WhatsApp Group Join Now
Telegram Group Join Now

ಚಾಣಕ್ಯ ಅವರು ಮೌರ್ಯರ ಕಾಲದ ಬುದ್ದಿವಂತ ರಾಜಕಾರಣಿ ಅವರು ಅನೇಕ ವೇದಗಳನ್ನು ಅಧ್ಯಯನ ಮಾಡಿ ಅಪಾರ ಜ್ಞಾನವನ್ನು ತಮ್ಮದಾಗಿಸಿಕೊಂಡಿದ್ದಾರೆ. ಅವರು ತಮ್ಮ ಪ್ರತಿಜ್ಞೆಯಂತೆ ನಂದರ ಸಾಮ್ರಾಜ್ಯವನ್ನು ನಾಶಮಾಡಿ ಮೌರ್ಯ ಸಾಮ್ರಾಜ್ಯವನ್ನು ಒಬ್ಬ ಬಾಲಕನ ಮೂಲಕ ಸ್ಥಾಪಿಸಿದರು. ಅವರು ತಮ್ಮ ಚಾಣಕ್ಯ ನೀತಿ ಎಂಬ ಪುಸ್ತಕದಲ್ಲಿ ಜೀವನದ ಬಗ್ಗೆ ಸ್ವಾರಸ್ಯಕರವಾಗಿ ತಿಳಿಸಿದ್ದಾರೆ. ಜೀವನದಲ್ಲಿ ಒಂದು ಬಾರಿ ಹಲವಾರು ಕಷ್ಟ ಬಂದಾಗ ಏನು ಮಾಡಬೇಕು ಎಂಬುದನ್ನು ಕಥೆಯ ರೂಪದಲ್ಲಿ ಹೇಳಿದ್ದಾರೆ. ಚಾಣಕ್ಯ ಹೇಳಿದ ಕಥೆಯನ್ನು ಈ ಲೇಖನದಲ್ಲಿ ನೋಡೋಣ.

ಭಾರತದ ಇತಿಹಾಸದಲ್ಲಿ ಚಾಣಕ್ಯನಿಗೆ ಪ್ರತ್ಯೇಕ ಸ್ಥಾನವಿದೆ. ಎಂತಹ ಕಠಿಣ ಸಮಸ್ಯೆಯಾದರೂ ಸರಿ ಅದನ್ನು ಪರಿಹರಿಸುವಲ್ಲಿ ಚಾಣಕ್ಯನನ್ನು ಮೀರಿದವರಿಲ್ಲ ಎಂದು ಹೇಳುತ್ತಾರೆ ನಮ್ಮ ಹಿರಿಯರು. ಒಮ್ಮೊಮ್ಮೆ ಎಲ್ಲ ಸಮಸ್ಯೆಗಳು ಒಂದೆ ಬಾರಿ ಬರುತ್ತದೆ ಅಂತಹ ಸಮಯದಲ್ಲಿ ನಾವು ಹೇಗೆ ಇರಬೇಕು ಎಂದು ಚಾಣಕ್ಯ ಒಂದು ಕಥೆಯ ರೂಪದಲ್ಲಿ ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ. ಒಂದು ಕಾಡಿನಲ್ಲಿ ಜಿಂಕೆಯೊಂದು ಭಾರವಾದ ಹೆಜ್ಜೆ ಹಾಕುತ್ತಾ ಸಾಗುತಿತ್ತು ಆ ಜಿಂಕೆ ತುಂಬಿ ಗರ್ಭಿಣಿ ಪ್ರಸವ ನೋವು ಕಾಣಿಸಿಕೊಂಡಿತ್ತು, ಅದಕ್ಕೆ ಅನುಕೂಲಕರ ಪ್ರದೇಶಕ್ಕಾಗಿ ಹುಡುಕುತ್ತಿದ್ದಾಗ ಒಂದು ದಟ್ಟವಾದ ಹುಲ್ಲಿನ ಪೊದೆ ಕಂಡುಬಂದಿತು ಅದರ ಆ ಕಡೆ ನದಿ ಹರಿಯುತ್ತಿತ್ತು ಅದನ್ನು ಅನುಕೂಲಕರ ಪ್ರದೇಶ ಎಂದು ಭಾವಿಸಿದ ಜಿಂಕೆ ಅಲ್ಲೆ ಪ್ರಸವಿಸಲು ನಿಟ್ಟುಸಿರು ಬಿಡುತ್ತಾ ಆ ಕಡೆ ಈ ಕಡೆ ತಿರುಗಲು ಪ್ರಾರಂಭಿಸುತ್ತದೆ

ಅದೆ ಸಮಯದಲ್ಲಿ ಕಾರ್ಮೋಡ ಕವಿಯಿತು ಮಿಂಚು, ಗುಡುಗು, ಸಿಡಿಲಿನಿಂದ ಸ್ವಲ್ಪ ದೂರದಲ್ಲಿ ಬೆಂಕಿ ಹತ್ತಿಕೊಂಡಿತು ಇನ್ನು ಸ್ವಲ್ಪ ದೂರದಲ್ಲಿ ಬಲಗಡೆ ಸಿಂಹ ಬರುತ್ತಿರುವುದನ್ನು ಜಿಂಕೆ ಗಮನಿಸಿತು, ಎಡಗಡೆ ದಿಕ್ಕಿನಲ್ಲಿ ಒಬ್ಬ ಬೇಟೆಗಾರ ಬಾಣವನ್ನು ಗುರಿಯಿಡುತ್ತಿದ್ದ, ಮಳೆಯಿಂದ ನದಿಯಲ್ಲಿ ಪ್ರವಾಹ ಬಂದಿತು. ಒಂದೆಡೆ ನದಿಯಲ್ಲಿ ಪ್ರವಾಹ, ಇನ್ನೊಂದೆಡೆ ಬೆಂಕಿ, ಉಳಿದೆರಡು ಕಡೆಯಲ್ಲಿ ಮೃತ್ಯು ರೂಪದಲ್ಲಿ ಸಿಂಹ ಮತ್ತು ಬೇಟೆಗಾರ ಆದರೆ ಜಿಂಕೆ ಇದ್ಯಾವುದನ್ನು ತಲೆಗೆ ಹಾಕಿಕೊಳ್ಳಲಿಲ್ಲ ಅದು ತನ್ನ ಮರಿಗೆ ಜನ್ಮ ಕೊಡುವುದರ ಬಗ್ಗೆ ಮಾತ್ರ ಯೋಚಿಸುತ್ತಿತ್ತು. ಸಿಡಿಲಿನ ಬೆಳಕು ಬೇಟೆಗಾರನ ಕಣ್ಣಿಗೆ ಬಡಿದು ಬೇಟೆಗಾರನ ಬಾಣ ಗುರಿ ತಪ್ಪಿ ಸಿಂಹಕ್ಕೆ ನಾಟಿತು, ಮಳೆಯಿಂದಾಗಿ ಹತ್ತಿರ ಬರುತ್ತಿದ್ದ ಬೆಂಕಿ ಆರಿಹೋಯಿತು. ಜಿಂಕೆಯು ಮರಿಗೆ ಜನ್ಮ ನೀಡಿತು ಮರಿ ಆರೋಗ್ಯವಾಗಿತ್ತು. ಜಿಂಕೆಯು ಏನೆ ಆಗಲಿ ತಾನು ಮಗುವಿಗೆ ಜನ್ಮ ನೀಡಲೇಬೇಕು ಎಂಬ ಸಂಕಲ್ಪದಲ್ಲಿತ್ತು, ಪ್ರಾಣದ ಬಗ್ಗೆ ಯೋಚಿಸಿದರೆ, ತಪ್ಪು ಹೆಜ್ಜೆ ಹಾಕಿದರೆ ಏನಾಗುತ್ತಿತ್ತೊ ನಮ್ಮ ಜೀವನದಲ್ಲಿ ಹಾಗೆ ಸಮಸ್ಯೆಗಳು ಸುತ್ತುವರೆದು ಬರುತ್ತವೆ.

ನಾವು ನೆಗೆಟಿವ್ ಆಲೋಚನೆಗಳಿಂದ ಭಯಭೀತರಾಗುತ್ತೇವೆ, ನಮ್ಮ ತಕ್ಷಣ ಕರ್ತವ್ಯವನ್ನು ಮರೆತು ಆಗು ಹೋಗುಗಳನ್ನು ಚಿಂತಿಸುತ್ತೇವೆ. ಭಗವಂತನ ಮೇಲೆ ಭಾರ ಹಾಕಿ ನಮ್ಮ ಕರ್ತವ್ಯದ ಬಗ್ಗೆ ಗಮನ ಕೊಡಬೇಕು ಎಂದು ಈ ಕಥೆ ಹೇಳುತ್ತದೆ. ಎಷ್ಟೆ ಕಷ್ಟ ಬಂದರು ನಮ್ಮ ಕೆಲಸ ನಾವು ಮಾಡಬೇಕು, ನಿರುತ್ಸಾಹದಲ್ಲಿ ಮಾಡುವ ಪ್ರಯತ್ನವನ್ನು ನಿಲ್ಲಿಸಬಾರದು. ನಮ್ಮ ಕೆಲಸವನ್ನು ನಾವು ಶ್ರದ್ಧೆಯಿಂದ ಮಾಡಬೇಕು ಫಲಿತಾಂಶ ದೇವನಿಗೆ ಬಿಟ್ಟಿದ್ದು ಎಂದು ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಪರಮಾತ್ಮ ಹೇಳಿದ್ದಾನೆ ಅದರಂತೆ ಚಾಣಕ್ಯರು ಅದನ್ನೆ ಹೇಳಿದ್ದಾರೆ. ಚಾಣಕ್ಯರು ಹೇಳಿದ ಕಥೆಯನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಆಗ ಜೀವನದಲ್ಲಿ ನೆಮ್ಮದಿಯಿಂದ ಇರಲು ಸಾಧ್ಯ. ಕಷ್ಟ ಬಂದಾಗ ಹೆದರದೆ ತಾಳ್ಮೆಯಿಂದ ವರ್ತಿಸಬೇಕು.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: