ನಟಿ ಶ್ರುತಿ ಪಕ್ಕ ಹಳ್ಳಿ ಶೈಲಿಯಲ್ಲಿ ರಾಗಿ ಮುದ್ದೆ ಹೇಗೆ ಮಾಡ್ತಾರೆ ನೋಡಿ

0

ಶ್ರುತಿ ಅವರು ಕನ್ನಡ ಚಿತ್ರರಂಗದ ಅದ್ಭುತ ಕಲಾವಿದೆ. ಅನೇಕ ಸಿನಿಮಾಗಳಲ್ಲಿ ನಟಿಸಿ ಒಂದು ಕಾಲದಲ್ಲಿ ಬೇಡಿಕೆ ನಟಿಯಾಗಿದ್ದರು. ಈಗಲೂ ಅವರ ಸಿನಿಮಾಗಳನ್ನು ನೋಡುವವರಿದ್ದಾರೆ. ನಟಿ ಶ್ರುತಿ ಅವರ ಬಗ್ಗೆ ಇಂಟರೆಸ್ಟಿಂಗ್ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಕನ್ನಡ ಚಿತ್ರರಂಗದ ಅಳುಮುಂಜಿ ಎಂದೆ ಪ್ರಖ್ಯಾತಿ ಪಡೆದ ನಟಿ ಶ್ರುತಿ ಅವರು ಅನೇಕ ಸಿನಿಮಾಗಳಲ್ಲಿ ನಟಿಸಿ ಅದೆಷ್ಟೊ ಜನರ ಕಣ್ಣಿನಲ್ಲಿ ನೀರು ತರಿಸಿದ್ದಾರೆ. ಹೆಣ್ಣು ಎಂಬ ಪಾತ್ರಕ್ಕೆ ಶ್ರುತಿ ಅವರ ನಟನೆಯಿಂದ ಜೀವ ತುಂಬುತ್ತಿದ್ದರು ಶ್ರುತಿ ಅವರು ಸುಮಾರು 130 ಚಿತ್ರಗಳಲ್ಲಿ ನಟಿಸಿದ್ದರು ಅಷ್ಟೇ ಅಲ್ಲದೆ ಅವರು ಹಿಂದಿ, ತಮಿಳು, ತೆಲುಗು ಭಾಷೆಯಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.

ಶ್ರುತಿ ಅವರು ಬಡತನದಿಂದ ಬಂದವರು ಅವರ ನಟನೆಯ ಮೇಲೆ ಇಡಿ ಕುಟುಂಬ ನಡೆಯುತ್ತಿತ್ತು. ತಮ್ಮ ಕುಟುಂಬಕ್ಕೆ ಆಧಾರವಾಗಬೇಕು ಎಂಬ ಅಚಲ ನಂಬಿಕೆ, ಕಠಿಣ ಪರಿಶ್ರಮದಿಂದ ಶ್ರುತಿ ಅವರು ಇಂದು ಕನ್ನಡ ಚಿತ್ರರಂಗದ ಸ್ಟಾರ್ ನಟಿಯಾಗಿದ್ದಾರೆ. ನಂತರ ಅವರ ಬಾಳಲ್ಲಿ ಮದುವೆ ಎನ್ನುವುದು ಬಿರುಗಾಳಿಯನ್ನು ಎಬ್ಬಿಸಿತು. ಎಸ್. ಮಹೇಂದರ್ ಅವರನ್ನು ಮದುವೆಯಾಗಿ ಸ್ವಲ್ಪ ವರ್ಷಗಳ ನಂತರ ವಿಚ್ಛೇದನ ಪಡೆದರು, ನಂತರ ಮತ್ತೊಂದು ಮದುವೆಯಾಗಿ ಅವರೊಂದಿಗೂ ವಿಚ್ಛೇದನ ಪಡೆದು ತಮ್ಮ ಮಗಳು ಗೌರಿಯೊಂದಿಗೆ ವಾಸವಾಗಿದ್ದಾರೆ.

ಕನ್ನಡ ಚಿತ್ರರಂಗದ ಪ್ರತಿಭಾವಂತ ನಟಿಯರಾದ ಸುಧಾಮೂರ್ತಿ, ಶ್ರುತಿ ಕೃಷ್ಣ, ಮಾಳವಿಕಾ ಅವಿನಾಶ್ ಮೂವರು ಒಳ್ಳೆಯ ಸ್ನೇಹಿತೆಯರು. ಮೂವರು ಆಗಾಗ ಭೇಟಿಯಾಗುತ್ತಾರೆ. ಶ್ರುತಿ ಕೃಷ್ಣ ಅವರ ಮನೆಗೆ ಸುಧಾರಾಣಿ ಹಾಗೂ ಮಾಳವಿಕಾ ಅವರು ಭೇಟಿಯಾಗಿ ಶ್ರುತಿ ಅವರು ತಾವೆ ತಯಾರಿಸಿ ಬಡಿಸಿದ ರಾಗಿ ಮುದ್ದೆಯನ್ನು ಸವಿದ ವಿಡಿಯೋವನ್ನು ಸುಧಾರಾಣಿ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಕಳೆದ ತಿಂಗಳು ಮಾಳವಿಕಾ, ಶ್ರುತಿ ಹಾಗೂ ಅವರ ಮಗಳು ಸುಧಾರಾಣಿ ಅವರ ಮನೆಗೆ ಸರ್ಪ್ರೈಸ್ ಎಂಟ್ರಿ ಕೊಟ್ಟು ಸುಧಾರಾಣಿ ಅವರ ಹುಟ್ಟುಹಬ್ಬವನ್ನು ಆಯೋಜಿಸಿ ಸಂಭ್ರಮಿಸಿದರು. ಮೂವರ ಸ್ನೇಹ ಯಾವಾಗಲೂ ಹೀಗೆಯೆ ಇರಲಿ ಎಂದು ಆಶಿಸೋಣ.

Leave A Reply

Your email address will not be published.

error: Content is protected !!