ಕೆಮ್ಮು ನೆಗಡಿ ಶೀತಕ್ಕೆ ಆಸ್ಪತ್ರೆಗೆ ಹೋಗುವ ಮುನ್ನ ಈ ಮನೆಮದ್ದು ಮಾಡಿ ನೋಡಿ

0

ಎರಡು ವರ್ಷದಿಂದ ಕೊರೋನ ವೈರಸ್ ಕಾಣಿಸಿಕೊಂಡಿದ್ದು ಅದರ ಪ್ರಭಾವವನ್ನು ತಡೆಯಲು ಶುಂಠಿ, ಮೆಣಸಿನ ಕಷಾಯವನ್ನು ಹೆಚ್ಚು ಬಳಸಿದರು ಇದರಿಂದ ಕೆಲವರಿಗೆ ಅತಿಯಾದ ಹೀಟ್ ನಿಂದ ಖಾಯಿಲೆಗೆ ಒಳಗಾದರು. ಇದೀಗ ಎಲ್ಲರಿಗೂ ಹರಡಿರುವ ನೆಗಡಿ, ಜ್ವರ ಹಲವು ಕಾರಣದಿಂದ ಕಾಣಿಸಿಕೊಂಡಿರುತ್ತದೆ ಎಲ್ಲಾ ನೆಗಡಿಗೂ ಒಂದೆ ಮನೆಮದ್ದನ್ನು ಬಳಸಬಾರದು. ಕಾರಣವನ್ನು ತಿಳಿದು ಅದಕ್ಕೆ ತಕ್ಕಂತೆ ಔಷಧಿಯನ್ನು ತೆಗೆದುಕೊಳ್ಳಬೇಕು. ಯಾವ ಖಾಯಿಲೆಗೆ ಯಾವ ಔಷಧಿ ಎಂದು ಈ ಲೇಖನದಲ್ಲಿ ನೋಡೋಣ.

ಈಗಿನ ದಿನಗಳಲ್ಲಿ ನೆಗಡಿಯನ್ನು ನಿರ್ಲಕ್ಷ್ಯ ಮಾಡುವ ಹಾಗಿಲ್ಲ. ನೆಗಡಿಯಾದಾಗ ಮೆಣಸು, ಶುಂಠಿ, ಬೆಳ್ಳುಳ್ಳಿ ಕಷಾಯವನ್ನು ಕುಡಿಯುವುದರಿಂದ ದೇಹಕ್ಕೆ ಹೀಟ್ ಆಗುವ ಮೂಲಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ನೆಗಡಿ ಆಗಿದೆ ಎಂದು ಶುಂಠಿ ಕಷಾಯ, ಜೇನುತುಪ್ಪ ಸೇವಿಸಬಾರದು. ಕೆಲವೊಬ್ಬರಿಗೆ ನೆಗಡಿಯಾದರೆ ಮೂಗು ಸೋರುತ್ತದೆ, ಕೆಲವರಿಗೆ ಮೂಗು ಕಟ್ಟುತ್ತದೆ, ಕೆಲವರಿಗೆ ಸೀನು ಬರುತ್ತದೆ. ಕೆಲವರಿಗೆ ತಲೆ ಭಾರ, ಕೆಲವರಿಗೆ ಕಣ್ಣು ಕಡತ, ಕಣ್ಣಲ್ಲಿ ನೀರು ಸೋರುವುದು, ಕೆಲವರಿಗೆ ಒಣಕೆಮ್ಮು ಬರುತ್ತದೆ, ಒಣಕೆಮ್ಮಿಗೆ ಶುಷ್ಕ ಖಾಸಾ ಎಂದು ಸಂಸ್ಕೃತದಲ್ಲಿ ಕರೆಯುತ್ತಾರೆ.

ಕೆಲವರಿಗೆ ಕಫದ ಕೆಮ್ಮು ಬರುತ್ತದೆ ಈ ರೀತಿಯ ಕೆಮ್ಮಿಗೆ ಆರ್ದ್ರ ಖಾಸಾ ಎಂದು ಕರೆಯುತ್ತಾರೆ. ಕೆಲವರಿಗೆ ನಾಯಿ ಕೆಮ್ಮು, ಕೆಲವರಿಗೆ ಹುಸಿ ಕೆಮ್ಮು ಬರುತ್ತದೆ. ಎಲ್ಲ ಕೆಮ್ಮಿಗೆ ಒಂದೆ ಮನೆಮದ್ದು ಪ್ರಯೋಜನಕ್ಕೆ ಬರುವುದಿಲ್ಲ. ನೆಗಡಿ ಆಗಿದೆ ಎಂದರೆ ನೆಗಡಿ ಬರಲು ಹಲವು ಕಾರಣಗಳಿರುತ್ತವೆ. ವಾತಾವರಣದ ಏರುಪೇರಿನಿಂದ, ಶೀತ, ಕಫದಿಂದ ಬರುವ ನೆಗಡಿಗೆ ಬೇರೆ ಮನೆಮದ್ದು ಇರುತ್ತದೆ. ಇದೀಗ ರಾಜ್ಯಾದ್ಯಂತ ವೈರಲ್ ಫೀವರ್ ಹರಡಿದೆ. ವೈರಸ್ ಮತ್ತು ಬ್ಯಾಕ್ಟೀರಿಯಾದಿಂದ ಬರುವುದನ್ನು ವೈರಲ್ ಫೀವರ್ ಎನ್ನುವರು. ವೈರಸ್ ಹಾಗೂ ಬ್ಯಾಕ್ಟೀರಿಯಾಕೆ ಸಂಸ್ಕೃತದಲ್ಲಿ ಕ್ರಿಮಿ ಎನ್ನುವರು. ಕ್ರಿಮಿಯಿಂದ ಬರುವ ಖಾಯಿಲೆಗೆ ಕ್ರಿಮಿ ಹಾರ ದ್ರವ್ಯವನ್ನು ಬಳಸಬೇಕು. ಉತ್ತಮ ಕ್ರಿಮಿ ಹಾರ ದ್ರವ್ಯ ಎಂದರೆ ವಿಡಂಗ, ಇದರಿಂದ ಮಾಡಿದ ಕಷಾಯವನ್ನು ಬೆಳಗ್ಗೆ ರಾತ್ರಿ ತಿಂಡಿ, ಊಟ ಮಾಡಿದ ನಂತರ ಅರ್ಧ ಚಮಚ ತೆಗೆದುಕೊಳ್ಳಬೇಕು 5 ದಿವಸ ತೆಗೆದುಕೊಂಡರೆ ನೆಗಡಿ ಕಡಿಮೆ ಆಗುತ್ತದೆ.

ಗ್ರಂಥಿಗೆ ಅಂಗಡಿಯಲ್ಲಿ ವಿಡಂಗ ಖರೀದಿ ಮಾಡಬಹುದು. ಮತ್ತೊಂದು ಸುಲಭವಾಗಿ ಸಿಗುವ ದಿನಬಳಕೆಯ ಕ್ರಿಮಿ ಹಾರ ಅರಿಶಿಣ ಕೊಂಬನ್ನು ಸುಟ್ಟಾಗ ಹೊಗೆ ಬರುತ್ತದೆ ಅದನ್ನು ಮೂಗಿನ ಹೊರಳೆಯ ಹತ್ತಿರ ತಂದು ಎಳೆದುಕೊಳ್ಳಬೇಕು ಆಗ ಒಂದು ಮೂಗಿನ ಹೊರಳೆಯನ್ನು ಮುಚ್ಚಬೇಕು. ಇದರಿಂದ ಮೂಗಿನ ಒಳಗಿರುವ ಕ್ರಿಮಿ ಸಾಯುತ್ತದೆ. ಸತತ 5 ದಿನ ಹೀಗೆ ಮಾಡಿದರೆ ವೈರಲ್ ನಿಂದ ಬಂದಿರುವ ನೆಗಡಿ ನಿವಾರಣೆಯಾಗುತ್ತದೆ. ಅದರ ಬದಲು ಕಫ ಇನ್ನಿತರ ಔಷಧಿ ಬಳಸಿದರೆ ಪ್ರಯೋಜನ ಆಗುವುದಿಲ್ಲ. ಆಯಾ ರೋಗಕ್ಕೆ ಆಯಾ ಔಷಧಿಯನ್ನು ತೆಗೆದುಕೊಳ್ಳುವುದರಿಂದ ಮಾತ್ರ ನಿವಾರಣೆಯಾಗುತ್ತದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ,

Leave A Reply

Your email address will not be published.

error: Content is protected !!