WhatsApp Group Join Now
Telegram Group Join Now

ಕೂದಲು ತುಂಬಾ ಉದುರುವುದಕ್ಕೆ ಶುರುವಾಗಿದೆಯಾ ಇನ್ನೂ ತಡಮಾಡಬೇಡಿ ಇದನ್ನು ಹಚ್ಚಿ ತಕ್ಷಣ ಉದುರುವುದು ಕಡಿಮೆಯಾಗುತ್ತದೆ. ತಲೆ ಕೂದಲು ಉದುರುವ ಸಮಸ್ಯೆ ಎಲ್ಲರಲ್ಲೂ ಸರ್ವೆ ಸಾಮನ್ಯ, ನಮ್ಮ ಈಗಿನ ಆಹಾರ, ವಿಹಾರ ಜೀವನ ಶೈಲಿ ಎಲ್ಲವೂ ಸಹ ನಮ್ಮ ತಲೆಕೂದಲು ಉದುರಲು ಪ್ರಮುಖ ಕಾರಣ ಎನ್ನಬಹುದು. ಕೆಲವರಿಗಂತೂ ತುಂಬಾ ಚಿಕ್ಕ ಪ್ರಾಯದಲ್ಲಿಯೇ  ಬಕ್ಕ ತಲೆಯ ಸಮಸ್ಯೆ ಕಂಡು ಬರುತ್ತದೆ. ಕೂದಲು ಉದುರುವಿಕೆಗೆ ಹಲವಾರು ಕಾರಣವಾಗಿರಬಹುದು. ಕೂದಲು ಉದುರುವಿಕೆಗೆ ಡಯಾಬಿಟೀಸ್, ಪೌಷ್ಟಿಕಾಂಶದ ಕೊರತೆ, ವಿಟಮಿನ್ ಡಿ ಕೊರತೆ ಅಥಾವ ಹೆರಿಡಿಟರಿ ಕೂಡ ಕಾರಣ ಆಗಿರಬಹುದು. ಮನೆಯಿಂದ ಹೊರ ಹೋದಾಗ ವಾತಾವರಣದ ಪರಿಣಾಮ ಅತಿ ಹೆಚ್ಚು ಬೀಳುವುದು ನಮ್ಮ ತಲೆ ಕೂದಲಿಗೆ.

ನಿತ್ಯವೂ ಗಾಳಿಯಲ್ಲಿನ ಪ್ರದೂಷಣೆ, ಧೂಳು, ಪರಾಗಗಳು, ಎಣ್ಣೆಅಂಶ, ಹೊಗೆ ಮೊದಲಾದವು ಕೂದಲಿಗೆ ಸುಲಭವಾಗಿ ಅಂಟಿಕೊಳ್ಳುತ್ತವೆ ಹಾಗೂ ಇವುಗಳ ಪರಿಣಾಮದಿಂದ ಕೂದಲು ಶಿಥಿಲವಾಗಿ ಸುಲಭವಾಗಿ ತುಂಡಾಗುವಂತಾಗುತ್ತದೆ. ತಲೆ ಕೂದಲು ಉದುರದ ಹಾಗೇ ಕಪ್ಪಾಗಿ ದಟ್ಟವಾಗಿ ಉದ್ದವಾಗಿ ಕೂದಲು ಬೆಳೆಯಲು ನಾವು ಸುಲಭವಾಗಿ ಮನೆಯಲ್ಲಿಯೇ ಯಾವ ರೀತಿ ಉಪಚಾರ  ಮಾಡಿಕೊಳ್ಳಬಹುದು ಎನ್ನುವುದನ್ನು ತಿಳಿದುಕೊಳ್ಳೋಣ.

ತಲೆ ಕೂದಲು ಬೆಳವಣಿಗೆಗೆ ಉತ್ತಮ ಪರಿಹಾರ ಅಂದರೆ ಕರಿ ಬೇವಿನ ಎಣ್ಣೆ. ನಮಗೆ ಇದನ್ನು ತಯಾರು ಮಾಡಲು ಮುಖ್ಯವಾಗಿ ಬೇಕಿರುವುದು ಕರಿಬೇವಿನ ಎಲೆ ಮತ್ತು ಮೆಂತೆ ಕಾಳು, ಕೊಬ್ಬರಿ ಎಣ್ಣೆ, ಹಸಿ ಶುಂಠಿ,ವೀಳ್ಯದೆಲೆ ಇವುದರಲ್ಲಿ ಔಷಧಿಯ ಗುಣಗಳು ಹೇರಳವಾಗಿ ಇರುತ್ತವೆ. ಒಂದು ಬೌಲ್ ಅಷ್ಟು ಕರಿ ಬೇವಿನ ಸೊಪ್ಪು ಎರಡು ಟೀ ಸ್ಪೂನ್ ಮೆಂತೆ ಕಾಳು ಹಸಿ ಶುಂಠಿ ಹಾಗೂ ಶುದ್ಧವಾದ ಕೊಬ್ಬರಿ ಎಣ್ಣೆ ಮತ್ತು ವೀಳ್ಯದೆಲೆ.

ಒಂದು  ಪಾತ್ರೆಗೆಗೆ ಮೊದಲು ಒಂದು ಗ್ಲಾಸ್ ಅಷ್ಟು ಕೊಬ್ಬರಿ ಎಣ್ಣೆ ಹಾಕಿ ಅದಕ್ಕೆ ಒಂದು ಅಥಾವ ಎರಡು ಹಿಡಿಯಷ್ಟು ಕರಿ ಬೇವಿನ ಸೊಪ್ಪು ಮತ್ತು ಒಂದು ಮೆಂತೆ ಕಾಳು,ಅರ್ಧ ಇಂಚು ಹಸಿ ಶುಂಠಿ ಹಾಕಿ ಮತ್ತು ಒಂದು ಅಥವಾ ಎರಡು ವೀಳ್ಯದೆಲೆ ಕತ್ತರಿಸಿ ಹಾಕಿ. ಇದನ್ನು ಲೈಟ್ ಆಗಿ ಎಣ್ಣೆಯಲ್ಲಿ ಕಡಿಮೆ ಉರಿಯಲ್ಲಿ ಇಟ್ಟು, ಫ್ರೈ ಮಾಡಿ ಆರಿದ ನಂತರ ಒಂದು ಗಾಜಿನ ಬಾಟಲ್ ಗೆ ಹಾಕಿಕೊಳ್ಳಿ. ಈ ಬಾಟಲ್ ಅನ್ನು ತಿಂಗಳಿಗೆ ಹತ್ತು ಸಲವಾದರು ಬಿಸಿಲಲ್ಲಿ ಇಡಬೇಕು. ಇದನ್ನು ಹಚ್ಚುವುದರಿಂದ ತಲೆ ಕೂದಲು ಸದೃಢವಾಗಿ, ದಟ್ಟವಾಗಿ ಬೆಳೆಯುತ್ತವೆ ಮತ್ತು ಕೂದಲು ಉದುರುವುದು ಕಡಿಮೆಯಾಗುತ್ತದೆ

ಲೊಳೆಸರವೂ ನೆತ್ತಿಯ ಚರ್ಮದ ಆರೋಗ್ಯ ಮತ್ತು ಕೂದಲಿನ ಮರು ಬೆಳೆವಣಿಗೆಗೆ ಸಹಾಯ ಮಾಡುತ್ತದೆ. ಲೊಳೆಸರದ ರಸವನ್ನು ಹಚ್ಚಿ ಒಂದು ಗಂಟೆ ಬಿಟ್ಟು ತಲೆ ಸ್ನಾನ ಮಾಡುವುದರಿಂದ ಕೂದಲು ಉದುರುವಿಕೆಯಿಂದ ಪರಿಹಾರ ಲಭಿಸುತ್ತದೆ. ವಾರದಲ್ಲಿ ಮೂರು ನಾಲ್ಕು ದಿನ ಇದನ್ನು ಹಚ್ಚಿಕೊಳ್ಳಬಹುದು. ಅಥವಾ ಮೆಂತೆ ಕಾಳನ್ನು ರಾತ್ರಿ ನೀರಿನಲ್ಲಿ ಹಾಕಿ ಬೆಳಗ್ಗೆ ರುಬ್ಬಿಕೊಂಡು ತಲೆಗೆ ಹಚ್ಚಬೇಕು. 30 ನಿಮಿಷದ ಆನಂತರ ಶ್ಯಾಂಪೂ ಸಾಬೂನು ಬಳಸದೆ ತಲೆ ಸ್ನಾನ ಮಾಡಬೇಕು. ವಾರದಲ್ಲಿ 2 ಬಾರಿ ಈ ರೀತಿ ಮಾಡಿದರೆ ಉತ್ತಮ. ಮೆಂತೆಯಲ್ಲಿರುವ ನಿಕೋಟಿನಿಕ್ ಆಮ್ಲವು ಕೂದಲು ಉದುರುವಿಕೆ ಕಡಿಮೆ ಮಾಡುತ್ತದೆ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: