒದಗಿಸುವುದರ ಜೊತೆಗೆ ನಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಕೂಡ ವೃದ್ಧಿಸುತ್ತವೆ ನೀವು ಕೂಡ ಈ ಹಣ್ಣುಗಳ ಸೇವನೆಯನ್ನು ಮಾಡುವ ಮೂಲಕ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ.

Leave A Reply

Your email address will not be published.

error: Content is protected !!
Footer code: