WhatsApp Group Join Now
Telegram Group Join Now

ಇತ್ತೀಚಿನ ಆಹಾರ ಪದ್ಧತಿಯಿಂದ ನಮ್ಮ ಹಲ್ಲುಗಳು ಬೇಗನೆ ಹಾಳಾಗುತ್ತಿದೆ. ಹಲ್ಲು ನೋವು, ಹಳದಿಗಟ್ಟಿದ ಹಲ್ಲು, ಬಾಯಿಯ ದುರ್ವಾಸನೆ ಇತ್ಯಾದಿ ಸಮಸ್ಯೆಗಳು ಸಾಮಾನ್ಯವಾಗಿದೆ. ಹಲ್ಲಿನ ಹಲವು ಸಮಸ್ಯೆಗೆ ಒಂದು ಉತ್ತಮ ಮನೆ ಮದ್ದಿದೆ ಅದನ್ನು ತಯಾರಿಸುವ ವಿಧಾನ ಹಾಗೂ ಅದರ ಪ್ರಯೋಜನದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಇತ್ತೀಚಿನ ದಿನಗಳಲ್ಲಿ ಕಾಫಿ, ಟಿ, ಜರದಾ, ಪಾನ್ ತಿನ್ನುವುದು ಹೆಚ್ಚಾಗಿದೆ ಇದರಿಂದ ಹಲ್ಲುಗಳು, ವಸಡುಗಳು ಹಾಳಾಗುತ್ತದೆ ಅಲ್ಲದೆ ಪ್ರತಿದಿನ ಬ್ರಶ್ ಮಾಡಿದರೂ ಸಹ ಕೆಲವರ ಹಲ್ಲಿನಲ್ಲಿ ಹಳದಿ ಬಣ್ಣ ಹಾಗೆಯೆ ಇರುತ್ತದೆ. ಹಳದಿಗಟ್ಟಿದ ಹಲ್ಲುಗಳಿಂದ ಜನರ ಮುಂದೆ ಮಾತನಾಡಲು ಹಿಂಸೆ ಆಗುತ್ತದೆ. ಹಳದಿಗಟ್ಟಿದ ಹಲ್ಲುಗಳನ್ನು ಬಿಳಿಯಾಗಿಸಲು ಮನೆ ಮದ್ದಿದೆ.

ಮನೆ ಮದ್ದು ತಯಾರಿಸಲು ಬೇಕಾಗುವ ಸಾಮಗ್ರಿಗಳು ಅರಿಶಿಣ, ಉಪ್ಪು, ಬೇಕಿಂಗ್ ಸೋಡಾ, ನೀರು. ಮೊದಲು ಒಂದು ಬೌಲ್ ನಲ್ಲಿ ಅರ್ಧ ಚಮಚ ಅರಿಶಿಣ ಹಾಕಿ ಅರಿಶಿಣ ಹಲ್ಲಿನಲ್ಲಿರುವ ಬ್ಯಾಕ್ಟೀರಿಯಾವನ್ನು ತೆಗೆದುಹಾಕಿ ಬಾಯಿಯಿಂದ ಬರುವ ದುರ್ವಾಸನೆಯನ್ನು ಕಡಿಮೆ ಮಾಡುತ್ತದೆ. ಅದಕ್ಕೆ ಅರ್ಧ ಚಮಚ ಉಪ್ಪು ಸೇರಿಸಬೇಕು ಉಪ್ಪು ಹಲ್ಲು ಪಳ ಪಳ ಹೊಳೆಯಲು ಹಾಗೂ ವಸಡಿನ ಆರೋಗ್ಯಕ್ಕೆ ಸಹಾಯಕಾರಿ. ಉಪ್ಪು ಹಲ್ಲಿನಲ್ಲಿರುವ ಬ್ಯಾಕ್ಟೀರಿಯಾವನ್ನು ನಾಶಪಡಿಸಿ ಹಲ್ಲಿನ ಆರೋಗ್ಯವನ್ನು ಕಾಪಾಡುತ್ತದೆ. ಅದಕ್ಕೆ ಒಂದು ಚಿಟಿಕೆ ಅಡುಗೆಗೆ ಬಳಸುವ ಬೇಕಿಂಗ್ ಸೋಡಾ ಹಾಕಿ ಚೆನ್ನಾಗಿ ಮಿಕ್ಸ್ ಮಾಡಬೇಕು.

ಬೇಕಿಂಗ್ ಸೋಡಾ ನಮ್ಮ ಹಲ್ಲುಗಳನ್ನು ಶುದ್ಧ ಮಾಡಿ ಹಲ್ಲುಗಳ ಮೇಲಿರುವ ಕಲೆಗಳನ್ನು ಹೋಗಲಾಡಿಸುತ್ತದೆ ಇದನ್ನು ಒಂದು ಡಬ್ಬಿಯಲ್ಲಿ ಹಾಕಿ ಪ್ರತಿದಿನ ಬಳಸಬಹುದು. ಮಿಕ್ಸ್ ಮಾಡಿದ ಮಿಶ್ರಣಕ್ಕೆ ಸ್ವಲ್ಪ ನೀರನ್ನು ಪೇಸ್ಟ್ ರೀತಿ ಮಾಡಿಕೊಂಡು ಬ್ರಶ್ ಸಹಾಯದಿಂದ ಹಲ್ಲುಗಳಿಗೆ ಉಜ್ಜುವುದರಿಂದ ಕೇವಲ ಎರಡು ನಿಮಿಷಗಳಲ್ಲಿ ಹಲ್ಲು ಬೆಳ್ಳಗಾಗುತ್ತದೆ. ಬಾಯಿಯಿಂದ ಬರುವ ದುರ್ವಾಸನೆ ಹೋಗಲಾಡಿಸಲು, ಹಳದಿಗಟ್ಟಿದ ಹಲ್ಲು ಬಿಳಿಯಾಗಲು, ವಸಡಿನ ಆರೋಗ್ಯಕ್ಕಾಗಿ ಈ ಮನೆ ಮದ್ದನ್ನು ಪಾಲಿಸಬೇಕು. ಈ ಮನೆಮದ್ದನ್ನು ವಾರದಲ್ಲಿ 3-4 ಬಾರಿ ಬಳಸಬೇಕು. ಇದರಿಂದ ಹಲ್ಲು ಆರೋಗ್ಯವಾಗಿ ಬೆಳ್ಳಗೆ ಕಾಣಿಸುತ್ತದೆ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: