WhatsApp Group Join Now
Telegram Group Join Now

ನಾವಿಂದು ನಿಮಗೆ ತಿಳಿಸುತ್ತಿರುವ ವಿಶೇಷವಾದ ಮಾಹಿತಿ ಯಾವುದು ಎಂದರೆ ಲಕ್ವ ಸಮಸ್ಯೆಯನ್ನು ಪಂಚಕರ್ಮ ಚಿಕಿತ್ಸೆಯ ಮೂಲಕ ಹೇಗೆ ಗುಣಪಡಿಸಬಹುದು ಎಂಬುದರ ಬಗ್ಗೆ ತಿಳಿಸಿಕೊಡುತ್ತೇವೆ. ಲಕ್ವ ಎನ್ನುವಂತದ್ದು ಒಬ್ಬ ವ್ಯಕ್ತಿಯ ಜೀವನವನ್ನು ಸಂಪೂರ್ಣವಾಗಿ ತೊಂದರೆಗೆ ಒಳಪಡಿಸುತ್ತದೆ. ಬೇರೆ ಯಾವುದಾದರೂ ಕಾಯಿಲೆಗಳು ಕಾಣಿಸಿಕೊಂಡಾಗ ನಮ್ಮ ಸಣ್ಣಪುಟ್ಟ ಕೆಲಸಗಳನ್ನು ನಾವು ಮಾಡಿಕೊಂಡು ಬದುಕಬಹುದು. ಆದರೆ ದೇಹದ ಅಂಗಾಂಗಗಳು ಸಂಪೂರ್ಣವಾಗಿ ವೈಫಲ್ಯಗೊಂಡಾಗ ನಾವು ಏನನ್ನು ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ. ಆಗ ಬಹಳ ದೊಡ್ಡ ತೊಂದರೆಯನ್ನು ಅನುಭವಿಸಬೇಕಾಗುತ್ತದೆ ಇದನ್ನು ಸಂಪೂರ್ಣವಾಗಿ ಪರಿಹರಿಸಿಕೊಳ್ಳುವ ಚಿಕಿತ್ಸಾಕ್ರಮ ಎಂದರೆ ಪಂಚಕರ್ಮ ಚಿಕಿತ್ಸಾ ಕ್ರಮ.

ಮೊದಲಿಗೆ ಲಕ್ವಾ ಬರುವುದಕ್ಕೆ ಕಾರಣ ಏನು ಎಂಬುದನ್ನು ಕಂಡುಕೊಳ್ಳಬೇಕು ಕೆಲವೊಮ್ಮೆ ಅಪಘಾತಗಳು ಆದಾಗ ತಲೆಗೆ ಹೊಡೆತ ಬೀಳುವುದರಿಂದ ಲಕ್ವಾ ಉಂಟಾಗುತ್ತದೆ. ಅಧಿಕ ರಕ್ತದೊತ್ತಡ ವೃದ್ಧಿಯಾಗಿ ಮೆದುಳಿಗೆ ತೊಂದರೆಯುಂಟಾಗಿ ಅದರಿಂದ ಲಕ್ವಾ ಉಂಟಾಗುತ್ತದೆ. ಹಲವಾರು ರಾಸಾಯನಿಕ ಔಷಧಿಗಳನ್ನು ತೆಗೆದುಕೊಳ್ಳುವುದರಿಂದ ಶರೀರ ಒಳಗಡೆ ಟಾಕ್ಸಿನ್ ಹೆಚ್ಚಾಗಿ ಅದು ಮೆದುಳಿಗೆ ಹೋಗಿ ಬ್ಲಾಕ್ ಮಾಡುತ್ತದೆ ಅದರಿಂದಲೂ ಕೂಡ ಲಕ್ವ ಉಂಟಾಗಬಹುದು.

ಕೆಲವೊಮ್ಮೆ ಮಾನಸಿಕ ಒತ್ತಡದಿಂದ ಮೆದುಳಿನ ನರಗಳು ದುರ್ಬಲಗೊಂಡಾಗ ರಕ್ತ ಸಂಚಾರದ ಕೊರತೆ ಉಂಟಾಗಿ ಅದರಿಂದ ಕಾಣಿಸಿಕೊಳ್ಳಬಹುದು. ಇನ್ನು ಕೆಲವು ಕಾರಣಗಳಿಂದ ಲಕ್ವಾ ಕಾಣಿಸಿಕೊಳ್ಳುತ್ತದೆ. ಮುಖ್ಯವಾಗಿ ಲಕ್ವಾ ಕಾಣಿಸಿಕೊಳ್ಳುವುದಕ್ಕೆ ಕಾರಣ ವಾತ-ಪಿತ್ತ ವಿಕಾರದಿಂದ ಅದು ಕಾಣಿಸಿಕೊಳ್ಳುತ್ತದೆ

ವಾತ-ಪಿತ್ತ ಉಂಟಾಗುವುದಕ್ಕೆ ಮುಖ್ಯ ಕಾರಣ ಅಜೀರ್ಣ ಅಗ್ನಿಮಾಂದ್ಯ ಮಲಬದ್ಧತೆ ದಿನಚರ್ಯ ಋತುಚರ್ಯ ಆಹಾರ ಕ್ರಮದಲ್ಲಿ ನಾವು ಮಾಡಿಕೊಳ್ಳುವಂತಹ ಅಚಾತುರ್ಯಗಳು ಅವಘಡಗಳಿಂದ ಈ ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಈ ಸಮಸ್ಯೆಗಳಿಗೆ ಮೂಲ ಪರಿಹಾರ ಯಾವುದು ಎಂದರೆ ಪಂಚಕರ್ಮ ಚಿಕಿತ್ಸಾ ಕ್ರಮದಲ್ಲಿ ಶಿರೋಧಾರ ಶಿರೋಬಸ್ತಿ ಅನುವಾಸನ ಬಸ್ತಿ ಈ ಕ್ರಮಗಳಿಂದ ಲಕ್ವ ಹೊಡೆದಿರುವಂತಹ ವ್ಯಕ್ತಿಯನ್ನು ಮೊದಲಿನ ಸ್ಥಿತಿಗೆ ತರಬಹುದು.

ಇದರ ಜೊತೆಗೆ ಹಲವಾರು ರಸ ಔಷಧಿಗಳನ್ನು ಕೊಡಲಾಗುತ್ತದೆ ಹಲವಾರು ಪತ್ಯಗಳನ್ನು ತಿಳಿಸಲಾಗುತ್ತದೆ ಅವುಗಳನ್ನು ಸರಿಯಾಗಿ ಪಾಲಿಸಬೇಕಾಗುತ್ತದೆ ಉಪ್ಪು ಹುಳಿ ಕಾರ ಇವುಗಳೆಲ್ಲವನ್ನು ಕೂಡ ಕಡಿಮೆ ಮಾಡಬೇಕಾಗುತ್ತದೆ. ಚಹಾ ಕಾಫಿ ಬೇಕರಿ ಪದಾರ್ಥ ಹಸಿಮೆಣಸು ಈ ತರಹದ ವಾತ-ಪಿತ್ತ ವೃದ್ಧಿ ಮಾಡುವಂತಹ ಪದಾರ್ಥಗಳನ್ನು ದೂರವಿಡಬೇಕು. ಮೃದು ಆಹಾರವನ್ನು ಸೇವಿಸಬೇಕು.

ಇಂತಹ ಆಹಾರ ಪದಾರ್ಥಗಳನ್ನು ಸೇವಿಸುವುದರ ಜೊತೆಗೆ ಆ ಚಿಕಿತ್ಸೆಯನ್ನು ಪಡೆದುಕೊಂಡರೆ ಸಂಪೂರ್ಣವಾಗಿ ಲಕ್ವದಿಂದ ಗುಣಮುಖರಾಗಬಹುದು. ಈ ಸಮಸ್ಯೆಗೆ ಒಳಗಾದಾಗ ಜನರಿಗೆ ದಿಕ್ಕು ತೋಚದಂತಾಗುತ್ತದೆ ಎಲ್ಲಾ ಕಡೆಗಳಲ್ಲಿಯೂ ಔಷಧಿಗಾಗಿ ಪ್ರಯತ್ನಿಸುತ್ತಾರೆ ಕೆಲವೊಂದು ಫಲ ನೀಡುತ್ತವೆ ಕೆಲವೊಂದು ಸಫಲವಾಗುವುದಿಲ್ಲ. ಲಕ್ವಾ ಹೊಡೆದ ಇಪ್ಪತ್ನಾಲ್ಕು ಗಂಟೆಯ ಒಳಗಡೆಯಾಗಿ ನೀವು ಶ್ರೀ ಗಂಗಾ ಯೋಗ ನಿಸರ್ಗ ಚಿಕಿತ್ಸಾ ಹಾಗೂ ಆಯುರ್ವೇದ ಸಂಶೋಧನಾ ಕೇಂದ್ರ ಬೆಂಗಳೂರು ಹಾಗೂ ಹುಬ್ಬಳ್ಳಿ ಕೇಂದ್ರಗಳನ್ನು ನೀವು ಸಂಪರ್ಕಿಸಿದರೆ ಅವರು ನಿಮಗೆ ಉತ್ತಮವಾದಂತಹ ಚಿಕಿತ್ಸೆಯನ್ನು ನೀಡುತ್ತಾರೆ.

ಇವರ ಆಶ್ರಮದಲ್ಲಿ ಇದುವರೆಗೂ ಪಂಚಕರ್ಮ ಚಿಕಿತ್ಸಾ ಕ್ರಮವನ್ನು ಅನುಸರಿಸಿ ಸಾವಿರಾರು ರೋಗಿಗಳನ್ನು ಗುಣಪಡಿಸಿದ್ದಾರೆ. ಲಕ್ವ ಹೊಡೆದವರಿಗೆ ಅದನ್ನ ಸಂಪೂರ್ಣವಾಗಿ ಗುಣಪಡಿಸಲು ಯಾವ ಚಿಕಿತ್ಸಾ ಕ್ರಮವನ್ನು ಅನುಸರಿಸಬೇಕು ಎಂಬುದರ ಕುರಿತಾದ ಮಾಹಿತಿ ಇದಾಗಿದೆ. ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರೊಂದಿಗೆ ನಿಮ್ಮ ಸುತ್ತಮುತ್ತಲಿನವರೊಂದಿಗೆ ಈ ಮಾಹಿತಿಯನ್ನು ಹಂಚಿಕೊಳ್ಳಿರಿ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: