ಗ್ಯಾಸ್ಟ್ರಿಕ್ ಸಮಸ್ಯೆ ಅನ್ನೋರು ಹೊಕ್ಕಳಿಗೆ 2 ಹನಿ ಎಣ್ಣೆ ಬಿಟ್ರೆ ಏನಾಗುತ್ತೆ ಗೊತ್ತೇ..

0

ಇತ್ತೀಚಿನ ಆಧುನಿಕ ದಿನಗಳಲ್ಲಿ ಬಹುತೇಕ ಎಲ್ಲಾ ವಯೋಮಾನದವರನ್ನು ಮಾಡುತ್ತಿರುವಂತಹ ಸಮಸ್ಯೆ ಎಂದರೆ ಅದು ಗ್ಯಾಸ್ಟ್ರಿಕ್ ಸಮಸ್ಯೆ ಈ ರೀತಿಯಾಗಿ ಗ್ಯಾಸ್ಟ್ರಿಕ್ ಸಮಸ್ಯೆ ನಮ್ಮ ದೇಹದಲ್ಲಿ ಹೇಗೆ ಉತ್ಪತ್ತಿ ಆಗುತ್ತದೆ ಎಂದರೆ ಅದು ಈ ಮೂರು ವಿಧಗಳಲ್ಲಿನಮ್ಮ ಆಹಾರ ವಿಹಾರ ಮತ್ತು ವಿಚಾರಗಳ ಮೂಲಕ ಹೌದು ಮೊದಲನೆಯದಾಗಿ ನಾವು ಸೇವಿಸುವ ಆಹಾರ ನಮ್ಮ ದೇಹದಲ್ಲಿ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಉಂಟುಮಾಡುತ್ತದೆ

ಊಟ ಬಲ್ಲವನಿಗೆ ರೋಗವಿಲ್ಲ ಮಾತು ಬಲ್ಲವನಿಗೆ ಜಗಳವಿಲ್ಲ ಎಂಬ ಮಾತನ್ನು ನಾವು ಕೇಳಿದ್ದೇವೆ ಹಾಗೆಯೇ ನಾವು ಆದಷ್ಟು ಅಮ್ಲ ಮತ್ತು ಪಿತ್ತ ಸಹಿತ ಆಹಾರಗಳು ಅಂದರೆ ಅತಿ ಹೆಚ್ಚು ಖಾರ ಇರುವಂತಹ ಆಹಾರಗಳು ಎಣ್ಣೆಯಿಂದ ಕರಿದ ಆಹಾರಗಳನ್ನು ಸೇವಿಸುವುದನ್ನು ಆದಷ್ಟು ಕಡಿಮೆ ಮಾಡಿಕೊಳ್ಳಬೇಕು

ಇನ್ನೂ ವಿಹಾರದ ವಿಚಾರಕ್ಕೆ ಬಂದರೆ ನಾವು ಅತಿ ಹೆಚ್ಚು ಬಿಸಿಲಿನಲ್ಲಿ ವಿಹರಿಸುವುದರಿಂದ ಅಥವಾ ಬಿಸಿಲಿನಲ್ಲಿ ಕೆಲಸ ಮಾಡುವುದರಿಂದಲೂ ಕೂಡ ನಮ್ಮ ದೇಹದಲ್ಲಿ ಆಮ್ಲದ ಪ್ರಮಾಣ ಹೆಚ್ಚಾಗಿ ಅದು ಗ್ಯಾಸ್ಟಿಕ್ ಸಮಸ್ಯೆ ಆಗಿ ಬದಲಾಗುತ್ತದೆ ಹಾಗಾಗಿ ನಾವು ಅತಿ ಹೆಚ್ಚು ಸಮಯವನ್ನು ಸೂರ್ಯನ ಉರಿಬಿಸಿಲಿನಲ್ಲಿ ಕಳೆಯುವುದನ್ನು ಕಡಿಮೆ ಮಾಡಬೇಕಾಗುತ್ತದೆ

ಇನ್ನು ಮೂರನೆಯದಾಗಿ ವಿಚಾರದ ವಿಷಯಕ್ಕೆ ಬಂದರೆ ಗ್ಯಾಸ್ಟಿಕ್ ಎನ್ನುವುದು ಕೇವಲ ದೈಹಿಕ ಕಾಯಿಲೆ ಮಾತ್ರವಲ್ಲದೆ ಇದು ಒಂದು ಮಾನಸಿಕ ಕಾಯಿಲೆಯು ಕೂಡ ಹೌದು ಹೇಗೆಂದರೆ ನಮ್ಮ ಮನಸ್ಸಿನಲ್ಲಿ ಅರಿಶಡ್ವರ್ಗಗಳು ಅಂದರೆ ಕಾಮ ಕ್ರೋಧ ಲೋಭ ಮೋಹ ಮದ ಮಾತ್ಸರ್ಯ ಇವುಗಳಿಂದ ತುಂಬಿದ ಆಲೋಚನೆಗಳು ಹೆಚ್ಚಾದಲ್ಲಿ ನಮ್ಮ ದೇಹದಲ್ಲಿ ಆಮ್ಲದ ಪ್ರಮಾಣ ಹೆಚ್ಚಾಗುತ್ತದೆ ಈ ಕಾರಣದಿಂದಲೂ ಕೂಡ ನಮಗೆ ಗ್ಯಾಸ್ಟ್ರಿಕ್ ಸಮಸ್ಯೆ ಬರುತ್ತದೆ

ಹಾಗಾಗಿ ನಮ್ಮ ಆಹಾರ ಮತ್ತು ವಿಹಾರ ಪದ್ಧತಿಗಳ ಹೊರತಾಗಿಯೂ ನಮ್ಮ ಮನಸ್ಸಿನಲ್ಲಿನ ವಿಚಾರಗಳು ಕೂಡ ನಮ್ಮ ದೇಹಕ್ಕೆ ಹಾನಿ ಉಂಟು ಮಾಡಬಲ್ಲವು ಎಂಬುದಕ್ಕೆ ಇದು ಉತ್ತಮ ಉದಾಹರಣೆಯಾಗಿದೆ
ಮನಸ್ಸಿನಲ್ಲಿನ ವಿಚಾರಗಳನ್ನು ಶುದ್ಧವಾಗಿಟ್ಟುಕೊಳ್ಳುವುದು ನಮ್ಮ ಆದ್ಯ ಕರ್ತವ್ಯ ಕೂಡ ಹೌದು
ಹಾಗಾಗಿ ನಮ್ಮ ಮನಸ್ಸಿನಲ್ಲಿ ಅತಿ ಹೆಚ್ಚು ಒಳ್ಳೆಯ ಆಲೋಚನೆಗಳನ್ನು ಮಾಡುವುದು ನಮ್ಮ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ನಿವಾರಣೆ ಮಾಡುವುದಕ್ಕೆ ಸಹಾಯಕವಾಗುತ್ತದೆ

ಎಲ್ಲಾ ಹೊರತುಪಡಿಸಿ ನಾವು ನಮ್ಮ ಗ್ಯಾಸ್ಟಿಕ್ ಸಮಸ್ಯೆಯನ್ನು ಮನೆಯಲ್ಲೇ ಕುಳಿತು ನಿರ್ಮೂಲನೆ ಮಾಡಿಕೊಳ್ಳಬೇಕು ಎಂಬುವವರು ತಾವು ಎಳ್ಳೆಣ್ಣೆ ಅಥವಾ ಬಾದಾಮಿ ಎಣ್ಣೆ ಅಥವಾ ಹಸುವಿನ ತುಪ್ಪ ಈ ಮೂರರಲ್ಲಿ ಯಾವುದಾದರೂ ಒಂದನ್ನು ತಮ್ಮ ಒಕ್ಕಳಿನ ಭಾಗದಲ್ಲಿನ ಹೊಟ್ಟೆಗೆ ಹಾಕಿ ಗಡಿಯಾರ ತಿರುಗುವ ರೀತಿಯಲ್ಲಿ ಮಸಾಜ್ ಮಾಡಬೇಕು

ಹೀಗೆ ಮಾಡುವುದರಿಂದ ನಮ್ಮ ಹೊಟ್ಟೆಯ ಭಾಗದಲ್ಲಿನ ಸ್ನಾಯುಗಳ ಹಿಗ್ಗುವಿಕೆ ಮತ್ತು ಕುಗ್ಗುವಿಕೆ ಸರಾಗವಾಗಿ ಆಗುವುದರಿಂದ ಆದಷ್ಟು ಗ್ಯಾಸ್ಟಿಕ್ ಸಮಸ್ಯೆ ಕೂಡ ನಿವಾರಣೆ ಆಗುತ್ತದೆ ಇವೆಲ್ಲವನ್ನೂ ಮೀರಿಯೂ ಕೂಡ ನಮ್ಮ ಗ್ಯಾಸ್ಟಿಕ್ ಸಮಸ್ಯೆ ನಿವಾರಣೆ ಆಗದೇ ಹೋದಲ್ಲಿ ನಾವು ಯಾವುದಾದರೂ ಹತ್ತಿರದ ಆಯುರ್ವೇದ ವೈದ್ಯರನ್ನು ಕಂಡು ಅವರಲ್ಲಿ ನಾಭಿ ಚಿಕಿತ್ಸೆಯನ್ನು ಮಾಡಿಸಿಕೊಳ್ಳುವುದು ಒಳಿತು

Leave A Reply

Your email address will not be published.

error: Content is protected !!
Footer code: