WhatsApp Group Join Now
Telegram Group Join Now

ಇತ್ತೀಚಿನ ದಿನಗಳಲ್ಲಿ ನರಗಳ ಬಲಹೀನತೆ ನರಗಳ ದೌರ್ಬಲ್ಯತೆ ಸಮಸ್ಯೆ ಯಿಂದ ಬಹಳಷ್ಟು ಜನರು ಬಳಲುತ್ತಿದ್ದಾರೆ. ಕೈ ಕಾಲು ಜುಂ ಹಿಡಿಯುವುದು ಇದ್ದಕ್ಕಿದ್ದಂತೆ ಯಾವುದಾದರೂ ಜಗಳ ಅಥವಾ ಗಲಾಟೆ ನಡೆದಾಗ ಹೃದಯದ ಬಡಿತ ಹೆಚ್ಚಾಗುವುದು, ಚಿಕ್ಕ ಪುಟ್ಟ ಕೆಲಸ ಮಾಡಿದರು ಸುಸ್ತಾಗುವುದು ಭಾರರಹಿತ ವಸ್ತುಗಳನ್ನು ಎತ್ತಲಾಗದೆ ಬಳಲುವುದು ಇದು ನರ ಬಲಹೀನತೆಯ ಲಕ್ಷಣಗಳಾಗಿವೆ. ಈ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಾ ನರದೌರ್ಬಲ್ಯ ಇರುವ ವ್ಯಕ್ತಿಗಳಿಗೆ ಉಪಯೋಗ ಆಗುವಂತಹ ಸುಲಭ ಔಷೋಧೋಪಚಾರಗಳ ಕುರಿತು ನಾವು ಈ ಲೇಖನದಲ್ಲಿ ನೋಡೋಣ.

ಮನುಷ್ಯನ ಚಲನ ವಲನಗಳಿಗೆ ಬೆನ್ನೆಲುಬು ಹಾಗೂ ಮೆದುಳು ಎಷ್ಟು ಮೂಖ್ಯವೊ ಅದೇ ರೀತಿ ನರಗಳು ಕೂಡ ಅಷ್ಟೇ ಮೂಖ್ಯ ವಾಗಿರುತ್ತದೆ. ಮೆದುಳಿನಿಂದ ಬರುವ ಸಂಕೇತಗಳು ನರಗಳಿಂದ ಖಂಡಗಳಿಗೆ ಹೋಗಿ ನಂತರ ಚಾಲನೆ ಸಿಗುತ್ತದೆ. ಯಾವಾಗ ನರಗಳು ದೌರ್ಬಲ್ಯವಾಗುತ್ತದೆಯೋ ಆಗ ಸ್ಪರ್ಶ ಇಲ್ಲದಂತೆ ಆಗುವುದು, ಕೈ ಕಾಲುಗಳ ಚಲನೆ ಇಲ್ಲದಂತೆ ಆಗುವುದು, ನಡೆಯುವುದಕ್ಕೆ ಆಗದೆ ಇರುವುದು. ಇವು ನರ ಸಂಬಂಧಿ ರೋಗದ ಲಕ್ಷಣಗಳಾಗಿವೆ. ಸಾಧಾರಣವಾಗಿ ಈ ಲಕ್ಷಣಗಳನ್ನು ಸಕ್ಕರೆ ಕಾಯಿಲೆ ಅಂದರೆ ಮಧುಮೇಹದಿಂದ ಬಳಲುತ್ತಿರುವಂತಹ ವ್ಯಕ್ತಿಗಳಲ್ಲಿ ಕೂಡ ಈ ರೀತಿಯ ನರದೌರ್ಬಲ್ಯ ಅತಿಯಾಗಿ ಕಂಡುಬರುತ್ತದೆ. ಅಷ್ಟೇ ಅಲ್ಲ ಪೂರ್ತಿ ಸಸ್ಯಹಾರಿ ಸೇವನೆ ಮಾಡುವವರಲ್ಲಿ ಬೇಗನೆ ನರಗಳು ದೌರ್ಬಲ್ಯಗೊಳ್ಳುತ್ತವೆ ಎಂದು ಹೇಳುತ್ತಾರೆ. ಕೆಲವರಿಗೆ ಮಾತ್ರೆಗಳಿಂದ ಪರಿಹಾರ ದೊರೆಯುವುದಿಲ್ಲ ಅಂಥವರು ಕ್ರಮ ತಪ್ಪದೇ ವ್ಯಾಯಾಮ ಮತ್ತು ಪ್ರಾಣಾಯಾಮವನ್ನು ಮಾಡಿದರೆ ಸಾಕು ಆಗ ಒಳ್ಳೆಯ ಫಲಿತಾಂಶಗಳನ್ನು ಕಾಣಬಹುದು.

ಇದರಿಂದ ನರಗಳಲ್ಲಿ ರಕ್ತದ ಹರಿತ ಉತ್ಪನ್ನ ವಾಗುತ್ತದೆ. ಸೂರ್ಯನ ಕಿರಣಗಳಲ್ಲಿ ವಿಟಮಿನ್ ಡಿ ಸಿಗುವ ಕಾರಣ ಸ್ವಲ್ಪ ಹೊತ್ತು ಬೆಳಗಿನ ಜಾವದಲ್ಲಿ ಬಿಸಿಲಿನಲ್ಲಿ ಓಡಾಡಿದರೆ ಉತ್ತಮ. ಇನ್ನು ಎಲ್ಲದಕ್ಕಿಂತ ಉತ್ತಮವಾದದ್ದು ಆಯುರ್ವೇದದಲ್ಲಿ ಇರುವ ಒಂದು ಚಿಕ್ಕ ಪರಿಹಾರ ಅದು ಅಶ್ವಗಂಧ ಪುಡಿ. ಈ ಅಶ್ವಗಂಧವನ್ನು ತೆಗೆದುಕೊಂಡು ನುಣ್ಣಗೆ ಪುಡಿ ಮಾಡಿ ಅದರಲ್ಲಿ ಸ್ವಲ್ಪ ಕಲ್ಲುಸಕ್ಕರೆಯನ್ನು ಬೆರೆಸಿ ಮಿಶ್ರಣ ಮಾಡಿ ಕೊಂಡು ಒಂದು ಡಬ್ಬಿಯಲ್ಲಿ ಶೇಖರಿಸಿಟ್ಟುಕೊಳ್ಳಬೇಕು, ಉಗುರು ಬೆಚ್ಚಗಿನ ಹಾಲಿನಲ್ಲಿ ಒಂದು ಚಮಚ ಈ ಮಿಶ್ರಣ ವನ್ನು ಹಾಕಿಕೊಂಡು ಪ್ರತಿ ನಿತ್ಯ ಎರಡು ಬಾರಿ ಸೇವಿಸುವುದರಿಂದ ಎರಡು ಮೂರು ತಿಂಗಳುಗಳಲ್ಲಿ ನಿಮ್ಮ ನರಗಳು ಬಲಗೊಳ್ಳುತ್ತವೆ ಜೊತೆಗೆ ಆರೋಗ್ಯಕರವಾಗಿ ಕೂಡ ಇರುತ್ತವೆ. ಇನ್ನು ಮಧುಮೇಹ ದಿಂದ ಬಳಲುತ್ತಿರುವವರು ಕಲ್ಲು ಸಕ್ಕರೆಯ ಬದಲಾಗಿ ಹಳೆಯ ಬೆಲ್ಲವನ್ನು ಮಿಶ್ರಣ ಮಾಡಿಕೊಂಡು ಅಶ್ವಗಂಧವನ್ನು ಸೇವಿಸಬಹುದು.

ಇನ್ನು ನರಗಳ ಬಲಹೀನತೆ ಇರುವವರು ತಪ್ಪದೆ ಹಾಲನ್ನು ಸೇವಿಸಬೇಕು ಇದರಿಂದ ದೇಹಕ್ಕೆ ಕ್ಯಾಲ್ಸಿಯಂ ಹೆಚ್ಚಾಗಿ ನರಗಳ ದೌರ್ಬಲ್ಯತೆ ಸ್ವಲ್ಪ ಮಟ್ಟಿಗಾದರೂ ಕಡಿಮೆಯಾಗುತ್ತದೆ. ನರಗಳ ದೌರ್ಬಲ್ಯತೆಯಿಂದ ಬಳಲುತ್ತಿರುವವರು ಪ್ರತಿ ನಿತ್ಯ ಉಗುರು ಬೆಚ್ಚಗಿನ ನೀರಿಗೆ ಸ್ವಲ್ಪ ನಿಂಬೆ ರಸವನ್ನು ಹಾಗೂ ಸ್ವಲ್ಪ ಅರಿಶಿಣವನ್ನು ಮತ್ತು ಸ್ವಲ್ಪ ಜೇನತುಪ್ಪವನ್ನು ಬೆರೆಸಿ ಪ್ರತಿನಿತ್ಯ ಕುಡಿಯುವುದರಿಂದ ನರಗಳ ದೌರ್ಬಲ್ಯತೆ ಕಡಿಮೆಯಾಗುತ್ತ ಹೋಗುತ್ತದೆ. ಇನ್ನು ನೇರವಾಗಿ ಹಾಲು ಕುಡಯುವುದಕ್ಕಿಂತ ಸ್ವಲ್ಪ ಅರಿಶಿಣ ಸೇರಿಸಿ ಹಾಲನ್ನು ಕುಡಯುವುದರಿಂದ ನರಗಳು ಬಲಾಯುತವಾಗಿ ಮಾರ್ಪಡುತ್ತವೆ.

ಇನ್ನು ಪ್ರತಿ ನಿತ್ಯ ತಪ್ಪದೇ ವಾಕಿಂಗ್ ಮಾಡಬೇಕು ಇದರಿಂದ ಶರೀರಕ್ಕೆ ರಕ್ತ ಪ್ರಸರಣ ಚೆನ್ನಾಗಿ ಉಂಟಾಗಿ ಬ್ಲಡ್ ಸರ್ಕ್ಯುಲೇಷನ್ ಸರಾಗವಾಗಿ ಆಗಿ ನರಗಳ ಬಲಹೀನತೆ ಕ್ರಮೇಣ ಕಡಿಮೆಯಾಗುತ್ತದೆ. ಅದೇ ರೀತಿ ಕಾಲಿ ಹೊಟ್ಟೆಯಲ್ಲಿ ಸ್ವಲ್ಪ ಉಗುರು ಬೆಚ್ಚಗಿನ ನೀರಿನಲ್ಲಿ ನಿಂಬೆರಸ ಮತ್ತು ಜೇನುತಪ್ಪವನ್ನು ಕಲಸಿ ಕುಡಿಯುವುದರಿಂದ ಕೂಡ ಸಾಕಷ್ಟು ನರಗಳ ಬಲಹೀನತೆ ಕಡಿಮೆಯಾಗುತ್ತದೆ. ಇಂತಹ ನೈಸರ್ಗಿಕವಾಗಿರುವಂತಹ ಪರಿಹಾರಗಳನ್ನು ಪ್ರತಿ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ಈ ನರಗಳ ಬಲಹೀನತೆಯನ್ನು ಗುಣ ಪಡಿಸಿಕೊಳ್ಳಬಹುದು. ಸ್ನೇಹಿತರೇ ನಿಮಗೇನಾದರೂ ಈ ರೀತಿಯ ನರಗಳ ಬಲಹೀನತೆ ಇದ್ದರೆ ಈ ಪರಿಹಾರವನ್ನು ಪ್ರಯತ್ನ ಮಾಡಿ ನೋಡಿ ಕ್ರಮೇಣ ಅದನ್ನು ನೀವು ಅಳವಡಿಸಿಕೊಂಡರೆ ಸಾಕು ನರದೌರ್ಬಲ್ಯತೆ ಕಡಿಮೆಯಾಗುತ್ತ ಬರುತ್ತದೆ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: