ಕೊರೊನ ನಾಶಮಾಡಲು ಈ ಹುಡುಗಿ ಮಾಡಿರುವ ಸಕತ್ ಪ್ಲಾನ್ ಏನು ಗೊತ್ತೇ?

0

ಕೊರೋನ ವೈರಸ್ ದಿನೇ ದಿನೇ ಹರಡುತ್ತಿದ್ದು, ಅನೇಕರು ಕೊರೋನ ವೈರಸ್ ಗೆ ಬಲಿಯಾಗಿ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ನಾವು ನಮ್ಮವರನ್ನು ಕಳೆದುಕೊಳ್ಳುತ್ತೇವೆ ಎಂಬ ಭಯ ಎಲ್ಲರನ್ನು ಕಾಡುತ್ತಿದೆ. ಇಂಥ ಸಮಯದಲ್ಲಿ ಇಂದಿನ ಮಕ್ಕಳು ತಮ್ಮದೆ ಆದ ರೀತಿಯಲ್ಲಿ ವಿಭಿನ್ನವಾಗಿ, ವಿಶೇಷವಾಗಿ ಆವಿಷ್ಕಾರ ಮಾಡುತ್ತಿದ್ದಾರೆ. ಅವರಲ್ಲಿ ಪಶ್ಚಿಮ ಬಂಗಾಳ ಮೂಲದ ವಿದ್ಯಾರ್ಥಿಯೊಬ್ಬಳು ಹೊಸರೀತಿಯಲ್ಲಿ ಮಾಸ್ಕ್ ತಯಾರಿಸಿದ್ದಾಳೆ. ಹಾಗಾದರೆ ಅವಳು ಯಾರು ಹಾಗೂ ಅವಳು ತಯಾರಿಸಿದ ಮಾಸ್ಕ್ ಬಗ್ಗೆ ಈ ಲೇಖನದಲ್ಲಿ ನೋಡೋಣ.

ಇತ್ತೀಚಿನ ದಿನಗಳಲ್ಲಿ ನಮ್ಮ ಯುವ ಸಮುದಾಯ ಅದರಲ್ಲೂ ವಿದ್ಯಾರ್ಥಿಗಳು ಹೊಸ ಹೊಸ ಅವಿಷ್ಕಾರದಲ್ಲಿ ತೊಡಗಿಕೊಳ್ಳುತ್ತಿದ್ದಾರೆ ಇದು ವಿಶೇಷ ಹಾಗೂ ಹೆಮ್ಮೆ ತರುವಂತಹ ವಿಷಯವಾಗಿದೆ. ಕೊರೋ‌ನ ವೈರಸ್ ಹೆಚ್ಚಾಗುತ್ತಿರುವ ಈ ಸಮಯದಲ್ಲಿ ಪುಟ್ಟ ಹುಡುಗಿಯೊಬ್ಬಳು ಆವಿಷ್ಕಾರ ಮಾಡಿರುವುದು ಅಂತಿಂಥ ಐಡಿಯಾ ಅಲ್ಲಾ. ಈ ಐಡಿಯಾ ಬಳಸಿದರೆ ಸಾಕು ಕೊರೋನ ನಮ್ಮ ಹತ್ತಿರವೂ ಸುಳಿಯುವುದಿಲ್ಲ, ಸುಳಿದರೂ ಅದು ಉಳಿಯಲ್ಲ. ದಿಗಂತಿಕ ಬೋಸ್ ಎಂಬ ಪಿಯುಸಿ ವಿದ್ಯಾರ್ಥಿನಿ ಪಶ್ಚಿಮ ಬಂಗಾಳದ ಪೂರ್ವ ಬೃಂದಾವನದವಳು. ಇವಳು ಕೊರೋನವನ್ನು ಗೆಲ್ಲುವ ಮಾಸ್ಕ್ ಅನ್ನು ಕಂಡು ಹಿಡಿದಿದ್ದಾಳೆ. ಕೊರೋನ ಮೊದಲ ಅಲೆಯಲ್ಲೆ ಈ ಮಾಸ್ಕ್ ಅನ್ನು ಅನ್ವೇಷಣೆ ಮಾಡಿದ್ದಳು ಆದರೆ ಇದು ಪರಿಚಯವಾಗಿರಲಿಲ್ಲ. ಈ ಮಾಸ್ಕ್ ನ ವಿಶೇಷತೆ ಏನೆಂದರೆ ಮಾಸ್ಕ್ ನಲ್ಲಿ ಮೂರು ಚೇಂಬರ್ ಗಳು ಇದ್ದು ಧೂಳು ಮತ್ತು ಇತರೆ ಕಣಗಳನ್ನು ತಡೆದು, ನಂತರ ಎರಡನೆ ಚೇಂಬರ್ ಗೆ ಗಾಳಿ ಬರುತ್ತದೆ, ಇನ್ನು ಮೂರನೆ ಚೇಂಬರ್ ಅನ್ನು ಕೆಮಿಕಲ್ ಚೆಂಬರ್ ಎಂದು ಕರೆಯಲಾಗುತ್ತಿದ್ದು ಸೋಪು ಮತ್ತು ನೀರಿನ ಮಿಶ್ರಣ ಇದ್ದು ಅಲ್ಲೆ ವೈರಸ್ ಸಾವನ್ನಪ್ಪುತ್ತದೆ.

ಮತ್ತೊಂದು ವಿಶೇಷತೆಯೆಂದರೆ ಸೋಂಕಿತ ವ್ಯಕ್ತಿ ಇದನ್ನು ಧರಿಸಿದರೆ ಆತನಿಂದ ವೈರಸ್ ಬೇರೆ ಯಾರಿಗೂ ಹರಡುವ ಸಾಧ್ಯತೆ ಇರುವುದಿಲ್ಲ. ಸಧ್ಯ ಈ ಹೊಸ ಮಾಸ್ಕ್ ಮುಂಬೈನ ಮ್ಯೂಸಿಯಂನಲ್ಲಿ ಪ್ರದರ್ಶನ ಇಡಲಾಗಿದೆ. ವ್ಯವಸ್ಥೆಯಲ್ಲಿ ಪೂರಕ ವಾತಾವರಣ ಸಿಕ್ಕರೆ ಈ ಪ್ರಯತ್ನಕ್ಕೆ ಖಂಡಿತ ಒಳ್ಳೆಯ ಫಲ ಸಿಗುವ ಸಾಧ್ಯತೆ ಇದೆ. ದಿಗಂತಿಕ ಅವರ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ನೋಡಬಹುದು. ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ಅನೇಕ ಜನರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಈ ರೀತಿಯ ಮಾಸ್ಕ್ ಗಳನ್ನು ಉಪಯೋಗಿಸುವುದರಿಂದ ಕೊರೋನ ವೈರಸ್ ತಗುಲುವ ಸಾಧ್ಯತೆಗಳು ಕಡಿಮೆ, ಒಂದು ವೇಳೆ ತಗುಲಿದರೆ ವೈರಸ್ ಸಾಯುವುದಂತೂ ಖಚಿತ. ತಪ್ಪದೆ ಎಲ್ಲರೂ ಮಾಸ್ಕ್ ಧರಿಸಿ, ಸಾಮಾಜಿಕ ಅಂತರವನ್ನು ಕಾಪಾಡಿ. ದಿಗಂತಿಕ ಅವರು ತಯಾರಿಸಿದ ಮಾಸ್ಕ್ ಆದಷ್ಟು ಬೇಗ ಎಲ್ಲರಿಗೂ ತಲುಪಲಿ ಹಾಗೆಯೆ ಕೊರೋನ ಮುಕ್ತ ದೇಶವಾಗಲಿ ಎಂದು ಆಶಿಸೋಣ. ದೇಶದ ಜನತೆ ಎಲ್ಲರೂ ಮನಸ್ಸು ಮಾಡಿದರೆ ಕೊರೋನ ವೈರಸ್ ಅನ್ನು ಗೆಲ್ಲಬಹುದು.

Leave A Reply

Your email address will not be published.

error: Content is protected !!