ಈ ನಾಲ್ಕು ಕಾರಣದಿಂದ ನಿಮ್ಮ ಬಳಿ ಯಾವತ್ತೂ ಹಣ ಉಳಿಯೋದಿಲ್ಲ ಅಂತಾರೆ ಚಾಣಿಕ್ಯ

0

ಮೌರ್ಯರ ಕಾಲದ ಬುದ್ದಿವಂತ, ಚತುರ ಚಾಣಕ್ಯನ ಬುದ್ದಿವಂತಿಕೆ ಬಗ್ಗೆ ಎಲ್ಲರಿಗೂ ಗೊತ್ತಿದೆ. ಅವರು ಬರೆದ ಚಾಣಕ್ಯನೀತಿ ಎಂಬ ಗ್ರಂಥವನ್ನು ಓದಿದರೆ ಹಾಗೂ ಅದರಲ್ಲಿರುವ ವಿಷಯವನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಜೀವನದಲ್ಲಿ ಸುಖದಿಂದ ಇರಬಹುದು. ಕೆಲವೊಮ್ಮೆ ನಾವು ಎಷ್ಟೆ ಹಣ ಗಳಿಸಿದರು ನಮಗೆ ನೆಮ್ಮದಿ ಇರುವುದಿಲ್ಲ, ನಮ್ಮ ಯಾವುದೆ ಆಸೆಗಳು ಪೂರೈಸುವುದಿಲ್ಲ ಇದಕ್ಕೆ ಏನು ಕಾರಣ ಎಂಬುದನ್ನು ಚಾಣಕ್ಯರವರು ತಿಳಿಸಿದ್ದಾರೆ. ಅದೇನೆಂದು ಈ ಲೇಖನದಲ್ಲಿ ನೋಡೋಣ.

ನಾವು ನಮ್ಮ ಜೀವನದಲ್ಲಿ ಹಣ ಸಂಪಾದನೆ ಮಾಡಲು ಬಹಳ ಕಷ್ಟ ಪಡುತ್ತೇವೆ. ಜೀವನದಲ್ಲಿ ಹಣ ಬಹಳ ಮುಖ್ಯವಾಗಿರುತ್ತದೆ. ಶಿಕ್ಷಣ ಪಡೆಯಲು, ಒಳ್ಳೆ ಮನೆ ಕಟ್ಟಿಸಲು ಹೀಗೆ ಎಲ್ಲ ಕೆಲಸಗಳಿಗೂ ಹಣ ಬೇಕೆಬೇಕು. ಹಣದಿಂದ ನಾವು ಜೀವನದಲ್ಲಿ ಎಲ್ಲಾ ಸೌಕರ್ಯಗಳನ್ನು ಪಡೆಯುತ್ತೇವೆ ಇದರಿಂದ ನಮ್ಮ ಜೀವನ ಸುಖವಾಗಿರುತ್ತದೆ. ಇಂದಿನ ಕಾಲದಲ್ಲಿ ಜನರು ಸಾಕಷ್ಟು ಹಣ ಸಂಪಾದನೆ ಮಾಡುತ್ತಾರೆ ಆದರೆ ಅವರ ಬಳಿ ಹಣ ಉಳಿಯುವುದೆ ಇಲ್ಲ ಅವರು ಗಳಿಸಿದ ಹಣದಿಂದ ಅವರ ಆಸೆಗಳು ಪೂರೈಸುವುದೆ ಇಲ್ಲ. ಕೆಲವು ಸಮಯ ನಾವು ಎಷ್ಟೆ ಸಂಪಾದಿಸಿದರು ಹಣ ನಮ್ಮ ಬಳಿ ಉಳಿಯುವುದಿಲ್ಲ ಇದಕ್ಕೆ ಮೌರ್ಯರ ಕಾಲದ ಬುದ್ದಿವಂತ ರಾಜಕಾರಣಿಯಾದ ಆಚಾರ್ಯ ಚಾಣಕ್ಯರವರು ಚಾಣಕ್ಯ ನೀತಿ ಎಂಬ ಪುಸ್ತಕದಲ್ಲಿ ಹಣ ಉಳಿಯದೆ ಇರಲು ನಾಲ್ಕು ಕಾರಣಗಳನ್ನು ತಿಳಿಸಿದ್ದಾರೆ. ಮೊದಲನೆಯ ಕಾರಣ ಮೂರ್ಖರನ್ನು ಸನ್ಮಾನಿಸುವುದು. ಚಾಣಕ್ಯರವರು ಯಾವ ಮನೆಯಲ್ಲಿ ಮೂರ್ಖರಿಗೆ ಸನ್ಮಾನ ಆಗುತ್ತದೆಯೊ ಅವರ ಮನೆಯಲ್ಲಿ ಲಕ್ಷ್ಮೀದೇವಿ ಉಳಿಯುವುದಿಲ್ಲ ಎಂದು ಹೇಳಿದ್ದಾರೆ. ಮೂರ್ಖರು ಎಂದರೆ ಅಜ್ಞಾನಿಗಳು ಮಾಟ ಮಂತ್ರ ಮಾಡುವವರು, ಸುಳ್ಳು ಭವಿಷ್ಯ ಹೇಳುವವರು ಇವರನ್ನು ನಂಬುವವರು ಇವರಿಗೆ ಹೆಚ್ಚು ಹಣವನ್ನು ಖರ್ಚು ಮಾಡುತ್ತಾರೆ. ಮಾಟ ಮಂತ್ರ ಮಾಡುವವರು, ಸುಳ್ಳು ಭವಿಷ್ಯ ಹೇಳುವವರಿಗೆ ಜ್ಞಾನ ಇರುವುದಿಲ್ಲ, ಅವರು ಹೇಳುವ ಮಾತಿನಲ್ಲಿ ಅರ್ಥ ಇರುವುದಿಲ್ಲ, ಅವರು ಹೇಳುವ ಮಾತಿಗೆ ಯಾವುದೇ ಶಾಸ್ತ್ರದ ಆಧಾರವು ಇರುವುದಿಲ್ಲ. ಯಾವ ವ್ಯಕ್ತಿ ಇಂಥವರಿಗೆ ಪೂಜೆ ಮಾಡುತ್ತಾರೊ ಅವರ ಮನೆಯಲ್ಲಿ ದುಡ್ಡು ಎಂದಿಗೂ ಉಳಿಯುವುದಿಲ್ಲ. ಯಾವ ಮನೆಯಲ್ಲಿ ಜ್ಞಾನ ಹೊಂದಿದವರಿಗೆ ಪೂಜೆ ಮಾಡುತ್ತಾರೊ, ಜ್ಞಾನ ಆಧಾರಿತ ಯೋಗ್ಯ ಮಾರ್ಗದರ್ಶನ ನೀಡುವವರನ್ನು ನಂಬುತ್ತಾರೊ ಅವರ ಮನೆಯಲ್ಲಿ ಲಕ್ಷ್ಮೀದೇವಿ ನೆಲೆಸುತ್ತಾಳೆ, ಸದಾ ಅಲ್ಲಿಯೆ ವಾಸಿಸುತ್ತಾಳೆ. ಅವರ ಜೀವನದಲ್ಲಿ ಕಷ್ಟ ಕಡಿಮೆ ಇರುತ್ತದೆ ಎಂದು ಚಾಣಕ್ಯರವರು ಹೇಳಿದ್ದಾರೆ.

ಎರಡನೆ ಕಾರಣ ಯಾವ ಮನೆಯಲ್ಲಿ ದುಡ್ಡನ್ನು ಉಳಿತಾಯ ಮಾಡುತ್ತಾರೊ ಅವರ ಮನೆಯಲ್ಲಿ ಕಷ್ಟಕ್ಕೆ ಬೆಲೆ ಇರುತ್ತದೆ. ಯಾವ ವ್ಯಕ್ತಿಗೆ ಉಳಿತಾಯ ಮಾಡುವ ಮನೋಭಾವನೆ ಇರುವುದಿಲ್ಲವೊ ಅವನ ಮನಸ್ಸು ದುಡ್ಡು ಖರ್ಚು ಮಾಡುವುದರಲ್ಲಿ ಇರುತ್ತದೆ. ಕೆಲವರು ನಾಳೆ ಹೇಗಿರುತ್ತದೆ ಯಾರಿಗೊತ್ತು ಇವತ್ತು ಹಣ ಖರ್ಚು ಮಾಡಿ ಎಂಜಾಯ್ ಮಾಡೋಣ ಎಂದು ಯೋಚಿಸುತ್ತಾರೆ ಆದರೆ ಅಂಥವರ ಜೀವನದಲ್ಲಿ ಇದ್ದಕ್ಕಿದ್ದಂತೆ ಏನಾದರೂ ಕಷ್ಟ ಬಂದರೆ ಅನಾರೋಗ್ಯ, ಜಾಬ್ ಕಳೆದುಕೊಳ್ಳುವುದು ಇಂತಹ ಸಮಯದಲ್ಲಿ ಅವರ ಬಳಿ ಹಣ ಇರುವುದಿಲ್ಲ ಆಗ ಅವರು ಬೇರೆಯವರ ಬಳಿ ಹಣ ಕೇಳುತ್ತಾರೆ. ಬುದ್ಧಿವಂತ ವ್ಯಕ್ತಿ ತನ್ನ ಜೀವನದಲ್ಲಿ ಕಷ್ಟ ಬರಬಹುದು, ತಾನು ಹಣ ಸಂಗ್ರಹ ಮಾಡಬೇಕು ಎಂದು ಹಣವನ್ನು ಉಳಿಸುತ್ತಾನೆ. ಆ ಹಣವು ಅವನ ಆಪತ್ಕಾಲದಲ್ಲಿ ಸಹಾಯವಾಗುತ್ತದೆ. ಚಾಣಕ್ಯರವರ ಪ್ರಕಾರ ಮೂರನೆ ಕಾರಣ ಯಾವ ಮನೆಯಲ್ಲಿ ಗಂಡ-ಹೆಂಡತಿ ಸಣ್ಣ ಸಣ್ಣ ಸನ್ನಿವೇಶಕ್ಕೂ ಕೋಪಮಾಡಿಕೊಂಡು ಜಗಳವಾಡುತ್ತಾರೊ ಅವರ ಮನೆಯಲ್ಲಿ ಲಕ್ಷ್ಮೀದೇವಿ ಎಂದಿಗೂ ನೆಲೆಸುವುದಿಲ್ಲ ಏಕೆಂದರೆ ಗಂಡ ಟೆನ್ಶನ್ ಮಾಡಿಕೊಂಡು ಬಾರ್ ಗೆ ಹೋಗುತ್ತಾನೆ, ಹೆಂಡತಿ ಪರಿಹಾರ ಸಿಗಲಿ ಎಂದು ಜ್ಯೋತಿಷ್ಯರ ಬಳಿ ಹೋಗುತ್ತಾಳೆ ಇದರಿಂದ ಅವರ ಹಣ ಅಲ್ಲಿಯೆ ಖರ್ಚಾಗುತ್ತದೆ. ಗಂಡ ಹೆಂಡತಿಯರ ಈ ಸ್ವಭಾವ ಅವರ ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಆದ್ದರಿಂದ ಇಂತಹ ಮನೆಯಲ್ಲಿ ಲಕ್ಷ್ಮೀದೇವಿ ಎಂದಿಗೂ ವಾಸಿಸುವುದಿಲ್ಲ.

ನಾಲ್ಕನೆ ಕಾರಣ ಶತ್ರು. ಚಾಣಕ್ಯರವರ ಪ್ರಕಾರ ಶತ್ರು ಎಂದರೆ ನಾವು ಕೆಟ್ಟ ಸ್ವಭಾವದವರೊಂದಿಗೆ ಸ್ನೇಹ ಮಾಡಿದರೆ ಅವರೆ ನಮಗೆ ಶತ್ರುಗಳು. ನಮ್ಮ ಹಣ ಅವರ ಬಳಿ ಹೋದರೆ ಅದು ದುರಾದೃಷ್ಟ ವಿಷಯ. ನಾವು ಕಷ್ಟಪಟ್ಟು ದುಡಿದ ಹಣ ನಮ್ಮ ಶತ್ರುಗಳಿಗೆ ಹೋದರೆ ಎರಡು ರೀತಿ ಸಮಸ್ಯೆ ಎದುರಿಸಬೇಕಾಗುತ್ತದೆ. ಮೊದಲನೆಯ ಸಮಸ್ಯೆ ಹಣ ಕೈತಪ್ಪಿ ಹೋಗುತ್ತದೆ, ಎರಡನೆಯ ಸಮಸ್ಯೆ ಅವರು ನಮ್ಮ ಹಣವನ್ನು ನಮ್ಮ ವಿರುದ್ಧವೆ ಬಳಸಿಕೊಳ್ಳುತ್ತಾರೆ. ಹೀಗಾಗಿ ಈ ವಿಷಯವನ್ನು ಗಮನದಲ್ಲಿಟ್ಟುಕೊಂಡು ಅದರಂತೆ ನಡೆದುಕೊಳ್ಳಬೇಕು ಆಗ ನಾವು ದುಡಿದ ಹಣ ನಮಗೆ ಉಳಿಯುತ್ತದೆ.

Leave A Reply

Your email address will not be published.

error: Content is protected !!