WhatsApp Group Join Now
Telegram Group Join Now

 ನಮ್ಮಲ್ಲಿ ‘ಹಸಿದು ಹಲಸು ತಿನ್ನು ಉಂಟು ಮಾವು ತಿನ್ನು’ ಅನ್ನೋ ಗಾದೆ ಮಾತಿದೆ. ಇದರರ್ಥ ಹಲಸಿನ ಹಣ್ಣು ನಮಗೆ ಎಷ್ಟು ಮುಖ್ಯ ಎಂಬುದನ್ನು ತಿಳಿಸುತ್ತದೆ. ಸಂಸ್ಕೃತದಲ್ಲಿ ‘ಪನಸ’ ಎಂದು ಕರೆಯುವ ವೈಜ್ಞಾನಿಕವಾಗಿ ಆರ್ಟೋಕಾರ್ಪಸ್ ಹೆಟಿರೋಫೈಲಸ್ ಎಂಬ ಹೆಸರುಳ್ಳ ಇಂಗ್ಲೀಷ್ ನಲ್ಲಿ ಜಾಕ್ ಫ್ರೂಟ್ ಎಂದು ಕರೆಯಲಾಗುವ ಹಲಸಿನ ಹಣ್ಣನ್ನು ಆಹಾರ ಮೌಲ್ಯಗಳನ್ನು ಮಾತ್ರವಲ್ಲ, ಔಷಧಿಯ ಅಂಶಗಳನ್ನು ಕೂಡ ಒಳಗೊಂಡಿದೆ. ಹೌದು ಹಲಸಿನ ಹಣ್ಣಿನಲ್ಲಿರುವ ಪೋಷಕಾಂಶಗಳು ಮತ್ತು ಖನಿಜಾಂಶಗಳು ಮನುಷ್ಯನ ದೇಹಕ್ಕೆ ತುಂಬಾ ಉಪಯುಕ್ತವಾಗಿದೆ.

ಇದರಲ್ಲಿನ ನಾರಿನಂಶ ಜೀರ್ಣ ಕ್ರಿಯೆಯಲ್ಲಿನ ಸಮಸ್ಯೆಯನ್ನು ದೂರ ಮಾಡಿದರೆ, ವಿಟಮಿನ್ ಎ ಕಣ್ಣಿನ ಆರೋಗ್ಯ ಸುಧಾರಿಸುತ್ತದೆ. ಈ ಹಣ್ಣಿನಲ್ಲಿ ಕೊಲೆಸ್ಟ್ರಾಲ್ ಮತ್ತು ಆರೋಗ್ಯಕರ ಕೊಲೆಸ್ಟ್ರಾಲ್ ಇರುವುದು ಇದರ ಮತ್ತೊಂದು ವಿಶೇಷವಾಗಿದೆ. ನಿಯಾಸಿನ್, ಪಿರಿಡಾಕ್ಸಿನ್,ರಿಬೋಪ್ಲಾವಿನ್ ಮತ್ತು ಪೊಲೀಕ್ ಆಮ್ಲವಿದೆ. ವಿಟಮಿನ್ ಸಿ ಕೂಡ ಇದ್ದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಐರನ್, ಕಾಪರ್, ಪೊಟ್ಯಾಸಿಯಂ, ಸೋಡಿಯಮ್ ನಂತಹ ಹಲವಾರು  ಮಿನರಲ್ ದೇಹದ ಆರೋಗ್ಯವನ್ನು ವೃದ್ಧಿಸುತ್ತದೆ.

ಹಲಸಿನ ಹಣ್ಣು ಚರ್ಮದ ಆರೈಕೆಗೆ ಉತ್ತಮ ಔಷಧವಾಗಿಯೂ ಕಾರ್ಯನಿರ್ವಹಿಸುತ್ತದೆ,. ಚರ್ಮದ ಸುಕ್ಕುಗಳಂತಹ ಅಥವಾ ವಯಸ್ಸಾದ ಛಾಯೆಗಳನ್ನು ಕಡಿಮೆ ಮಾಡುತ್ತದೆ. ಈ ಹಣ್ಣಿನ ಸೇವನೆಯಿಂದ ಚರ್ಮವು ಯಾವಾಗಲೂ ತಾರುಣ್ಯ ಮತ್ತು ಕ್ರಾಂತಿಯುತವಾಗಿ ಕಾಣುತ್ತದೆ. ಅಧಿಕ ರಕ್ತದೊತ್ತಡ ವನ್ನು ಸಮತೋಲನದಲ್ಲಿ ಇಡುತ್ತದೆ. ಕ್ಯಾನ್ಸರ್ ತಡೆಗಟ್ಟುತ್ತದೆ ಮತ್ತು ನರವ್ಯೂಹದ ಚರ್ಮಕ್ಕೆ ಬಹಳ ಉತ್ತಮವಾದ ಹಣ್ಣು. ಶೀತ ಮತ್ತು ಸೋಂಕುಗಳನ್ನು ತಡೆಯಲು ನೆರವಾಗುವುದು. ರಕ್ತದ ಸಕ್ಕರೆ ಲೆವೆಲ್ ಅನ್ನು ತಹಬದಿಯಲ್ಲಿ ಇಡುತ್ತದೆ. ಅನೀಮಿಯ ಬರದಂತೆ ತಡೆಯುತ್ತದೆ. ಹೊಟ್ಟೆಯ ಹುಣ್ಣಿನ ಸಮಸ್ಯೆ ಪರಿಹರಿಸುತ್ತದೆ. ಕರುಳಿನ ಚಲನೆಯನ್ನು ನಿಯಂತ್ರಿಸುತ್ತದೆ. ಹೃದಯದ ಸಮಸ್ಯೆಯ ರಿಸ್ಕ್ಗಳನ್ನು ಕಡಿಮೆ ಮಾಡುತ್ತದೆ.

ಇದರಲ್ಲಿರುವ ತಾಮ್ರದ ಅಂಶ ಥೈರಾಯ್ಡ್ ತೊಂದರೆಗಳಿಗೆ ಹಿತಕರ. ಹಲಸಿನ ಹಣ್ಣಿನ ಸೊನೆ(ಹಾಲು) ಒಣಗಿಸಿದಾಗ ಅದರಲ್ಲಿ ಆರ್ಟೋಸ್ಟಿರಾನ್ ಎಂಬ ರಸಾಯನಿಕ ಅಂಶ ಸಿಗುತ್ತದೆ. ಇದು ಪುರುಷರ ಹಾರ್ಮೋನ್ ಆಂಡ್ರೋಜನ್ ಅಂತೆ ಕಾರ್ಯವೆಸಗುತ್ತದೆ. ಜ್ವರ ಮತ್ತು ಭೇದಿ ಉಂಟಾದಾಗ ಹಲಸಿನ ಬೇರಿನ ಕಷಾಯವನ್ನು ಸೇವಿಸಿದರೆ ಕಡಿಮೆ ಆಗುತ್ತದೆ. ಬಾಯಿ ಯಲ್ಲಿನ ಹುಣ್ಣು ಸಮಸ್ಯೆಯನ್ನು ಕಡಿಮೆ ಮಾಡಲು ಹಲಸಿನ ಹಣ್ಣು ತುಂಬಾ ಉಪಯುಕ್ತವಾಗಿದೆ. ವಿಶೇಷವಾಗಿ ಹಲಸಿನ ಹಣ್ಣಿನ ಅಲ್ಸರೇಟಿವ್ ಆ್ಯಂಟಿ ಸೇಫ್ಟಿಕ್ ಉರಿಯುತಾ ಮತ್ತು ಆ್ಯಂಟಿ ಆಕ್ಸಿಡೆಂಟ್ ಗುಣಲಕ್ಷಣಗಳನ್ನು ಕಡಿಮೆ ಮಾಡುತ್ತದೆ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: