ಹಿಂದಿನ ಕಾಲದಲ್ಲಿ ನುಗ್ಗೆ ಸೊಪ್ಪನ್ನು ಹೆಚ್ಚಾಗಿ ಬಳಸುತ್ತಿದ್ದರು ಆದರೆ ಈಗ ಕಡಿಮೆಯಾತ್ತ ಬರುತ್ತಿದೆ ನುಗ್ಗೆ ಕಾಯಿ ಬೀಜ ಹೂವು ಎಲ್ಲವೂ ಅನೇಕ ಪ್ರಯೋಜನವನ್ನು ಒಳಗೊಂಡಿದೆ ನುಗ್ಗೆ ಸೊಪ್ಪು ಪಾಲಕ್ ಸೊಪ್ಪಿಗಿಂತಲೂ ಆರರಷ್ಟು ಹೆಚ್ಚು ಕಬ್ಬಿಣದ ಅಂಶವನ್ನು ಹೊಂದಿದೆ ಇದು ದೇಹದಲ್ಲಿ ಕೆಂಪು ರಕ್ತ ಕಣಗಳನ್ನು ಹೆಚ್ಚಿಸಲು ಸಹಕಾರಿಯಾಗಿದೆ. ಆದ್ದರಿಂದ ಇದು ರಕ್ತಹೀನತೆಯನ್ನು ನಿವಾರಣೆ ಮಾಡುತ್ತದೆ

ಎರಡು ಚಮಚ ನುಗ್ಗೆ ಸೊಪ್ಪಿನ ರಸವನ್ನು ಒಂದು ಲೋಟ ಬಿಸಿ ಹಾಲಿಗೆ ಸೇರಿಸಿ ರಾತ್ರೆ ಮಲಗುವ ಮೊದಲು ಕುಡಿಯುವುದರಿಂದ ರಕ್ತ ಕೂಡ ಶುದ್ಧಿಯಾಗುತ್ತದೆ ನುಗ್ಗೆ ಸೊಪ್ಪಿನ ಎಲೆಗಳನ್ನ ನೀರಿನಲ್ಲಿ ಹಾಕಿ ಕಿವುಚಿ ಆ ನೀರನ್ನು ತಲೆಗೆ ಹಾಕಿಕೊಂಡು ಮೂವತ್ತು ನಿಮಿಷಗಳ ಬಳಿಕ ತಲೆ ಸ್ನಾನ ಮಾಡುವುದರಿಂದ ಕೂದಲಿನ ಸಮಸ್ಯೆ ದೂರವಾಗಿ ಆರೋಗ್ಯಕರ ಕೊಡಲು ನಮ್ಮದಾಗುತ್ತದೆ.ನಾವು ಈ ಲೇಖನದ ಮೂಲಕ ನುಗ್ಗೆ ಸೊಪ್ಪಿನ ಉಪಯೋಗವನ್ನು ತಿಳಿದುಕೊಳ್ಳೋಣ.

ಹಿಂದಿನ ಕಾಲದಲ್ಲಿ ನುಗ್ಗೆ ಸೊಪ್ಪನ್ನು ಹೆಚ್ಚಾಗಿ ಬಳಸುತ್ತಿದ್ದರು ಆದರೆ ಈಗ ಕಡಿಮೆಯಾಗುತ್ತ ಬರುತ್ತಿದೆನುಗ್ಗೆ ಸೊಪ್ಪಿನ ಕ್ಯಾಲ್ಸಿಯಂ ಕಬ್ಬಿಣಾಂಶ ವಿಟಮಿನ್ ಎಬಿ ರಂಜಕ ಕೂಡ ಹೆಚ್ಚಿರುತ್ತದೆ ನುಗ್ಗೆ ಮರ ಹತ್ತರಿಂದ ಹದಿನೈದು ಅಡಿ ಬೆಳೆಯುತ್ತದೆ ಪಿತ್ತ ಇದ್ದರು ಇದ್ದವರು ಬಿಸಿ ಹಾಲಿಗೆ ನುಗ್ಗೆ ಹೂವನ್ನು ಹಾಕಿ ಸ್ವಲ್ಪ ಹೊತ್ತು ಬಿಟ್ಟು ಆರಿದ ನಂತರ ಆ ಹಾಲನ್ನು ಕುಡಿಯುವ ಮೂಲಕ ಪಿತ್ತವನ್ನು ಕಡಿಮೆ ಮಾಡಿಕೊಳ್ಳಬಹುದು

ಪ್ರತಿದಿನ ನುಗ್ಗೆ ಸೊಪ್ಪನ್ನು ಊಟದಲ್ಲಿ ಬಳಸಿದರೆ ನರದೌರ್ಬಲ್ಯ ಕಡಿಮೆಯಾಗುತ್ತದೆ ಕೆಮ್ಮು ಸಹ ಕಡಿಮೆ ಆಗುತ್ತದೆ ಹಾಗೆಯೇ ನುಗ್ಗೆ ಸೊಪ್ಪಿನ ರಸವನ್ನು ಸೇವಿಸುವ ಮೂಲಕ ಮಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ನುಗ್ಗೆ ಸೊಪ್ಪಿನ ರಸಕ್ಕೆ ನಿಂಬೆ ರಸ ಬೆರೆಸಿ ಲೇಪಿಸುವುದರಿಂದ ಮುಖದ ಕಾಂತಿ ಹೆಚ್ಚುತ್ತದೆ ಮುಖದ ಕಲೆಯು ಮಾಯವಾಗುತ್ತದೆ ಮೂಲವ್ಯಾಧಿ ಇದ್ದವರು ನುಗ್ಗೆ ಎಲೆ ಹಾಗೂ ಮೂಲಂಗಿಯ ಎಲೆಯನ್ನು ಚೆನ್ನಾಗಿ ಅರೆದು ಮೂಲವ್ಯಾಧಿ ಮೊಳಕೆಯ ಮೇಲೆ ಹಚ್ಚುದರಿಂದ ಮೊಳಕೆಗಳು ಕಡಿಮೆ ಆಗುತ್ತದೆ .

ಜಂತು ಹುಳು ಆಗಿದ್ದರೆ ನುಗ್ಗೆ ಬೀಜಗಳ ಚೂರ್ಣವನ್ನು ಒಂದೊಂದು ಗ್ರಾಮ ಸೇವನೆ ಮಾಡುವುದರಿಂದ ಜಂತುಹುಳು ತೊಂದರೆ ನಿವಾರಣೆಯಾಗುತ್ತದೆ ಕೆಲವರಿಗೆ ಗಂಟಲಲ್ಲಿ ಗಡ್ಡೆಗಳಾಗಿರುತ್ತದೆ ಅಂಥವರು ನುಗ್ಗೆ ಕಾಯಿ ಬೀಜ ಹಾಗೂ ಮೂಲಂಗಿ ಬೀಜವನ್ನು ಎಮ್ಮೆಯ ಮಜ್ಜಿಗೆಯಲ್ಲಿ ಸೇರಿಸಿ ಗಡ್ಡೆಗಳಾದ ಜಾಗಗಳಿಗೆ ಹಚ್ಚಬೇಕು ಮೈ ನೇವೆ ಆದವರು ನುಗ್ಗೆ ಮರದ ಬೇರನ್ನು ತಂದು ಅರೆದು ತುರಿಕೆ ಅದ ಜಾಗದಲ್ಲಿ ಹಚ್ಚಬೇಕು ಕೆಲವೊಬ್ಬರಿಗೆ ಶೀತದಿಂದ ಬಂದ ತಲೆ ನೋವು ಬರುತ್ತದೆ ಅವರಿಗೆ ನುಗ್ಗೆ ಎಲೆಗಳನ್ನು ನೀರಿನಲ್ಲಿ ತೊಳೆದುನಂತರ ಅರೆದು ಎರಡು ಹನಿಯಷ್ಟು ಮೂಗಿನಲ್ಲಿ ಬಿಟ್ಟರೆ ತಲೆ ನೋವು ವಾಸಿಯಾಗುತ್ತದೆ.

ಕಿವಿ ನೋವು ಇದ್ದವರು ಒಣಗಿದ ನುಗ್ಗೆ ಕಾಯಿ ಬೀಜವನ್ನು ಜಜ್ಜಿ ರಸವನ್ನು ತೆಗೆಯಬೇಕು ಆ ರಸವನ್ನು ಬೆಚ್ಚಗೆ ಬಿಸಿ ಮಾಡಿ ಎರಡು ಅಥವಾ ನಾಲ್ಕು ಹನಿಗಳನ್ನು ಕಿವಿಯೊಳಗೆ ಹಾಕಬೇಕು ಇದರಿಂದ ಜೀವಿ ನೋವು ಕಡಿಮೆ ಆಗುತ್ತದೆ ಮೂಳೆಗಳು ಮುರಿದರೆ ಹಿಂದಿನ ಕಾಲದಲ್ಲಿ ನುಗ್ಗೆ ಸೊಪ್ಪನ್ನು ಅರೆದು ಅದರ ಒಳಗಡೆ ಸುಣ್ಣವನ್ನು ಮತ್ತು ಜೇನನನ್ನು ಬೆರೆಸಿ ಕಟ್ಟುತ್ತಿದ್ದರು ಇರುಳುಗಣ್ಣು ರೋಗವನ್ನು ವಾಸಿಮಾಡುವ ಗುಣವಿದೆ ಹೀಗೆ ನುಗ್ಗೆ ಕಾಯಿ ಬೀಜ ಹೂವು ಎಲ್ಲವೂ ಅನೇಕ ಪ್ರಯೋಜನವನ್ನು ಒಳಗೊಂಡಿದೆ.

By admin

Leave a Reply

Your email address will not be published. Required fields are marked *

error: Content is protected !!
Footer code: