WhatsApp Group Join Now
Telegram Group Join Now

ಗ್ಯಾಸ್ಟ್ರಿಕ್ ಇದು ನಮ್ಮ ದೈನಂದಿನ ಚಟುವಟಿಕೆಗಳ ವ್ಯತ್ಯಾಸದಿಂದ , ನಮ್ಮ ಆಹಾರ ವಿಹಾರ ವಿಚಾರ ಇವುಗಳ ಭಿನ್ನತೆಯಿಂದ ಕಾಡುತ್ತದೆ ನಮಗೆಲ್ಲರಿಗೂ ಆಗಾಗ ಎದುರಾಗುತ್ತಲೇ ಇರುವ ಒಂದು ಸಮಸ್ಯೆ. ಇದೇನೋ ಭಾರೀ ಎನ್ನುವಂತಹ ತೊಂದರೆ ಅಲ್ಲದಿದ್ದರೂ ನಾಲ್ಕು ಜನರ ನಡುವೆ ಇದ್ದಾಗ ಈ ತೊಂದರೆಯಿಂದ ಮುಜುಗರ ಅನುಭವಿಸಬೇಕಾಗಿ ಬರಬಹುದು. ಈ ತೊಂದರೆಯನ್ನು ನಿವಾರಿಸಲು ಸಾಮಾನ್ಯವಾದ ಐದು ಮನೆಮದ್ದುಗಳನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಗ್ಯಾಸ್ಟ್ರಿಕ್ ಇದು ಹೆಸರೇ ಸೂಚಿಸುವಂತೆ ಮಾನವನ ಜೀರ್ಣಾಂಗಗಳಲ್ಲಿ ಗಾಳಿ ಉತ್ಪತ್ತಿಯಾಗಿ ಹೊರಬರಲು ಆಗದೇ ಇದು ವಾಯು ನೀಡುವ ಒತ್ತಡವಾಗಿದೆ. ಯಾವ ಆಹಾರದಿಂದ ಯಾರಿಗೆ ಗ್ಯಾಸ್ಟ್ರಿಕ್ ಎದುರಾಗಬಹುದು ಎಂದು ಖಚಿತವಾಗಿ ಹೇಳಲಾಗುವುದಿಲ್ಲ. ಇದು ಎದುರಾದಾಗ ದೈಹಿಕ ತೊಂದರೆಗಳಿಗಿಂತಲೂ ನಾಲ್ಕು ಜನರ ಮಧ್ಯೆ ಎದುರಿಸಬೇಕಾದ ಮುಜುಗರವೇ ಅತಿ ಹೆಚ್ಚಿನ ತೊಂದರೆಯಾಗಿ ಕಾಡುತ್ತದೆ. ಗ್ಯಾಸ್ಟ್ರಿಕ್ ಅಥವಾ ವಾಯುಪ್ರಕೋಪ ಎದುರಾದಾಗ ಬಲವಂತವಾಗಿ ಒತ್ತಿ ಹಿಡಿದರೆ ಇದರಿಂದಲೂ ಬೇರೆ ಬಗೆಯ ತೊಂದರೆಗಳು ಎದುರಾಗಬಹುದು. ಹೊಟ್ಟೆಯ ಸೆಡೆತ, ಹೊಟ್ಟೆಯುಬ್ಬರಿಕೆ, ತಲೆ ಸುತ್ತುವಿಕೆ ಮತ್ತು ಎದೆಯುರಿ ಮೊದಲಾದವು ಎದುರಾಗುತ್ತವೆ.

ಹಾಗಾದ್ರೆ ಈ ಗ್ಯಾಸ್ಟ್ರಿಕ್ ಯಾಕೆ ಆಗುತ್ತೆ? ಎಂದು ಇದಕ್ಕೆ ಕಾರಣ ನೋಡುವುದಾದರೆ , ನಾವು ಸೇವಿಸಿದ ಆಹಾರವನ್ನು ಪಚನ ಮಾಡಲು ಹೊಟ್ಟೆಯಲ್ಲಿ ಹೈಡ್ರೋಕ್ಲೋರಿಕ್ ಆಮ್ಲ ಉತ್ಪತ್ತಿಯಾಗುತ್ತದೆ. ಇದರಿಂದ ಮುಂದೆ ಸಣ್ಣ ಕರುಳು, ಯಕೃತ್ತು ಸ್ರವಿಸುವ ರಸಗಳು ಪಚನವನ್ನು ಮುಂದುವರಿಸುತ್ತವೆ. ಊಟದಲ್ಲಿರುವ ಸಾರಾಂಶವನ್ನು ದೇಹಕ್ಕೆ ಹೀರಿಕೊಂಡು, ತ್ಯಾಜ್ಯ ವಸ್ತುವನ್ನು ಮುಂದೆ ತಳ್ಳುತ್ತವೆ. ಮತ್ತೆ ದೊಡ್ಡ ಕರುಳಿನ ಗ್ರಂಥಿಗಳು ತ್ಯಾಜ್ಯ ವಸ್ತುವಿನಲ್ಲಿನ ನೀರಿನಾಂಶವನ್ನು ಹೀರಿಕೊಂಡು ಮಲವನ್ನು ಗಟ್ಟಿಗೊಳಿಸುತ್ತವೆ. ಇದು ಸಕಾಲಿಕವಾಗಿ ದೇಹದಿಂದ ಹೊರಹೋಗುತ್ತದೆ. ಈ ಪ್ರಕ್ರಿಯೆಯಲ್ಲಿ ಸ್ರವಿಸುವ ರಸಗಳ ಪ್ರಮಾಣ, ಅಂಗಗಳ ಒಳಗೋಡೆಯ ಸಾಮರ್ಥ್ಯ, ಆಹಾರವನ್ನು ಮುಂದೆ ತಳ್ಳುವ ಕ್ಷಮತೆ ಮತ್ತು ಇವುಗಳಿಗೆ ಪೂರಕವಾಗಿರುವ ನರತಂತುಗಳ ಹೊಂದಾಣಿಕೆ ಅತಿ ಮುಖ್ಯ.

ಇನ್ನು ಈ ಗ್ಯಾಸ್ಟ್ರಿಕ್ ಗೆ ಪರಿಹಾರವೇನು? ಎಂದು ನೋಡುವುದಾದರೆ, ನಮ್ಮ ಆಹಾರ ಕ್ರಮವನ್ನು ಪರಿಶೀಲಿಸಿ ಪರಿಷ್ಕರಿಸಿಕೊಳ್ಳಬೇಕಾದಲ್ಲಿ ಸೂಕ್ತ ಸಲಹೆ ನೀಡಲಾಗುತ್ತದೆ. ಸೇವಿಸುವ ಆಹಾರಕ್ಕೂ ಉದರದ ಸಮಸ್ಯೆಗೂ ನೇರ ಸಂಬಂಧ ಇರುವುದರಿಂದ ಯಾವ ಆಹಾರ ತಿಂದು ಈ ಸಮಸ್ಯೆ ಉಲ್ಬಣಿಸುತ್ತದೆ ಎಂಬುದನ್ನು ರೋಗಿಯೇ ಪತ್ತೆ ಹಚ್ಚಿ ಆಹಾರವನ್ನು ಬದಲಿಸಿಕೊಳ್ಳಬೇಕು. ಕೆಲವರಿಗೆ ಗೋಧಿ, ಹಾಲು, ಬೇಳೆ ಇತ್ಯಾದಿ ಆಹಾರ ಪದಾರ್ಥಗಳು ಜೀರ್ಣವಾಗುವುದಿಲ್ಲ. ಅಂಥವರು ಪರ್ಯಾಯ ಆಹಾರ ಪದಾರ್ಥಗಳನ್ನು ಸೇವಿಸಬೇಕು. ಇನ್ನು ನಿಯಮಿತ ಸಮಯಕ್ಕೆ ಆಹಾರ ಸೇವನೆ ಮಾಡುವುದನ್ನು ರೂಢಿ ಮಾಡಿಕೊಳ್ಳುವುದು ಉತ್ತಮ. ಒಂದೊಂದು ದಿನ ಒಂದೊಂದು ಸಮಯದಲ್ಲಿ ಊಟ ತಿಂಡಿ ಮಾಡಿದರೆ ಮಾನವನ ಜೀರ್ಣಾಂಗವ್ಯೂಹ ಸರಿಯಾಗಿ ಕೆಲಸ ಮಾಡುವುದಿಲ್ಲ. ಆಹಾರ ಸೇವಿಸುವಾಗ ಅವಸರಿಸದೇ ಇರುವುದು ಒಳ್ಳೆಯದು. ಒಂದೇ ಸಮನೆ ನುಂಗುವುದರಿಂದ ಇಲ್ಲವೇ ಎಡೆಬಿಡದೇ ಮಾತನಾಡುತ್ತಲೇ ತಿನ್ನುವುದರಿಂದ ಆವಶ್ಯಕತೆಗಿಂತ ಹೆಚ್ಚಿನ ಗಾಳಿ ಜಠರ ಸೇರುತ್ತದೆ. ಆಹಾರದಲ್ಲಿ ಮೊಸರು ಆಥವಾ ಮಜ್ಜಿಗೆಯನ್ನು ಬಳಸುವುದು ಜೀರ್ಣಾಂಗದ ಆರೋಗ್ಯಕ್ಕೆ ಪೂರಕ. ಸೊಪ್ಪು, ತರಕಾರಿ, ಸಾಂಬಾರ ಪದಾರ್ಥಗಳೂ ಜೀರ್ಣಾಂಗದ ಸಮಸ್ಯೆಗಳನ್ನು ನಿವಾರಿಸಲು ಸಹಕರಿಸುತ್ತವೆ.

ಇನ್ನೂ ಇದಕ್ಕೆ ಸರಳ ಹಾಗೂ ಸುಲಭ ಮನೆ ಮದ್ದು ಏನೂ ಎಂದು ನೋಡುವುದಾದರೆ , ಸ್ಟೋವ್ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ ಒಂದು ಲೋಟ ನೀರು ಹಾಕಿ ಸ್ವಲ್ಪ ಬಿಸಿ ಮಾಡಿ ನಂತರ ಸ್ವಲ್ಪ ಮೆಂತೆ ಕಾಳು ( ಇದು ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಉಂಟಾಗುವ ಹೊಟ್ಟೆ ನೋವನ್ನು ಶಮನ ಮಾಡಿ ಹೊಟ್ಟೆಯನ್ನು ತಂಪಾಗಿ ಇಡುತ್ತದೆ. ) ನಂತರ ಅರ್ಧ ಸ್ಪೂನ್ ಜೀರಿಗೆ ಮತ್ತು ಅರ್ಧ ಸ್ಪೂನ್ ಓಂ ಕಾಳು ಹಾಕಿಕೊಳ್ಳಬೇಕು. ಇವೆಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿ ಚೆನ್ನಾಗಿ ಕುದಿಯಲು ಬಿಡಬೇಕು. ಒಂದು ಲೋಟ ನೀರು ಅರ್ಧ ಲೋಟಕ್ಕೆ ಆಗುವವರೆಗೂ ಚೆನ್ನಾಗಿ ಕುದಿಸಬೇಕು. ನಂತರ ಇದಕ್ಕೆ ಸ್ಟೋವ್ ಆಫ್ ಮಾಡಿಕೊಂಡು ಅರ್ಧ ಚಮಚದಷ್ಟು ಹಿಂಗ್ ಹಾಗೂ ಸ್ವಲ್ಪ ಕಲ್ಲುಪ್ಪು ಸೇರಿಸಿ ಮಿಕ್ಸ್ ಮಾಡಿಕೊಂಡು ಸೊಸಿಕೊಳ್ಳಬೇಕು. ಈ ಮನೆ ಮದ್ದನ್ನು ಒಂದು ದಿನಕ್ಕೆ ಒಮ್ಮೆ ಮಾತ್ರ ಕುಡಿಯಬೇಕು ತುಂಬಾ ಜಾಸ್ತಿ ಗ್ಯಾಸ್ಟ್ರಿಕ್ ಇದ್ದಾಗ ಮಾತ್ರ ಎರಡು ಬಾರಿ ಕುಡಿಯಬಹುದು ಅದೂ ಊಟ ಆಗಿ ಅರ್ಧ ಗಂಟೆಯ ನಂತರ. ಈ ರೀತಿ ಮಾಡುವುದರಿಂದ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ನಾವು ಶಮನ ಹೊಂದಬಹುದು.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: