WhatsApp Group Join Now
Telegram Group Join Now

ಸಾಮಾನ್ಯವಾಗಿ ಜನರು ಕೆಲವೊಂದು ಕೆಟ್ಟ ಹವ್ಯಾಸಗಳಿಂದ ತಮ್ಮ ಆರೋಗ್ಯವನ್ನು ಕೆಡಿಸಿಕೊಳ್ಳುತ್ತಾರೆ. ಇನ್ನು ಕೆಲವರು ಮಾಹಿತಿಯ ಕೊರತೆಯಿಂದ ತಪ್ಪು ಆಹಾರಾಭ್ಯಾಸವನ್ನು ಅಳವಡಿಸಿಕೊಂಡಿರುತ್ತಾರೆ. ಕೆಲ ವ್ಯಕ್ತಿಗಳು ಖಾಲಿ ಹೊಟ್ಟೆಯಲ್ಲಿಯೇ ಕೆಲವೊಂದು ಆಹಾರ ಪದಾರ್ಥಗಳನ್ನು ಸೇವಿಸುವ ಅಭ್ಯಾಸವನ್ನು ಹೊಂದಿರುತ್ತಾರೆ. ಇದರಿಂದಲೇ ಆರೋಗ್ಯ ಸಮಸ್ಯೆ ಉಂಟಾಗುತ್ತದೆ. ಹೀಗಾಗಿ ಯಾವ ಆಹಾರ ಪದಾರ್ಥಗಳನ್ನು ಬೆಳಗ್ಗೆ ಖಾಲಿಹೊಟ್ಟೆಯಲ್ಲಿ ಸೇವಿಸಬಾರದು ಎಂಬುದರ ಮಾಹಿತಿ ಇಲ್ಲಿದೆ.

ಬೆಳಗ್ಗಿನ ತಿಂಡಿ ರುಚಿಯಾಗಿರೋದನ್ನು ಬಹುತೇಕರು ಇಷ್ಟ ಪಡುತ್ತಾರೆ. ಅದ್ರಲ್ಲು ಮಸಾಲೆಯುಕ್ತ ಆಹಾರ ಹೆಚ್ಚು ರುಚಿಯಾಗಿರುತ್ತದೆ ಎಂಬ ಕಾರಣಕ್ಕೆ ಜನ ಬೆಳಗ್ಗಿನ ವೇಳೆ ಮಸಾಲೆ ಸೇರಿದ ಆಹಾರ ತಿನ್ನಲು ಬಯಸುತ್ತಾರೆ. ಆದ್ರೆ ಖಾರ ಹೆಚ್ಚಾಗಿರುವ ಆಹಾರವನ್ನು ಖಾಲಿ ಹೊಟ್ಟೆಯಲ್ಲಿ ತಿಂದರೆ ಗ್ಯಾಸ್ಟ್ರಿಕ್ ಸಮಸ್ಯೆಗಳು ಉತ್ಪನ್ನವಾಗುತ್ತವೆ. ಮೆಣಸಿನಕಾಯಿ ಮೆಣಸು ಲವಂಗ ಮೊದಲಾದ ಮಸಾಲಾ ತಿನಿಸುಗಳು ಸಹ ಖಾಲಿ ಹೊಟ್ಟೆ ಸೇರುವುದು ಒಳ್ಳೆಯದಲ್ಲ.

ಖಾಲಿ ಹೊಟ್ಟೆಯಲ್ಲಿ ಮಸಾಲೆಯುಕ್ತ ಆಹಾರವನ್ನು ಸೇವಿಸಿದಾಗ ಅದು ನೇರವಾಗಿ ಹೊಟ್ಟೆಯ ಒಳಪದರವನ್ನು ಕೆರಳಿಸುತ್ತದೆ. ಇದರಿಂದಾಗಿ ಹೊಟ್ಟೆನೋವು ಮೊದಲಾದ ಸಮಸ್ಯೆ ಉಂಟಾಗುತ್ತದೆ. ನಿಮ್ಮ ದಿನವನ್ನು ಪ್ರಾರಂಭಿಸಲು ಒಂದು ಲೋಟ ಹಣ್ಣಿನ ರಸವನ್ನು ಸೇವಿಸುವುದು ಆರೋಗ್ಯಕರ ಎಂದು ನಮ್ಮಲ್ಲಿ ಹೆಚ್ಚಿನವರು ಅನಿಸಿಕೆ ಹೊಂದಿದ್ದರೂ, ಅದು ನಿಜವಾಗದಿರಬಹುದು.

ದೀರ್ಘಾವಧಿಯ ವಿಶ್ರಾಂತಿಯ ನಂತರವೂ ಎಚ್ಚರಗೊಳ್ಳುವ ಮೇದೋಜ್ಜೀರಕ ಗ್ರಂಥಿಯ ಮೇಲೆ ಹೆಚ್ಚುವರಿ ಹೊರೆ ಬೀಳಬಹುದು.ಹೊಟ್ಟೆಯು ಖಾಲಿಯಾಗಿರುವುದರಿಂದ, ಹಣ್ಣುಗಳಲ್ಲಿನ ಫ್ರಕ್ಟೋಸ್ ರೂಪದಲ್ಲಿ ಸಕ್ಕರೆಯು ನಿಮ್ಮ ಯಕೃತ್ತಿನ ಮೇಲೆ ಅತಿಯಾದ ಹೊರೆಯನ್ನು ಉಂಟುಮಾಡಬಹುದು. ಇನ್ನು ಬೆಳಗ್ಗೆದ್ದು ಸಾಫ್ಟ್‍ ಡ್ರಿಂಕ್ ಕುಡಿಯುವುದು ಸಹ ಒಳ್ಳೆಯದಲ್ಲ. ಇವು ಸಹ ಅಸಿಡಿಟಿಯನ್ನು ಉಂಟು ಮಾಡುತ್ತವೆ.

ದೇಹದಲ್ಲಿರುವ ಉದರದ ಆಮ್ಲಗಳೊಂದಿಗೆ ಸಾಫ್ಟ್ ಡ್ರಿಂಕ್ಸ್ ಸೇರಿ ಸ್ನಾಯು ಸೆಳೆತ, ಬಾಡಿ ಪೆಯಿನ್ಸ್ ಕಾಣಿಸಿಕೊಳ್ಳಬಹುದು. ಒಂದು ಕಪ್ ಕಾಫಿಯೊಂದಿಗೆ ದಿನವನ್ನು ಪ್ರಾರಂಭಿಸುವುದು ತುಂಬಾ ಸಾಮಾನ್ಯವಾದ ಅಭ್ಯಾಸವಾಗಿದೆ. ನಿದ್ರೆಯಿಂದ ಹೊರಬರಲು ಇದು ಸುಲಭವಾದ ಮಾರ್ಗವೆಂದು ತೋರುತ್ತದೆ, ಆದರೆ ಖಾಲಿ ಹೊಟ್ಟೆಯಲ್ಲಿ ಕಾಫಿ ಕುಡಿಯುವುದು ಅಸಿಡಿಟಿಗೆ ಕಾರಣವಾಗಬಹುದು.

ಇದು ಜೀರ್ಣಾಂಗ ವ್ಯವಸ್ಥೆಯಲ್ಲಿ ಹೈಡ್ರೋಕ್ಲೋರಿಕ್ ಆಮ್ಲದ ಸ್ರವಿಸುವಿಕೆಯನ್ನು ಉತ್ತೇಜಿಸುತ್ತದೆ ಸಾಮಾನ್ಯವಾಗಿ ರಾತ್ರಿ ಬಾಳೆ ಹಣ್ಣು ಸೇವನೆ ಮಾಡುವುದರಿಂದ ದೇಹದಲ್ಲಿ ಪಚನ ಕ್ರಿಯೆ ಸರಾಗವಾಗಿ ನಡೆಯುತ್ತೆ.. ಆದ್ರೆ ಬಾಳೆಹಣ್ಣುಗಳನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನುವುದು ತಪ್ಪು ಏಕೆಂದರೆ ಬಾಳೆಹಣ್ಣುಗಳಲ್ಲಿ ಮೆಗ್ನೀಸಿಯಮ್ ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ ಇದು ರಕ್ತದ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಹೃದಯದ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ಆದರೆ ಚೆನ್ನಾಗಿ ಕಳಿತ ಬಾಳೆಹಣ್ಣನ್ನು ಬೆಳಗ್ಗೆ ತಿನ್ನಬಹುದು. ಇದು ಯಾವುದೇ ರೀತಿಯಲ್ಲಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದಿಲ್ಲ ನಿಂಬೆ, ಆರೆಂಜ್, ಪೇರಳೆ,ಮೊಸಂಬಿಯಂತಹ ಹಣ್ಣುಗಳಲ್ಲಿ ಅನೇಕ ವಿಟಮಿನ್ ಗಳಿವೆ. ಆದ್ರೆ ಈ ಖಾಲಿ ಹೊಟ್ಟೆಯಲ್ಲಿ ಸಿಟ್ರಸ್ ಹಣ್ಣುಗಳನ್ನು ತಿನ್ನುವುದು ಅಸಿಡಿಟಿ ಹೆಚ್ಚಳಕ್ಕೆ ಕಾರಣವಾಗಬಹುದು. ಇದಲ್ಲದೆ ಈ ಹಣ್ಣುಗಳಲ್ಲಿ ಹೆಚ್ಚಿನ ಫೈಬರ್ ಮತ್ತು ಫ್ರಕ್ಟೋಸ್ ಖಾಲಿ ಹೊಟ್ಟೆಯಲ್ಲಿ ತಿಂದರೆ ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ನಿಧಾನಗೊಳಿಸುತ್ತದೆ.

ಹಸಿ ತರಕಾರಿಗಳನ್ನ ದಿನದ ಯಾವುದೇ ಸಮಯದಲ್ಲಿ ಸೇವಿಸಬಹುದು ಆರೋಗ್ಯಕ್ಕೆ ಉತ್ತಮ ಎಂದು ಎಲ್ಲರೂ ಅಂದುಕೊಳ್ಳುತ್ತಾರೆ. ಆದರೆ ಖಾಲಿ ಹೊಟ್ಟೆಯಲ್ಲಿ ಹಸಿ ತರಕಾರಿ ಸೇವಿಸುವುದು ಸೂಕ್ತವಲ್ಲ. ದಿನದ ಆರಂಭದಲ್ಲಿ ನೀವು ಹಸಿ ತರಕಾರಿಗಳನ್ನು ಸೇವಿಸಿದರೆ, ಜೀರ್ಣಕ್ರಿಯೆ ಕಠಿಣವಾಗಿರುತ್ತದೆ. ಇದು ಬಳಿಕ ಹೊಟ್ಟೆ ನೋವಿಗೆ ಕಾರಣವಾಗುತ್ತದೆ. ಖಾಲಿ ಹೊಟ್ಟೆಯಲ್ಲಿ ಇವುಗಳನ್ನು ತಿನ್ನುವುದು ಮಾತ್ರ ಮಾಡಬಾರದು. ಆ ರೀತಿ ಮಾಡಿದರೆ ಸ್ಟಮಕ್ ಲೈನಿಂಗ್ ಹಾಳಾಗುತ್ತದೆ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: