ನಿಂಬೆ ಅಡುಗೆಯ ರುಚಿಗೆ ಅಷ್ಟೇ ಅಲ್ಲ ಇದರ ಔಷಧಿ ಗುಣಗಳು ಎಷ್ಟೊಂದಿವೆ ನೋಡಿ

0

ನಿಂಬೆಹಣ್ಣು ಇದು ತರಕಾರಿಗಳಲ್ಲಿ ಒಂದು. ಇದನ್ನು ಔಷಧಿಗೆ ಹೆಚ್ಚಾಗಿ ಬಳಸಲಾಗುತ್ತದೆ. ಹಾಗೆಯೇ ಇದು ಸಿಟ್ರಿಕ್ ಆಮ್ಲವನ್ನು ಹೊಂದಿರುತ್ತದೆ. ಇದರ ಕಾಯಿ ಹಸಿರು ಬಣ್ಣದಲ್ಲಿ ಇರುತ್ತದೆ. ನಂತರದಲ್ಲಿ ಇದು ಹಣ್ಣಾದ ಮೇಲೆ ಹಳದಿ ಬಣ್ಣವನ್ನು ಹೊಂದುತ್ತದೆ. ಆಹಾರಕ್ಕಲ್ಲದಿದ್ದರೂ ಹೆಚ್ಚಾಗಿ ಎಲ್ಲರ ಮನೆಯಲ್ಲೂ ಇದನ್ನು ಔಷಧಿಗಾಗಿ ಬಳಸಲಾಗುತ್ತದೆ. ಹಾಗೆಯೇ ಇದನ್ನು ಅನೇಕ ದಿನಗಳವರೆಗೆ ಬಳಸಬಹುದು. ಇದು ಬೇಗನೆ ಹಾಳಾಗುವುದಿಲ್ಲ. ಆದ್ದರಿಂದ ನಾವು ಇಲ್ಲಿ ನಿಂಬೆಹಣ್ಣಿನ ಔಷಧೀಯ ಗುಣಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಇದನ್ನು ನಮ್ಮ ದಿನನಿತ್ಯದ ಆಹಾರದಲ್ಲಿ ಬಳಸಲಾಗುತ್ತದೆ. ಇದರಲ್ಲಿ ಹಣ್ಣಿನ ಬೀಜವನ್ನು ತೆಗೆದು ಮಣ್ಣಿಗೆ ಹಾಕಿದರೆ ಗಿಡ ಆಗುತ್ತದೆ. ನಂತರದಲ್ಲಿ ಇದಕ್ಕೆ ಸ್ವಲ್ಪ ಮಣ್ಣು ಮತ್ತು ನೀರು ಮತ್ತು ಗೊಬ್ಬರ ಹಾಕಿದರೆ ಮನೆಯಲ್ಲಿ ಇದನ್ನು ಸುಲಭವಾಗಿ ಬೆಳೆಯಬಹುದು. ಹಾಗೆಯೇ ದುಡ್ಡು ಕೊಟ್ಟು ನಿಂಬೆಹಣ್ಣನ್ನು ತರುವ ಅವಶ್ಯಕತೆ ಇರುವುದಿಲ್ಲ. ಇದರಿಂದ ಯಾವಾಗ ಬೇಕಾದರೂ ತಾಜಾ ಆಗಿ ಮನೆಯಲ್ಲಿಯೇ ಸಿಗುತ್ತದೆ.ಹಾಗೆಯೇ ಇದನ್ನು ಶುಭ ಸಮಾರಂಭದಲ್ಲಿ ಬಳಸಲಾಗುತ್ತದೆ. ಹಾಗೆಯೇ ಈ ಸಸ್ಯದ ಎಲೆಯಲ್ಲಿಯೂ ಸಹ ನಿಂಬೆಹಣ್ಣಿನ ಸುವಾಸನೆ ಇರುತ್ತದೆ. ಈ ಎಲೆಗಳನ್ನು ಕೊಯ್ದು ಚೆನ್ನಾಗಿ ಹುರಿದು ಹಳ್ಳಿಯ ಕಡೆ ತಂಬುಳಿಯನ್ನು ಮಾಡಲಾಗುತ್ತದೆ.

ಹಾಗೆಯೇ ನಿಂಬೆಹಣ್ಣು ಹಸಿವನ್ನು ಹೆಚ್ಚಿಸುತ್ತದೆ. ದೇಹದಲ್ಲಿ ರಕ್ತದ ಪ್ರಮಾಣವನ್ನು ಹೆಚ್ಚಿಗೆ ಮಾಡುತ್ತದೆ. ನಿಂಬೆರಸ ಮತ್ತು ಜೇನುತುಪ್ಪವನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡುವುದರಿಂದ ಇದು ದೇಹದಲ್ಲಿ ಇರುವ ಅನಗತ್ಯ ಕೊಬ್ಬನ್ನು ಕರಗಿಸುತ್ತದೆ. ನಿಂಬೆರಸ ಮತ್ತು ಜೇನುತುಪ್ಪದ ನಿಯಮಿತ ಸೇವನೆಯಿಂದ ದೇಹದಲ್ಲಿ ರಕ್ತ ಹೆಚ್ಚಾಗುತ್ತದೆ. ಸ್ನಾನದ ಕೊನೆಯಲ್ಲಿ ಒಂದೆರಡು ಹನಿ ನಿಂಬೆರಸವನ್ನು ನೀರಿಗೆ ಹಾಕಿ ತಲೆಯನ್ನು ತೊಳೆದುಕೊಳ್ಳಬೇಕು. ಇದರಿಂದ ಕೂದಲಿನ ಹೊಳಪು ಬಹಳ ಕಾಲದವರೆಗೆ ಇರುತ್ತದೆ. ಹಾಗೆಯೇ ಒಂದು ಚಮಚ ನಿಂಬೆರಸಕ್ಕೆ ಒಂದು ಚಮಚ ಹಾಲಿನ ಕೆನೆ ಸೇರಿಸಿ ಮುಖಕ್ಕೆ ಹಚ್ಚಬೇಕು.

ಇದರಿಂದ ಚರ್ಮದ ಕಾಂತಿ ಹೆಚ್ಚುತ್ತದೆ. ಹಾಗೆಯೇ ನಿಂಬೆಹಣ್ಣಿನ ರಸಕ್ಕೆ ನೀರು ಮತ್ತು ಸಕ್ಕರೆ ಹಾಕಬೇಕು. ಅದಕ್ಕೆ ಲವಂಗ ಮತ್ತು ಏಲಕ್ಕಿ ಪುಡಿಯನ್ನು ಸೇರಿಸಬೇಕು. ಕೊನೆಯದಾಗಿ ನೀರನ್ನು ಸೇರಿಸಿ ಚೆನ್ನಾಗಿ ಕದಡಿ ಕುಡಿಯುವುದರಿಂದ ಬಾಯಾರಿಕೆ ಕಡಿಮೆಯಾಗುತ್ತದೆ. ಹಾಗೆಯೇ ಹಸಿವು ಉಂಟಾಗಿ ಬಾಯಿರುಚಿ ಹೆಚ್ಚುತ್ತದೆ. ನಿಂಬೆರಸಕ್ಕೆ ಸಕ್ಕರೆಯನ್ನು ಹಾಕಿ ಕದಡಿ ಹೆಚ್ಚು ಕೂದಲು ಇರುವ ಜಾಗದಲ್ಲಿ ಹಚ್ಚಿದರೆ ಹೆಚ್ಚು ಕೂದಲು ನಾಶವಾಗುತ್ತದೆ. ಕೊನೆಯದಾಗಿ ಹೇಳುವುದೇನೆಂದರೆ ಸೌಂದರ್ಯ ವರ್ಧನೆಯಿಂದ ಹಿಡಿದು ಬಾಯಾರಿಕೆಯವರೆಗೂ ಇದು ಉಪಯುಕ್ತ ಎಂದು ಹೇಳಬಹುದು.

Leave A Reply

Your email address will not be published.

error: Content is protected !!
Footer code: