WhatsApp Group Join Now
Telegram Group Join Now

ದಿನಚರ್ಯ ಎಂದರೆ ಬೆಳಿಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೆ ಯಾವೆಲ್ಲ ಕೆಲಸಗಳನ್ನು ಮಾಡಬೇಕು ಯಾವ ಸಮಯದಲ್ಲಿ ಮಾಡಬೇಕು ಹೇಗೆ ಮಾಡಬೇಕು ಯಾವ ರೀತಿಯಲ್ಲಿ ಮಾಡಬೇಕು ಎಂಬುದನ್ನು ಒಳಗೊಂಡಿರುತ್ತದೆ. ಅದರಲ್ಲಿ ಕುಡಿಯುವ ನೀರಿನಿಂದ ಹಿಡಿದು ಸೇವಿಸುವ ಆಹಾರದ ವರೆಗೆ ಎಲ್ಲವನ್ನೂ ಕೂಡ ಒಳಗೊಂಡಿರುತ್ತದೆ. ನಿಮ್ಮ ದಿನಚರಿ ಎಲ್ಲಿಂದ ಆರಂಭವಾಗುತ್ತದೆ ಎಂದರೆ ಬೆಳಿಗ್ಗೆ ಬ್ರಾಹ್ಮೀಮುಹೂರ್ತದಲ್ಲಿ ಹೇಳುವುದರಿಂದ. ಅಂದರೆ ನೀವು ಬೆಳಿಗ್ಗೆ ನಾಲ್ಕು ಗಂಟೆಗೆ ಏಳಬೇಕು ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ಆ ಸಮಯದಲ್ಲಿ ವಾತಾವರಣದಲ್ಲಿ ಆಮ್ಲಜನಕದ ಪ್ರಮಾಣ ಹೆಚ್ಚಿರುತ್ತದೆ. ಇಗಿನ ಕಾಲದಲ್ಲಿ ಬೇಗನೆ ಏಳುವವರು ತುಂಬಾ ಕಡಿಮೆ ಸೂರ್ಯ ಉದಯವಾದ ಎಷ್ಟೋ ಸಮಯದ ನಂತರ ಏಳುವವರೇ ಹೆಚ್ಚು. ಮನುಷ್ಯರಿಗೆ ಮಾತ್ರ ಬ್ರಾಹ್ಮೀಮುಹೂರ್ತದಲ್ಲಿ ಎಚ್ಚರಿಸುವುದಕ್ಕೆ ಪ್ರಯತ್ನಪಡಬೇಕು ಆದರೆ ಪ್ರಾಣಿ-ಪಕ್ಷಿಗಳು ತಮ್ಮಷ್ಟಕ್ಕೆ ತಾವೇ ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ತಮ್ಮ ಕೆಲಸವನ್ನು ಪ್ರಾರಂಭಿಸಿಕೊಳ್ಳುತ್ತವೆ. ಆಧುನಿಕತೆಗೆ ಒಳಗಾಗಿರುವಂತಹ ಮನುಷ್ಯ ಆಧುನಿಕತೆಗೆ ಒಳಗಾಗಿ ಅಲ್ಲಿ ಸಮಯಪ್ರಜ್ಞೆಯನ್ನು ಮರೆತು ಕೆಲಸಗಳನ್ನ ಮಾಡುತ್ತಿದ್ದಾನೆ. ಇದರಿಂದ ಆರೋಗ್ಯದ ಮೇಲೆ ಕೂಡ ಪರಿಣಾಮ ಬೀರುತ್ತದೆ.

ಸೂರ್ಯನ ಉದಯದ ಜೊತೆಜೊತೆಯಲ್ಲಿಯೇ ನಮ್ಮ ಕೆಲಸ ಕಾರ್ಯಗಳು ಪ್ರಾರಂಭವಾಗಬೇಕು ಸೂರ್ಯನ ಮುಳುಗುವಿಕೆ ಜೊತೆಜೊತೆಗೆ ನಮ್ಮ ದಿನಚರ್ಯವು ಮುಕ್ತಾಯವಾಗಬೇಕು. ಸೂರ್ಯನ ಪ್ರಭಾವ ಇಡೀ ಬ್ರಹ್ಮಾಂಡದ ಮೇಲೆ ಇರುತ್ತದೆ ಕೇವಲ ಮನುಷ್ಯರಿಗೆ ಮಾತ್ರವಲ್ಲ ಪ್ರಾಣಿ ಪಕ್ಷಿಗಳ ಮೇಲು ಸೂರ್ಯನ ಪ್ರಭಾವ ಇರುತ್ತದೆ. ಹಾಗಾಗಿ ಬ್ರಾಹ್ಮೀಮುಹೂರ್ತದಲ್ಲಿ ಏಳುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇನ್ನು ಎದ್ದ ತಕ್ಷಣ ಏನು ಮಾಡಿದರೆ ಒಳ್ಳೆಯದು ಎನ್ನುವುದನ್ನು ನೋಡುವುದಾದರೆ ಬೆಳಿಗ್ಗೆ ಎದ್ದ ತಕ್ಷಣ ನೀರನ್ನು ಕುಡಿಯಬೇಕು. ಬೆಳಿಗ್ಗೆ ಎದ್ದ ತಕ್ಷಣ ಬಿಸಿನೀರನ್ನು ಎಷ್ಟು ಬೇಕು ಅಷ್ಟು ಕುಡಿಯಬೇಕು ಕುಡಿದ ತಕ್ಷಣ ತೇಗು ಬರುತ್ತದೆ ಅದನ್ನ ಗಮನಿಸಬೇಕು ಅದು ಶುದ್ಧ ಉದ್ಘಾರವಾಗಿರಬೇಕು. ಇದರಲ್ಲಿ ಯಾವುದೇ ರೀತಿಯ ವಾಸನೆ ಇರಬಾರದು ಆ ರೀತಿ ಬಂದರೆ ನಾವು ಹಿಂದಿನ ದಿನ ತಿಂದ ಆಹಾರ ಜೀರ್ಣ ಆಗಿಲ್ಲ ಎಂದು ಅರ್ಥ.

ಶುದ್ಧ ಉದ್ಘಾರ ಬಂದರೆ ನಾವು ಇಂದಿನ ಆಹಾರವನ್ನು ತೆಗೆದುಕೊಳ್ಳುವುದಕ್ಕೆ ಯಾವುದೇ ರೀತಿಯಾದಂತಹ ತೊಂದರೆ ಇಲ್ಲ ಎಂದು ಅರ್ಥ. ನೀರನ್ನು ಕುಡಿದ ನಂತರ ಮಲ ವಿಸರ್ಜನೆ ಮಾಡಬೇಕು ಅದು ಆದರೆ ಅಂದಿನ ದಿನ ಮನುಷ್ಯ ಹಗುರವಾಗಿರುತ್ತಾನೆ ಇಲ್ಲದಿದ್ದರೆ ಮನುಷ್ಯನಲ್ಲಿ ಜಡತ್ವ ತುಂಬಿಕೊಳ್ಳುತ್ತದೆ ಯಾವುದೇ ಕೆಲಸ ಕಾರ್ಯಗಳಲ್ಲಿ ಆಸಕ್ತಿ ಇರುವುದಿಲ್ಲ. ಹಾಗಾಗಿ ಬ್ರಾಹ್ಮೀಮುಹೂರ್ತದಲ್ಲಿ ಎದ್ದು ನೀರನ್ನು ಕುಡಿದು ಮಲವಿಸರ್ಜನೆಯನ್ನು ಮಾಡಿ ನಂತರ ತನ್ನ ಕಾರ್ಯಚಟುವಟಿಕೆಗಳನ್ನು ಮಾಡುವುದರಿಂದ ಮನುಷ್ಯ ಆರೋಗ್ಯವಾಗಿರುತ್ತಾನೆ ಯಾವುದೇ ರೀತಿಯ ಸಮಸ್ಯೆಗಳು ಭಾಧಿಸುವುದಿಲ್ಲ. ನೀವು ಕೂಡ ಈ ಕ್ರಮಗಳನ್ನು ಅನುಸರಿಸಿ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: