WhatsApp Group Join Now
Telegram Group Join Now

ಯಾವುದೋ ಒಬ್ಬ ವ್ಯಕ್ತಿಗಳು ಯಾವುದೇ ಆಸ್ತಿಯನ್ನು ಖರೀದಿಸುವ ಮುನ್ನ ಕಾಲವನ್ನು ಅಳೆಯುವ ಅತ್ಯಗತ್ಯವಾಗಿರುತ್ತದೆ. ಆಸ್ತಿಯನ್ನು ಖರೀದಿಸುವುದು ಯಾವ ರೀತಿ ದಾಖಲೆಗಳನ್ನು ನೋಡಬೇಕು? ಅದರ ಬಗ್ಗೆ ಮಾಹಿತಿಯನ್ನು ಹೇಗೆ ಸಂಗ್ರಹಿಸಬೇಕು ಹಾಗೂ ಕಾನೂನಿನ ರೀತಿಯಲ್ಲಿ ಹೇಗೆ ಮುನ್ನಡೆ ಇಡಬಹುದು ಎನ್ನುವುದರ ಕುರಿತಾಗಿ ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಯಾವುದೇ ಸ್ಥಿರಾಸ್ತಿ ಹಕ್ಕನ್ನು ಯಾವುದೇ ಒಬ್ಬ ವ್ಯಕ್ತಿ ಪಡೆಯಬೇಕಾದರೆ ಅದನ್ನು ಈಗಾಗಲೇ ಆ ಆಸ್ತಿಯ ಮೇಲೆ ಮಾಲೀಕತ್ವದ ಹಕ್ಕನ್ನು ಹೊಂದಿರುವ ವ್ಯಕ್ತಿ ಈ ವ್ಯಕ್ತಿಗೆ ಸೆಲ್ ಡೀಡ್ ಮೂಲಕ ಮಾಲೀಕತ್ವದ ಹಕ್ಕನ್ನು ವರ್ಗಾಯಿಸಬೇಕು. ಆಸ್ತಿ ಮಾರಾಟದ ನಿಜವಾದ ಹಾಗೂ ಕಾನೂನುಬದ್ಧ ದಾಖಲೇ ಎಂದರೆ ಅದು ಸಬ್ ರಿಜಿಸ್ಟರ್ ಆಫೀಸ್ನಲ್ಲಿ ನೋಂದಣಿಯಾದ ಸೆಲ್ ಡೀಡ್ ಆಗಿರುತ್ತದೆ. ಈ ಹಿನ್ನಲೆಯಲ್ಲಿ ಖರೀದಿಯ ಸಂದರ್ಭಗಳಲ್ಲಿ ಎದುರಾಗುವ ಗೊಂದಲಗಳನ್ನು ನಿವಾರಿಸಲು ಕೆಲವು ಮಾಹಿತಿಗಳನ್ನು ನೀಡಲಾಗುತ್ತದೆ.

ಆ ಮಾಹಿತಿಗಳು ಎನು ಅನ್ನೋದನ್ನ ನೋಡೋಣ. ಪ್ರಾಪರ್ಟಿ ಖರೀದಿ ಮಾಡುವವರು ನೇರವಾಗಿ ಸಬ್ ರಿಜಿಸ್ಟರ್ ಆಫೀಸ್ ಗೆ ಹೋಗಿ ಅಲ್ಲಿ ರಜಿಷ್ಟ್ರೇಶನ್ ಮಾಡಿಸಲೆಂದೆ ಹೊರಗೆ ಕುಳಿತಿರುವ ಕೆಲವು ಜನರನ್ನ ಅವಸರದಲ್ಲಿ ಭೇಟಿ ಮಾಡಿ ತಾವು ಖರೀದಿಸುವ ಪ್ರಾಪರ್ಟೀಯ ಸೆಲ್ ಡೀಡ್ ನೋಂದಣಿ ಮಾಡಿಸುವಂತೆ ಕೇಳುತ್ತಾರೆ. ಇದು ನಾವು ಸಾಮಾನ್ಯವಾಗಿ ನೋಡಿರುತ್ತೇವೆ. ಇವರು ಸರ್ಕಾರಿ ಅಧಿಕಾರಿಗಳು ಅಲ್ಲದೆ ಇದ್ದರೂ ಸಹ ಇವರು ನೋಂದಣಿ ಮಾಡಿಸಿಕೊಡಬಲ್ಲರು. ಇವರು ಪ್ರಾಪರ್ಟಿ ಮಾರುವವರು ಮತ್ತು ಕೊಳ್ಳುವವರು ಎರಡೂ ಕಡೆಯವರ ಹೆಸರು, ವಿಳಾಸ, ತಂದೆಯವರ ಹೆಸರು, ವಯಸ್ಸು, ಹಾಗೂ ಇದಕ್ಕೆ ಬೇಕಾಗಿರುವ ಬೇರೆ ಇನ್ನಿತರ ದಾಖಲೆಗಳು ಅಥವಾ ಮಾಹಿತಿಯನ್ನು ಕೇಳಿಕೊಂಡು ಜಾಗದ ಬೆಲೆ, ವಿಸ್ತೀರ್ಣ ಇವೆಲ್ಲವನ್ನೂ ಕೇಳಿ ಟೈಪ್ ಮಾಡಿಸಿ ನಂತರ ಒಳಗೆ ತೆಗೆದುಕೊಂಡು ಹೋಗಿ ಸೇಲ್ ಡೀಡ್ ನೋಂದಣಿ ಮಾಡಿಸಿ ಕೊಡುತ್ತಾರೆ.

ನಂತರ ಯಾವುದೋ ವಕೀಲರು ಒಬ್ಬರು ತಯಾರಿಸಿದ ಸೇಲ್ ಡಿಡಿ ಕ್ರಯ ಪತ್ರವನ್ನು ನೀಡುತ್ತಾರೆ. ಒಂದು ರೆಡಿ ಕ್ರಯ ಪತ್ರ ಇದ್ದು, ಅದರಲ್ಲಿ ನಿಮ್ಮ ಎಲ್ಲಾ ವಿವರಗಳನ್ನು ತುಂಬಿ ಕೊಡುತ್ತಾರೆ. ಈ ಕ್ರಯ ಪತ್ರದಲ್ಲಿ ಕೊಂಡುಕೊಂಡವನಿಗೆ ಸಂಬಂಧಿಸಿದ ಯಾವುದೇ ಹಕ್ಕು ಹಾಗೂ ರಕ್ಷಣೆಯೂ ಅನ್ವಯ ಆಗುವುದಿಲ್ಲ. ಅಂದರೆ ಕಾನೂನಿನ ಅನ್ವಯ ಯಾವುದೇ ಷರತ್ತುಗಳು ಆಗಲೀ, ನಿಬಂಧನೆಗಳ ಯಾವುದೇ ಒಡಂಬಡಿಕೆಗಳ ಆಗಲಿ ಇರುವುದೆಲ್ಲ ಇಂತಹ ಸೆಲ್ ಡೀಡ್ ಅನ್ನು ಉಪನೋಂದಣಾಧಿಕಾರಿಗಳ ಅಥವಾ ಸಬ್ ರಿಜಿಸ್ಟರ್ ಆಫೀಸ್ ನಲ್ಲಿ ಅವಸರವಾಗಿ ನೋಂದಣಿ ಮಾಡಿಸುವಾಗ ಅನೇಕ ಅತ್ಯಗತ್ಯ ಅವಶ್ಯಕತೆಗಳ ಬಗ್ಗೆ ಗಮನಹರಿಸಲಾಗುವುದು ಕಾರಣ ನಾವು ಕೊಂಡುಕೊಳ್ಳುವವರು ಹಾಗೂ ಮಾರುವವರು ಸಹ ಅರ್ಜೆಂಟ್ ನಲ್ಲಿಇರುತ್ತಾರೆ ಅಂತಹ ಸಂದರ್ಭದಲ್ಲಿ ಪ್ರಾಪರ್ಟಿ ಮಾರಾಟ ಆದರೆ ಸಾಕು ಹಾಗೂ ನಮ್ಮ ಕೈಗೆ ಬಂದರೆ ಸಾಕಾಗುತ್ತದೆ. ಆದರೆ ಇದರ ಪರಿಣಾಮ ನಮಗೆ ಆಗ ತಿಳಿಯುವುದಿಲ್ಲ.

ಇಂತಹ ಕೆಲವು ಸಣ್ಣ ಪುಟ್ಟ ಲೋಪ ದೋಷಗಳ ಕಾರಣದಿಂದಾಗಿ ಹಲವು ಸಮಸ್ಯೆಗಳನ್ನು ಹಾಗೂ ಹಲವು ಕಾನೂನು ರೀತಿಯ ಕ್ರಮಗಳನ್ನು ಮುಂದೆ ಎದುರಿಸಬೇಕಾಗುವುದು. ಈ ಕ್ರಯಪತ್ರ ಗಳಿಂದ ಒಂದು ರಕ್ಷಣಾತ್ಮಕ ಷರತ್ತುಗಳು ಹಾಗೂ ನಿಬಂಧನೆಗಳ ಕೊರತೆಯಿಂದಾಗಿ ಮಾರಾಟವಾದ ಆಸ್ತಿಗಳು ಹಕ್ಕುಗಳನ್ನು ಕಳೆದುಕೊಳ್ಳ ಬೇಕಾಗುವುದು. ಆಸ್ತಿ ವ್ಯವಹಾರ ಮಾಡುವಾಗ ನಮಗೆ ಅನುಕೂಲ ಎನ್ನಿಸದ ಕ್ಲಾಸ್ ಗಳ ಬಳಿ ಆಸ್ತಿ ರಜಿಸ್ಟ್ರೇಶನ್ ಮಾಡಿಸಬಾರದು. ಅದರ ಬದಲು ನಗರ ಸಭೆ ಆಡಳಿತ ಮಂಡಳಿಯ ನಿಯಮಗಳು ಹಾಗೂ ಸರ್ಕಾರದ ನಾಯನ ಕಾಯ್ದೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಕ್ರಯ ಪತ್ರಗಳನ್ನು ತಯಾರಿಸಬೇಕಾಗುತ್ತದೆ.

ಕೊಳ್ಳುತ್ತಿರುವ ಅಂತಹ ಪ್ರಾಪರ್ಟಿ ಯಾವ ಏರಿಯಾದಲ್ಲಿ ಬರಬಹುದು ರೂರಲ್ ಏರಿಯಾ, ಅರ್ಬನ್ ಅಥವಾ ಇಂಡಸ್ಟ್ರಿಯಲ್ ಏರಿಯಾಗಳಲ್ಲಿ ಬರುವುದು ಎನ್ನುವುದನ್ನು ಮೊದಲು ತಿಳಿದುಕೊಳ್ಳಬೇಕಾಗುತ್ತದೆ. ನಿವೇಶನ ಅಥವಾ ಮನೆಯನ್ನು ಅಥವಾ ಜಮೀನನ್ನು ಕೊಂಡುಕೊಳ್ಳುವ ದೃಷ್ಟಿಯಿಂದ ಇದು ಬಹಳ ಮುಖ್ಯವಾಗಿರುತ್ತದೆ. ಹಾಗೆ ಕ್ರಯಪತ್ರ ಅಥವಾ ಸೇಲ್ ಡೀಡ್ ತಯಾರಿಸುವ ಸಂದರ್ಭದಲ್ಲಿ ಯಾವ ಪ್ರಾಪರ್ಟಿಯನ್ನು ನೀವು ಖರೀದಿಸಲು ಇಷ್ಟಪಡುತ್ತೀರೋ ಅದರ ಮಾಲಿಕತ್ವದ ಹಕ್ಕುಪತ್ರಗಳನ್ನು ಹಾಗೂ ಅದರ ಮೂಲ ದಾಖಲಾತಿಗಳನ್ನು ಅದಕ್ಕೆ ಸಂಬಂಧಪಟ್ಟ ಇತರೆ ದಾಖಲಾತಿಗಳನ್ನು ಆಸ್ತಿಯ ಕಾನೂನಿನಲ್ಲಿ ಪರಿಣಿತಿ ಪಡೆದಿರುವ ವಕೀಲರಿಂದ ಪರೀಕ್ಷೆಗೆ ಒಳಪಡಿಸಿ ಅವರ ಅಭಿಪ್ರಾಯವನ್ನು ಪಡೆದು ಮುಂದುವರೆಯುವುದು ಯಾವಾಗಲೂ ಕ್ಷೇಮ. ಕಾರಣ ಆಸ್ತಿ ಅಥವಾ ಪ್ರಾಪರ್ಟಿಯನ್ನು ಪಡೆದುಕೊಳ್ಳುವುದು ಮಾತ್ರಅಲ್ಲದೆ ಆಸ್ತಿಯನ್ನು ಮಾರಾಟ ಮಾಡುವಂತಹ ವ್ಯಕ್ತಿಗೆ ಆಸ್ತಿಯನ್ನು ಮಾರಾಟ ಮಾಡುವ ಹಕ್ಕು ಮತ್ತು ಅಧಿಕಾರ ಇದೆಯೋ ಇಲ್ಲವೋ ಎನ್ನುವುದನ್ನು ಕೂಡ ಮೂಲದಾಖಲಾತಿಗಳ ಮೂಲಕ ಪರಿಶೀಲನೆ ಮಾಡಿಕೊಳ್ಳಬೇಕು.

ಹಾಗೆಯೇ ಇನ್ನೂ ಆಸ್ತಿಗೆ ಸಂಬಂಧಪಟ್ಟ ಕಾನೂನಿನಲ್ಲಿ ಪರಿಣಿತಿ ಪಡೆದ ಕಾನೂನು ತಜ್ಞರಿಂದ ಮಾತ್ರ ಸಾಧ್ಯವಾಗುವುದು. ಇಲ್ಲಿ ನಾವು ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಸಾಮಾನ್ಯವಾಗಿ ಒಬ್ಬ ವ್ಯಕ್ತಿ ನಮಗೆ ಗೊತ್ತಿಲ್ಲದೆ ತನ್ನ ಆಸ್ತಿಯನ್ನು ಇನ್ನೊಬ್ಬ ವ್ಯಕ್ತಿಗೆ ನೀಡಿದ್ದರೆ ಖುದ್ದಾಗಿ ನಾವೇ ಸಬ್ ರಿಜಿಸ್ಟರ್ ಆಫೀಸ್ ನಲ್ಲಿ ಋಣಭಾರ ರಹಿತ ಪತ್ರ ಇದಕ್ಕೆ ಅಪ್ಲೈ ಮಾಡಿ ತೆಗೆದುಕೊಂಡರೆ ಇದರ ಮೂಲಕ ನಾವು ಆಸ್ತಿ ಮೊದಲೇ ಮಾರಾಟ ಆಗಿದೆಯೋ ಅಥವಾ ಇಲ್ಲವೋ ಎನ್ನುವುದನ್ನು ತಿಳಿದುಕೊಳ್ಳಬಹುದು. ಅಷ್ಟೇ ಅಲ್ಲದೆ ಆಸ್ತಿಯ ಹಿನ್ನೆಲೆಯನ್ನು ಕೂಡ ನಾವು ತಿಳಿದುಕೊಳ್ಳಬಹುದು. ಇವನ್ನೆಲ್ಲ ಕೇವಲ ಆಸ್ತಿಯನ್ನು ಕೊಂಡುಕೊಳ್ಳಲು ಮಾತ್ರವಲ್ಲದೆ ನಂತರದಲ್ಲಿ ಕಾನೂನು ರೀತಿಯ ಕ್ರಮಗಳನ್ನು ಎದುರಿಸಲು ಅಥವಾ ಆಸ್ತಿಯನ್ನು ಕಳೆದುಕೊಳ್ಳುವಂತಹ ಸಂದರ್ಭಗಳಿಗೆ ಅನುವು ಮಾಡಿಕೊಡದೇ ಇರಲು ಈ ರೀತಿಯ ಕ್ರಮಗಳನ್ನು ಅನುಸರಿಸುವುದು ಒಳ್ಳೆಯದು. ಹಾಗಾಗಿ ನುರಿತ ಕಾನೂನು ತಜ್ಞರ ಅಭಿಪ್ರಾಯವನ್ನು ಪಡೆದುಕೊಂಡು ಮುಂದುವರಿಯುವುದು ಬಹಳ ಒಳ್ಳೆಯದು.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: