ಕೊರೊನ ಗೆ ಮನೆಮದ್ದು ಈ ಕಷಾಯ ಶೀತ ಕೆಮ್ಮು ಜ್ವ’ರ ಬರೋದಿಲ್ಲ

0

ದೇಶಾದ್ಯಂತ ಕೊರೋನ ವೈರಸ್ ಹೆಚ್ಚಾಗುತ್ತಿದ್ದು, ದಿನೆ ದಿನೆ ತೀವ್ರವಾಗಿ ಹರಡುತ್ತಿದೆ, ಹೆಚ್ಚಿನ ಸಂಖ್ಯೆಯಲ್ಲಿ ಸಾವಾಗುತ್ತಿರುವುದು ವಿಪರ್ಯಾಸ. ಕೊರೋನ ವೈರಸ್ ನಿಂದ ನಾವು ತಪ್ಪಿಸಿಕೊಳ್ಳುವ ದಾರಿಯನ್ನು ಕಂಡುಕೊಳ್ಳಬೇಕಾಗಿದೆ. ನಮ್ಮ ಆಹಾರ ಪದ್ಧತಿಯನ್ನು ಬದಲಾವಣೆ ಮಾಡಿಕೊಳ್ಳಬೇಕಾಗಿದೆ ಜೊತೆಗೆ ಕಷಾಯಗಳನ್ನು ಮಾಡಿಕೊಂಡು ಕುಡಿಯಬೇಕು. ನಮ್ಮ ಆಹಾರ ಪದ್ಧತಿ ಮತ್ತು ನಾವು ಕುಡಿಯುವ ಕಷಾಯ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಸುವಂತಿರಬೇಕು. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಒಂದು ಆರೋಗ್ಯಕರ ಕಷಾಯವಿದೆ. ಈ‌ ಕಷಾಯವನ್ನು ಮಾಡಲು ಬೇಕಾಗುವ ಸಾಮಗ್ರಿಗಳು ಯಾವುವು ಹಾಗೂ ಮಾಡುವ ವಿಧಾನವನ್ನು ಈ ಲೇಖನದಲ್ಲಿ ನೋಡೋಣ.

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಅನೇಕ ಕಷಾಯಗಳಿವೆ. ಎಲ್ಲಾ ಕಷಾಯಕ್ಕೆ ಬಳಸುವ ಸಾಮಾಗ್ರಿಗಳು ತನ್ನದೆ ಆದ ಔಷಧೀಯ ಗುಣವನ್ನು ಹೊಂದಿರುತ್ತದೆ. ಅನೇಕ ಕಷಾಯಗಳಲ್ಲಿ ಯಾವುದಾದರೂ ಒಂದು ಕಷಾಯವನ್ನು ಕುಡಿದರೂ ಆರೋಗ್ಯಕ್ಕೆ ಬಹಳ ಒಳ್ಳೆಯದು. ಮನೆಯಲ್ಲಿ ಸಿಗುವ ಸಾಮಗ್ರಿಗಳನ್ನು ಬಳಸಿ ಮಾಡಿಕೊಂಡ ಈ ಕಷಾಯವನ್ನು ಕುಡಿಯುತ್ತಿದ್ದರೆ ನೆಗಡಿ, ಶೀತ, ಜ್ವರ ಹತ್ತಿರ ಸುಳಿಯುವುದಿಲ್ಲ. ನೆಗಡಿ, ಕೆಮ್ಮು ಬರುತ್ತಿದ್ದಂತೆ ಈ ಕಷಾಯವನ್ನು ಕುಡಿದರೆ ಹೆಚ್ಚಿನ ಮಟ್ಟದಲ್ಲಿ ತೊಂದರೆ ಆಗುವುದು ತಪ್ಪುತ್ತದೆ. ಕೊರೋನ ವೈರಸ್ ತಗುಲಿದರೆ, ಕೊರೋನಾ ಪೊಸಿಟಿವ್ ಬಂದಿರುವವರಿಗೆ ಶೀತ, ನೆಗಡಿ, ಜ್ವರ ಕಾಣಿಸಿಕೊಂಡರೆ ಅವರು ಈ ಕಷಾಯವನ್ನು ತಪ್ಪದೆ ಕುಡಿಯುವುದರಿಂದ ಜ್ವರ ನಿವಾರಣೆಯಾಗುತ್ತದೆ. ಈ ಕಷಾಯಕ್ಕೆ ಬೇಕಾಗುವ ಸಾಮಾಗ್ರಿಗಳು ಯಾವುವೆಂದರೆ ತುಳಸಿ, ಈರುಳ್ಳಿ, ಬೆಲ್ಲ, ಅರಿಶಿಣ, ಉಪ್ಪು, ಶುಂಠಿ, ನೀರು, ಕಾಳುಮೆಣಸು, ಲವಂಗ.

ಮೊದಲು ಕಾಳುಮೆಣಸನ್ನು ಕುಟ್ಟುವ ಕಲ್ಲಿನಲ್ಲಿ ಪುಡಿ ಮಾಡಬೇಕು. ಕಷಾಯ ಮಾಡುವ ವಿಧಾನವೆಂದರೆ ಒಂದು ಪಾತ್ರೆಯಲ್ಲಿ ಸ್ವಲ್ಪ ನೀರನ್ನು ಹಾಕಿ ಕುದಿಸಬೇಕು ಅದಕ್ಕೆ ಕಟ್ ಮಾಡಿಕೊಂಡ ಈರುಳ್ಳಿ ಹಾಕಬೇಕು ನಂತರ ಕಾಳುಮೆಣಸಿನ ಪುಡಿಯನ್ನು ಹಾಕಬೇಕು. ಕುಟ್ಟುವ ಕಲ್ಲಿನಲ್ಲಿ ಶುಂಠಿ, ತುಳಸಿ, ಲವಂಗ, ಉಪ್ಪನ್ನು ಸೇರಿಸಿ ಜಜ್ಜಿಕೊಳ್ಳಬೇಕು ಅದನ್ನು ಕುದಿಯುತ್ತಿರುವ ನೀರಿಗೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಬೇಕು. ನಂತರ ಅದಕ್ಕೆ ಅರ್ಧ ಸ್ಪೂನ್ ಅರಿಶಿಣ, ಒಂದು ಉಂಡೆ ಆಗುವಷ್ಟು ಬೆಲ್ಲವನ್ನು ಹಾಕಬೇಕು ಚೆನ್ನಾಗಿ ಮಿಕ್ಸ್ ಮಾಡಿ 2 ಗ್ಲಾಸ್ ನೀರನ್ನು ಹಾಕಬೇಕು ಹತ್ತು ನಿಮಿಷ ಚೆನ್ನಾಗಿ ಕುದಿಸಬೇಕು. ನಂತರ ಒಂದು ಗ್ಲಾಸ್ ಗೆ ಫಿಲ್ಟರ್ ಮಾಡಿ ಬಿಸಿಯಿರುವಾಗಲೆ ಕುಡಿಯಬೇಕು. ಈ ಕಷಾಯಕ್ಕೆ ಬಳಸಿರುವ ಎಲ್ಲಾ ಸಾಮಗ್ರಿಗಳು ಮನೆಯಲ್ಲಿ ದಿನನಿತ್ಯ ಅಡುಗೆಗೆ ಬಳಸಲಾಗುತ್ತದೆ ಹಾಗೂ ಎಲ್ಲಾ ಸಾಮಗ್ರಿಗಳು ತನ್ನದೆ ಆದ ಔಷಧೀಯ ಗುಣವನ್ನು ಹೊಂದಿದೆ. ಈ ಕಷಾಯವನ್ನು ಕುಡಿಯುವುದರಿಂದ ಯಾವುದೆ ಅಡ್ಡ ಪರಿಣಾಮ ಆಗುವುದಿಲ್ಲ. ಈ ಕಷಾಯದ ಬಗ್ಗೆ ಎಲ್ಲರಿಗೂ ತಿಳಿಸಿ, ಕೊರೋನ ವೈರಸ್ ಅನ್ನು ನೈಸರ್ಗಿಕ ರೀತಿಯಲ್ಲಿಯೆ ಓಡಿಸೋಣ.

Leave A Reply

Your email address will not be published.

error: Content is protected !!