ಉರಿ ಮೂತ್ರದ ಸಮಸ್ಯೆ ಒಂದಲ್ಲೊಂದು ಬಾರಿ ನಿಮಗೆ ಕಾಡಿರಬಹುದು ಇದಕ್ಕೆ ಕಾರಣವೇನು ಗೊತ್ತೇ? ವಿಪರೀತ ಮಸಾಲೆ ಪದಾರ್ಥಗಳನ್ನು ಸೇವನೆ ಹಾಗೂ ಸಾಕಷ್ಟು ನೀರು ಕುಡಿಯದಿರುವುದು, ದೇಹದಲ್ಲಿ ನಿರ್ಜಲೀಕರಣ ಅದಂತೆ ಮೂತ್ರ ಪಿಂಡಗಳ ಸಮಸ್ಯೆಯೂ ಹೆಚ್ಚುತ್ತದೆ. ವೈದ್ಯಕೀಯ ಭಾಷೆಯಲ್ಲಿ ಡಿಸೂರಿಯಾ ಎಂದು ಕರೆಯಲ್ಪಡುವ ಈ ಸಮಸ್ಯೆ ನಿಮ್ಮನ್ನು ಮೂತ್ರ ವಿಸರ್ಜನೆ ವೇಳೆ ವಿಪರೀತ ನೋವಿನಿಂದ ಹಿಂಡಿ ಬಿಡುತ್ತದೆ. ಉರಿ ಮೂತ್ರ ಕ್ಕೆ ಪ್ರಮುಖ ಕಾರಣವೆಂದರೆ ಮೂತ್ರ ಕೋಶದ ಸೋಂಕು, ಮೂತ್ರ ಮಾಡಲು ಹೆಚ್ಚಿನ ಒತ್ತಡವನ್ನು ಹಾಕುವ ಅವಶ್ಯಕತೆಯೂ ಉಂಟಾಗುವುದು. ಮತ್ತು ಮೂತ್ರ ಹೊರಬರುವಾಗ ತಡೆಯಲಾರದ ಉರಿ ಉಂಟಾಗುತ್ತದೆ. ಒಮ್ಮೆಗೆ ಮೂತ್ರವು ಹೊರ ಹೋಗದೆ ಪದೇ ಪದೇ ವಿಸರ್ಜನೆಗೆ ಹೋಗುವಂತೆ ಆಗುವುದು.

ಉರಿ ಮೂತ್ರ ಸಮಸ್ಯೆಯು ಉಂಟಾಗಲು ಪ್ರಮುಖ ಕಾರಣವೆಂದರೆ ಸರಿಯಾದ ಸಮಯದಲ್ಲಿ ಮೂತ್ರ ವಿಸರ್ಜನೆಯನ್ನು ಮಾಡದೆ ತಡೆ ಹಿಡಿದು ಅಲ್ಲಿಯೇ ಬಹಳ ಸಮಯ ನಿಂತಿರುವಂತೆ ಮಾಡುತ್ತವೆ. ಅಲ್ಲದೆ ಕೆಲವಾರು ಸಮಯದಲ್ಲಿ ಮೂತ್ರ ವಿಸರ್ಜನೆಗೆ ಹೋಗಬೇಕಾಗುತ್ತದೆ ಎಂದು ನೀರನ್ನೇ ಸರಿಯಾಗಿ ಕುಡಿಯದೆ ಇರುತ್ತೆವೆ. ಈ ರೀತಿಯಾದ ನಮ್ಮ ನಡುವಳಿಕೆಯೂ ಇಂತಹ ಅನೇಕ ರೋಗಗಳು ಉಂಟಾಗಲು ಕಾರಣವಾಗುತ್ತದೆ. ಇವುಗಳ ನಿವಾರಣೆಗೆ ಸುಲಭ ಮನೆ ಮದ್ದು ಈ ಕೆಳಗಿನಂತೆ ತಿಳಿಯೋಣ.

ಸೋರೆಕಾಯಿಯನ್ನು ಉರಿ ಮೂತ್ರ ನಿವಾರಣೆಗೆ ಮನೆ ಮದ್ದಾಗಿ ಬಳಸಬಹುದು. ಒಂದು ಲೋಟ ಸೋರೆಕಾಯಿ ಜ್ಯೂಸ್ ಮಾಡಿಕೊಂಡು ಅದಕ್ಕೆ ಒಂದು ಹೋಳು ಲಿಂಬೆ ರಸವನ್ನು ಬೆರೆಸಿ ಊಟದ ನಂತರ ಅರ್ಧ ಗಂಟೆ ಬಿಟ್ಟು ಕುಡಿಯಬೇಕು. ಈ ರೀತಿ ಎರಡರಿಂದ ಮೂರು ದಿನಗಳ ಕಾಲ ಮಾಡುವುದರಿಂದ ನಿವಾರಣೆ ಆಗುತ್ತದೆ. ವಿಟಮಿನ್ ಸಿ ಅಂಶಗಳು ಹೆಚ್ಚಿರುವ ಆ್ಯಂಟಿ ಆಕ್ಸಿಡೆಂಟ್ ವೃದ್ಧಿಸುವ ಆಹಾರಗಳನ್ನು  ಸೇವಿಸಿ ಏಲಕ್ಕಿಯನ್ನು ಸೇರಿಸುವುದರಿಂದ ಕಿಡ್ನಿಯ ಕಾರ್ಯಕ್ಷಮತೆ ಹೆಚ್ಚುತ್ತದೆ. ಇದು ಹಲವು ವೈರಸ್ ಮತ್ತು ಬ್ಯಾಕ್ಟೀರಿಯಾಗಳನ್ನು ನಾಶ ಮಾಡುತ್ತದೆ. ಇದರಿಂದ ಮೂತ್ರ ಮಾಡುವಾಗಲಿನ ನೋವು ಮತ್ತು ಉರಿ ಕಡಿಮೆಯಾಗುತ್ತದೆ.

ಉರಿ ಮೂತ್ರ ನಿವಾರಣೆಗೆ ಎಳನೀರು ತುಂಬಾ ಸಹಾಯಕಾರಿ, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಎರಡು ಎಳನೀರನ್ನು ಕುಡಿಯಿರಿ. ಹಾಗೆಯೇ ಒಂದು ಗಂಟೆಗಳ ಕಾಲ ಯಾವುದೇ ಆಹಾರವನ್ನು ಸೇವಿಸಬೇಡಿ. ನಂತರ ರಾತ್ರಿ ಮಲಗುವ ಸಮಯದಲ್ಲಿ ಮತ್ತೆರಡು ಎಳನೀರುನ್ನು ಕುಡಿದು ಮಲಗಿ. ಈ ರೀತಿ ಮಾಡುವುದರಿಂದ ಉರಿ ಮೂತ್ರದ ಸಮಸ್ಯೆಯು ದೂರವಾಗುತ್ತದೆ.

By admin

Leave a Reply

Your email address will not be published. Required fields are marked *

error: Content is protected !!
Footer code: