ಈ ಎಲೆ ನಿಮ್ಮ ಕೈಯಲ್ಲಿ ಇದ್ರೆ ಎಂತ ಕೆಮ್ಮು ಕಫ ಶೀತ ಇದ್ರೂ ತಕ್ಷಣ ಮಾಯಾ, ಹೇಗೆ ಬಳಸೋದು ತಿಳಿದುಕೊಳ್ಳಿ

0

ನಾವಿಂದು ನಿಮಗೆ ಒಂದು ಅದ್ಭುತವಾದ ಮನೆಮದ್ದಿನ ಕುರಿತಾದ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ. ಸಾಮಾನ್ಯವಾಗಿ ನಿಮ್ಮ ಮನೆಯಲ್ಲಿ ದೊಡ್ಡಪತ್ರೆ ಗಿಡವನ್ನು ಬೆಳೆಸಿರುತ್ತೀರಿ ಈ ಗಿಡವನ್ನ ಬಳಸುವುದರಿಂದ ನಾವು ನಮ್ಮ ಆರೋಗ್ಯದಲ್ಲಿ ಉತ್ತಮವಾದಂತಹ ಪರಿಣಾಮವನ್ನು ಕಂಡುಕೊಳ್ಳಬಹುದು. ನಿಮಗೆ ತುಂಬಾ ಶೀತವಾದಾಗ ಕಫ ಕಟ್ಟಿಕೊಂಡಾಗ ಇನ್ನು ಬೇರೆ ಬೇರೆ ರೀತಿಯ ಕಾಯಿಲೆಗಳಿಗೆ ಇದು ಅತ್ಯುತ್ತಮವಾದ ರಾಮಬಾಣ ಎಂದು ಹೇಳಬಹುದು. ಈ ಗಿಡದ ಎಲೆಗಳನ್ನು ಬಳಸಿಕೊಳ್ಳುವ ಮೂಲಕ ನಾವು ಸುಲಭವಾಗಿ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಅದು ಹೇಗೆ ಎಂಬುದನ್ನು ನಾವಿಂದು ನಿಮಗೆ ತಿಳಿಸಿಕೊಡುತ್ತೆವೆ.

ಮುಖ್ಯವಾಗಿ ಈ ಗಿಡದ ವಿಶೇಷತೆ ಏನು ಎಂದರೆ ಸಾಮಾನ್ಯವಾಗಿ ಈ ಗಿಡ ಎಲ್ಲಿ ಬೇಕಾದರೂ ಬೆಳೆಯುತ್ತದೆ. ಈ ಗಿಡಕ್ಕೆ ಹೆಚ್ಚಿನದಾದಂತಹ ಆರೈಕೆ ಮಾಡುವ ಅವಶ್ಯಕತೆ ಇಲ್ಲ ಚಿಕ್ಕ ಕಾಂಡವನ್ನು ನೆಟ್ಟರು ಅದು ಬದುಕಿಕೊಳ್ಳುತ್ತದೆ ಮತ್ತು ತುಂಬಾ ಬೇಗನೆ ಬೆಳವಣಿಗೆಯಾಗುವ ಗಿಡ ಇದಾಗಿದೆ. ಮೊದಲನೆಯದಾಗಿ ಈ ಗಿಡದ ಎರಡು ತಾಜಾ ಎಲೆಗಳನ್ನು ಗಿಡದಿಂದ ತೆಗೆದುಕೊಳ್ಳಬೇಕು ಅದನ್ನು ಚೆನ್ನಾಗಿ ನೀರಿನಿಂದ ತೊಳೆದುಕೊಳ್ಳಬೇಕು.

ದೊಡ್ಡ ಪತ್ರೆಯ ಎಲೆಗಳಲ್ಲಿ ವಿಟಮಿನ್ ಎ ಮತ್ತು ವಿಟಮಿನ್ ಸಿ ಇರುತ್ತದೆ ಹಾಗಾಗಿ ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಈ ಎಲೆಗಳನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಇದು ನಿಮ್ಮ ದೇಹದಲ್ಲಿರುವ ಕ್ಯಾನ್ಸರ್ ಸೇಲ್ಸ್ ಗಳನ್ನು ಕೊಂದು ಹಾಕುತ್ತದೆ. ಕ್ಯಾನ್ಸರ್ ಬರದೇ ಇರುವ ರೀತಿಯಲ್ಲಿ ನೋಡಿಕೊಳ್ಳುತ್ತದೆ ಶೀತ ಕಫ ಇವುಗಳಿಂದ ಮುಕ್ತಿ ಕೊಡಿಸುತ್ತದೆ.

ಮೊದಲಿಗೆ ಮಕ್ಕಳಿಗೆ ಶೀತವಾದಾಗ ಇದನ್ನು ಯಾವ ರೀತಿಯಲ್ಲಿ ಕೊಡಬೇಕು ಎಂಬುದನ್ನು ನೋಡೋಣ ಮೊದಲಿಗೆ ಈ ಎಲೆಗಳನ್ನು ಸ್ವಲ್ಪ ಬಿಸಿ ಮಾಡಿ ಕೊಳ್ಳಬೇಕು ನಂತರ ಅದನ್ನು ತಣಿಸಿಕೊಂಡು ಅದನ್ನು ಕೈಯಿಂದ ಹಿಂಡಿ ರಸವನ್ನು ತೆಗೆಯಬೇಕು ಆ ರಸಕ್ಕೆ ಕಾಲು ಚಮಚ ಅಥವಾ ಅರ್ಧ ಚಮಚ ಜೇನುತುಪ್ಪವನ್ನು ಸೇರಿಸಬೇಕು. ಅದನ್ನು ಚೆನ್ನಾಗಿ ಮಿಶ್ರಣ ಮಾಡಿ ಅದಕ್ಕೆ ಚಿಕ್ಕದಾದ ಒಂದು ಕಲ್ಲು ಉಪ್ಪನ್ನು ಹಾಕಬೇಕು ಅದನ್ನು ಕೂಡ ಪೂರ್ತಿಯಾಗಿ ಕರಗಿಸಬೇಕು ನಂತರ ಅದನ್ನು ಒಂದರಿಂದ ಎರಡು ಚಮಚ ಮಕ್ಕಳಿಗೆ ಕೊಡಬಹುದು. ದಿನಕ್ಕೆ ಒಂದು ಬಾರಿ ಕೊಟ್ಟರೆ ಸಾಕು ಜಾಸ್ತಿ ತೆಗೆದುಕೊಂಡರೆ ಹಿಟ್ ಆಗುವ ಸಂಭವ ಇರುತ್ತದೆ. ಈ ರೀತಿಯಾಗಿ ಮಕ್ಕಳಿಗೆ ಕೊಡುವುದರಿಂದ ಅವರಿಗೆ ಯಾವುದೇ ರೀತಿಯ ಕಫ ಅಥವಾ ಶೀತದ ಸಮಸ್ಯೆ ಇದ್ದರೆ ಅದು ಪೂರ್ತಿಯಾಗಿ ಗುಣವಾಗುತ್ತದೆ.

ದೊಡ್ಡವರಿಗೆ ಶೀತ ಅಥವಾ ಕಫ ಕಾಣಿಸಿದಾಗ ಇದನ್ನು ಯಾವ ರೀತಿಯಾಗಿ ತೆಗೆದುಕೊಳ್ಳಬೇಕು ಎಂದರೆ ಒಂದು ಎಲೆಯನ್ನು ತೆಗೆದುಕೊಂಡು ಅದರಲ್ಲಿ ಚಿಕ್ಕದಾದ ಕಲ್ಲುಪ್ಪನ್ನು ಇಟ್ಟು ಅದನ್ನು ನೇರವಾಗಿ ಬಾಯಲ್ಲಿ ಹಾಕಿಕೊಂಡು ಅಗೆದು ರಸ ಮತ್ತು ಎಲೆಯನ್ನು ನುಂಗಬೇಕು. ಈ ರೀತಿ ಮಾಡುವುದರಿಂದ ನಿಮಗೆ ಯಾವುದೇ ರೀತಿಯ ಕಫ ಅಥವಾ ಶೀತ ಇದ್ದರೂ ಅದು ಕಡಿಮೆಯಾಗುತ್ತದೆ ಇದನ್ನು ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ತೆಗೆದುಕೊಂಡರೆ ತುಂಬಾ ಒಳ್ಳೆಯದು.

ಅಜೀರ್ಣ ಸಮಸ್ಯೆ ನಿವಾರಣೆಗೆ ಕೂಡ ಇದನ್ನು ಬಳಸಬಹುದು. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ನೀವು ಕೂಡ ದೊಡ್ಡಪತ್ರೆಯ ಎಲೆಯ ಬಳಕೆಯನ್ನು ಮಾಡುವ ಮೂಲಕ ಅದರಲ್ಲಿನ ಪ್ರಯೋಜನವನ್ನು ಪಡೆದುಕೊಳ್ಳಿ ಜೊತೆಗೆ ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರೊಂದಿಗೆ ನಿಮ್ಮ ಪರಿಚಿತರು ಹಾಗೂ ಸ್ನೇಹಿತರೊಂದಿಗೆ ಹಂಚಿಕೊಳ್ಳಿರಿ.

Leave A Reply

Your email address will not be published.

error: Content is protected !!