ಜಗನ್ ರಾಜ್ಯದಲ್ಲಿ ಆಕ್ಸಿಜನ್ ಸಮಸ್ಯೆ ಆಗದಂತೆ ಸಕತ್ ಪ್ಲಾನ್

0

ಭಾರತದಲ್ಲಿ ಈಗ ಕೊರೊನಾದ ಎರಡನೇ ಅಲೆ ತೀವ್ರವಾಗಿದ್ದು, ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಹೀಗಾಗಿ ಕೊರೊನಾ ಪ್ರಕರಣಗಳ ಸಂಖ್ಯೆ ಯಾವಾಗ ಕುಸಿತವಾಗುತ್ತದೆ ಎನ್ನುವ ಬಗ್ಗೆ ಅಂಕಿಅಂಶಗಳ ತಜ್ಞರು, ವಿಜ್ಞಾನಿಗಳು ಅಧ್ಯಯನ ನಡೆಸಿ ಮಾಹಿತಿ ನೀಡಿದ್ದಾರೆ. ಇನ್ನು ಭಾರತದಲ್ಲಿ ಕೊರೋನಾ 2ನೇ ಅಲೆಗೆ ಕಾರಣವಾಗಿರುವ ರೂಪಾಂತರಿ ಕೊರೊನಾ ವೈರಸ್‌ ಈ ಹಿಂದೆ ಪತ್ತೆ ಆದ ಕೊರೋನಾ ಪ್ರಭೇದಕ್ಕಿಂತ ಎರಡೂವರೆ ಪಟ್ಟು ಅಧಿಕ ವೇಗದಲ್ಲಿ ಸೋಂಕನ್ನು ಹರಡಲು ಕಾರಣವಾಗುತ್ತಿದೆ. ಒಬ್ಬ ವ್ಯಕ್ತಿಯಿಂದ ಮೂವರಿಗೆ ಸೋಂಕು ಹರಡುವ ಸಾಧ್ಯತೆ ಇದೆ ಎಂದು ಅಧ್ಯಯನವೊಂದು ತಿಳಿಸಿದೆ. ಈ ಸಂದರ್ಭದಲ್ಲಿ ಆಂಧ್ರಪ್ರದೇಶದಲ್ಲಿ ಆಕ್ಸಿಜನ್ ಸಮಸ್ಯೆ ಎದುರಾಗದಂತೆ ಜಗನ್ ಮೋಹನ್ ರೆಡ್ಡಿ ಅವರು ಅಲ್ಲಿನ ಜನತೆಗಾಗಿ ಉತ್ತಮ ಉಪಾಯ ಮಾಡಿದ್ದಾರೆ. ಜನಹಿತಕ್ಕಾಗಿ ಜಗನ್ ಮೋಹನ್ ರೆಡ್ಡಿ ತೆಗೆದುಕೊಂಡ ಆ ನಿರ್ಧಾರ ಏನು? ಎಂಬುದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ದೇಶದಾದ್ಯಂತ ಕೊರೊನಾ ಸೋಂಕು ಏರಿಕೆ ಬೆನ್ನಲ್ಲೇ ಆಕ್ಸಿಜನ್ ಸಮಸ್ಯೆ ಉಂಟಾಗಿದೆ. ಈ ಹಿನ್ನೆಲೆ ಮುಂದಿನ ದಿನಗಳಲ್ಲಿ ಆಕ್ಸಿಜನ್ ಸಮಸ್ಯೆ ಎದುರಾಗದಂತೆ ಮುನ್ನೆಚ್ಚರಿಕೆ ತೆಗೆದುಕೊಂಡಿರುವ ಆಂಧ್ರಪ್ರದೇಶ ಮುಖ್ಯಮಂತ್ರಿ ವೈ ಎಸ್ ಜಗನ್​ಮೋಹನ್ ರೆಡ್ಡಿ ಖಡಕ್ ಆದೇಶವೊಂದನ್ನ ಹೊರಡಿಸಿದ್ದಾರೆ. ಜಗನ್ ಮೋಹನ್ ರೆಡ್ಡಿ ತನ್ನ ತಂದೆ ವೈಎಸ್ಆರ್ ಮರಣದ ನಂತರ ಕೂಡಾ ಜನಪರ ಕಾರ್ಯದಲ್ಲಿ ತನ್ನನ್ನು ತಾವು ತೊಡಗಿಸಿಕೊಂಡಿದ್ದರು. ತನ್ನ ತಂದೆಯ ಮರಣದ ಆರು ತಿಂಗಳ ನಂತರ ಅವರು ತಮ್ಮ ತಂದೆಯ ಮರಣದ ಸುದ್ದಿಯಿಂದ ಆತ್ಮಹತ್ಯೆ ಮಾಡಿಕೊಂಡ ಅಥವಾ ಅನಾರೋಗ್ಯಕ್ಕೆ ಒಳಗಾದವರ ಕುಟುಂಬಗಳಿಗೆ ಸಾಂತ್ವಾನ ಹೇಳಲು ಓದಾರ್ಪು ಯಾತ್ರೆ ಪ್ರಾರಂಭಿಸಿದ್ದನ್ನು ಮರೆಯುವ ಹಾಗಿಲ್ಲ. ಅದರಂತೆ ಈಗ ಜಗನ್ ಮೋಹನ್ ರೆಡ್ಡಿ ಮತ್ತೆ ಅಂದ್ರದ ಮುಖ್ಯಮಂತ್ರಿ ಆಗಿ ಅಲ್ಲಿನ ಜನತೆಗೆ ಸಾಕಶ್ಟು ರೀತಿಯ ಜನಪರ ಕಾರ್ಯಗಳನ್ನು ಮಾಡಿದ್ದಾರೆ.

ಕೋರೋನ ಮಹಾಮಾರಿಯಿಂದಾಗಿ ತನ್ನ ತಂದೆ ಹಾಗೂ ತಾಯಿ ಇಬ್ಬರನ್ನೂ ಕಳೆದುಕೊಂಡು ಅನಾಥವಾದ ರಾಜ್ಯದ ಪ್ರತಿಯೊಬ್ಬ ಮಗುವಿನ ಹೆಸರಲ್ಲೂ ಹತ್ತು ಲಕ್ಷ ರೂಪಾಯಿ ಠೇವಣಿ ಇಡುವಂತೆ ಸಿಎಂ ಜಗನ್ ಮೋಹನ್ ರೆಡ್ಡಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಕೊರೋನದಿಂದಾಗಿ ತಂದೆ ತಾಯಿ ಕಳೆದುಕೊಂಡು ಅನಾಥರಾದ ಮಕ್ಕಳ ನೆರವಿದೆ ದೆಹಲಿ ಹಾಗೂ ಮಧ್ಯಪ್ರದೇಶ ತೆಗೆದುಕೊಂಡ ನಿರ್ಧಾರ ಇಡೀ ದೇಶದ ಗಮನ ಸೆಳೆದಿತ್ತು. ಸದ್ಯ ಇದೇ ವಿಚಾರವಾಗಿ ಆಂಧ್ರ ಪ್ರದೇಶ ಸರ್ಕಾರವೂ ದಿಟ್ಟ ಹೆಜ್ಜೆ ಇಟ್ಟಿದ್ದು ಈ ವಿಚಾರ ಇತ್ತೀಚೆಗೆ ಅಷ್ಟೇ ಸಾಕಷ್ಟು ವೈರಲ್ ಆಗಿತ್ತು. ಇದೇ ಹಿನ್ನಲೆಯಲ್ಲಿ ಜಗನ್ ಮೋಹನ್ ರೆಡ್ಡಿ ಅವರು ಇನ್ನೊಂದು ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ. ಆಕ್ಸಿಜನ್ ಸಮಸ್ಯೆ ಎದುರಿಸುತ್ತಾ ಇರುವ ಜನರಿಗೆ ಆಕ್ಸಿಜನ್ ಕೊರತೆ ಉಂಟಾಗದ ಹಾಗೆ ಮಾಡಲು ಒಂದು ತೀರ್ಮಾನ ಕೈಗೊಳ್ಳಲಾಗಿದೆ.

ರಾಜ್ಯದಲ್ಲಿ 50 ಬೆಡ್​​ಗಳಿಗಿಂತ ಹೆಚ್ಚಿರುವ ಪ್ರತಿಯೊಂದು ಕೋವಿಡ್​ ಆಸ್ಪತ್ರೆಯಲ್ಲೂ ಸಹ ಆಕ್ಸಿಜನ್​ ವಿಚಾರದಲ್ಲಿ 4 ತಿಂಗಳ ಒಳಗೆ ಸ್ವಾವಲಂಬಿಯಾಗಬೇಕು. ಎಲ್ಲಾ ಆಸ್ಪತ್ರೆಗಳೂ ಸಹ ಆಕ್ಸಿಜನ್ ಜನರೇಟರ್​ಅನ್ನು ಹೊಂದಿರಬೇಕು. ಪ್ರತಿಯೊಂದು ಆಸ್ಪತ್ರೆ ತನಗೆ ಬೇಕಾದಷ್ಟು ಆಕ್ಸಿಜನ್​ಅನ್ನು ತಾವೇ ತಯಾರಿಸಿಕೊಳ್ಳುವಂತೆ ಆಗಬೇಕು ಎಂದು ಸಭೆಯಲ್ಲಿ ಖಡಕ್ ಆದೇಶವನ್ನು ಹೊರಡಿಸಿದ್ದಾರೆ. ಮುಂದುವರೆದು ಸರ್ಕಾರಿ ಆಸ್ಪತ್ರೆಗಳಲ್ಲಿ ಸರ್ಕಾರವೇ ಈ ಸೌಲಭ್ಯವನ್ನು ನೀಡಲಿದ್ದು ಖಾಸಗಿ ಆಸ್ಪತ್ರೆಗಳಿಗೆ ಧನಸಹಾಯ ಮಾಡಲಾಗುವುದು ಎಂದು ಜಗನ್ ಮೋಹನ್ ರೆಡ್ಡಿ ಹೇಳಿದ್ದಾರೆ. ಈ ಮೂಲಕ ಆಂಧ್ರಪ್ರದೇಶದಲ್ಲಿ ಇನ್ನು ಮುಂದೆ ಆಕ್ಸಿಜನ್ ಸಮಸ್ಯೆ ಎದುರಾಗದ ಹಾಗೆ ಮಾಡುವ ಯೋಜನೆ ಮಾಡಿಕೊಂಡಿದ್ದಾರೆ ಅಲ್ಲಿನ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರು.

Leave A Reply

Your email address will not be published.

error: Content is protected !!
Footer code: