ಇದೆಲ್ಲ ಹೃದಯಾಘಾತದ ಲಕ್ಷಣಗಳು ತಪ್ಪಿಯೂ ನಿರ್ಲಕ್ಷಿಸಬೇಡಿ

0

ಹೃದಯಕ್ಕೆ ಹೃದಯದ ಹತ್ತಿರ ಮಾತು ಮಧುರ ಎಂಬಂತೆ ಮನುಷ್ಯನ ದೇಹವು ಹಲವಾರು ಅಂಗಾಂಗಗಳಿಂದ ಕೂಡಿದ್ದು ಪ್ರತಿಯೊಂದು ಅಂಗವೂ ತಮ್ಮದೇ ಆದ ಕಾರ್ಯವನ್ನು ನಿರ್ವಹಿಸುತ್ತದೆ. ರಕ್ತ ಸಂಚಲನೆ ಪ್ರಮುಖ ಕಾರ್ಯ ನಿರ್ವಹಿಸುವ ಸ್ನಾಯುವನ್ನು ಹೃದಯ ಎನ್ನುತ್ತೇವೆ. ಇದು ಮಾನವನ ಎಡ ಭಾಗದಲ್ಲಿ ಸುಮಾರು 350 ಗ್ರಾಂ ಇದ್ದು ಒಬ್ಬ ಮನುಷ್ಯನ ಕೈ ಮುಷ್ಟಿಯಷ್ಟು ಇರುತ್ತದೆ ಎಲ್ಲ ಅಂಗಾಂಗಗಳಿಗೆ ರಕ್ತ ಸಂಚಾರ ಮಾಡಲು ರಕ್ತ ನಾಳಗಳಿದ್ದು ಹಾಗೆ ಹೃದಯಕ್ಕೂ ಮೂರು ರಕ್ತ ನಾಳಗಳು ಇವೆ. ಮುಂದೆ ಇನ್ನೊಂದು ಹಿಂದೆ ಇದ್ದು ಮತ್ತೊಂದು ಬಲದಲ್ಲಿ ತಮ್ಮ ಕಾರ್ಯ ಮಾಡುತ್ತದೆ .

ಇತ್ತೀಚಿನ ದಿನಗಳಲ್ಲಿ ಯುವ ಪೀಳಿಗೆಯಲ್ಲಿ ಸಾಮಾನ್ಯವಾಗಿ ಹೃದಯಘಾತದಿಂದ ಅಕಾಲಿಕ ಮರಣ ಹೊಂದುತ ಇರುವುದು ವಿಷಾದನೀಯ ಸಂಗತಿ ಎಂದರೆ ತಪ್ಪಾಗಲಾರದು. ಆದುನಿಕ ಜೀವನ ಶೈಲಿಗೆ ಹೊಂದಿಕೊಂಡು ತಮ್ಮ ಆರೋಗ್ಯದ ಬಗ್ಗೆ ತುಂಬಾ ಬೇಜವಾಬ್ದಾರಿಯಿಂದ ನಡುದುಕೊಳ್ಳವ ಕಾರಣದಿಂದಲ್ಲೋ ಅಥವಾ ಮಾನಸಿಕ ಒತ್ತಡ ಆಹಾರ ಕ್ರಮದಿಂದಲ್ಲೋ ಇಂದಿನ ಯುವಪೀಳಿಗೆಯಲ್ಲಿ ಹೃದಯ ಸ್ತಂಭನಕ್ಕೆ ಮುಖ್ಯ ಕಾರಣವಾಗಿದೆ.

ವೈದ್ಯ ಸತೀಶ್ ರವರು ಹೃದಯಾಘಾತಕ್ಕೆ ಪ್ರಮುಖ ಕಾರಣಗಳನ್ನು ಮತ್ತು ಹೃದಯಾಘಾತದ ಮುನ್ಸೂಚನೆಯ ಬಗ್ಗೆ ಸವಿಸ್ತಾರವಾಗಿ ಮಾಹಿತಿ ಕೊಟ್ಟಿದಾರೆ ಅದೇನೆಂದು ನೋಡೋಣ ಬನ್ನಿ. ಮನುಷ್ಯನ ದೇಹದ ರಕ್ತನಾಳದ ಒಂದು ಭಾಗದಲ್ಲಿ ಅಡಚಣೆ ಉಂಟಾದಾಗ ಹೃದಯ ಸ್ನಾಯುಗಳು ತಮ್ಮ ಕಾರ್ಯ ಮಾಡುವುದನ್ನು ನಿಲ್ಲಿಸುತ್ತದೆ ಆಗ ಉಸಿರಾಟ ಕ್ರಿಯೆ ಸ್ತಬ್ಧವಾಗುದು ಇದುನ್ನೆ ಹೃದಯಾಘಾತ ಎಂದು ಕರೆಯುತ್ತಾರೆ ಸಾಮಾನ್ಯವಾಗಿ ಆಕಸ್ಮಿಕ ಏದೆ ನೋವು ಕಾಣಿಸಿಕೊಂಡು ಹೃದಯದ ಎಡ ಇಲ್ಲ ಮದ್ಯಭಾಗದಲ್ಲಿ ಒತ್ತಡ ಜಾಸ್ತಿ ಆಗುವುದು ಆಗ ಗಂಟಲು ಒಣಗುವುದು ಭುಜ ನೋವು ಕಾಣಿಸಿಕೊಂಡು ಹೊಟ್ಟೆ ಮೇಲ್ಭಾಗ ನೋವು ಕಾಣಿಸುವುದು. ಹಾಗಾದಾಗ ದೇಹವೂ ಬೆವರಿ ಕಣ್ಣು ಮಂಜಾಗಿ ಕತ್ತಲೆ ಆಗುತೆ ಇಂತಹ ಲಕ್ಷಣ ಕಂಡು ಬಂದಾಗ ಕೂಡಲೇ ಹತ್ತಿರದ ಆಸ್ಪತ್ರೆಗೆ ದಾಖಲಾಗಿ ಈ. ಸಿ ಜಿ ಮಾಡಬೇಕು ವೈದ್ಯರನ್ನು ಕಾಣಬೇಕು

ಇನ್ನು ಸಾಮಾನ್ಯವಾಗಿ ಎದೆ ಒಂದು ಭಾಗ ಬೆನ್ನಿನ ಕಡೆ ಚುಚ್ಚಿದ ಅನುಭವ ಆದಲ್ಲಿ ಅದು ಸ್ನಾಯು ಸೆಳೆತ ಹಾಗಾಗಿ ಭಯಪಡುವ ಅಗತ್ಯ ಇಲ್ಲ ಒಮ್ಮೆ ವೈದ್ಯರನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದು. ಇನ್ನು ಸೈಲೆಂಟ್ ಹೃದಯಾಘಾತವು ಮಧುಮೇಹಿ, ವಯಸ್ಸು ಅದವರಲ್ಲಿ ಕಿಡ್ನಿ ಸಮಸ್ಯೆ ಇದ್ದವರಲ್ಲಿ ಕಂಡು ಬರುತ್ತದೆ ಇದರ ಲಕ್ಷಣಗಳೆಂದರೆ ವಾಂತಿ ಆಗುವುದು ತುಂಬಾ ಸುಸ್ತು ಆಲಸ್ಯ ದೇಹ ತುಂಬಾ ಬೆವರುವುದು ಕಂಡು ಬಂದಲ್ಲಿ ಕೂಡಲೇ ವ್ಯೆದ್ಯರನ್ನು ಸಂಪರ್ಕಿಸಬೇಕು. ಇನ್ನು ಹೃದಯಾಘಾತದಲ್ಲಿ ಎರಡು ವಿಧ ಇದ್ದು ಮೊದಲನೇಯದ್ದು ಮಾರ್ಪಾಡು ಮಾಡಲು ಸಾಧ್ಯವಾಗದ ಹೃದಯಾಘಾತ ವಯಸ್ಸು ಆದವರಲ್ಲಿ ಕಂಡುಬರುತ್ತದೆ

ಸಾಮಾನ್ಯವಾಗಿ ಹೆಣ್ಣು ಮಕ್ಕಳಲ್ಲಿ ಋತುಚಕ್ರ ಒಂದು ಕ್ರಿಯೆಯಾಗಿದ್ದು ಋತುಚಕ್ರದ ಕಾಲದಲ್ಲಿ ಸ್ತ್ರೀಯರ ಹಾರ್ಮೋನ್ ಉತ್ಪತ್ತಿಯಿಂದ ಹೃದಯಾಘಾತವನ್ನು ತಡೆಗಟ್ಟುತ್ತದೆ ಋತುಚಕ್ರ ನಿಂತ ಮೇಲೆ ಹೃದಯಾಘಾತ ಸಂಭವಿಸುವ ಸಾಧ್ಯತೆಯಿದೆ ಪಾಶ್ಚಿಮಾತ್ಯ ಜನಸಂಖ್ಯೆಗಿಂತಭಾರತೀಯ ಜನರಲ್ಲಿ ಹೆಚ್ಚಾಗಿ ಈ ಹೃದಯಾಘಾತ ಕಂಡು ಬರುತ್ತದೆ.ಅನುವಂಶಿಯ ತಮ್ಮ ಕುಟುಂಬದಲ್ಲಿ ತಂದೆಯು 55 ವರ್ಷದೊಳಗೆ ತಾಯಿಯು 65 ವರ್ಷದೊಳಗೆ ಹೃದಯಘಾತದಿಂದ ಮರಣಹೊಂದಿದ್ರೆ ಅನುವಂಶಿಯವಾಗಿ ತಮ್ಮ ಮಕ್ಕಳು ಮರಣ ಹೊಂದುವ ಸಾಧ್ಯತೆ ಅಧಿಕವಾಗಿರುತ್ತದೆ.

ಎರಡನೆಯ ಮಾರ್ಪಾಡು ಮಾಡಲು ಸಾಧ್ಯವಾಗುವದು ಇಂದಿನ ಜನಸಾಮಾನ್ಯರಲ್ಲಿ ಮದ್ಯಪಾನ ಧೂಮಪಾನ ಜಾಸ್ತಿಯಾಗಿದ್ದು ಅತಿಯಾದ ಆಹಾರ ಸೇವನೆಯಿಂದ ಯಾವುದೇ ವ್ಯಾಯಾಮ ಗಳಿಲ್ಲದೆ ತಮ್ಮ ಜೀವನಶೈಲಿಯ ಮೇಲೆ ನಿಗಾವಹಿಸುವುದು ಬಿಟ್ಟಿದ್ದಾರೆ ಇದರಿಂದ ಬೊಜ್ಜು ಮಧುಮೇಹ ಅಧಿಕ ರಕ್ತದೊತ್ತಡಕ್ಕೆ ನಾಂದಿಯಾಗುತ್ತದೆ ಆಗ ಹೃದಯಾಘಾತ ಆಗುವ ಸಾಧ್ಯತೆ ಜಾಸ್ತಿ ಆದರೆ ಇದನ್ನು ಮಾರ್ಪಾಡು ಮಾಡುವ ಸಾಧ್ಯತೆ ಇರುತ್ತದೆ ರೋಗಿಗಳು ತಮ್ಮ ಜೀವನದಲ್ಲಿ ನಿಯಮಿತವಾಗಿ ಆಹಾರ ಸೇವನೆ ಮಾಡುವುದು ಮತ್ತು ಯೋಗಾಸನಗಳನ್ನು ಮಾಡುವುದರಿಂದ ಹೃದಯಘಾತದಿಂದ ದೂರವಿರಬಹುದು.

Leave A Reply

Your email address will not be published.

error: Content is protected !!