WhatsApp Group Join Now
Telegram Group Join Now

ಸುಮಾರು ಶೇಕಡಾ 50ರಷ್ಟು ಜನರಿಗೆ ಮಲಬದ್ಧತೆ ಇರುತ್ತದೆ. ಇದು ಒಂದು ದೊಡ್ಡ ಸಮಸ್ಯೆಯೇ ಆಗಿದೆ. ಇದಕ್ಕೆ ಹಲವಾರು ಕಾರಣಗಳಿವೆ. ನೀರನ್ನು ಸರಿಯಾಗಿ ಕುಡಿಯದೇ ಇದ್ದರೆ ಹೀಗೆ ಆಗುತ್ತದೆ. ಹಾಗೆಯೇ ಊಟ ತಿಂಡಿಯನ್ನು ಸರಿಯಾಗಿ ಅಂದರೆ ಸರಿಯಾದ ಸಮಯಕ್ಕೆ ಮಾಡದೇ ಇದ್ದರೆ ಕೂಡ ಮಲಬದ್ಧತೆ ಉಂಟಾಗುತ್ತದೆ. ಇದರಿಂದ ಹಲವಾರು ಖಾಯಿಲೆಗಳು ಉಂಟಾಗುತ್ತವೆ. ಆದ್ದರಿಂದ ನಾವು ಇಲ್ಲಿ ಇದರ ಪರಿಹಾರದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಮನುಷ್ಯನಿಗೆ ಆಹಾರ ಸೇವನೆ ಪ್ರಕ್ರಿಯೆ ಎಷ್ಟು ಸರಾಗವಾಗಿ ನಡೆಯುತ್ತದೆಯೋ ಅದೇ ರೀತಿ ದೇಹದಲ್ಲಿ ಆಹಾರ ಜೀರ್ಣವಾಗುವ ಪ್ರಕ್ರಿಯೆಯ ಜೊತೆಗೆ ಮಲದ ರೂಪದಲ್ಲಿ ದೇಹದಿಂದ ಹೊರ ಹೋಗುವ ಪ್ರಕ್ರಿಯೆಯೂ ಕೂಡ ಸುಲಭವಾಗಿ ನಡೆಯಬೇಕು. ಕೆಲವೊಮ್ಮೆ ನಮ್ಮ ಆಹಾರ ಪದ್ಧತಿಯಿಂದ ಸ್ವಲ್ಪ ಬೇರೆಯಾಗಿ ನಾವು ಬೇರೆ ಬೇರೆ ಆಹಾರಗಳನ್ನು ಸೇವನೆ ಮಾಡುವುದರಿಂದ ನಮ್ಮ ಜೀರ್ಣಾಂಗ ವ್ಯವಸ್ಥೆಯ ಕಾರ್ಯ ನಿರ್ವಹಣೆಯಲ್ಲಿ ಸ್ವಲ್ಪ ವ್ಯತ್ಯಾಸವಾಗಿ ಮಲಬದ್ಧತೆ ಸಮಸ್ಯೆ ಪ್ರಾರಂಭ ಆಗುತ್ತದೆ. ಇದಕ್ಕೆ ಕೇವಲ ನಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ನಾವು ದೂಷಿಸುವ ಹಾಗಿಲ್ಲ.

ನಮ್ಮ ಕರುಳಿನ ಭಾಗದ ಪ್ರಭಾವ ಕೂಡ ಇದರ ಮೇಲೆ ಅಷ್ಟೇ ಇರುತ್ತದೆ. ಇದ್ದಕ್ಕಿದ್ದಂತೆ ಮಲಬದ್ಧತೆ ಎದುರಾಗಬೇಕಾದರೆ ಇದಕ್ಕೆ ಹಲವಾರು ಅಂಶಗಳು ಕಾರಣವಾಗುತ್ತವೆ. ಇದಕ್ಕೆ ಪರಿಹಾರಗಳನ್ನು ಮನೆಯಲ್ಲಿಯೇ ಸುಲಭವಾಗಿ ಮಾಡಿಕೊಳ್ಳಬಹುದು. ಮೊದಲನೆಯದಾಗಿ ಕಿತ್ತಳೆ ಹಣ್ಣಿನ ಜ್ಯೂಸ್. ಇದು ಸಿ ವಿಟಮಿನ್ ನ್ನು ಹೇರಳವಾಗಿ ಹೊಂದಿದೆ. ಹಾಗೆಯೇ ದೇಹಕ್ಕೆ ಪ್ರೊಟೀನ್ ಗಳನ್ನು ನೀಡುತ್ತದೆ. ಮಲಬದ್ಧತೆಗೆ ಇದು ಬಹಳ ಒಳ್ಳೆಯದು. ಒಂದು ಲೋಟ ಕಿತ್ತಳೆ ಹಣ್ಣಿನ ಜ್ಯೂಸ್ ಗೆ ಒಂದು ಚಮಚ ಆಲಿವ್ ಎಣ್ಣೆಯನ್ನು ಹಾಕಬೇಕು. ಇದನ್ನು ದಿನಕ್ಕೆ ಎರಡು ಬಾರಿ ಸೇವನೆ ಮಾಡಬೇಕು.

ಹೀಗೆ ಮೂರರಿಂದ ಐದು ದಿನಗಳ ಕಾಲ ಇದನ್ನು ಕುಡಿಯಬೇಕು. ಇದರಿಂದ ಮಲಬದ್ಧತೆ ಸುಮಾರು 90 ಶೇಕಡಾ ನಿವಾರಣೆ ಆಗುತ್ತದೆ. ಹೆಚ್ಚಾಗಿ ನಿಂಬು, ಕಿತ್ತಳೆ ಮತ್ತು ಮುಸುಂಬೆ ಹಣ್ಣಿನಂತ ಜ್ಯೂಸ್ ಗಳನ್ನು ಕುಡಿಯಬೇಕು. ಹಾಗೆಯೇ ಎರಡನೆಯದಾಗಿ ಪ್ರತಿನಿತ್ಯ ರಾತ್ರಿ ಮಲಗುವ ಮುನ್ನ ಒಂದು ಲೋಟ ಹಾಲಿಗೆ ಒಂದು ಚಮಚ ತುಪ್ಪವನ್ನು ಹಾಕಿಕೊಂಡು ಕುಡಿಯಬೇಕು. ಈ ರೀತಿಯಾಗಿ ಐದರಿಂದ ಏಳು ದಿನಗಳ ಕಾಲ ಮಾಡಿದರೆ ಮಲಬದ್ಧತೆ ನಿವಾರಣೆ ಆಗುತ್ತದೆ. ಮೂರನೆಯದಾಗಿ ಫೈಬರ್ ಅಂಶ ಜಾಸ್ತಿ ಇರುವ ಆಹಾರಗಳನ್ನು ಸೇವನೆ ಮಾಡಬೇಕು. ಹಾಗೆಯೇ ದಿನಕ್ಕೆ ನಾಲ್ಕರಿಂದ ಐದು ಲೀಟರ್ ನಷ್ಟು ನೀರನ್ನು ಕುಡಿಯಬೇಕು.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: