ನಟಿ ಜಯಂತಿ ಅವರ ಸೊಸೆ ಕೂಡ ಕನ್ನಡದ ಸಕತ್ ಫೇಮಸ್ ನಟಿ ನಿಮಗೆ ಗೊತ್ತೇ

0

ಕನ್ನಡ ನಾಡು ಮಾತ್ರವಲ್ಲದೇ ದಕ್ಷಿಣ ಭಾರತದ ಸಿನಿಮಾ ಇಂಡಸ್ಟ್ರಿಯಲ್ಲಿ ತನ್ನದೇ ಆದ ಸೇವೆ ಸಲ್ಲಿಸಿ ಅಭಿನಯ ಶಾರದೆ, ಅಭಿನೇತ್ರಿ ಎನಿಸಿಕೊಂಡಿದ್ದ ನಟಿ ಜಯಂತಿ ಅವರು ಸೋಮವಾರದಂದು ವಯೋಸಹಜ ಅನಾರೋಗ್ಯದಿಂದ ಕೊನೆಯುಸಿರೆಳೆದಿದ್ದು ಕನ್ನಡ ಚಿತ್ರರಂಗದ ಮತ್ತೊಂದು ಹಿರಿಯ ಕೊಂಡಿ ಕಳಚಿದೆ. ಅಗಲಿದ ಚೇತನಕ್ಕೆ ಕನ್ನಡ ಸಿನಿಮಾ ಗಣ್ಯರು ಸುದೀಪಪುನೀತ, ಯಶ್‌ಸೇರಿದಂತೆ ಎಲ್ಲ ಕಲಾವಿದರು ನಿರಮಾಪಕರುಗಳು ನಿರ್ದೇಶಕರುಗಳು ಹಾಗೂ ಎಲ್ಲಾ ಕಲಾವಿದ ಬಂಧುಗಳು ಸಂತಾಪ ಸೂಚಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಐದು ದಶಕಕ್ಕಿಂತಲು ಹೆಚ್ಚಿನ ಸಮಯದಿಂದ ಸಕ್ರಿಯರಾಗಿದ್ದವರು ನಟಿ ಜಯಂತಿ. ಇವರು ಅಭಿನಯ ಶಾರದೆ ಎಂದೇ ಖ್ಯಾತಿ ಗಳಿಸಿದ್ದಾರೆ. ತಮ್ಮ ಅಭಿನಯದ ಮೂಲಕ ಅಭಿಮಾನಿಗಳನ್ನು ಬೆರಗುಗೊಳಿಸುತ್ತಿದ್ದರು ನಟಿ ಜಯಂತಿ. ಇವರಿಗೆ ಈಗ 76 ವರ್ಷ ವಯಸ್ಸಾಗಿತ್ತು. ಜಯಂತಿ ಅವರ ಸೊಸೆ ಕೂಡ ಸ್ಯಾಂಡಲ್ ವುಡ್ ನಾ ಖ್ಯಾತ ನಟಿ, ಅವರು ಯಾರು ಎನ್ನುವುದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಜಯಂತಿ ಅವರು ನಟಿ ಮಾತ್ರವಲ್ಲ ನಿರ್ದೇಶಕಿ, ನಿರ್ಮಾಪಕಿಯೂ ಹೌದು. ಐನೂರಕ್ಕು ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಡಾ. ರಾಜ್‌ ಕುಮಾರ ಅವರ ಜೊತೆಯೇ ನಲವತ್ತೈದು ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸಿದ ಹೆಗ್ಗಳಿಕೆ ಜಯಂತಿ ಅವರದ್ದು. ನೂರಾರು ಸಿನಿಮಾ ಮಂದಿಗೆ ಅನ್ನದಾತೆಯಾಗಿದ್ದ ಜಯಂತಿ ಅವರು ನಂತರ ದಿನ ಕಳೆದಂತೆ ಚಿತ್ರರಂಗದಿಂದ ದೂರ ಉಳಿದರು. ವ್ಯಯಕ್ತಿಕ ಜೀವನವೂ ಸಹ ನೆಮ್ಮದಿ ಇಲ್ಲದ ಬದುಕಾಗಿ ಮೂರು ಮದುವೆಯಾದರೂ ಸಹ ಬದುಕಿನಲ್ಲಿ ಸಂತೋಷ ಕಾಣದ ಜೀವ ಕೊನೆಗೆ ಎಲ್ಲರಿಂದಲೂ ಮೋಸ ಹೋಗಿ ಮಗನ ಜೊತೆ ಜೀವನ ಕಳೆಯುತ್ತಿದ್ದರು.

ಜಯಂತಿ ಅವರು ದಕ್ಷಿಣ ಭಾರತ ಚಿತ್ರರಂಗ ಕಂಡ ಅತ್ಯುದ್ಭುತ ನಟಿಯಾಗಿ ಕೆರಿಯರ್ ನಲ್ಲಿ ಯಶಸ್ಸಿನ ಉತ್ತುಂಗಕ್ಕೆ ಏರಿದ ಜಯಂತಿ ಅವರ ವೈಯಕ್ತಿಕ ಜೀವನ ಸಂತೋಷದಿಂದ ಇರಲಿಲ್ಲ. ಜಯಂತಿ ಅವರು ಪೇಕೆಟಿ ಶಿವರಾಂ ಎನ್ನುವವರ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಶಿವರಾಂ ಅವರು ಕನ್ನಡ ಮತ್ತು ತಮಿಳು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ನಟ ಮತ್ತು ನಿರ್ದೇಶಕ ಕೂಡಾ ಹೌದು. ಜಯಂತಿ ಮತ್ತು ಶಿವರಾಂ ದಂಪತಿಯ ಮಗನಾಗಿ ಜನಿಸಿದವರು ಕೃಷ್ಣಕುಮಾರ್. ತಂದೆ ತಾಯಿಯ ಹಾಗೆ ಕೃಷ್ಣ ಕುಮಾರ್ ಅವರು ಸಿನಿರಂಗಕ್ಕೆ ಬರಲಿಲ್ಲ.

ಇನ್ನು ಮಗ ಕೃಷ್ಣ ಕುಮಾರ ಅಂದರೆ ಜಯಂತಿ ಅವರಿಗೆ ಜೀವ ಜೀವನ ಎಲ್ಲವೂ ಆಗಿದ್ದರು. ಮಗನ ಮೇಲೆ ಜಯಂತಿ ಅವರಿಗೆ ಬಹಳ ಪ್ರೀತಿ. ಮಗ ಮದುವೆಯ ವಯಸ್ಸಿಗೆ ಬಂದ ನಂತರ ಅನು ಪ್ರಭಾಕರ್‌ಅವರನ್ನು ಮಗ ಕೃಷ್ಣ ಕುಮಾರ್‌ ಜೊತೆ ಮದುವೆ ಮಾಡಲಾಯಿತು. ಜಯಂತಿ ಅವರ ಸೊಸೆ ಕೂಡ ಬೇರೆ ಯಾರು ಅಲ್ಲ. ಸ್ಯಾಂಡಲ್ ವುಡ್ ನ ಖ್ಯಾತ ನಟಿ ಅನು ಪ್ರಭಾಕರ್. 2002 ರಲ್ಲಿ ತಮ್ಮ ಮಗ ಕೃಷ್ಣಕುಮಾರ್ ಮತ್ತು ಅನು ಪ್ರಭಾಕರ್ ಅವರ ಮದುವೆಯನ್ನು ವಿಜೃಂಭಣೆಯಿಂದ ಮಾಡಿದರು ನಟಿ ಜಯಂತಿ. ಜಯಂತಿ ಅವರಿಗೆ ಅನು ಪ್ರಭಾಕರ್ ಸೊಸೆ ಆಗುವುದಕ್ಕಿಂತ ಹೆಚ್ಚಾಗಿ ಮಗಳಾಗಿದ್ದರು. ಆರಂಭದಲ್ಲಿ ಎಲ್ಲವೂ ಚೆನ್ನಾಗಿತ್ತು. ನಂತರ ಕುಟುಂಬದಲ್ಲಿ ಬಿರುಕುಗಳು ಮೂಡಲು ಆರಂಭವಾಯಿತು.

ಜಯಂತಿ ಅವರ ಆರೋಗ್ಯ ಸರಿ ಇಲ್ಲದ ಕಾರಣ ಮಗಳಂತೆಯೇ ಜಯಂತಿ ಅವರನ್ನು ನೋಡಿಕೊಳ್ಳುತ್ತಿದ್ದರು. ಯಾವುದೇ ಸಮಾರಂಬವಿರಲಿ ಅಥವಾ ಸಿನಿಮಾ ಸಂಬಂಧಪಟ್ಟ ಕಾರ್ಯಕ್ರಮವಿರಲಿ ಜಯಂತಿ ಅವರನ್ನು ಅನು ಅವರು ಕೈ ಹಿಡಿದು ಮಗುವಿನಂತೆಯೇ ಕರೆದುಕೊಂಡು ಬರುತ್ತಿದ್ದರು.. ಹತ್ತು ವರ್ಷಗಳ ಕಾಲ ಜಯಂತಿ ಅವರ ಸೇವೆ ಮಾಡಿದ್ದ ಅನು ಅವರು ನಂತರ ಕೃಷ್ಣ ಕುಮಾರ್‌ ಹಾಗೂ ಅವರ ನಡುವಿನ ವ್ಯಯಕ್ತಿಕ ಕಾರಣಗಳಿಂದ ಇಬ್ಬರೂ ದೂರಾದರು.
ಹನ್ನೆರಡು ವರ್ಷಗಳ ವೈವಾಹಿಕ ಜೀವನ ಸಾಗಿಸಿದ ನಂತರ ಅನು ಅವರು ಕೃಷ್ಣಕುಮಾರ್ ಅವರಿಂದ ವಿಚ್ಛೇದನ ಪಡೆದರು. ಇಬ್ಬರ ನಡುವೆ ಹೊoದಾಣಿಕೆ ಆಗುತ್ತಿಲ್ಲ ಎಂದು ಹೇಳಿದರು ಅನು. ವಿಚ್ಛೇದನದ ನಂತರ ಅನು ಅವರು ರಘು ಮುಖರ್ಜಿ ಅವರ ಜೊತೆ ಮದುವೆಯಾದರು. ಆದರೆ ಕೃಷ್ಣಕುಮಾರ ಮಾತ್ರ ಒಂಟಿಯಾಗಿಯೇ ಉಳಿದರು. ಅನು ಪ್ರಭಾಕರ ಅವರು ಬಿಟ್ಟು ಹೋಗಿದ್ದು, ಜಯಂತಿ ಅವರಿಗೆ ಭಾರಿ ನೋವು ನೀಡಿತು, ಮಗನ ಜೀವನ ಹೀಗಾಗಿದ್ದು ನೆನೆದು ಜಯಂತಿ ಅವರು ಕೊರಗುತ್ತಿದ್ದರು. ಮಗನಿಗೆ ಧೈರ್ಯ ಹೇಳಿ ಬದುಕುವ ಪಾಠ ಕಲಿಸಿದ್ದರು ನಟಿ ಜಯಂತಿ.

ಕಳೆದ ಮೂರು ವರ್ಷಗಳಿಂದ ಚಿಕಿತ್ಸೆ ಪಡೆದು ಮತ್ತೆ ಮರಳಿ ಹೊಸ ಚೈತನ್ಯದಿಂದ ಮನೆಗೆ ಆಗಮಿಸುತ್ತಿದ್ದ ಜಯಂತಿ ಅವರು ಇಂದು ತಮ್ಮ ಬಾಳ ಪಯಣವನ್ನು ಯಾರಿಗೂ ಹೇಳದೇ ಮುಗಿಸಿ ಬಿಟ್ಟರು. ಇನ್ನು ಜಯಂತಿ ಅವರ ಬಗ್ಗೆ ಮಾಜಿ ಸೊಸೆ ಅನು ಅವರು ಮಾತನಾಡಿದ್ದು ಜಯಂತಿ ಅವರ ಜೊತೆ ತಾವು ಇದ್ದಾಗ ಮುಂದೊಂದು ದಿನ ನಾನು ಇಹಲೋಕ ತ್ಯಜಿಸಿದಾಗ ನನ್ನ ಅಮ್ಮನ ಬಳಿ ಹೋಗಿ ಸೇರಬೇಕು ಎಂಬ ಆಸೆಯನ್ನು ಹೇಳಿಕೊಂಡಿದ್ದರಂತೆ. ಹೌದು ಈ ಬಗ್ಗೆ ಹಂಚಿಕೊಂಡಿರುವ ಅನು ಪ್ರಭಾಕರ ಅವರು “ನಿಮ್‌ ಜೊತೆ ನಾನು ಕಳೆದ ಪ್ರತಿ ಕ್ಷಣವೂ ಸದಾ ನನ್ನ ಮನಸ್ಸು ಹಾಗೂ ಹೃದಯದಲ್ಲಿ ಜೀವಂತವಾಗಿರುತ್ತದೆ. ನಿಮ್ಮಿಂದ ನಾನು ಕಲಿತ ಜೀವನ ಪಾಠಗಳನ್ನು ನಾನು ಎಂದೂ ಸಹ ಮರೆಯುವುದಿಲ್ಲ. ನಿಮ್ಮ ಆತ್ಮೀಯರನ್ನು ಕಳೆದುಕೊಂಡಾಗ ನೀವು ಎಷ್ಟೋ ಬಾಆರಿ ನನ್ನ ಜೊತೆ ಹೇಳಿಕೊಂಡಿದ್ದಿರಿ. ಅಮ್ಮಮ್ಮನ ಜೊತೆ ನೆಮ್ಮದಿಯಿಂದ ಇರಿ. ನಿಮಗೆ ಶಾಂತಿ ಸಿಗಲಿ ಎಂದು ಕಂಬನಿ ಮಿಡಿದಿದ್ದಾರೆ. ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave A Reply

Your email address will not be published.

error: Content is protected !!
Footer code: