ಈ ಕೊರೊನ ಟೈಮ್ ನಲ್ಲಿ ತಮ್ಮ ಸ್ವಂತ ಖರ್ಚಿನಲ್ಲಿ ಸಾವಿರಾರು ಜನರಿಗೆ ಉಚಿತ ಊಟ ವ್ಯವಸ್ಥೆ ಮಾಡಿರುವ ಬೆಂಗಳೂರು ಪೊಲೀಸ್

0

ಕೊರೋನ ವೈರಸ್ ದೇಶದಾದ್ಯಂತ ತಾಂಡವವಾಡುತ್ತಿದೆ, ನಮ್ಮ ಕರ್ನಾಟಕ ರಾಜ್ಯದಲ್ಲಿಯೂ ಸಾಕಷ್ಟು ಸಾವು-ನೋವು ಸಂಭವಿಸುತ್ತಿದೆ. ಇಂತಹ ಕಷ್ಟದ ಸಮಯದಲ್ಲಿ ಹಲವು ಸೆಲೆಬ್ರಿಟಿಗಳು, ಜನಸಾಮಾನ್ಯರು ಹಾಗೂ ಡಾಕ್ಟರ್ಸ್ ತಮ್ಮಿಂದ ಸಾಧ್ಯವಿರುವ ಅನೇಕ ಸಹಾಯವನ್ನು ಮಾಡುತ್ತಿರುವುದನ್ನು ಕೇಳುತ್ತಿದ್ದೇವೆ ಆದರೆ ಬೆಂಗಳೂರು ನಗರದ ಕೆಲವು ಏರಿಯಾಗಳಲ್ಲಿ ಪೋಲಿಸರು ಪ್ರತಿದಿನ ಕಷ್ಟದಲ್ಲಿರುವವರಿಗೆ ಊಟದ ವ್ಯವಸ್ಥೆ ಮಾಡುತ್ತಿದ್ದಾರೆ. ಹಾಗಾದರೆ ಬೆಂಗಳೂರಿನ ಯಾವ ಏರಿಯಾ ಪೋಲಿಸರು, ಯಾರಿಗೆ ಊಟವನ್ನು ನೀಡುತ್ತಿದ್ದಾರೆ ಹಾಗೂ ಇನ್ನಿತರ ಮಾಹಿತಿಯನ್ನು ನೋಡೋಣ.

ಕೊರೋನ ವೈರಸ್ ದಿನೇ ದಿನೇ ಹೆಚ್ಚುತ್ತಿರುವ ಕಾರಣ, ಕೊರೋನ ವೈರಸ್ ನಿಯಂತ್ರಣ ಮಾಡುವ ಸಲುವಾಗಿ ಕರ್ನಾಟಕ ರಾಜ್ಯದಲ್ಲಿ ಕೆಲವು ದಿನಗಳಿಂದ ಲಾಕ್ ಡೌನ್ ಮಾಡಲಾಯಿತು. ಇಂತಹ ಸಮಯದಲ್ಲಿ ಜನರು ಅನಾವಶ್ಯಕ ಓಡಾಡುತ್ತಿದ್ದುದರಿಂದ ಪೋಲಿಸರು ಕೆಲವರಿಗೆ ಲಾಠಿಚಾರ್ಜ್ ಮಾಡಿದ್ದಾರೆ ಇದನ್ನು ಮೀಡಿಯಾಗಳಲ್ಲಿ ತೋರಿಸುತ್ತಿರುವುದನ್ನು ನಾವು ನೋಡಿದ್ದೇವೆ ಆದರೆ ಬೆಂಗಳೂರಿನ ಕೆಲವು ಏರಿಯಾಗಳಲ್ಲಿ ಪೋಲಿಸರು ಕಷ್ಟದಲ್ಲಿರುವವರಿಗೆ ಊಟದ ಸಹಾಯವನ್ನು ಮಾಡುತ್ತಿದ್ದಾರೆ. ಲಾಕ್ ಡೌನ್ ಇಂದ ಹಲವಾರು ಕೂಲಿ ಕಾರ್ಮಿಕರು, ದಿನದ ಸಂಪಾದನೆಯನ್ನೇ ನಂಬಿಕೊಂಡು ಬದುಕುತ್ತಿದ್ದ ಬಡವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಸಂದಿಗ್ಧ ಸಮಯದಲ್ಲಿ ನಗರ ಪೋಲಿಸರು ಅವರ ಸಹಾಯಕ್ಕೆ ಧಾವಿಸಿದ್ದಾರೆ. ಚೆನ್ನಮ್ಮನ ಕೆರೆ ಠಾಣೆ ಇನ್ಸ್​​ಪೆಕ್ಟರ್ ಜನಾರ್ದನ್​​ ಹಾಗೂ ಸಬ್ ಇನ್ಸ್​​ಪೆಕ್ಟರ್ ಮನೋಜ್​​​ ಅವರು ಕತ್ರಿಗುಪ್ಪೆ, ಬನಶಂಕರಿ, ಚನ್ನಮ್ಮನಕೆರೆ, ಹೊಸಕೆರೆಹಳ್ಳಿ, ಇಟ್ಟಮಡು ಏರಿಯಾ ಜನರಿಗೆ ಪ್ರತಿನಿತ್ಯ ಆಹಾರ ವಿತರಣೆ ಮಾಡುತ್ತಿದ್ದಾರೆ.

ಚನ್ನಮ್ಮನ ಕೆರೆ ಠಾಣೆ ಪೋಲಿಸರು ಹಸಿದವರ ಹೊಟ್ಟೆ ತುಂಬಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಪೋಲಿಸರು ತಮ್ಮ ಸ್ವಂತ ಖರ್ಚಿನಲ್ಲಿ ಪ್ರತಿನಿತ್ಯ ಸಾವಿರ ಜನರಿಗೆ ಮಧ್ಯಾಹ್ನ ಹಾಗೂ ರಾತ್ರಿ ಊಟ ಕೊಡುತ್ತಿದ್ದಾರೆ. ಠಾಣೆ ಆವರಣದಲ್ಲಿ ಊಟ ತಯಾರಿಸಿ ಪ್ರತಿನಿತ್ಯ ಸಾವಿರ ಫುಡ್ ಕಿಟ್ ಗಳನ್ನು ವಿತರಣೆ ಮಾಡುತ್ತಿದ್ದಾರೆ. ಪ್ರತಿದಿನ ಬಡಜನರಿಗೆ, ನಿರ್ಗತಿಕರಿಗೆ, ಬೀದಿಬದಿ ವ್ಯಾಪಾರಿಗಳಿಗೆ ಆಹಾರ ಕೊಡುತ್ತಿದ್ದಾರೆ. ಇನ್ಸ್ ಪೆಕ್ಟರ್ ಹಾಗೂ ಸಬ್ ಇನ್ಸ್ ಪೆಕ್ಟರ್ ಅವರ ಈ ಕಾರ್ಯಕ್ಕೆ ಹಿರಿಯ ಅಧಿಕಾರಿಗಳು ಮತ್ತು ಏರಿಯಾದ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಮ್ಮ ಕರ್ನಾಟಕ ರಾಜ್ಯದಲ್ಲಿ ಕೊರೋನ ವೈರಸ್ ಗೆ ಬಲಿಯಾಗಿ ಸತ್ತವರು ಅದೆಷ್ಟೋ ಜನರಾದರೆ, ಮಾಡಲು ಕೆಲಸ ಇಲ್ಲದೆ ಊಟಕ್ಕೆ ಅನ್ನವಿಲ್ಲದೆ ಪರದಾಡುತ್ತಿರುವ ಅದೆಷ್ಟೊ ಜನರನ್ನು ಪ್ರತಿದಿನ ನೋಡುತ್ತಿದ್ದೇವೆ. ಇಂತಹ ಸಮಯದಲ್ಲಿ ಸಿನಿಮಾ ಸೆಲೆಬ್ರಿಟಿಗಳು ಹಾಗೆಯೇ ಜನಸಾಮಾನ್ಯರು ತಮ್ಮಿಂದ ಆದ ಸಹಾಯವನ್ನು ಮಾಡುತ್ತಿದ್ದಾರೆ ಅದರೊಂದಿಗೆ ಬೆಂಗಳೂರಿನ ಕೆಲವು ಏರಿಯಾಗಳಲ್ಲಿ ಪೋಲಿಸರು ಊಟವನ್ನು ತಯಾರಿಸಿ ಕಷ್ಟದಲ್ಲಿರುವವರಿಗೆ ಊಟ ಕೊಟ್ಟು ಮಾನವೀಯತೆ ಮೆರೆದಿದ್ದಾರೆ, ಪೋಲಿಸರ ಈ ಕೆಲಸವು ಶ್ಲಾಘನೀಯವಾಗಿದೆ. ಅವರಿಗೆ ಇನ್ನೂ ಹೆಚ್ಚು ಜನರಿಗೆ ಊಟ ನೀಡುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಆಶಿಸೋಣ.

Leave A Reply

Your email address will not be published.

error: Content is protected !!